Monday, June 1, 2020

ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಬ್ರಿಕ್ಸ್ ನ ತೆರಿಗೆ ಮುಖ್ಯಸ್ಥರ ಸಮ್ಮೇಳನ

ಮೇ 29, 2020 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಬ್ರಿಕ್ಸ್ ನ ತೆರಿಗೆ ಮುಖ್ಯಸ್ಥರ ಸಮ್ಮೇಳನ. 
* ಸಮ್ಮೇಳನವನ್ನು ರಷ್ಯಾ ಆಯೋಜಿಸಿತ್ತು.

★ ಮುಖ್ಯಾಂಶಗಳು

# ಈ ಸಮ್ಮೇಳನದಲ್ಲಿ ರಷ್ಯಾ, ಬ್ರೆಜಿಲ್, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ತೆರಿಗೆ ಅಧಿಕಾರಿಗಳ ಮುಖ್ಯಸ್ಥರು ಭಾಗವಹಿಸಿದ್ದರು.
* ಸಭೆಯನ್ನು ಹಾಲಿ ಅಧ್ಯಕ್ಷ ರಾಷ್ಟ್ರ ರಷ್ಯಾ ಆಯೋಜಿಸಿತ್ತು.  
* ಭಾರತವನ್ನು ಹಣಕಾಸು ಕಾರ್ಯದರ್ಶಿ ಡಾ.ಅಜಯ್ ಭೂಷಣ್ ಪಾಂಡೆ ಪ್ರತಿನಿಧಿಸಿದ್ದರು.

★ ಸಮ್ಮೇಳನದಲ್ಲಿ ಭಾರತ

# COVID-19 ಪರಿಣಾಮವನ್ನು ತಗ್ಗಿಸಲು ತೆಗೆದುಕೊಳ್ಳುತ್ತಿರುವ ಹಲವಾರು ಕ್ರಮಗಳನ್ನು ಭಾರತ ಹಂಚಿಕೊಂಡಿದೆ.  
* ಒಇಸಿಡಿ ಮತ್ತು ಜಿ - 20 ನಲ್ಲಿನ ತೆರಿಗೆ ಸವಾಲುಗಳನ್ನು ಎದುರಿಸಲು ಭಾರತ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿತು.

 ★ ಬ್ರಿಕ್ಸ್

* ಸ್ಥಾಪನೆ :- 2009.
* ಬ್ರಿಕ್ಸ್ 2011 ಗಿಂತ ಮೊದಲು ಬ್ರಿಕ್ ಎಂದಾಗಿತ್ತು.
* ದಕ್ಷಿಣ ಆಫ್ರಿಕಾ ಈ ಸಮೂಹಕ್ಕೆ ಸೇರುವ ಮೂಲಕ ಬ್ರಿಕ್ ಬ್ರಿಕ್ಸ್ ಅಂತಾಯಿತು
* ಬ್ರಿಕ್ಸ್ ನ ಸದಸ್ಯ ರಾಷ್ಟ್ರಗಳು - ಬ್ರೆಜಿಲ್ , ಚೀನಾ, ಭಾರತ, ರಷ್ಯಾ & ದಕ್ಷಿಣ ಆಫ್ರಿಕಾ
* ಇಲ್ಲಿಯವರೆಗೆ ಒಟ್ಟು 10 ಬ್ರಿಕ್ಸ್ ಶೃಂಗಸಭೆಗಳು ನಡೆದಿವೆ.
* ಭಾರತ 2012 ರಲ್ಲಿ ನಡೆದ ನಾಲ್ಕನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿತು.

♂♂ ಬ್ರಿಜಿಲ್ ನಲ್ಲಿ 6ನೇ ಬ್ರಿಕ್ಸ್ ಶೃಂಗಸಭೆ ನಡೆಯಿತು.
* ಈ ಸಭೆಯಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.
* ಈ ಬ್ಯಾಂಕಿನ ಹೆಸರು 'ನ್ಯೂ ಡೆವಲೆಪಮೆಂಟ್ ಬ್ಯಾಂಕ್'.
* 100 ಶತಕೋಟಿ(6 ಲಕ್ಷ ಕೋಟಿ) ಬಂಡವಾಳದಲ್ಲಿ ಈ ಬ್ಯಾಂಕ್ 2016 ರಲ್ಲಿ ಕಾರ್ಯಾರಂಭ ಮಾಡಿದೆ.
* ಈ ಬ್ಯಾಂಕಿನ ಕೇಂದ್ರ ಕಛೇರಿ ಚೀನಾದ ಶಾಂಘೈನಲ್ಲಿರಲಿದೆ ಹಾಗೂ ಈ ಬ್ಯಾಂಕಿನ ಅಧ್ಯಕ್ಷತೆಯನ್ನು ಭಾರತಕ್ಕೆ ವಹಿಸಿಕೊಡಲಾಗಿದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...