Friday, September 4, 2020

ಕಾಬುಲ್ ಕಡಲೆ ಕಾಳು ತಿನ್ನಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ನೋಡಲು ದಪ್ಪವಾಗಿದ್ದು ಕಡಲೆ ಕಾಳುಗಳ ಜಾತಿಗೆ ಸೇರಿದ ಕಾಬುಲ್ ಕಡಲೆ ಕಾಳುಗಳಲ್ಲಿ ಪುಷ್ಟಿಕ ಅಂಶಗಳೂ ಕೂಡ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿವೆ.

ಶುಭ ಸಂದರ್ಭಗಳಲ್ಲಿ ತಯಾರು ಮಾಡುವ ಕಾಬುಲ್ ಕಡಲೆ ಕಾಳುಗಳ ಪಲ್ಯ ಯಾರಿಗೆ ಇಷ್ಟ ಇಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಸ್ವಾದ ಅದರಲ್ಲಿರುತ್ತದೆ. ವಯಸ್ಸಾದವರು ಕೂಡ ಮೆತ್ತಗೆ ಬೆಂದಿರುವ ಕಾಬೂಲ್ ಕಡಲೆ ಕಾಳುಗಳನ್ನು ಸುಲಭವಾಗಿ ಸೇವನೆ ಮಾಡಬಹುದು. ಹಾಗಾದರೆ ಕಾಬುಲ್ ಕಡಲೆ ಕಾಳುಗಳು ಕೇವಲ ಇಂತಹ ಒಳ್ಳೆಯ ಸಂದರ್ಭಗಳಿಗೆ ಅಡುಗೆ ಮಾಡಲು ಮಾತ್ರ ಸೂಕ್ತವೇ? ಬೇರೆ ಮಾಮೂಲಿ ದಿನಗಳಲ್ಲಿ ಕಾಬೂಲ್ ಕಡಲೆ ಕಾಳುಗಳನ್ನು ತಿನ್ನಬಾರದೇ ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಕಾಬೂಲ್ ಕಡಲೆ ಕಾಳುಗಳನ್ನು ಮಕ್ಕಳಿಂದ ಹಿಡಿದು ದೊಡ್ಡವರು, ವಯಸ್ಸಾದವರು ಕೂಡ ಯಾವುದೇ ಸಮಯದಲ್ಲಿ ಬೇಕೆಂದಾಗ ಸೇವನೆ ಮಾಡಬಹುದು. ಏಕೆಂದರೆ ಇವುಗಳಲ್ಲಿ ಎಲ್ಲಾ ವಯಸ್ಸಿನವರೆಗೆ ಸೂಕ್ತವಾಗಿ ಬೇಕಾಗಿರುವಂತಹ ಮತ್ತು ಅತ್ಯಂತ ಅವಶ್ಯಕವಾಗಿರುವಂತಹ ಪೌಷ್ಟಿಕ ಸತ್ವಗಳು ಲಭ್ಯವಿವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಒಳ್ಳೆಯ ಗುಣವಿದೆ. ಏಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಎಲ್ಲಾ ಬಗೆಯ ಅಂಶಗಳು ಕಾಬುಲ್ ಕಡಲೆ ಕಾಳುಗಳಲ್ಲಿ ಕಂಡು ಬರುತ್ತವೆ. ಹಾಗಾಗಿ ಕಾಬುಲ್ ಕಡಲೆ ಕಾಳುಗಳ ಸೇವನೆ ಎಲ್ಲರಿಗೂ ಆರೋಗ್ಯಕರ ಎಂದು ಸಾಬೀತಾಗಿದೆ.

*​ಕಾಬುಲ್ ಕಡೆಲೆ ಕಾಳುಗಳ ಪುಷ್ಟಿಕ ವಿವರಗಳು*

ಕಾಬುಲ್ ಕಡಲೆ ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ವಿಟಮಿನ್ ' ಸಿ ', ವಿಟಮಿನ್ ' ಬಿ6', ಫೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಮ್ ಅಂಶಗಳು ತುಂಬಾ ಹೇರಳವಾಗಿವೆ. ಈ ಕಾರಣದಿಂದ ನಿಮಗೆ ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಕಾಬುಲ್ ಕಡಲೆ ಕಾಳುಗಳು ಉಂಟು ಮಾಡುತ್ತವೆ. ಕಾಬುಲ್ ಕಡಲೆ ಕಾಳುಗಳಿಂದ ನಮಗೆ ಉಂಟಾಗುವ ಆರೋಗ್ಯ ಪ್ರಯೋಜನಗಳು ಯಾವುವು ನೋಡೋಣ.
                                                                                                                                                     *​ರಕ್ತದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣವಾಗುತ್ತದೆ*                             ಕಾಬುಲ್ ಕಡಲೆ ಕಾಳುಗಳು ಗ್ಲೈಸೆಮಿಕ್ ಸೂಚ್ಯಂಕವನ್ನು ತುಂಬಾ ಕಡಿಮೆ ಹೊಂದಿದ್ದು, ನಮ್ಮ ದೇಹದ ಅದರಲ್ಲೂ ವಿಶೇಷವಾಗಿ ಮಧುಮೇಹ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಗಳ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಕಾಬುಲ್ ಕಡಲೆ ಕಾಳುಗಳಲ್ಲಿ ಪ್ರೋಟಿನ್ ಮತ್ತು ನಾರಿನ ಅಂಶ ಯಥೇಚ್ಛವಾಗಿದೆ. ಇವುಗಳನ್ನು ಸೇವಿಸಿದ ಬಳಿಕ ಬಹಳ ಬೇಗನೆ ಹೊಟ್ಟೆ ತುಂಬಿ ಬೇರೆ ಆಹಾರ ಸೇವಿಸಬೇಕು ಎನ್ನುವ ಬಯಕೆ ಕಡಿಮೆ ಆಗುತ್ತದೆ. ಇದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟ ನಿಯಂತ್ರಣ ಕಾಯ್ದುಕೊಳ್ಳುತ್ತದೆ. ಮಾಮೂಲಿ ಕಡಲೆ ಕಾಳುಗಳಿಗೆ ಹೋಲಿಸಿದರೆ ಕಾಬುಲ್ ಕಡಲೆ ಕಾಳುಗಳು ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ.
                                                                 *​ದೇಹದ ತೂಕ ನಿಯಂತ್ರಣವಾಗುತ್ತದೆ*   ಮೊದಲೇ ಹೇಳಿದಂತೆ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕಾಬುಲ್ ಕಡಲೆ ಕಾಳುಗಳಲ್ಲಿ ಕಂಡು ಬರುತ್ತವೆ. ಇದರ ಜೊತೆಗೆ ನಾರಿನ ಅಂಶ ಕೂಡ ಜಾಸ್ತಿ ಇರುವ ಕಾರಣ ಹೆಚ್ಚು ಹೊತ್ತು ಆಹಾರ ತಿನ್ನಬೇಕು ಅನಿಸುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ನಮ್ಮ ದೇಹದಲ್ಲಿ ಮೊದಲೇ ಶೇಖರಣೆ ಆಗಿರುವ ಕೊಬ್ಬಿನ ಅಂಶ ಕರಗಿ ನಮ್ಮ ದೇಹದ ಅಗತ್ಯತೆಗೆ ತಕ್ಕಂತೆ ಉಪಯೋಗ ಆಗುತ್ತದೆ. ಇದರಿಂದ ನಮ್ಮ ದೇಹದ ತೂಕ ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ. ಕೆಲವು ಅಧ್ಯಯನಗಳಲ್ಲಿ ಕೂಡ ಇದು ಸಾಬೀತಾಗಿದೆ. ಕಾಬುಲ್ ಕಡಲೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟಿನ್ ಮತ್ತು ಕೊಬ್ಬಿನ ಅಂಶವನ್ನು ಕಡಿಮೆ ಮಾಡುವಂತಹ ಮತ್ತು ದೇಹದಲ್ಲಿ ಅಡಕವಾಗಿರುವ ಹೆಚ್ಚು ಕ್ಯಾಲೊರಿ ಅಂಶಗಳನ್ನು ಜೀರ್ಣ ಆಗಿಸುವ ಶಕ್ತಿ ಇದೆ.

*​ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ*         
ಕಾಬುಲ್ ಕಡಲೆ ಕಾಳುಗಳಲ್ಲಿ ಪೊಟ್ಯಾಶಿಯಂ, ವಿಟಮಿನ್ ' ಸಿ ', ನಾರಿನ ಅಂಶ ಮತ್ತು ವಿಟಮಿನ್ ' ಬಿ6 ' ಅಂಶ ಹೆಚ್ಚಾಗಿರುವುದರಿಂದ ಹೃದಯದ ಆರೋಗ್ಯಕ್ಕೆ ಇದೊಂದು ಹೇಳಿ ಮಾಡಿಸಿದ ಆಹಾರ ಎಂದು ಹೇಳಬಹುದು. ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ರಕ್ತ ನಾಳಗಳಲ್ಲಿ ಶೇಖರಣೆ ಆಗುವ ಕೊಬ್ಬಿನ ಪದರಗಳನ್ನು ಕಡಿಮೆ ಮಾಡಿ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ಮಾಡುವ ಮೂಲಕ ದೇಹದಲ್ಲಿ ರಕ್ತ ಸಂಚಾರವನ್ನು ಸರಾಗವಾಗಿ ನಿರ್ವಹಿಸಿ ದಿನದ 24 ಗಂಟೆಯೂ ಬಿಡುವಿಲ್ಲದ ಕಾರ್ಯ ನಿರ್ವಹಿಸುವ ನಮ್ಮ ಹೃದಯದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಒಳ್ಳೆಯ ಗುಣ ಲಕ್ಷಣ ಕಾಬುಲ್ ಕಡಲೆ ಕಾಳುಗಳಿಗೆ ಇದೆ.

ಇದಕ್ಕೆ ಕಾರಣ ಕಾಬುಲ್ ಕಡಲೆ ಕಾಳುಗಳಲ್ಲಿ ಕಂಡು ಬರುವ ಹೇರಳವಾದ ಫೋಲೇಟ್ ಅಂಶ. ಇದು ನಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ' ಹೋಮೊಸಿಸ್ಟೀನ್ ' ಎಂಬ ಅಮೈನೊ ಆಮ್ಲವನ್ನು ನಿಯಂತ್ರಣ ಮಾಡುವ ಮೂಲಕ ರಕ್ತದ ಹೆಪ್ಪುಗಟ್ಟುವಿಕೆಯನ್ನು ದೂರ ಮಾಡುತ್ತದೆ.
                                                                                                                                                      *​ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ*            
ಈಗಿನ ಕಾಲದಲ್ಲಿ ನಮ್ಮ ರೋಗ ನಿರೋಧಕ ವ್ಯವಸ್ಥೆ ಮಟ್ಟಿಗೆ ಸರಿ ಇದ್ದರೂ ಅದು ಕಡಿಮೆಯೇ. ಇದಕ್ಕೆ ಕಾರಣ ಕೊರೋನಾದ ಅಟ್ಟಹಾಸ. ಹಾಗಾಗಿ ಈ ಸಮಯದಲ್ಲಿ ನಾವು ಹೆಚ್ಚು ಪ್ರಮಾಣದ ಜಿಂಕ್ ಮತ್ತು ಕಾಪರ್ ಅಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡುವ ಜೀವ ಕೋಶಗಳು ಅಭಿವೃದ್ಧಿ ಆಗಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ. 1 ಕಪ್ ಕಾಬುಲ್ ಕಡಲೆ ಕಾಳುಗಳಲ್ಲಿ ಸುಮಾರು 30 % ಕಾಪರ್ ಅಂಶ ಮತ್ತು 17 % ಜಿಂಕ್ ಅಂಶ ಲಭ್ಯ ಆಗುತ್ತದೆ ಎಂದು ಹೇಳುತ್ತಾರೆ.

*​ಕೂದಲು ಉದುರುವಿಕೆ ಕಡಿಮೆಯಾಗುತ್ತದೆ*

ಕಾಬುಲ್ ಕಡಲೆ ಕಾಳುಗಳಲ್ಲಿ ಪ್ರೋಟಿನ್ ಅಂಶ ಹೆಚ್ಚಿದ್ದು ಇದು ಕೂದಲು ಉದುರುವಿಕೆಯನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಹೊಂದಿದೆ. ಇದರ ಜೊತೆಗೆ ಮ್ಯಾಂಗನೀಸ್ ಅಂಶ ಕೂಡ ಇರುವುದರಿಂದ ಕೂದಲಿನ ಬೇರುಗಳು ಸದೃಢವಾಗಿ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಏಕೆಂದರೆ ತಜ್ಞರು ಹೇಳುವ ಪ್ರಕಾರ ದೇಹದಲ್ಲಿ ಮ್ಯಾಂಗನೀಸ್ ಅಂಶದ ಕೊರತೆ ಉಂಟಾದರೆ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಹಾಗಾಗಿ ಕಾಬುಲ್ ಕಡಲೆ ಕಾಳುಗಳಲ್ಲಿ ಜಿಂಕ್ ಅಂಶ ಕೂಡ ಇರುವುದರಿಂದ ಕೂದಲಿನ ಸಮಗ್ರ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ವಿಟಮಿನ್ ' ಎ ' ಅಂಶ ಸಹ ಹೆಚ್ಚಾಗಿರುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...