Showing posts with label sandalwood. Show all posts
Showing posts with label sandalwood. Show all posts

Wednesday, July 9, 2025

What are the Ajith movies (Tamil actor) remade in other languages?

 ✔️ Ajith’s 9 movies [7 as Hero + 2 as Cameo] are remade into other languages 👇🏻

  • Vedalam (2015)
    • Sultan: The Saviour (2018) - Bengali
  • Veeram (2014)
    • Katamarayudu (2017) - Telugu
    • Odeya (2019) - Kannada
  • Varalaru (2006)
    • Godfather (2012) - Kannada
  • Dheena (2001)
    • Dhumm (2002) - Kannada
  • Nee Varuvai Ena (1999)
    • Ninne Premistha (2001) - Telugu
    • Ninne Preethisuve (2002) - Kannada
  • Amarkalam (1999)
    • Asura (2001) - Kannada
    • Leela Mahal Center (2004) - Telugu
  • Unnidathil Ennai Koduthen (1998)
    • Raja (1999) - Telugu
    • Kanasugara (2001) - Kannada
  • Kadhal Kottai (1996)
    • Sirf Tum (1999) - Hindi
    • Yaare Neenu Cheluve (1998) - Kannada
  • Aasai (1995)
    • Pyaar Zindagi Hai (2001) - Hindi

Saturday, December 28, 2024

ವಜ್ರಮುನಿ ಜೀವನಚರಿತ್ರೆ

 ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ಮೂಡಿಸುತ್ತಿದ್ದ ವಜ್ರಮುನಿ ಕನ್ನಡ ಕಲಾಲೋಕ ಕಂಡ ದೈತ್ಯ ಪ್ರತಿಭೆ.

1944 ಮೇ 11 ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಜನಿಸಿದರು. ಸದಾನಂದ ಎಂಬ ಮೂಲ ಹೆಸರಿದ್ದರೂ ಜನಿಸಿದಾಗ ತಮ್ಮ ಕುಲದೈವ `ವಜ್ರಮುನೇಶ್ವರ' ದೇವರ ಹೆಸರಿನ್ನಿಡಲಾಗಿತ್ತು.ಇವರ ತಂದೆ ವಜ್ರಪ್ಪ ಬೆಂಗಳೂರು ಮುನಿಸಿಪಾಲಿಟಿಯ ಕಾರ್ಪೋರೇಟ್ ಆಗಿದ್ದರು. ಕಾಲೇಜು ತೊರೆದು ಚಲನಚಿತ್ರ ಛಾಯಾಗ್ರಹಣ (ಸಿನಿಮ್ಯಾಟೋಗ್ರಫಿ)ಯಲ್ಲಿ ಪದವಿ ಪಡೆದು ನೀನಾಸಂದಲ್ಲಿ ನಟನೆ ಕಲಿತರು.

ನಂತರ ಚಿತ್ರದ ಆಡಿಷನ್ ಗಾಗಿ ಮುಂಬೈಗೆ ಹೋದ ವಜ್ರಮುನಿ ಅಲ್ಲಿ ಕುಣಿಗಲ್ ಪ್ರಭಾಕರ್‌ರವರ `ಪ್ರಚಂಡ ರಾವಣ' ನಾಟಕದ ರಾವಣ ಪಾತ್ರ ಮಾಡಿ ಪುಟ್ಟಣ್ಣ ಕಣಗಾಲ್‌ರನ್ನು ಮೆಚ್ಚಿಸಿದರು. ಪುಟ್ಟಣ್ಣನವರು ತಮ್ಮ ಸಾವಿರ ಮೆಟ್ಟಿಲು ಚಿತ್ರದಲ್ಲಿ ವಜ್ರಮುನಿಯವರಿಗೆ ಅವಕಾಶಕೊಟ್ಟರೂ , ಆ ಚಿತ್ರ ಅರ್ಧಕ್ಕೆ ನಿಂತು ಹೋಯಿತು. ನಂತರ ಕಣಗಾಲ್ ರ `ಮಲ್ಲಮ್ಮನ ಪವಾಡ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಸಿದರು.

ನಂತರ ಸಂಪತ್ತಿಗೆ ಸವಾಲ್, ಪ್ರೇಮದ ಕಾಣಿಕೆ, ಗಿರಿಕನ್ನೆ ,ಆಕಸ್ಮಿಕ ಮುಂತಾದ ಚಿತ್ರಗಳಲ್ಲಿ ನಟಿಸಿ ಬಹಳಷ್ಟು ಪ್ರಖ್ಯಾತಿ ಪಡೆದರು. ಡಾ.ರಾಜಕುಮಾರ್ ರವರ ಬಹುತೇಕ ಚಿತ್ರಗಳಲ್ಲಿ ವಜ್ರಮುನಿ ಖಳನಾಯಕನಾಗಿ ನಟಿಸಿದ್ದಾರೆ.ಕರ್ನಾಟಕ ಸರ್ಕಾರದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ರಾಜಕುಮಾರ್ ಜೊತೆ ಕೊನೆಯ ಬಾರಿ ಆಕಸ್ಮಿಕ ಚಿತ್ರದಲ್ಲಿ ನಟಿಸಿದರು. 1998 ರಲ್ಲಿ ತೆರೆಗೆ ಬಂದ ದಾಯಾದಿ ಚಿತ್ರ ವಜ್ರಮುನಿ ನಟಿಸಿದ ಕೊನೆಯ ಚಿತ್ರ.

ರಾಜಕೀಯ ಕುಟುಂಬದಿಂದ ಬಂದಿದ್ದ ಕಾರಣ 1994 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲನ್ನುಭವಿಸಿದರು.

ಮೂರು ದಶಕಗಳ ತಮ್ಮ ಸಿನಿಜೀವನದಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು 2006, ಜನೇವರಿ 5 ರಂದು ಮೂತ್ರಪಿಂಡ ವೈಪಲ್ಯದಿಂದ ನಿಧನರಾದರು.

ಆಸಕ್ತಿಕರ ಸಂಗತಿಗಳು

1. ಒಮ್ಮೆ ವಿಧಾನಸಭೆ ಚುಣಾವಣೆ ಪ್ರಚಾರಕ್ಕೆಂದು ವಜ್ರಮುನಿ ಒಂದು ಹಳ್ಳಿಗೆ ಹೋಗಿದ್ದಾಗ, ಅಲ್ಲಿನ ಹೆಣ್ಣು ಮಕ್ಕಳು ವಜ್ರಮುನಿಯವರನ್ನು ನೋಡಿ ಹೆದರಿ ಮನೆ ಬಾಗಿಲು ಹಾಕಿಕೊಂಡಿದ್ದುಂಟು. ಅಷ್ಟರಮಟ್ಟಿಗೆ ಅವರ ಪಾತ್ರಗಳು ಪ್ರಭಾವ ಬೀರಿದ್ದವು.

2. ಮೃದು ಸ್ವಭಾವದವಾರಿಗಿದ್ದ ವಜ್ರಮುನಿ ಚಿತ್ರಗಳ ರೇಪ್ ಸೀನಗಳಲ್ಲಿ ನಟಿಸುವ ಮುನ್ನ, ಆ ಸೀನನಲ್ಲಿ ನಟಿಸುವ ಯುವತಿಯ ಕಾಲಿಗೆ ನಮಸ್ಕಾರ ಮಾಡಿ `ಇದು ನನ್ನ ವೃತ್ತಿಧರ್ಮ, ದಯವಿಟ್ಟು ಕ್ಷಮಿಸಿ' ಎಂದು ಕೇಳಿಕೊಳ್ಳುತ್ತಿದ್ದರು.

Thursday, December 26, 2024

ಉದಯ್ ಕುಮಾರ್




ಕಲಾಕೇಸರಿ ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ಕಲಾವಿದರಲ್ಲಿ ಒಬ್ಬರು.

ಉದಯ್ ಕುಮಾರ್ 1935ರ ಮಾರ್ಚ್ 5ರಂದು ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.  

‘ರತ್ನಗಿರಿ ರಹಸ್ಯ’ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಉದಯ್ ಕುಮಾರ್ ಅವರಿಗೆ ಅಪಾರ ಜನಪ್ರಿಯತೆ ತಂದಿತು. ಅಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿನ ಜನಪ್ರಿಯತೆಯ ಜೊತೆಗೆ ತಮಿಳು, ತೆಲುಗು ಮತ್ತು ಹಲವು ಹಿಂದಿ ಚಲನಚಿತ್ರಗಳಲ್ಲೂ ಅಭಿನಯಿಸಿ ಎಲ್ಲೆಡೆ ಜನಪ್ರಿಯರಾಗಿದ್ದರು. ಅವರು ನಟಿಸಿದ್ದ ಚಿತ್ರಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚಿನದು. ಭಾಗ್ಯೋದಯ, ರತ್ನಗಿರಿ ರಹಸ್ಯ, ಚಂದವಳ್ಳಿಯ ತೋಟ, ವೀರಕೇಸರಿ, ಬೆಟ್ಟದ ಹುಲಿ, ಚಂದ್ರಕುಮಾರ, ವಿಜಯನಗರದ ವೀರಪುತ್ರ, ಶ್ರೀ ರಾಮಾಂಜನೇಯ ಯುದ್ಧ, ಸರ್ವಜ್ಞ, ಸ್ಕೂಲ್ ಮಾಸ್ಟರ್, ಮಿಸ್ ಲೀಲಾವತಿ, ಮಧುಮಾಲತಿ, ಸತ್ಯ ಹರಿಶ್ಚಂದ್ರ, ತ್ರಿವೇಣಿ, ಕಲಾವತಿ, ಹೇಮಾವತಿ ಮುಂತಾದವು ಅವರ ಕುರಿತಾದ ನೆನಪಿನಲ್ಲಿ ಮೂಡುವ ಕೆಲವು ಚಿತ್ರಗಳು.  

ಚಲನಚಿತ್ರರಂಗದ ಏಳು ಬೀಳುಗಳಲ್ಲಿ ಪ್ರಖ್ಯಾತ ನಾಯಕನಟ, ಪೋಷಕನಟ, ಖಳನಟ ಹೀಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಉದಯ್ ಕುಮಾರ್ ತಮ್ಮ ಅಭಿನಯದಲ್ಲಿದ್ದ ತನ್ಮಯತೆಯಿಂದ ಚಿತ್ರಪ್ರೇಮಿಗಳ ಕಣ್ಮಣಿಯಾಗಿದ್ದರು. ಅದರಲ್ಲೂ ಬಿರುಸು ಮಾತಿನ ನಿಷ್ಠುರವಾದಿ ಪಾತ್ರಗಳಿಗೆ ಅವರಂತಹ ಕಲಾವಿದ ಅಪರೂಪ ಎಂದರೂ ಸರಿಯೇ. ವಿಶ್ವಾಮಿತ್ರನ ಪಾತ್ರಧಾರಿಯಾಗಿ ಅವರು ನಟಿಸಿದ್ದ ‘ಸತ್ಯ ಹರಿಶ್ಚಂದ್ರ’ದ ಪಾತ್ರ ಅವಿಸ್ಮರಣೀಯವಾದದ್ದು. ಸಂಧ್ಯಾರಾಗದಲ್ಲಿ ರಾಜ್ ಕುಮಾರ್ ಅಣ್ಣನಾಗಿ ನಿಷ್ಠುರಗುಣದ ವ್ಯಕ್ತಿಯಾಗಿ ನಟಿಸಿದ ಅವರ ಪಾತ್ರ ಕೂಡ ಮನಸ್ಸಿನಲ್ಲಿ ಉಳಿಯುವಂತದ್ದು. ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಹನುಮನ ಪ್ರಾಣ ಹಾಡಿನಲ್ಲಿ ಚಿತ್ರಣ ಮುಗಿದ ಎಷ್ಟೋ ಸಮಯವಾದರೂ ಅವರು ತಮ್ಮ ಪಾತ್ರದಲ್ಲಿ ಪೂರ್ಣ ತನ್ಮಯರಾಗಿಬಿಟ್ಟಿದ್ದರೆಂದು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರು ಸ್ಮರಿಸುತ್ತಿದ್ದರು.      

ಮುಂದೆ ಹೇಮಾವತಿ ಚಿತ್ರದಲ್ಲಿನ ಪ್ರಧಾನ ಪಾತ್ರ ಮತ್ತು ಬಿಳಿ ಹೆಂಡ್ತಿ ಚಿತ್ರದ ಸಣ್ಣ ಪೋಷಕ ಪಾತ್ರಗಳಲ್ಲಿ ಅವರು ನೀಡಿದ ಅಮೋಘ ಅಭಿನಯ ಅಮರವಾದದ್ದು.   

1965ರಲ್ಲಿ ಇದೇ ಮಹಾಸುದಿನ ಎಂಬ ಚಿತ್ರ ನಿರ್ಮಿಸಿದ್ದರು. ಸ್ವತಃ ಬರಹಗಾರರಾದ ಉದಯಕುಮಾರ್‌ರವರು ದ್ವಿಪದಿಗಳು, ನಾಟಕಗಳು ಹಾಗೂ ಚಿತ್ರಗೀತೆಗಳನ್ನು ಸಹಾ ರಚಿಸಿದ್ದರು. ಸಿನಿಮಾ ಮತ್ತು ರಂಗತರಬೇತಿಗಾಗಿ ಕಲಾ ಶಾಲೆಯನ್ನು ಕೂಡಾ ತೆರೆದಿದ್ದರು. ರಂಗತಂಡವನ್ನು ಕಟ್ಟಿ ಬೆಳೆಸಿದ್ದರು

ಒಂದು ಕಾಲದಲ್ಲಿ ಅಪಾರ ವೈಭವದಿಂದ ಬದುಕಿ ಚಿತ್ರರಂಗದ ಬೇಡಿಕೆಯ ಶೃಂಗದಲ್ಲಿದ್ಧ ಉದಯ್ ಕುಮಾರ್ ಇಳಿಮುಖದ ರೇಖೆಯಲ್ಲಿ ಸಣ್ಣಪುಟ್ಟ ಪಾತ್ರಗಳ ಮೊರೆಹೊಗುವಂತಹ ಸ್ಥಿತಿಯಲ್ಲಿ ತಮ್ಮ ಕೊನೆಯ ವರ್ಷಗಳನ್ನು ಕಳೆದರು.  

ಉದಯಕುಮಾರ್ ತಮ್ಮ ಸಾವಿನ ಹಿಂದಿನ ದಿನ ಒಂದು ಕಾಗದದ ಚೂರಿನ ಮೇಲೆ ಬರೆದಿದ್ದರಂತೆ – “ಭಗವಂತ ಎತ್ತಿಕೊಂಡಿರುವ ಕೂಸು ನಾನು; ನನ್ನ ಭವಿಷ್ಯ ಏನು ಎಂಬುದು ಅವನಿಗೊಬ್ಬನಿಗೇ ಗೊತ್ತಿದೆ.” ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದಾಗ ಉದಯಕುಮಾರ್ ವ್ಯಕ್ತಮಾಡಿದ ಪ್ರತಿಕ್ರಿಯೆ: “ಕಲಾವಿದನ ಬಾಳ ಬವಣೆ ಏನು ಎಂಬುದು ವೈದ್ಯರಿಗೇನು ಗೊತ್ತು? ನನ್ನ ಬದುಕು ನಿತ್ಯ ಸಂಗ್ರಾಮವಾಗಿರುವಾಗ ಒಂದು ಕ್ಷಣವಾದರೂ ಪುರುಸೊತ್ತು ಹೇಗೆ ತಾನೇ ಸಾಧ್ಯ?”. ಉದಯಕುಮಾರ್ ಅವರಿಗೆ ಶ್ರದ್ಧಾಂಜಲಿ ಹೇಳುತ್ತಾ ಡಾ. ಹಾ. ಮಾ. ನಾಯಕ್ ಬರೆದಿದ್ದಾರೆ “ಇದು ನಾವು ನಮ್ಮ ಕಲಾವಿದರನ್ನು ನೋಡಿಕೊಳ್ಳುವ ಬಗೆಗೊಂದು ವ್ಯಾಖ್ಯಾನ. ಕೆಲವು ಅತಿರೇಕಗಳನ್ನುಳಿದರೆ ಉದಯಕುಮಾರ್ ಒಬ್ಬ ಶ್ರೇಷ್ಠ ನಟ. ಅವರಿಗೆ ಬದುಕು ಸಂಗ್ರಾಮ! ರಾಜಕೀಯವಿಲ್ಲದೆ ಜನರು ಕಲಾವಿದರನ್ನು ಕಾಣಬೇಕು; ಕಲಾವಿದರೂ ತಮ್ಮ ಬದುಕನ್ನು ಒಂದು ಶಿಸ್ತಿಗೆ ಒಳಪಡಿಸಬೇಕು. ಇದು ಉದಯಕುಮಾರರ ಜೀವನ ಕಲಿಸುವ ಒಂದು ಪಾಠ.”

ಉದಯಕುಮಾರ್ ಕನ್ನಡದ ಕಟ್ಟಾಭಿಮಾನಿ. ಜನರನ್ನು ಉದ್ರೇಕಿಸುವಂತೆ, ನಿರಭಿಮಾನಕ್ಕಾಗಿ ನಾಚುವಂತೆ ಮಾಡಬಲ್ಲ ಮಾತುಗಾರಿಕೆ ಅವರಲ್ಲಿತ್ತು.  

ತಮ್ಮ ಐವತ್ತು ವರ್ಷಗಳ ಬದುಕಿನ ಆಸುಪಾಸಿನಲ್ಲಿ 1985ರ ಡಿಸೆಂಬರ್ 26ರಂದು ನಿಧನರಾದ ಉದಯ್ ಕುಮಾರ್ ಕನ್ನಡ ಚಿತ್ರರಂಗದ ಸ್ಮರಣೀಯ ಗಣ್ಯರಲ್ಲಿ ಪ್ರಮುಖರಾಗಿ ನಿಲ್ಲುವವರು ಎಂಬುದು ನಿರ್ವಿವಾದ.

ಕೃಪೆ : ಕನ್ನಡ ಸಂಪದ (Kannada Sampada) ಫೇಸ್ಬುಕ್ ಪೇಜ್