Wednesday, April 2, 2025

ವೇದಗಳಲ್ಲಿ ಏನಿದೆ? ಅದರ ಮಹತ್ವ ಏನು?


ವೇದಗಳಲ್ಲಿ ಇಲ್ಲದಿರುವುದು ಎಲ್ಲೂ , ಏನೂ ಇಲ್ಲ. ಅದಕ್ಕಾಗಿ ವೇದಗಳಲ್ಲಿ ಏನಿದೆ ಅನ್ನುವುದನ್ನ ಹೇಳುವುದು ಅಸಾಧ್ಯ.

  • ವೇದ ಅಂದರೆ ವಿಜ್ಞಾನ
  • ವೇದ ಅಂಗರೆ ಗಣಿತ
  • ವೇದ ಅಂದರೆ ಸಮಾಜ ಶಾಸ್ತ್ರ.
  • ವೇದ ಅಂದರೆ ಅರ್ಥಶಾಸ್ತ್ರ.
  • ವೇದ ಅಂದರೆ ರಾಜ್ಯ ಶಾಸ್ತ್ರ.
  • ವೇದ ಅಂದರೆ ಸಂಗೀತ , ವೇದ ಅಂದರೆ ನೃತ್ಯ

ಹೀಗೆ ವೇದಗಳಲ್ಲಿ ಮನುಷ್ಯನ ಬದುಕಿಗೆ ಬೇಕಿರುವ ಎಲ್ಲವೂ ಇದೆ.

  • " ವಿಧ ಜ್ಞಾನೆ " ಅಂದರೆ ವೇದ.

ಅಂದರೆ ಎಲ್ಲ ಜ್ಞಾನಗಳನ್ನೂ ಒಳಗೊಂಡಿರುವುದೇ ವೇದ.

ವೇದ ಅನ್ನುವುದು ಒಂದು ಉತ್ಪನ್ನದ ಯೂಸರ್ ಮ್ಯಾನ್ಯುಯಲ್ ಇದ್ದಂತೆ.

  • ದೇವರು ನಮಗೆ ಸುಂದರವಾದ ಮತ್ತು ತುಂಬಾ ಸಂಕೀರ್ಣವಾದ ಈ ಶರೀರವನ್ನು ಕೊಟ್ಟಿದ್ದಾನೆ. ಈ ಸಂಕೀರ್ಣವಾದ ಶರೀರವನ್ನು ಸುಂದರವಾಗಿ , ಆರೋಗ್ಯವಾಗಿ , ಧರ್ಮೀಯವಾಗಿ ಹೇಗೆ ಕಾಪಾಡಿಕೊಂಡು ಹಾಗೂ ಮುನ್ನಡೆಸಿಕೊಂಡು ಹೋಗಬೇಕು ಅನ್ನುವುದನ್ನ ವೇದಗಳ ಮೂಲಕ ಕೊಟ್ಟಿದ್ದಾನೆ. ವೇದಗಳನ್ನ ಓದದೆ ಜೀವನ ಮುನ್ನಡೆಸುವುದು ಅಸಾಧ್ಯ.
  • ಹೇಗೆ ಯೂಸರ್ ಮ್ಯಾನ್ಯುಯಲ್ ಓದದೆ ಹೊಸ ಉತ್ಪನ್ನವನ್ನು ಉಪಯೋಗಿಸುವುದು ಅಸಾಧ್ಯವೋ ಹಾಗೇ ವೇದಗಳನ್ನು ಓದದೆ ಅಥವಾ ತಿಳಿಯದೆ ಜೀವನ‌ ನಡೆಸುವುದೂ ಅಸಾಧ್ಯ.

ಯೂಸರ್ ಮ್ಯಾನ್ಯುಯಲ್ ಓದದೆ ಒಂದು ಉತ್ಪನ್ನವನ್ನು ಉಪಯೋಗಿಸಿದರೆ, ಒಂದೋ ಅದು ಹಾಳಾಗುತ್ತದೆ ಅಥವಾ ಆ ಉತ್ಪನ್ನದ ಸಂಪೂರ್ಣ ಉಪಯೋಗ ತಿಳಿಯುವುದಿಲ್ಲ. ಹಾಗೆಯೇ ಒಂದು ವೇಳೆ ವೇದಗಳ ಸಾರವನ್ನು ತಿಳಿಯದೆ ಜೀವನ‌ ನಡೆಸಿದರೆ ಜೀವನ ಕೂಡಾ ಅರ್ಥವಿಲ್ಲದ ಬದುಕಾಗುತ್ತದೆ.