Friday, June 5, 2020

ಪೃಥ್ವಿಯ ಸುತ್ತಳತೆ




ಪೃಥ್ವಿಯು ಗೋಳಾಕಾರವಾಗಿದೆ ಎಂದು ಗ್ರೀಕರು ಮೊದಲ ಬಾರಿಗೆ ಪೃಥ್ವಿಯನ್ನು ಅಳೆಯುವ ಪ್ರಯತ್ನಪಟ್ಟರು.

* ಅವರಲ್ಲಿ ಮೊದಲಿಗ ಗ್ರೀಕ್‍ನ ಇರಟೋಸ್ತೆನಿಸ್ - ಈತ ಪೃಥ್ವಿಯನ್ನು ಕ್ರಿ.ಪೂ 240 ರ ಸುಮಾರಿನಲ್ಲಿ ಅಳೆದು ಪೃಥ್ವಿಯ ಸುತ್ತಳತೆ ಸಮಭಾಜಕ ವೃತ್ತದ ಬಳಿ 48000 ಕಿ.ಮೀ ಎಂದನು.

# ಅಂತಿಮವಾಗಿ ಭೂಮಿಯ ಸುತ್ತಳತೆ ಸಮಭಾಜಕ ವೃತ್ತದ ಬಳಿ 40076 ಕಿ.ಮೀ ಮತ್ತು ಧೃವ ಪ್ರದೇಶದ ಬಳಿ 40008 ಕಿ.ಮೀಗಳಾಗಿವೆ.
* ಇವೆರಡರ ನಡುವಿನ ಅಂತರ 68 ಕಿ.ಮೀಗಳಾಗಿವೆ.
* ಈ ಅಂತರ ನಿರ್ಮಾಣಕ್ಕೆ ಕಾರಣ ಸಮಭಾಜಕ ವೃತ್ತದಲ್ಲಿ ಭೂಮಿ ಉಬ್ಬಿಕೊಂಡಿರುವುದು ಹಾಗೂ ಧೃವ ಪ್ರದೇಶದಲ್ಲಿ ಚಪ್ಪಟೆಯಾಗಿರುವುದು ಹಾಗೆ ಸಮಭಾಜಕ ವೃತ್ತದ ಬಳಿಯ ವ್ಯಾಸ 12,756 ಕಿ.ಮೀ ಮತ್ತು ಧೃವಗಳಲ್ಲಿ 12,712 ಕಿ.ಮೀ ಗಳಾಗಿವೆ ಇವೆರಡರ ನಡುವಿನ ವ್ಯತ್ಯಾಸ 43 ಕಿ.ಮೀ.

★ ಭೂಕೇಂದ್ರ ಸಿದ್ಧಾಂತ

# ಕ್ರಿ.ಶ 2ನೇ ಶತಮಾನದಲ್ಲಿ ಜೀವಿಸಿದ್ದ ಕ್ಲಾಡಿಯಸ್ ಟಾಲಾಮಿ ಭೂಮಿಯು ಸೌರವ್ಯೂಹ ಕೇಂದ್ರ ಬಿಂದು ಎಂದು ತಿಳಿಸಿದರು (ಭೂಕೇಂದ್ರ ಸಿದ್ಧಾಂತ)
# ಸೂರ್ಯ ಸೇರಿದಂತೆ ಎಲ್ಲ ಗ್ರಹಗಳು ಭೂಮಿಯ ಸುತ್ತ ಸುತ್ತುತ್ತದೆ ಎಂದು ಹೇಳಿದನು.
# ಈ ವಾದವೇ ಭೂ ಕೇಂದ್ರಿಯ ಸಿದ್ದಾಂತ ಈ ಸಿದ್ದಾಂತದ ಕಲ್ಪನೆಗೆ ಸಾಕಷ್ಟು ಆಧಾರಗಳು ಭೌತಿಕವಾಗಿ ಕಣ್ಣಿಗೆ ಕಾಣುವಂತೆ ಹಗಲು-ರಾತ್ರಿ ಸಾಗರದ ಅಂಚು ಕಾಣುತ್ತಿದ್ದರಿಂದ ಬಹುಮಂದಿ ಈ ವಾದವನ್ನು ಒಪ್ಪಿಕೊಂಡರು ಮಧ್ಯಯುಗದಲ್ಲಿ ಹೆಚ್ಚು ಪ್ರಚಲಿತವಾಗಿತ್ತು.

★ ಸೂರ್ಯ ಕೇಂದ್ರೀಯ ಸಿದ್ದಾಂತ

# ಕ್ರಿ.ಶ 45ನೇ ಸುಮಾರಿನಲ್ಲಿ ಕೋಪರ್ನಿಕಸನು ಮತ್ತೆ ಸೂರ್ಯ ಕೇಂದ್ರೀಯ ಸಿದ್ದಾಂತವನ್ನು ಬಲಪಡಿಸಿದನು.
# ಕ್ರಿ.ಪೂ 340 ರ ಸುಮಾರಿನಲ್ಲಿ ಅರಿಸ್ಟಾಟಲ್ ಚಂದ್ರ ಗ್ರಹಣವನ್ನು ವೀಕ್ಷಿಸಿ ಚಂದ್ರನ ಮೇಲೆ ಸೂರ್ಯನ ನೆರಳು ಗುಂಡಾಗಿ ಗೋಚರವಾದ ಕಾರಣ ಸೂರ್ಯ ದುಂಡಾಗಿದ್ದಾನೆ ಎಂದು ಪ್ರತಿಪಾದಿಸಿದನು.
# ಈ ಎಲ್ಲಾ ಬಾಯಿ ಮಾತಿನ ವಾದಗಳಿಗೆ ವೈಜ್ಞಾನಿಕ ಪುರಾವೆ ಒದಗಿಸಿದವನು ಗಲಿಲಿಯೊ, ಇವನು ತನ್ನ ದೂರದರ್ಶಕದ ಮೂಲಕ ಸೂರ್ಯ ಕೇಂದ್ರ ಸಿದ್ದಾಂತವನ್ನು ಪುಷ್ಟೀಕರಿಸಿದನು.
# ಕೇಪ್ಲರ್ ಹಾಗೂ ನ್ಯೂಟನ್ನನ ಗುರುತ್ವಾಕರ್ಷಣೆ ನಿಯಮಗಳು ಸೂರ್ಯ ಕೇಂದ್ರೀಯ ವಾದವನ್ನು ಮತ್ತಷ್ಟು ಗಟ್ಟಿಗೊಳಿಸಿದವು.
# ಪೃಥ್ವಿ ದುಂಡಾಗಿದೆ ಎಂದು ನಂಬಿದ ಕೋಲಂಬಸ್.
# ಪೃಥ್ವಿಯ ಸುತ್ತ ನೌಕಾಯಾನದ ಮಾಡಬಹುದೆಂದು ಪಶ್ಚಿಮ ಕಡೆಯಿಂದ ನೌಕಾಯಾನ ಮಾಡಬಹುದಾದ ಒಂದು ದ್ವೀಪಕ್ಕೆ ತಲುಪಿ ಎದು ಭಾರತವೆಂದು ತಿಳಿದನು.
# 1519 ರಂದು ಮೆಗಲನ್ ಮತ್ತು ಅವನ ಹಡಗು ಸಿಬ್ಬಂದಿ ಭೂ ಪ್ರದಕ್ಷಿಣೆ ಕೈಗೊಂಡು ಮೆಲಗನ್ ಫಿಲಫೈನ್ಸ್‍ನಲ್ಲಿ ಕೊಲ್ಲಲ್ಟಟ್ಟರು.
# ಅವನ ಸಂಗಡಿಗರು ಭೂಮಿಯನ್ನು ಪ್ರದಕ್ಷಿಣೆ ಮಾಡಿ ಯುರೋಪಿಗೆ ಮರಳಿದರು.
# ಮುಂತಾದ ಅನೇಕ ನಿದರ್ಶನಗಳು ಭೂಮಿ ದುಂಡಾಗಿದೆ ಎಂಬುದನ್ನು ಸ್ಪಷ್ಟಪಡಿಸಿತು.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...