ವಜ್ರಮುನಿ ಜೀವನಚರಿತ್ರೆ

SANTOSH KULKARNI
By -
0

 ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ಮೂಡಿಸುತ್ತಿದ್ದ ವಜ್ರಮುನಿ ಕನ್ನಡ ಕಲಾಲೋಕ ಕಂಡ ದೈತ್ಯ ಪ್ರತಿಭೆ.

1944 ಮೇ 11 ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಜನಿಸಿದರು. ಸದಾನಂದ ಎಂಬ ಮೂಲ ಹೆಸರಿದ್ದರೂ ಜನಿಸಿದಾಗ ತಮ್ಮ ಕುಲದೈವ `ವಜ್ರಮುನೇಶ್ವರ' ದೇವರ ಹೆಸರಿನ್ನಿಡಲಾಗಿತ್ತು.ಇವರ ತಂದೆ ವಜ್ರಪ್ಪ ಬೆಂಗಳೂರು ಮುನಿಸಿಪಾಲಿಟಿಯ ಕಾರ್ಪೋರೇಟ್ ಆಗಿದ್ದರು. ಕಾಲೇಜು ತೊರೆದು ಚಲನಚಿತ್ರ ಛಾಯಾಗ್ರಹಣ (ಸಿನಿಮ್ಯಾಟೋಗ್ರಫಿ)ಯಲ್ಲಿ ಪದವಿ ಪಡೆದು ನೀನಾಸಂದಲ್ಲಿ ನಟನೆ ಕಲಿತರು.

ನಂತರ ಚಿತ್ರದ ಆಡಿಷನ್ ಗಾಗಿ ಮುಂಬೈಗೆ ಹೋದ ವಜ್ರಮುನಿ ಅಲ್ಲಿ ಕುಣಿಗಲ್ ಪ್ರಭಾಕರ್‌ರವರ `ಪ್ರಚಂಡ ರಾವಣ' ನಾಟಕದ ರಾವಣ ಪಾತ್ರ ಮಾಡಿ ಪುಟ್ಟಣ್ಣ ಕಣಗಾಲ್‌ರನ್ನು ಮೆಚ್ಚಿಸಿದರು. ಪುಟ್ಟಣ್ಣನವರು ತಮ್ಮ ಸಾವಿರ ಮೆಟ್ಟಿಲು ಚಿತ್ರದಲ್ಲಿ ವಜ್ರಮುನಿಯವರಿಗೆ ಅವಕಾಶಕೊಟ್ಟರೂ , ಆ ಚಿತ್ರ ಅರ್ಧಕ್ಕೆ ನಿಂತು ಹೋಯಿತು. ನಂತರ ಕಣಗಾಲ್ ರ `ಮಲ್ಲಮ್ಮನ ಪವಾಡ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಸಿದರು.

ನಂತರ ಸಂಪತ್ತಿಗೆ ಸವಾಲ್, ಪ್ರೇಮದ ಕಾಣಿಕೆ, ಗಿರಿಕನ್ನೆ ,ಆಕಸ್ಮಿಕ ಮುಂತಾದ ಚಿತ್ರಗಳಲ್ಲಿ ನಟಿಸಿ ಬಹಳಷ್ಟು ಪ್ರಖ್ಯಾತಿ ಪಡೆದರು. ಡಾ.ರಾಜಕುಮಾರ್ ರವರ ಬಹುತೇಕ ಚಿತ್ರಗಳಲ್ಲಿ ವಜ್ರಮುನಿ ಖಳನಾಯಕನಾಗಿ ನಟಿಸಿದ್ದಾರೆ.ಕರ್ನಾಟಕ ಸರ್ಕಾರದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ರಾಜಕುಮಾರ್ ಜೊತೆ ಕೊನೆಯ ಬಾರಿ ಆಕಸ್ಮಿಕ ಚಿತ್ರದಲ್ಲಿ ನಟಿಸಿದರು. 1998 ರಲ್ಲಿ ತೆರೆಗೆ ಬಂದ ದಾಯಾದಿ ಚಿತ್ರ ವಜ್ರಮುನಿ ನಟಿಸಿದ ಕೊನೆಯ ಚಿತ್ರ.

ರಾಜಕೀಯ ಕುಟುಂಬದಿಂದ ಬಂದಿದ್ದ ಕಾರಣ 1994 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲನ್ನುಭವಿಸಿದರು.

ಮೂರು ದಶಕಗಳ ತಮ್ಮ ಸಿನಿಜೀವನದಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು 2006, ಜನೇವರಿ 5 ರಂದು ಮೂತ್ರಪಿಂಡ ವೈಪಲ್ಯದಿಂದ ನಿಧನರಾದರು.

ಆಸಕ್ತಿಕರ ಸಂಗತಿಗಳು

1. ಒಮ್ಮೆ ವಿಧಾನಸಭೆ ಚುಣಾವಣೆ ಪ್ರಚಾರಕ್ಕೆಂದು ವಜ್ರಮುನಿ ಒಂದು ಹಳ್ಳಿಗೆ ಹೋಗಿದ್ದಾಗ, ಅಲ್ಲಿನ ಹೆಣ್ಣು ಮಕ್ಕಳು ವಜ್ರಮುನಿಯವರನ್ನು ನೋಡಿ ಹೆದರಿ ಮನೆ ಬಾಗಿಲು ಹಾಕಿಕೊಂಡಿದ್ದುಂಟು. ಅಷ್ಟರಮಟ್ಟಿಗೆ ಅವರ ಪಾತ್ರಗಳು ಪ್ರಭಾವ ಬೀರಿದ್ದವು.

2. ಮೃದು ಸ್ವಭಾವದವಾರಿಗಿದ್ದ ವಜ್ರಮುನಿ ಚಿತ್ರಗಳ ರೇಪ್ ಸೀನಗಳಲ್ಲಿ ನಟಿಸುವ ಮುನ್ನ, ಆ ಸೀನನಲ್ಲಿ ನಟಿಸುವ ಯುವತಿಯ ಕಾಲಿಗೆ ನಮಸ್ಕಾರ ಮಾಡಿ `ಇದು ನನ್ನ ವೃತ್ತಿಧರ್ಮ, ದಯವಿಟ್ಟು ಕ್ಷಮಿಸಿ' ಎಂದು ಕೇಳಿಕೊಳ್ಳುತ್ತಿದ್ದರು.

Post a Comment

0Comments

Please Select Embedded Mode To show the Comment System.*