Friday, July 21, 2023

ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ನಡುವಿನ ಮುಖ್ಯ ವ್ಯತ್ಯಾಸಗಳು ಯಾವುವು?

 ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಅಥವ ಕೃತಕ ಬುದ್ಧಿಮತ್ತೆ ಎಂಬ ವಿಷಯವು ಬುದ್ಧಿ ಇರುವ ಯಂತ್ರಗಳ ತಯಾರಿಕೆ, ಉಪಯೋಗಗಳ ಬಗ್ಗೆ ಅಭ್ಯಾಸ ಮಾಡಿಸುತ್ತದೆ. ಅಂತಹ ಯಂತ್ರಗಳನ್ನು ತಯಾರಿಸಲು ಹಲವರು ಹಲವು ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಅದರಲ್ಲಿ ಮಷೀನ್ ಲರ್ನಿಂಗ್ (ML) ಅಥವಾ ಯಂತ್ರ (ಸ್ವ-) ಕಲಿಕೆ ಒಂದು ವಿಧಾನ. ಈ ಶತಮಾನದ ಹಿಂದಿನ ಹಾಗೂ ಇಂದಿನ ದಶಮಾನದಲ್ಲಿ ಯಂತ್ರ ಕಲಿಕೆ ವಿಧಾನವು ತುಂಬಾ ಫಲಕಾರಿಯಾಗಿದೆ.

ಏನಿದು ಯಂತ್ರ ಕಲಿಕೆ ಅಂದರೆ ಅಥವಾ ಅದನ್ನು ಯಾಕೆ ಹಾಗೆ ಕರೆಯುತ್ತಾರೆ ಅಂತಾ ಯೋಚಿಸುತ್ತಿದ್ದೀರಾ? ಉತ್ತರಕ್ಕಾಗಿ ಒಂದಷ್ಟು ಇತಿಹಾಸದ ಪುಟಗಳನ್ನು ತಿರುಗಿಸೋಣ ಬನ್ನಿ.

ಅಲನ್ ಟೂರಿಂಗ್ ಎಂಬ ಬ್ರಿಟಿಷ್ ಗಣಿತಜ್ಞನು ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಸೇನಾಪಡೆಯ ಸಂದೇಶಗಳನ್ನು ಆಲಿಸಲು ಡಿಜಿಟಲ್ ಗಣಕಯಂತ್ರವನ್ನು ಕಂಡು ಹಿಡಿದ. ಮುಂದೆ ಒಂದು ದಿನ ಗಣಕ ಯಂತ್ರವು ಮನುಷ್ಯನಷ್ಟು ಬುದ್ಧಿಮತ್ತೆಯನ್ನು ಪಡೆಯುತ್ತದೆ ಎಂದು ಕನಸು ಕಂಡ. ನಂತರ ಬಂದ ಮುಂದಿನ ತಲೆಮಾರಿನ ಗಣಿತಜ್ಞರು ಹಾಗೂ ಗಣಕ ವಿಜ್ಞಾನಿಗಳು ಗಣಕ ಯಂತ್ರಗಳಿಗೆ ಬುದ್ಧಿಮತ್ತೆ ಕೊಡುವ ಸಲುವಾಗಿ ಹಲವು ಬಗೆಯ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ ಹಾಗೂ ಮಾಡುತ್ತಲೂ ಇದ್ದಾರೆ.

ಸುಮಾರು 1950-1980 ರವರೆಗೂ ರೂಲ್ಸ್ ಗಳನ್ನು ಬರೆಯುವುದರ ಮೂಲಕ ಪ್ರಯತ್ನಿಸಿದರು. ಅದನ್ನು ನಾವು ಸಿಂಬಾಲಿಕ್ ಅಥವಾ ಸಾಂಕೇತಿಕ AI ಅಂತ ಕರೆಯುತ್ತೇವೆ. ಬುದ್ಧಿಮತ್ತೆಯನ್ನು ಸಂಕೇತಗಳು ಮತ್ತು ರೂಲ್ಸ್ ಗಳಾಗಿ ಬರೆದು ಪ್ರಯತ್ನಿಸಿದರು. ಈ ವಿಧಾನದಲ್ಲಿ ಒಂದಷ್ಟು ಸುಲಭ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾದರು. ಆದರೆ ಹಲವು ಕಷ್ಟದ ಕಾರ್ಯಗಳಿಗೆ ಆ ವಿಧಾನದಲ್ಲಿ ಅವಶ್ಯಕವಾದ ಸಂಕೇತಗಳು ಹಾಗೂ ರೂಲ್ಸ್ ಮನುಷ್ಯರಿಂದ ಮಾಡಲಾಗದಷ್ಟು ಕಠಿಣವಾಯಿತು. ಹಾಗಾಗಿ ಇನ್ನೊಂದು ಬೇರೆಯ ವಿಧಾನ ಅವಶ್ಯಕವಾಗಿತ್ತು. ಈ ವಿಧಾನದಲ್ಲಿ ಯಂತ್ರವು ತಾನೇ ಕಲಿಯುವಂತೆ ಮಾಡಿದರು. ಯಂತ್ರಕ್ಕೆ ನಾವು ಮನುಷ್ಯರು ಒಂದಷ್ಟು ಉದಾಹರಣೆಗಳನ್ನು ಕೊಟ್ಟರೆ ಯಂತ್ರ ತನ್ನಷ್ಟಕ್ಕೆ ತಾನೆ ಆ ಉದಾಹರಣೆಗಳಿಂದ ಬೇಕಾದ ಕಾರ್ಯವನ್ನು ಕಲಿಯುತ್ತದೆ. ಇದರಲ್ಲಿ ನಾವು ಯಂತ್ರಕ್ಕೆ ರೂಲ್ಸ್ ಗಳನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ನಾವು ಮನುಷ್ಯರು ಕೊಡುವ ಉದಾಹರಣೆಗಳಿಂದ ಯಂತ್ರವು ಕಲಿತು ಕೊಳ್ಳುವುದಕ್ಕೆ ಯಂತ್ರಕಲಿಕೆ ಎಂದು ಕರೆಯುತ್ತೇವೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...