Showing posts with label lady. Show all posts
Showing posts with label lady. Show all posts

Wednesday, September 30, 2026

Honey Trap: ಈಕೆ ಜಗತ್ತಿನ ಮೊದಲ ಹನಿಟ್ರ್ಯಾಪ್ ಲೇಡಿ!

 ಮೊತ್ತಮೊದಲು ಹನಿಟ್ರ್ಯಾಪ್ ನಡೆಸಿದ್ದ ಸುರಸುಂದರಿ ಹುಡುಗಿ ಯಾರು ಗೊತ್ತಾ..? ಈಕೆ ಕೇವಲ ಮೋಹಕ ಸೌಂದರ್ಯವತಿ ಈ ಹೆಣ್ಣೊಬ್ಬಳೇ ಏಕಾಂಗಿಯಾಗಿ ಕೊಂದದ್ದು ಎಷ್ಟು ಜನರನ್ನು ಗೊತ್ತಾ? ಬರೋಬ್ಬರಿ 50 ಸಾವಿರ ಸೈನಿಕರನ್ನು! ಇವಳಿಗೂ ಭಾರತಕ್ಕೂ ಒಂದು ಕನೆಕ್ಷನ್ ಇತ್ತು! ಇವಳಿಗೂ ಕರ್ನಾಟಕಕ್ಕೂ ಒಂದು ಕನೆಕ್ಷನ್ ಇದ್ದ ವಿಚಾರ ನಿಮಗೆ ಗೊತ್ತಾ? ಇವಳಿಗೂ ಮೈಸೂರು ಅರಮನೆಗೂ, ಟಿಪ್ಪೂ ಸುಲ್ತಾನ್‌ಗೂ ಒಂದು ದೂರದ ಲಿಂಕ್ ಇತ್ತು ಗೊತ್ತಾ? ಆ ರೋಚಕ ವಿಚಾರಗಳು ಇಲ್ಲಿವೆ…

ಯಾರು ಈ ಸುಂದರಿ?

ಹನಿಟ್ರ್ಯಾಪ್ (Honeytrap) ಎಂಬ ಶಬ್ದ ಕರ್ನಾಟಕ ರಾಜಕೀಯದಲ್ಲಿ (Karnataka Polirtics) ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಹನಿಟ್ರ್ಯಾಪ್ ಅನ್ನೋದು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಸ್ತ್ರ.. ಎಷ್ಟೆಂದ್ರೆ ಅದು ನ್ಯೂಕ್ಲಿಯರ್ ಬಾಂಬ್ ನಷ್ಟೇ ಪವರ್ ಫುಲ್.. ಲಲನೆಯರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಎದುರಾಳಿಯ ಎಲ್ಲಾ ಗುಟ್ಟನ್ನು ತಿಳಿದುಕೊಳ್ಳುವ, ಜೇನಿನ ಹೆಸರಿರೋ ಸಾವಿನ ಬಲೆ, ಮಧುಪಾಕ ನೀಡಿ ರಹಸ್ಯ ವಿಷಯ ಕಕ್ಕಿಸುವ ಸಿಹಿಯಾದ ವಿಷ!

ಮೊದಲು ಹನಿಟ್ರ್ಯಾಪ್ ನಡೆಸಿದ ಸುಂದರಿ ಯಾರು?

ಹೀಗೆ ಮೊತ್ತಮೊದಲು ಹನಿಟ್ರ್ಯಾಪ್ ನಡೆಸಿದ್ದ ಸುರಸುಂದರಿ ಹುಡುಗಿ ಯಾರು ಗೊತ್ತಾ..? ಈಕೆ ಕೇವಲ ಮೋಹಕ ಸೌಂದರ್ಯವತಿ ಈ ಹೆಣ್ಣೊಬ್ಬಳೇ ಏಕಾಂಗಿಯಾಗಿ ಕೊಂದದ್ದು ಎಷ್ಟು ಜನರನ್ನು ಗೊತ್ತಾ? ಬರೋಬ್ಬರಿ 50 ಸಾವಿರ ಸೈನಿಕರನ್ನು! ಇವಳಿಗೂ ಭಾರತಕ್ಕೂ ಒಂದು ಕನೆಕ್ಷನ್ ಇತ್ತು! ಇವಳಿಗೂ ಕರ್ನಾಟಕಕ್ಕೂ ಒಂದು ಕನೆಕ್ಷನ್ ಇದ್ದ ವಿಚಾರ ನಿಮಗೆ ಗೊತ್ತಾ? ಇವಳಿಗೂ ಮೈಸೂರು ಅರಮನೆಗೂ, ಟಿಪ್ಪೂ ಸುಲ್ತಾನ್‌ಗೂ ಒಂದು ದೂರದ ಲಿಂಕ್ ಇತ್ತು ಗೊತ್ತಾ? ಆ ರೋಚಕ ವಿಚಾರಗಳು ಇಲ್ಲಿವೆ…

ಆ ಸುಂದರಿಯ ಹೆಸರೇನು ಗೊತ್ತಾ?

1917ರ ಹೊತ್ತು.. ಪ್ಯಾರಿಸ್ ಎಂಬ ಆ ಕಾಲದಲ್ಲೇ ಸುಂದರವಾಗಿದ್ದ ನಗರದಲ್ಲಿಡೀ ಆತಂಕ.. ಮೊದಲ ವರ್ಲ್ಡ್ ವಾರ್ ಆರಂಭವಾಗಿ 3 ವರ್ಷ ಕಳೆದಿತ್ತಂತೆ.. ಅಂತಹಾ ಜರ್ಮನಿಯೆದುರು ಫ್ರಾನ್ಸ್ ಎಲ್ಲವನ್ನೂ ಕಳೆದುಕೊಳ್ಳುತ್ತಿತ್ತು.. ಮತ್ತು ತನ್ನ ಸೋಲಿಗೆ ಕಾರಣ ಹುಡುಕುತ್ತಿತ್ತು.. ಯಾರ ಮೇಲಾದ್ರೂ ಬ್ಲೇಮ್ ಮಾಡೋದಕ್ಕೆ ಕಾಯುತ್ತಿತ್ತು.. ಅದೇ ಹೊತ್ತಲ್ಲಿ ಅಂದ್ರೆ ಫೆಬ್ರವರಿಯ ಮಧ್ಯಭಾಗ ಪ್ಯಾರಿಸ್ ನಲ್ಲಿ ಒಬ್ಬ ಸುಂದರಿಯನ್ನು ಅರೆಸ್ಟ್ ಮಾಡಲಾಗುತ್ತೆ.. ಫ್ರಾನ್ಸ್ನ ವೈರಿ ದೇಶ ಜರ್ಮನಿಯ ಪರ ಗೂಢಚಾರಿಕೆಯ ಆರೋಪದಡಿ.. ಅವಳ ಹೆಸರು ಮಾತಾಹರಿ..

ಮಾನವ ಇತಿಹಾಸದ ಖತರ್ನಾಕ್ ಸೀಕ್ರೆಟ್ ಏಜೆಂಟ್

ಹಾಗೆ ಮಾತಾಹರಿ ಇಡೀ ವಿಶ್ವದಾದ್ಯಂತ ಪ್ರಸಿದ್ಧಳಾಗಿದ್ದಳು.. ತನ್ನ ಮಾದಕ ನೋಟಕ್ಕೆ, ಮಾದಕ ನೃತ್ಯಕ್ಕೆ.. ಬಾಗು ಬಳುಕುವ ದೇಹ ಸೌಂದರ್ಯಕ್ಕೆ.. ಎಂತೆಂಥದ್ದೋ ವೆಪನ್ಗಳಿಗೆ ಎದೆಯುಬ್ಬಿ ಮುನ್ನುಗ್ಗುವ ಅದೆಷ್ಟೋ ಪುರುಷರನ್ನೂ ಕೇವಲ ತನ್ನ ತುಟಿಯಂಚಿನ ಉನ್ಮತ್ತ ನಗು, ತೇಲುಗಣ್ಣಿನ ರತಿಮೈತ್ರಿಯ ಉಬ್ಬರವಿಳಿತಗಳಿಂದಲೇ ಕೊಂದು ಹಾಕಿದವಳು.. ಮಾತಾಹರಿ ಇಡೀ ಮಾನವ ಇತಿಹಾಸದಲ್ಲೇ ಅತ್ಯಂತ ಖತರ್ನಾಕ್ ಸೀಕ್ರೆಟ್ ಏಜೆಂಟ್ ಆಗಿದ್ದಳು..

ಮರಣ ದಂಡನೆ ಹೊತ್ತಲ್ಲೂ ನಗು

ಅಂದು 1917 ಅಕ್ಟೋಬರ್ 17 ರ ಮುಂಜಾನೆ, ಇನ್ನು ಕೆಲ ಹೊತ್ತಲ್ಲೇ ಜಗತ್ತಿನ ಮಹಾನ್ ಸುಂದರಿ ಮಾತಾಹರಿಗೆ ಮರಣದಂಡನೆಯ ಶಿಕ್ಷೆ ಜಾರಿಯಾಗೋದಿತ್ತು.. ಕಗ್ಗತ್ತಲ ಜೈಲಿನ ಕೋಣೆಯಲ್ಲಿ ಎಚ್ಚರಗೊಂಡ ಮಾತಾಹರಿಯನ್ನು ಚರ್ಚ್ ನ ನನ್ ಒಬ್ರು ಬಂದು “ಇಂದು ನಿನ್ನ ಕೊನೇ ದಿನ” ಅಂತ ಹೇಳಿದ್ರು.. ಅವಳ ಮಾದಕ ತುಟಿಯಂಚಿನಲ್ಲಿ ಮತ್ತದೇ ಮೋಹಕ ನಗು… ಸೂರ್ಯ ಮೇಲೇರುತ್ತಿದ್ದಂತೆ ಸೂರ್ಯನ ಮಗಳ ಹೆಸರನ್ನು ಪಡೆದ ಮಾತಾಹರಿಯನ್ನು ಪ್ಯಾರಿಸ್ ನ ಹೊರವಲಯಕ್ಕೆ ಕರೆದೊಯ್ದರು..

ಸಾಯುವಾಗಲೂ ಫ್ಲೈಯಿಂಗ್ ಕಿಸ್ ಕೊಟ್ಟ ಮದನಾರಿ!

ಒಂದು ಕಾಡ ಮಧ್ಯದಲ್ಲಿ ಮರವೊಂದಕ್ಕೆ ಕಟ್ಟಿಹಾಕಲಾಗುತ್ತೆ.. ಯಾವ ಪ್ರತಿರೋಧವನ್ನೂ ತೋರಲಿಲ್ಲ ಆಕೆ.. ಸಂಪ್ರದಾಯದಂತೆ ಅವಳ ಕಣ್ಣಿಗೆ ಬಟ್ಟೆ ಕಟ್ಟಬೇಕು.. ಆದರೆ ಹಾಗೆ ಬಟ್ಟೆ ಕಟ್ಟೋದಕ್ಕೂ ಬಿಡಲಿಲ್ಲ.. ಎದುರು ಫ್ರಾನ್ಸ್ನ 12 ಸೈನಿಕರ ಪಡೆ ಗನ್ ಹಿಡಿದು ಗುಂಡು ಹಾರಿಸೋದಕ್ಕೆ ಸಿದ್ಧವಾಗಿ ನಿಂತಿದ್ರು.. ಇನ್ನು ಕೆಲ ಹೊತ್ತಲ್ಲೇ ಆ 12 ಸೈನಿಕರ ಗುಂಡುಗಳ ಮ್ಯಾಗಜಿನ್ ನಿಂದ ಹಾರೋ ನೂರಾರು ಗುಂಡುಗಳಿಗೆ ಇಡೀ ಜಗತ್ತನ್ನು ಮರುಳು ಮಾಡಿದ ಆ ದೇಹ ಪುಡಿಪುಡಿಯಾಗುತ್ತೆ.. ಅದು ಗೊತ್ತಿದ್ದೂ.. ಅವಳು ನಗುತ್ತಿದ್ದಳು.. ಅಷ್ಟೇ ಅಲ್ಲ.. ಎದುರಿದ್ದ ಆ 12 ಸೈನಿಕರತ್ತ ಒಂದು ಫೈಯಿಂಗ್ ಕಿಸ್ ಕೊಟ್ಟು ಬಿಟ್ಟಳು.. ಕ್ಷಣಾರ್ಧದಲ್ಲೇ ಫೈರ್ ಆದೇಶ ಬರುತ್ತೆ.. ಆ ಗುಂಡಿನ ದಾಳಿಗೆ ಅಲ್ಲೇ ನೆಲಕ್ಕುರುಳಿ ಬಿದ್ದು ಸಾವನ್ನಪ್ಪುತ್ತಾಳೆ.. ಮೊದಲ ಮಹಾಯುದ್ಧದಲ್ಲಿ ತನ್ನ ದೇಶದ ಸೋಲಿಗೆ, 50 ಸಾವಿರಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣ ಅಂತ ಫ್ರಾನ್ಸ್ ಹೀಗೆ ಒಂದು ಸುಂದರಿಯನ್ನು ದಯನೀಯವಾಗಿ ಕೊಂದು ಹಾಕಿತ್ತು…!

ಭಾರತ, ಕರ್ನಾಟಕದ ಜೊತೆ ಮಾತಾಹರಿ ಲಿಂಕ್

ಒಂದು ಸಾಮಾನ್ಯ ಗೂಢಚಾರಿಣಿಯ ಸಾವು ಆ ಕಾಲದ ಎಲ್ಲಾ ಸುದ್ದಿಪತ್ರಿಕೆಗಳ ಮುಖಪುಟದ ಸುದ್ದಿಯಾಗುತ್ತೆ.. ಜಗತ್ತಿನಾದ್ಯಂತ ಸಂಚಲನವೇ ಉಂಟಾಗುತ್ತೆ.. ಯಾಕೆಂದ್ರೆ ಆ ಹೊತ್ತಿಗೆ ಮಾತಾಹರಿ ಅಷ್ಟೊಂದು ಫೇಮಸ್ ಆಗಿ ಬಿಟ್ಟಿದ್ದಳು.. ಒಂದು ರೀತಿಯಲ್ಲಿ ಹೇಳೋದಾದ್ರೆ ಅವಳು ಹಾಗೆ ಫೇಮಸ್ ಆಗೋದಕ್ಕೆ ಕಾರಣವಾದದ್ದು ಭಾರತ… ಜೊತೆಗೆ ಅಲ್ಲೂ ಆಕೆಗೆ ಒಂದು ಕರ್ನಾಟಕದ ಲಿಂಕ್ ಕೂಡಾ ಇದೆ…! ಹೇಳ್ತೀನಿ ಕೇಳಿ…

ಯಾರಿವಳು ಮಾತಾಹರಿ..?

ಮಾತಾಹರಿ ಅನ್ನೋದು ಭಾರತದ ಲಿಂಕ್ ಇರೋ ಹೆಸರು.. ಒಂದು ರೀತಿಯಲ್ಲಿ ವಿಷ್ಣುವಿಗೆ ಸಂಬಂಧಿಸಿದ್ದು.. ಮಲಯಾ ಭಾಷೆಯ ಹೆಸರದು.. ಸೂರ್ಯ ಎಂದರ್ಥ.. ಅವಳ ಬದುಕನ್ನು ಇಷ್ಟು ಎತ್ತರಕ್ಕೆ ಏರಿಸಿದ್ದು ಒಂದು ಅವಳ ಸೌಂದರ್ಯ ಮತ್ತೊಂದು ಭಾರತದ ದೇವಾಲಯ ಸಂಪ್ರದಾಯದಿಂದ ಕಡ ಪಡೆದ ಅವಳ ಉಡುಗೆ ತೊಡುಗೆ ಹಾಗೂ ಡ್ಯಾನ್ಸ್.. ಎಂದೂ ಕೂಡಾ ಭಾರತದ ನೆಲಕ್ಕೆ ಕಾಲಿಡದ ಈ ಮಾತಾಹರಿಯ ನಿಜವಾದ ಊರು ನೆದರ್ಲ್ಯಾಂಡ್ಸ್… ಡಚ್ ಮೂಲದ ಟೊಪ್ಪಿ ತಯಾರಿಕಾ ಉದ್ಯಮಿ ಆಡಮ್ ಝೆಲ್ಲೆ ದಂಪತಿಗೆ 1876ರ ಆಗಸ್ಟ್ 7ರಂದು ಹುಟ್ಟಿದ್ದಳು.. ಅವಳ ಮೂಲ ಹೆಸರು ಮಾರ್ಗರೇಟ್…

ಬೀದಿಗೆ ಬಿದ್ದಿತ್ತು ಮಾರ್ಗರೇಟ್ ಬದುಕು!

ಇಡೀ ಜಗತ್ತಿನ ಹಲವು ಪ್ರಭಾವಿ ದೇಶಗಳಿಗೆ ಟೋಪಿ ಹಾಕಿದ ಮಾತಾಹರಿಯ ತಂದೆ ಟೋಪಿ ಉದ್ಯಮಿ. ವ್ಯವಹಾರದಲ್ಲಿ ದಿವಾಳಿಯೆದ್ದಾಗ ಮನೆ, ಕುಟುಂಬ ಬಿಟ್ಟು ಎಸ್ಕೇಪ್ ಆಗಿದ್ದ.. ತಾಯಿಯೂ ಕಾಲವಾದಾಗ ಮಾರ್ಗರೇಟಾ ಬದುಕು ಬೀದಿಗೆ ಬಂದಿತ್ತು. ಬಾಲ್ಯದಲ್ಲೇ ಮಾರ್ಗರೇಟಾ ಚಂದದ ಹುಡುಗಿ.. ಆಗಲೇ ಕನಸು ಕಂಗಳ ಬಾಲೆ.. 17ನೇ ವಯಸ್ಸಲ್ಲಿದ್ದಾಗ ಶಿಕ್ಷಕನ ಜೊತೆ ಪ್ರೀತಿ ಹುಟ್ಟಿಕೊಂಡಿತ್ತು.. ಅದಾಗಿ ಕೆಲ ವರ್ಷಗಳ ಬಳಿಕ ನ್ಯೂಸ್ ಪೇಪರ್‌ನಲ್ಲಿ ಡಚ್ ಸೇನಾಧಿಕಾರಿಯೊಬ್ಬ ಹೆಂಡ್ತಿ ಬೇಕು ಎಂದು ಪ್ರಕಟವಾದ ಒಂದು ಜಾಹೀರಾತು ನೋಡಿ ತನ್ನ ಫೋಟೋ ಕಳಿಸಿಕೊಡ್ತಾಳೆ ಮಾರ್ಗರೇಟಾ.. ಅದೃಷ್ಟಕ್ಕೆ ಆಯ್ಕೆಯೂ ಆಗ್ತಾಳೆ..

ಮಕ್ಕಳಾದ ಮೇಲೆ ಮುರಿದು ಬಿತ್ತು ಮದುವೆ

1895ರ ಮಾರ್ಚ್ 30ರಂದು ಕಲೋನಿಯಲ್ ಟ್ರೂಪ್ ನ ಕ್ಯಾಪ್ಟನ್ ಎಂ. ರುಡೋಲ್ಫ್ ಜೊತೆ ಮದುವೆಯಾಗ್ತಾಳೆ.. ಆತ ಆಕೆಯನ್ನು ಡಚ್ ಈಸ್ಟ್ ಇಂಡೀಸ್ಗೆ ಕರೆದೊಯ್ತಾನೆ. ಆಗ ಅವಳಿಗೆ ಕೇವಲ 22 ವಯಸ್ಸು.. ಈಗಿನ ಇಂಡೋನೇಷ್ಯಾ ಅಂತ ಕರೆಯಲಾಗೋ ಇಂಡೀಸ್ನಲ್ಲೇ ಅವಳ ಬದುಕು ಟರ್ನಿಂಗ್ ಪಡೆದುಕೊಳ್ಳುತ್ತೆ.. ಇಬ್ಬರು ಮಕ್ಕಳ ತಾಯಿಯಾಗ್ತಾಳೆ… ಆದ್ರೆ ಆ ಇಬ್ರೂ ಮಕ್ಕಳನ್ನೂ ಕಳೆದುಕೊಂಡು ತಬ್ಬಲಿಯಾಗ್ತಾಳೆ.. ಮದುವೆಯಾದ ನಾಲ್ಕೇ ವರ್ಷಕ್ಕೆ ಮದುವೆಯೂ ಮುರಿದು ಬೀಳುತ್ತೆ.. ಅಲ್ಲಿಂದ ನೇರ ಹೋಗಿದ್ದು ಪ್ಯಾರಿಸ್ಗೆ..

ಭಾರತದ ಹೆಸರು ಸಿಕ್ಕಿದ್ದು ಹೇಗೆ?

ಇಂಡೋನೇಷ್ಯಾ.. ಭಾರತದ ಸಂಸ್ಕೃತಿಯೇ ಹಾಸುಹೊಕ್ಕಾಗಿದ್ದ ನಾಡು.. ಅಲ್ಲೇ ಅವಳು ಭಾರತೀಯ ಡ್ಯಾನ್ಸ್, ರಂಬೆ, ಊರ್ವಶಿ , ಮೇನಕೆಯರಂತೆ ಕಾಣೋ ಡ್ರೆಸ್ ಧರಿಸಿ ಇಡೀ ದೇಹ ಬಳುಕುವಂತೆ ಮಾಡೋ ಡ್ಯಾನ್ಸ್ ಮಾರ್ಗರೇಟಾಳಲ್ಲಿ ಹೊಸ ಕನಸುಗಳನ್ನು ಬಿತ್ತುತ್ತೆ.. ಅಲ್ಲೇ ಅವಳಿಗೆ ಮಾತಾಹರಿಯೆಂಬ ಹೆಸರು ಕೂಡಾ ನೆನಪಾಗೋದು… 1905ರಲ್ಲಿ ಪ್ಯಾರಿಸ್ ಗೆ ಬಂದಿದ್ದಳು ಮಾರ್ಗರೇಟಾ.. ಮಕ್ಕಳನ್ನು ಕಳೆದುಕೊಂಡವಳು, ಗಂಡನಿಲ್ಲದ ವಿಧವೆ.. ಕೈಲಿ ಹಣವಿಲ್ಲ… ಬದುಕಿನ ದಾರಿಯೂ ಗೊತ್ತಿಲ್ಲ.. ಆದರೆ ಥಳುಕು ಬಳುಕಿನ ಪ್ಯಾರಿಸ್ ನಲ್ಲಿ ಅವಳಿಗೆ ಏನೋ ಒಂದು ದಾರಿ ಕಾಣುತ್ತದೆ…

ಪ್ಯಾರಿಸ್‌ಗೆ ಬಂದ ಮಾರ್ಗರೇಟ್

ಅಂದಿನ ಪ್ಯಾರಿಸ್ ಅಂದ್ರೆ ಸುಖಲೋಲುಪತೆಯಲ್ಲೇ ಮುಳುಗಿದ್ದ ಪ್ರೇಮಿಗಳ ನಗರಿ.. ವಸಾಹತು ದೇಶಗಳಿಂದ ಕೊಂಡುತಂದ ಅಪಾರ ಸಂಪತ್ತು ಬೇರಿತ್ತು.. ಅಲ್ಲಿನ ಮಹಿಳೆಯರೆಂದರೆ ಅದ್ಭುತ ಅಪಾರ್ಟ್ಮೆಂಟ್ ಗಳಲ್ಲಿ ವಾಸ, ಐಷಾರಾಮಿ ಉಡುಗೆ, ಆಭರಣಗಳು, ಸುತ್ತಲೂ ಸೇವಕಿಯರು, ಓಡಾಟಕ್ಕೆ ಕುದುರೆಗಳು.. ಸಾಕಷ್ಟು ಹಣ, ಶೋಕಿಯೇ ಜೀವನ.. ಅದು ಮಾತಾಹರಿಯನ್ನೂ ಆಕರ್ಷಿಸಿತ್ತು.. ಆಗ ಅವಳಿಗೆ ಕಾಣಿಸಿದ್ದೇ ಆ ದಾರಿ.. ಪ್ಯಾರಿಸ್ ನಲ್ಲಿ ಹೊಸ ಬಗೆಯ ನೃತ್ಯ ಪ್ರದರ್ಶನ ನಡೆಸಿ, ಶ್ರೀಮಂತರನ್ನು ಸೆಳೆಯೋ, ಅದರಿಂದ ದುಡ್ಡು ಪಡೆಯೋ ಹಾದಿ…

ಮಾತಾಹರಿಯಾದ ಮಾರ್ಗರೇಟ್

ಹಲವು ತಿಂಗಳು ಇಂಡೋನೇಷ್ಯಾ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಮಾತಾಹರಿ ಸ್ಥಳೀಯ ನೃತ್ಯ ಸಂಸ್ಥೆಗೆ ಸೇರಿ ಡ್ಯಾನ್ಸ್ ಕಲೀತಾಳೆ.. ತನ್ನ ಕುಣಿತದಲ್ಲಿ ಇಂಡೋನೇಶಿಯಾ ಜಾನಪದ ಸಂಸ್ಕೃತಿಯ ಜೊತೆಗೆ ಭಾರತೀಯ ನೃತ್ಯ ಪದ್ಧತಿಯನ್ನೂ ಬೆರಸಿ ಹೊಸ ಬಗೆಯ ಡ್ಯಾನ್ಸ್ ಸಂಪ್ರದಾಯವನ್ನೇ ಆರಂಭಿಸ್ತಾಳೆ.. ತನ್ನ ಹೆಸರನ್ನು ಕೂಡಾ ಮಾತಾಹರಿ ಅಂತ ಬದಲಾಯಿಸ್ತಾಳೆ..

ಟಿಪ್ಪು ಸುಲ್ತಾನ್ ಮರಿಮೊಮ್ಮಗನ ಜೊತೆ ಸಂಪರ್ಕ

ಹಿನ್ನೆಲೆ ವಾದನಕ್ಕೆ ಭಾರತದಿಂದಲೇ ಒಂದು ತಂಡವನ್ನು ಆಹ್ವಾನಿಸ್ತಾಳೆ.. ಅದು ಭಾರತದ ವಾದ್ಯ, ತಬಲಾ, ಸಂಗೀತ, ಸಾಹಿತ್ಯವನ್ನು ಒಳಗೊಂಡ ಇಂಡಿಯಲ್ ರಾಯಲ್ ಮ್ಯೂಸಿಕ್ ಎಂಬ ತಂಡ.. ಆ ಟೀಂನ ಮುಖ್ಯಸ್ಥರಾಗಿದ್ದೋರು ಸೂಫಿ ಸಂತ ಹಜ್ರತ್ ಇನಾಯತ್ ಖಾನ್.. ಈ ಇನಾಯತ್ ಖಾನ್ ಇದ್ದಾರಲ್ಲಾ..? ಇವರ ಮೂಲ ಮೈಸೂರು…! ನಿಮಗೆ ಆಶ್ಚರ್ಯವಾದೀತು ಟಿಪ್ಪೂ ಸುಲ್ತಾನ್‌ನ ಮರಿಮೊಮ್ಮಗ ಇವರು.. ಇವರ ಅಜ್ಜನಿಗೆ ಮದುವೆಯಾಗಿದ್ದು ಮೈಸೂರು ಅರಮನೆಯಲ್ಲಿ! ಇವರ ಅಜ್ಜ ಅಲ್ಲಾಭಕ್ಷ್ ಮೈಸೂರು ದಸರಾದಲ್ಲಿ ಸಂಗೀತ ಕಚೇರಿ ನಡೆಸಿದ್ರು.. ಮೈಸೂರಿನ ಒಡೆಯರ್ ಇವರನ್ನು ಕರೆದು ರಾಜಮರ್ಯಾದೆಯೊಂದಿಗೆ ಗೌರವಿಸಿದ್ರು..!

ಮುಸ್ಲಿಂ ವ್ಯಕ್ತಿ ಪತ್ನಿಗೆ ಶಾರದಾ ಮಾತೆ ಹೆಸರು!

ಈ ಸೂಫಿ ಸಂತನ ಪತ್ನಿಯ ಹೆಸರು ಶಾರದೆ.. ಮೂಲತಃ ಕ್ರಿಶ್ಚಿಯನ್ ಆಗಿದ್ದ ಈಕೆ ಶ್ರೀರಾಮಕೃಷ್ಣ ಪರಮಹಂಸರ ಪರಮ ಭಕ್ತೆ.. ನ್ಯೂಯಾರ್ಕ್ನಲ್ಲಿರೋ ಇವರ ಮನೆಗೆ ಅಂದು ಸ್ವಾಮಿ ವಿವೇಕಾನಂದರೇ ಖುದ್ದು ಭೇಟಿ ನೀಡಿದ್ರು.. ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸೋ, ಭಾರತೀಯ ವೇದ ವೇದಾಂತಗಳನ್ನು ಅಧ್ಯಯನ ಮಾಡಿದ್ದ ಇನಾಯತ್ ಖಾನ್ ಈಕೆಯನ್ನು ಮದುವೆಯಾದಾಗ ಪತ್ನಿಗೆ ರಾಮಕೃಷ್ಣ ಪರಮಹಂಸರ ಮಡದಿ ಶಾರದಾ ಮಾತೆಯ ಹೆಸರನ್ನೇ ಇಟ್ಟಿದ್ರು…!

ಭಾರತದ ಸಂಗೀತಕ್ಕೆ ಮಾತಾಹರಿ ನೃತ್ಯ

ಇದೇ ಸೂಫಿ ಸಂತ ಇನಾಯತ್ ಖಾನ್ ಅವರ ಹಿನ್ನೆಲೆ ಸಂಗೀತದ ಜೊತೆ ಪ್ಯಾರಿಸ್ ನಲ್ಲಿ ನೃತ್ಯ ಪ್ರದರ್ಶನ ಕೊಡ್ತಾಳೆ ಮಾತಾಹರಿ.. ಮೊದಲ ಬಾರಿಗೆ ಭಾರತದ ಸಂಗೀತ 7 ಕಡಲು ದಾಟಿತ್ತು.. ಆ ಸಂಗೀತಕ್ಕೆ ತಕ್ಕಂತೆ ಡ್ರೆಸ್ ಧರಿಸಿದ್ದಳು ಮಾತಾಹರಿ.. ದೇವಲೋಕದ ಅಪ್ಸರೆಯಂತೆ.. ಕೇವಲ ಆಭರಣಗಳಿಂದಲೇ ತುಂಬಿದ ಕುಪ್ಪಸ.. ಕೈ ಪಟ್ಟಿ, ಭುಜಪಟ್ಟಿ, ಸೊಂಟದ ಪಟ್ಟಿ ಎಲ್ಲವೂ ಇಂದ್ರನ ಆಸ್ಥಾನದ ಮೇನಕೆಯಂತೆ.. ಬಾಗು ಬಳುಕಿನ ಆ ದೇಹಕ್ಕೊಂದು ಅಂತಹುದೇ ಬಳುಕುವ ಒಂದು ತೆಳುವಾದ ಶಾಲು… ತಲೆಯ ಮೇಲೆ ಅದೇ ಅಪ್ಸರೆಯಂತೆಯೇ ಕಾಣೋ ಆಭರಣಗಳಿಂದಲೇ ಮಾಡಿದ ಕಿರೀಟ…

ಇಂದ್ರನ ಒಡ್ಡೋಲಗದಲ್ಲಿ ನೃತ್ಯ

ಅದು ಥೇಟು ಸ್ವರ್ಗದ ಇಂದ್ರನ ಒಡ್ಡೋಲಗದ ನೃತ್ಯವೇ ಆಗಿತ್ತು.. ಅವಳ ಥಳುಕು ಬಳುಕಿನ ನೃತ್ಯಕ್ಕೆ ತಕ್ಕಂತೆ ಹಿತವಾದ ಸಂಗೀತ.. ಜೊತೆಗೆ ಡ್ಯಾನ್ಸ್ ನಡೀತಿದ್ದ ಹಾಲ್ ತುಂಬಾ ಅಗರಬತ್ತಿ ಉರಿಸಿಡ್ತಾರೆ.. ತೆಂಗಿನ ಗರಿಗಳಿಂದ ಹಾಲನ್ನು ಸಿಂಗರಿಸಲಾಗಿತ್ತು.. ಹಾಲ್ ತುಂಬೆಲ್ಲಾ ಅಗರಬತ್ತಿಯ ಪರಿಮಳ ಒಂದು ಬಗೆಯ ದೈವಿಕವಾದ, ಅಲೌಕಿಕವಾದ ವಾತಾವರಣವನ್ನುಂಟು ಮಾಡಿತ್ತು.. ಭಾರತದ ದೇವಾಲಯಗಳಲ್ಲಿರುವಂಥಾ ಕೆಲವು ಸಂಕೇತಗಳನ್ನು ಅಲ್ಲಿ ಇರಿಸಲಾಗಿತ್ತು.. ಭಾರತದ ಸಂಕೇತಗಳನ್ನು ಅಲ್ಲಲ್ಲಿ ಜೋಡಿಸಿಡ್ತಾರೆ..

ತಾನು ಭಾರತದವಳು ಅಂತ ಸುಳ್ಳು ಹೇಳಿದ ಮಾತಾಹರಿ

ಇಂತಹಾ ವೇಷಭೂಷಣವಿದ್ದ ಅವಳ ಮಾದಕ ಫೋಟೋವನ್ನು ಅಲ್ಲಿನ ಪತ್ರಿಕೆಗಳಿಗೆಲ್ಲಾ ಕೊಡ್ತಾಳೆ ಮಾತಾಹರಿ.. ಒಂದು ಸಂದರ್ಶನದಲ್ಲಿ ಆಕೆ ತಾನು ಭಾರತದವಳು ಅಂತಲೂ ಹೇಳ್ತಾಳೆ.. ಅದರಲ್ಲೂ ದಕ್ಷಿಣಭಾರತದವಳು.. ಅಲ್ಲಿನ ಶಿವನ ದೇವಾಲಯವೊಂದರ ಅರ್ಚಕನ ಮಗಳು.. ಆ ಅರ್ಚಕನ ಸಾವಿನ ಬಳಿಕ ಮತ್ತೊಬ್ಬ ಅರ್ಚಕನ ಸುಪರ್ದಿಯಲ್ಲಿ ಬೆಳೆದೆ.. ಆ ದೇವಾಲಯದಲ್ಲೇ ನೃತ್ಯ ಮಾಡ್ತಿದ್ದವಳು.. ಮತ್ತೊಂದು ಸಂದರ್ಶನದಲ್ಲಿ ತಾನು ಗಂಗಾ ನದಿ ತೀರದಲ್ಲಿ ಹುಟ್ಟಿದೆ ಅಂತಾಳೆ.. ಹೀಗೆ ಕಟ್ಟುಕತೆಯನ್ನು ಕಟ್ಟಿದಳು.. ಮತ್ತು ಅದು ಕ್ಲಿಕ್ ಆಗಿತ್ತು..

ಮೊದಲ ನೃತ್ಯದಲ್ಲೇ ಹೃದಯ ಕದ್ದ ಸುಂದರಿ

1905ರಲ್ಲಿ ಪ್ಯಾರಿಸ್ ನ ಏಷ್ಯನ್ ಆರ್ಟ್ ಮ್ಯೂಸಿಯಂನಲ್ಲಿ ನಡೆದ ಮಾತಾಹರಿಯ ಮೊತ್ತಮೊದಲ ಡ್ಯಾನ್ಸ್ ಕಾರ್ಯಕ್ರಮವೇ ಸಕ್ಸಸ್ ಆಗಿತ್ತು.. ಇಡೀ ನಗರ ಶಾಕ್ ಆಗಿತ್ತು.. ಅಂತಹುದೊಂದು ಡ್ಯಾನ್ಸ್ನ್ನು ಆ ನಗರ ಹಿಂದೆಂದೂ ನೋಡಿರಲಿಲ್ಲ. ಅವಳ ಕಾರ್ಯಕ್ರಮಗಳಿಗೆ ಆಡಿಯೆನ್ಸ್ ಆಗಿದ್ದೋರು. ಎಲ್ಲರೂ ಮೇಲ್ವರ್ಗದವರು. ಅದರಲ್ಲೂ ಉನ್ನತ ಸೇನಾಧಿಕಾರಿಗಳು, ರಾಜಕಾರಣಿಗಳು.. ಶ್ರೀಮಂತರು.. ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರದ ವ್ಯವಸ್ಥೆಯ ಜೊತೆ ನೇರ ಸಂಬಂಧ ಹೊಂದಿದ್ದೋರು.. ಇವಳ ತಂಡದ ನೃತ್ಯಕ್ಕೆ ಇನಿಲ್ಲದಂತೆ ಡಿಮ್ಯಾಂಡ್ ಬಂದು ಬಿಡುವಿಲ್ಲದ ನೃತ್ಯಗಾರ್ತಿಯಾಗುತ್ತಾಳೆ ಮಾತಾಹರಿ..

ಡ್ಯಾನ್ಸ್ ಮಾಡುತ್ತಾ ಬಟ್ಟೆ ಬಿಚ್ಚುವ ವಯ್ಯಾರಿ!

ಪ್ಯಾರಿಸ್ ಎಂದಲ್ಲಾ.. ಇಡೀ ಯುರೋಪ್ ಖಂಡದಾದ್ಯಂತ ಸುತ್ತಾಡ್ತಾಳೆ.. ಒಂದಿಡೀ ದಶಕ.. ಆವರೆಗೆ ಅಂತಹುದೊಂದು ಡ್ಯಾನ್ಸನ್ನು ಇಡೀ ಯುರೋಪ್ ನಲ್ಲೇ ಯಾರೂ ನೋಡಿರಲಿಲ್ಲ… ಅವಳ ಡ್ಯಾನ್ಸ್ನ ಮತ್ತೊಂದು ವಿಶೇಷ ಅಂದ್ರೆ.. ಡ್ಯಾ್ಸ್ ಮಾಡ್ತಾ ಮಾಡ್ತಾ ಒಂದೊಂದೇ ಬಟ್ಟೆಯನ್ನು ಕಳಚುತ್ತಾ ಬರೋದು.. ಒಮ್ಮೊಮ್ಮೆ ನಿಧಾನವಾದ .. ಇದ್ದಕ್ಕಿದ್ದಂತೆ ದಿಢೀರನೆ ಬಿರುಸಾದ ನಡೆ... ಮೋಹಕ ಚಲನೆ.... ಮಾದಕ ನೋಟ.. .. ತೇಲುಗಣ್ಣಲ್ಲೇ, ಹಸಿದ ಕಣ್ಣುಗಳಲ್ಲೇ ಎದುರಿದ್ದ ಉನ್ನತ ವರ್ಗದ ಅಧಿಕಾರಿಯನ್ನು ಮಾತನಾಡಿಸೋದು.. ಒಂದು ರೀತಿ ಹಿಪ್ನೋಟಿಸಂನಂತೆ. ಹಲವು ಪವರ್ ಫುಲ್ ಗಂಡಸರೆಲ್ಲಾ ಅವಳ ಡ್ಯಾನ್ಸ್ಗೆ ಅದರ ಮಾದಕ ನಡೆಗೆ, ಅವಳ ಮೋಹಕ ನಗೆಗೆ ಮರುಳಾದ್ರು.. ನಾನು ಆಫೀಸರ್ ಗಳನ್ನು ಇಷ್ಟಪಡುತ್ತಿದ್ದೆ.. ಅವರ ಬದುಕು ಇಷ್ಟವಾಗಿತ್ತು.. ಹಣದ ಯೋಚನೆಯಿಲ್ಲದೆ ಅವರ ಜೊತೆ ಮಲಗೋದು ನನಗೆ ಹೆಮ್ಮೆ ಅಂತ ಒಂದು ಬಾರಿ ಹೇಳಿದ್ದಳು ಮಾತಾಹರಿ..

ಮಾತಾಹರಿ ಬದುಕು ಬದಲಿಸಿದ ವಿಶ್ವಯುದ್ಧ

ಸುಮಾರು ಒಂದು ದಶಕಗಳ ಕಾಲ ಮಾತಾಹರಿ ತನ್ನ ಈ ಕನಸಿನ ಲೋಕದಲ್ಲೇ ಜೀವಿಸಿದ್ದಳು.. ಅವಳ ಇಡೀ ಬದುಕು ಐಶಾರಾಮಿಯಾಗಿತ್ತು.. ದೇಶ ದೇಶಗಳನ್ನು ಸುತ್ತಿದಳು.. ತನಗೆ ಬೇಕಾದುದನ್ನೆಲ್ಲಾ ಪಡೆದುಕೊಂಡಳು… ಹಲವು ಪವರ್ ಫುಲ್ ಗಂಡಸರ ಅತಿಮೆಚ್ಚಿನ ಹೆಣ್ಣಾಗಿ ಬಿಟ್ಟಳು.. ಅವರೆಲ್ಲಾ ಯುರೋಪ್ ದೇಶಗಳ ನಾಯಕರಾಗಿದ್ರು.. ಮತ್ತು ಅವರೆಲ್ಲಾ ಈ ಮಾಯಾಂಗನೆಯ ಜೊತೆಗಿನ ಅತಿ ಅಪಾಯಕಾರಿಯಾದ ಕತ್ತಲೆ ಹಾದಿಯ ಪಯಣಿಗರಾಗಿದ್ರು. ಆದರೆ ಇದ್ದಕ್ಕಿದ್ದ ಹಾಗೆ 1914ರ ಬೇಸಿಗೆಯಲ್ಲಿ ಮೊದಲ ಮಹಾಯುದ್ಧ ಆರಂಭವಾಯ್ತು.. ಮಾತಾಹರಿಯ ಇವೆಲ್ಲಾ ಬದುಕು ದಿಢೀರ್ ನಿಂತು ಬಿಟ್ಟಿತು.. ಇಡೀ ಯುರೋಪ್ ಜನರ ಮೂಡ್ ಇದ್ದಕ್ಕಿದ್ದಂತೆ ಬದಲಾಗಿ ಬಿಟ್ಟಿತು.. ನ್ಯೂಸ್ ಪೇಪರ್ ಗಳೆಲ್ಲಾ ದಿನಕಳೆದಂತೆ ಕೇವಲ ಯುದ್ಧದಲ್ಲಿ ಸತ್ತವರ, ಗಾಯಗೊಂಡವರ ವಿದ್ರಾವಕ ಕಥೆಗಳಿಂದಲೇ ತುಂಬಿದವು... ಮತ್ತು ಮಾತಾಹರಿ ಅದರ ಸಂಕೇತವಾಗಿ ಬಿಟ್ಟಳು...

ಗೂಢಾಚಾರಿಣಿಯಾಗಿ ಬದಲಾದ ಮಾತಾಹರಿ

ಹೇಗೂ ಮಾತಾಹರಿಗೆ ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳ ನಿಕಟ ಸಂಪರ್ಕವಿತ್ತು.. ಎಷ್ಟೆಂದರೆ ಈ ಸಂಪರ್ಕವೇ ಮುಂದೆ ಇಡೀ ಮಹಾಯುದ್ಧದ ದಿಕ್ಕನ್ನೇ ಬದಲಾಯಿಸುವಷ್ಟು.. ಮೊದಲಿಗೆ ಜರ್ಮನಿಯ ರಾಜ ವಿಲ್ ಹೆಲ್ಮ್ ನನ್ನು ಪ್ರಚೋದಿಸಿ ಆತನಿಂದ ರಹಸ್ಯಗಳನ್ನು ತಿಳಿಯಲು ಫ್ರಾನ್ಸ್ ಅಧಿಕಾರಿಗಳು ಈಕೆಯನ್ನು ಬಳಸಿಕೊಳ್ತಾರೆ.. ಆ ಕಾಲದಲ್ಲೇ ಇಂಥ ಕೆಲಸಕ್ಕೆ ಮಾತಾಹರಿಗೆ ಒಂದು ಮಿಲಿಯನ್ ಫ್ರಾನ್ಸ್ ಮೊತ್ತವನ್ನು ನೀಡ್ತಾರೆ.. ಅದನ್ನು ಪಡೆದುಕೊಂಡ ಮಾತಾಹರಿ ಜರ್ಮನಿಗೆ ಹೋದಾಗ ಅಲ್ಲಿನ ಮೇಜರ್ ಕಲ್ಲೇ ಎಂಬಾತ ಜರ್ಮನ್ ಪರ ಗೂಢಚಾರಿಕೆ ಮಾಡುವಂತೆ ಕೇಳಿಕೊಂಡು ಆತನೂ ಹಣ ಕೊಡ್ತಾನೆ.. ಹೆಚ್-21 ಎಂಬ ಗೂಢ ಸಂಖ್ಯೆಯನ್ನೂ ಆಕೆಗೆ ಕೊಡಲಾಗುತ್ತೆ.. ಹೀಗೆ ಅವಳು 2 ದೇಶಗಳ ಡಬಲ್ ಏಜೆಂಟ್ ಆಗಿಬಿಡ್ತಾಳೆ..

ಮಾತಾಹರಿಯಿಂದ ಹತ್ಯೆಯಾಗಿದ್ದು 50 ಸಾವಿರ ಸೈನಿಕರು

ಆದರೆ ಹೀಗೆ ಜರ್ಮನಿಯ ರಹಸ್ಯಗಳನ್ನು ಫ್ರಾನ್ಸ್ಗೆ.. ಫ್ರಾನ್ಸ್ನ ರಹಸ್ಯಗಳನ್ನು ಜರ್ಮನಿಗೆ ಕಳುಹಿಸುತ್ತಿದ್ದಾಗಲೇ, ಫ್ರಾನ್ಸ್ಗೆ ಈಕೆ ನಮಗೆ ವಂಚಿಸುತ್ತಿದ್ದಾಳೆ ಅನ್ನೋದು ತಿಳಿದು ಬರುತ್ತೆ.. 1917 ರ ಫೆಬ್ರವರಿಯ ಒಂದು ದಿನ ಮಾತಾಹರಿಯನ್ನು ಫ್ರಾನ್ಸ್ ಬಂಧಿಸುತ್ತೆ.. ಅಷ್ಟು ಹೊತ್ತಿಗೆ ಮಾತಾಹರಿಯ ಈ ಗೂಢಚಾರಿಕೆಯಿಂದಾಗಿ ಫ್ರಾನ್ಸ್‌ನ ಬರೋಬ್ಬರಿ 50 ಸಾವಿರ ಸೈನಿಕರು ಸಾವಿಗೀಡಾಗಿರ್ತಾರೆ!

ಈಕೆ ಬಗ್ಗೆ ಚರಿತ್ರೆಕಾರರು ಹೇಳುವುದೇ ಬೇರೆ

ಆದರೆ ಇದಾವುದಕ್ಕೂ ಯಾವುದೇ ದಾಖಲೆಗಳಿಲ್ಲ ಅಂತ ಮಾತಾಹರಿಯ ಜೀವನಚರಿತ್ರೆಕಾರರು ಬರೀತಾರೆ.. ಯುದ್ಧದಲ್ಲಿ ಫ್ರಾನ್ಸ್ ಸೋಲೋದು ಪಕ್ಕಾ ಆಗಿಬಿಟ್ಟಿತು.. ಫ್ರಾನ್ಸ್‌ಗೆ ತನ್ನ ಸೋಲಿಗೆ ಕಾರಣವನ್ನು ಹುಡುಕೋದಕ್ಕೆ ಯಾರನ್ನಾದ್ರೂ ಬ್ಲೇಮ್ ಮಾಡಲೇಬೇಕಿತ್ತು.. ಅದೇ ಕಾರಣಕ್ಕೆ ಮಾತಾಹರಿಯತ್ತ ಬೊಟ್ಟು ಮಾಡಿ ಅವಳನ್ನು ಬಂಧಿಸಿ ಮರಣದಂಡನೆ ಶಿಕ್ಷೆ ಕೊಟ್ರು ಅಂತಲೂ ಹೇಳಲಾಗುತ್ತೆ. ಒಂದಂತೂ ಸತ್ಯ.. ಇಡೀ ಯುರೋಪ್ ಖಂಡವನ್ನೇ ತನ್ನ ಕಣ್ಣ ಇಶಾರೆಯಲ್ಲಿ ಆಡಿಸಿದವಳು ಮಾತಾಹರಿ.. ಮತ್ತು ಅವಳಿಗೆ ಹಾಗೆ ಆಡಿಸೋದಕ್ಕೆ ಅವಳು ಬಳಸಿಕೊಂಡಿದ್ದು ಭಾರತದ ನೃತ್ಯ ಸಂಪ್ರದಾಯವನ್ನು..!

Tuesday, February 11, 2025

ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಯಾರು?

 


*ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಪ್ರಥಮ ಮಹಿಳಾ ಐ ಪಿ ಎಸ್ ಅಧಿಕಾರಿ ಶ್ರೀಮತಿ ಜೀಜಾ ಮಾಧವನ್ ಹರಿಸಿಂಗ್. 1975–2011.ತಿರುವನಂತಪುರ ಮೂಲದ ಜೀಜಾ ರಾಜ್ಯದಲ್ಲಿ ಪೊಲೀಸ್ ಮಹಾ ನಿರ್ದೇಶಕ ಹುದ್ದೆಗೇರಿ ನಿವೃತ್ತರಾದರು.ಇವರ ಕುರಿತ ಮತ್ತಷ್ಟು ಮಾಹಿತಿ ಅವರದೇ ಸಂದರ್ಶನದ ಈ ಭಾಗದಲ್ಲಿದೆ.

(ಮಾಹಿತಿ :wisdomcircle. com )

*ಕರ್ನಾಟಕ ಪೋಲಿಸ್ ಸೇವೆ ಸೇರಿದ ಕರ್ನಾಟಕ ಮೂಲದ ಅಥವಾ ಕನ್ನಡದವರೇ ಆಗಿರುವ ಮೊದಲ ಐ ಪಿ ಎಸ್ ಅಧಿಕಾರಿ ಶ್ರೀಮತಿ ರೂಪಾ ಮೌಡ್ಗಿಲ್. ಇವರ ಪತಿ ರಾಜ್ಯದ ಹಿರಿಯ ಐ ಎ ಎಸ್ ಅಧಿಕಾರಿ ಶ್ರೀ ಮುನೀಶ್ ಮೌದ್ಗಿಲ್.ಹಾಲಿ ಬಿ ಬಿ ಎಂ ಪಿ ವಿಶೇಷ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಐ ಪಿ ಎಸ್ ಅಧಿಕಾರಿಗಳ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚು.

Wednesday, November 27, 2024

ಕುಂಕುಮ : ಹೆಣ್ಣಿಗೊಂದು ಸಂಭ್ರಮ!

                                          

ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ‘ಸಿಂಧೂರಮ್‌ ಸೌಂದರ್ಯ ಸಾಧನಂ’ ಎಂಬ ಉಕ್ತಿಯಾಂದಿದೆ.# ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

    ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.
ಆಶ್ವಯುಜ ಮಾಸದ ಶುಕ್ಲ ಪಕ್ಷದ ಮೊದಲ ಹತ್ತು ದಿನಗಳು ದಸರಾ ಹಬ್ಬ. ಆಗಿನ ದಿನಗಳಲ್ಲಿ ಬೆಳಗ್ಗೆ ಪೂಜೆ ಮಾಡುವಾಗ #ಲಲಿತಾ ಪರಮೇಶ್ವರಿ ಮೂರ್ತಿಗೆ ಅಥವಾ ಭಾವಚಿತ್ರಕ್ಕೆ ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ ಮಾಡಿದರೆ ಒಳ್ಳೆಯದು ಆಗುವುದು ಎಂಬ ಪ್ರತೀತಿ ಇದೆ.# ಆಗ ಮನೆಗಳಲ್ಲಿ (ಹೆಚ್ಚಿನದಾಗಿ ದಕ್ಷಿಣ ಕರ್ನಾಟಕದಲ್ಲಿ) ಗೊಂಬೆಗಳನ್ನು ಕೂರಿಸಿ ಅವುಗಳೊಡನೆ ಮುಖ್ಯವಾಗಿ ರಾಜ ರಾಣಿ ಗೊಂಬೆಗಳನ್ನಿಟ್ಟು ಜೊತೆಗೆ ಕಲಶವನ್ನಿಟ್ಟು ಪೂಜಿಸುವರು. ಅಲ್ಲೇ ಲಲಿತಾಮಾತೆ ಅಥವಾ ದೇವಿಗೆ ಕುಂಕುಮಾರ್ಚನೆ ಮಾಡುವರು.

    ಪತ್ರಗಳನ್ನು ಬರೆಯುವಾಗ #ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ। ಸೌ। ಹ। ಕುಂ। ಶೋ ಎಂದು ಬರೆಯುತ್ತಾರೆ.# ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ. ಹೆಣ್ಣುಮಕ್ಕಳಿಗೆ ಹಾರೈಸುವಾಗ ಚಿರಂಜೀವಿಯಾಗಿ ಅಂದರೆ ಸಾವೇ ಬರದಂತೆ ಇರು ಎಮ್ದೂ ಸೌಭಾಗ್ಯವತಿಯಾಗಿ ಅಂದ್ರೆ ಗಂಡನ ಪ್ರಾಣ ಉಳಿಸಿಕೊಂಡು ಅವನೊಡನೆ ಇರು ಎಂದೂ, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.
ಈ ಕುಂಕುಮ ಅನ್ನುವುದು ಏನು?

    ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಅದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುವರು.

    ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಡುವರು. ಇದು ಬುದ್ಧಿಶಕ್ತಿ, ವಿವೇಕ ಇರುವ ತಲೆಯ ಮುಂಭಾಗ. ಈ ಜಾಗ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು. ತುಂಬಾ ಯೋಚಿಸುವವರು ತಲೆ ಬಿಸಿ ಆಗಿದೆ ಎನ್ನುವರು.
#ಕೆಲವರು ಭ್ರೂಮಧ್ಯ ಭಾಗದಲ್ಲಿ ಇಟ್ಟುಕೊಳ್ಳುವರು. ಏಕಾಗ್ರತೆಗೆ ಇದು ತುಂಬಾ ಸಹಾಯಕಾರಿ. ಇನ್ನೂ ಒಂದು ವಿಷಯವೆಂದರೆ, ಯೋಗಿಗಳು ಧ್ಯಾನದ ಮೂಲಕ ಬೆನ್ನುಹುರಿಯ ಕೆಳಭಾಗದಲ್ಲಿ ಸುಪ್ತವಾದ ಕುಂಡಲಿನೀ ಶಕ್ತಿಯ ಪ್ರಚೋದನೆ ಮಾಡುವರು. ಆ ಶಕ್ತಿ ಮೇಲೆ ಮಿದುಳಿಗೆ ಏರುವುದು. ಆಗ ಭ್ರೂ ಮಧ್ಯ ಭಾಗದಿಂದ ಹೊರ ಹೋಗುವ ಸಾಧ್ಯತೆಗಳಿರುವುದು. ಅದನ್ನು ತಡೆಯಲು ಆ ಭಾಗದಲ್ಲಿರುವ ಚಕ್ರವನ್ನು ಪ್ರಚೋದಿಸುವರು. ಇದನ್ನು ಪ್ರಚೋದಿಸಲನ್ವಯ ಉಂಗುರದ ಬೆರಳಿನಿಂದ ಕುಂಕುಮವನ್ನು ಆ ಭಾಗದಲ್ಲಿ ಇಡುವರು. ಕುಂಕುಮದಲ್ಲಿ ಉಷ್ಣವನ್ನು ಶಮನ ಮಾಡುವ ಶಕ್ತಿ ಇದೆ.

    ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ, ಅವಳ ಬೇರೆ ಯಾವ ಸೌಂದರ್ಯವನ್ನೂ ನೋಡಿ ಚಂಚಲಚಿತ್ತರಾಗಲು ಅವಕಾಶವಿರುವುದಿಲ್ಲ. ನಮ್ಮ ಪೂರ್ವಜರು ಕುಂಕುಮವಿಡಲು ಹೇಳಲು ಇದೂ ಒಂದು ಕಾರಣ.

    ಹಿಂದೂ ಹೆಂಗಸಿನ ಜೀವನದಲ್ಲಿ ಅರಿಶಿನ ಕುಂಕುಮದ ಮಹತ್ವ ಪತಿ ಜೀವತ್ಯಾಗದ ನಂತರ ಇದನ್ನು ಯಾಕೆ ಧರಿಸಬಾರದು ಎಂಬ ಪ್ರಶ್ನೆ ಹುಟ್ಟುವುದು. ಕುಂಕುಮ ಪತಿಯ ಇರುವಿಕೆಯನ್ನು ಸೂಚಿಸುವ ಒಂದು ದ್ಯೋತಕವಷ್ಟೇ ಅಲ್ಲ. ಅದಕ್ಕೆ ಇನ್ನೂ ವಿಶೇಷ ಮಹತ್ವವಿದೆ.

    ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು. ಆಕೆಯ ಅಂದ ಚಂದವೆಲ್ಲಾ ಕೇವಲ ತನ್ನ ಪತಿಗೆ ಮೀಸಲು. ತಾಳಿ ಸೆರಗಿನ ಒಳಗೆ ಮುಚ್ಚಿರುವುದರಿಂದ ಮದುವೆಯಾದ ಸಂಕೇತ ಸೂಚಿಸಲು ಕುಂಕುಮದ ಉಪಯೋಗ. ರಾಮಾಯಣದ ಕಥೆಯಲ್ಲಿ ಹೇಳಿರುವಂತೆ, ಸೀತಾದೇವಿ ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತಿರುವಾಗ ಆಂಜನೇಯ ರಾಮನ ಮುದ್ರಿಕೆಯನ್ನು ತೆಗೆದುಕೊಂಡು ಹೋದ. ಅಲ್ಲಿ ಸೀತೆ ಯಾರೆಂದು ಗುರುತಿಸಲಾಗಲಿಲ್ಲ. ಆದರೆ ಅವನಿಗೆ ದಿವ್ಯ ದೃಷ್ಟಿ ಇದ್ದದ್ದರಿಂದ ಸೀತೆಯ ತಾಳಿ ಗೋಚರವಾಯಿತು. ಈಗ ಕಣ್ಣಿದ್ದೇ ನಮಗೆ ಕಾಣಿಸುವುದಿಲ್ಲ, ಇನ್ನು ದಿವ್ಯದೃಷ್ಟಿ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ಸೂಚ್ಯವಾಗಿ ಕುಂಕುಮ ಇಟ್ಟುಕೊಳ್ಳುವ ಸಂಪ್ರದಾಯ. ಆದರೂ ಆಗೋದು ಆಗೇ ಆಗತ್ತೆ, ತಡೆಯಲಾಗತ್ಯೇ?

    ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾರನ್ನೇ ನೋಡುವಾಗ ನಮ್ಮ ಕಣ್ಣು ಮುಡಿಯಿಂದ ಅಡಿಯವರೆವಿಗೆ ಚಲಿಸುವುದು. ಮೊದಲು ಕಾಣುವುದು ಮುಖದಲ್ಲಿನ ತಲೆಗೂದಲು. ನಂತರ ಹಣೆಯಮೇಲೆ ಕಾಣಿಸುವ ಕುಂಕುಮ. ಇದರ ಬಣ್ಣ ಹಲವಾರು. ಈಗೀಗಂತೂ ಬಿಂದಿಗಳು ಬಂದು ತರಹಾವರಿ ಚಿತ್ರ ವಿಚಿತ್ರವಾದ ಕುಂಕುಮಗಳನ್ನು ನೋಡಬಹುದು. ಆದರೆ ಇಂದಿನ ಹೆಣ್ಣುಮಕ್ಕಳಲ್ಲಿ ಇದನ್ನು ಕಾಣುವುದು ಬಹಳ ಕಷ್ಟ. ಇದಕ್ಕೆ ಕಾರಣವೇನೆಂದರೆ ಈಗಿನ ತರಾತುರಿ ಜೀವನದಲ್ಲಿ ಪುಡಿ ಕುಂಕುಮ ಕಾಪಾಡುವುದು ಕಷ್ಟ. ಅಲ್ಲದೇ ಬೆಲ್ಲದ ಜೊತೆ ಮಿಶ್ರಣ ಮಾಡಿದ ಪಾಕದಂತಹ ಕುಂಕುಮ ಮಾಡಲು ಸಮಯವಿಲ್ಲ. ಹಾಗೂ ಇದೆಲ್ಲ ರೇಜಿಗೆಯ ವಿಷಯ. ಅದರ ಬದಲಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ಆಕಾರಗಳಿರುವ ಬಣ್ಣ ಬಣ್ಣದ ಬಿಂದಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸಿದೆ.

    ವಿದೇಶೀಯರು ಇದನ್ನು ನೋಡಿ ಅಯ್ಯೋ ಇದೇನು ನಿನ್ನ ಹಣೆಯಲ್ಲಿ ರಕ್ತ ಎಂದು ಕೇಳಿದ ಸಂದರ್ಭವೂ ಇದೆ. ಈಗೀಗ ಅವರುಗಳೂ ಇದೊಂದು ಫ್ಯಾಷನ್‌ ಎಂದು ಉಪಯೋಗಿಸುತ್ತಿದ್ದಾರೆ. #ಉತ್ತರ ಭಾರತೀಯರಲ್ಲಿ ತಲೆಯ ಕೂದಲ ಬೈತಲೆಯಾಂದಿಗೆ ಕುಂಕುಮವನ್ನು ಹಚ್ಚುವರು. ಇದನ್ನು ಅವರು ಸಿಂಧೂರ ಎನ್ನುವರು.#

    ಮೊದಲು ಬೆಲ್ಲ ಮತ್ತು ನೀರಿನೊಂದಿಗೆ ಕುಂಕುಮ ಸೇರಿಸಿ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಕುಂಕುಮ ಬಿದ್ದು ಹೋಗುತ್ತಿರಲಿಲ್ಲ ಅಥವಾ ಅಳಿಸಿ ಹೋಗುತ್ತಿರಲಿಲ್ಲ. ಈಗೀಗ ಕುಂಕುಮವಿಡುವುದ ಕಡಿಮೆಯಾಗಿ ಬಿಂದಿ ಸಂಸ್ಕೃತಿ ಬಂದಿದೆ. ಹಾಗೇ ಹಿಂದೂಗಳಲ್ಲಿ ಇದೂ ಮಾಯವಾಗುತ್ತಿದೆ, ಆದರೆ ಕಿರಿಸ್ತಾನೀಯರಲ್ಲಿ ಮತ್ತು ಮುಸ್ಲಿಮರಲ್ಲಿ ಇದನ್ನು ಉಪಯೋಗಿಸುತ್ತಿರುವರು. ಕಿರಿಸ್ತಾನೀಯರಿಗೆ ವ್ಯಾಟಿಕನ್‌ ನಿಂದ ಬಂದಿರುವ ಆದೇಶ - ನೀವು ಎಲ್ಲಿರುವಿರೋ ಅಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವರಲ್ಲಿ ಒಂದಾಗಿ. ಆದ್ದರಿಂದ ಭಾರತೀಯರ ಸಂಸ್ಕೃತಿಯಾದ ಕುಂಕುಮ ಇಡು ವುದು