ಸ್ವಸ್ತಿಕ ಚಿಹ್ನೆ, ಮನೆಯಲ್ಲಿದ್ದರೆ ಶುಭ

SANTOSH KULKARNI
By -
0


 🚩 *ಭಾರತೀಯ ಮನೆಗಳ ಪ್ರವೇಶ ದ್ವಾರದಲ್ಲಿ "ಸ್ವಸ್ತಿಕ ಚಿಹ್ನೆ" ಸಾಮಾನ್ಯವಾಗಿರುತ್ತದೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಗಣೇಶನನ್ನು ಪ್ರತಿನಿಧಿಸುವ ಈ ಚಿಹ್ನೆಯ ವಿಶೇಷವೇನು ? ವಾಸ್ತು ಶಾಸ್ತ್ರ ಏನು ಹೇಳುತ್ತದೆ ?*


🚩 *ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು "ಸ್ವಸ್ತಿಕ". ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ ಸುಮಾರು ಸಾವಿರಾರು ವರ್ಷಗಳ ಇತಿಹಾಸವಿದೆ. ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭಪ್ರದವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಸ್ವಸ್ತಿಕದಿಂದ ಮನೆಗೆ ಯಾವ ರೀತಿ ಒಳಿತಾಗುತ್ತದೆ ?*
🚩 *"ಸ್ವಸ್ತಿಕ" ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿಯಲ್ಲಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ*.
🚩 *ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಸ್ವಸ್ತಿಕ ಚಿಹ್ನೆ ಮನೆಯಲ್ಲಿ ಇರುವುದು ಶುಭ ಎಂದು ವಾಸ್ತು ಶಾಸ್ತ್ರವೂ ಹೇಳುತ್ತದೆ. ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಿ, ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ*
🚩 *ದುಷ್ಟ ಶಕ್ತಿ ದಮನ*

*"ಸ್ವಸ್ತಿಕ ಚಿಹ್ನೆಯನ್ನು ಮನೆ* *ಮುಂಭಾಗಿಲಿನಲ್ಲಿ ಹಾಕಿದರೆ, ದುಷ್ಟ ಶಕ್ತಿಗಳು ಮನೆಯೊಳಗೆ ಬರೋದಿಲ್ಲ ಎನ್ನಲಾಗುತ್ತದೆ"*
🚩 *ಸ್ವಸ್ತಿಕ್ ಲಾಂಛನದ ಮೇಲೆ ದೇವರ ತೀರ್ಥ ಗಂಗಾ ಜಲ ಮತ್ತು ಹಸುವಿನ ಗಂಜಲವನ್ನು ಚಿಮುಕಿಸುತ್ತಿದ್ದರೆ ಅದರ ಶಕ್ತಿ ಹೆಚ್ಚಾಗುತ್ತದೆ*
🚩 *ಸ್ವಸ್ತಿಕ್ ಲಾಂಛನವನ್ನು ಅಳವಡಿಸಿದ ನಂತರ ಧೂಳು ಬೀಳದೆ ಇರುವ ಹಾಗೆ ಆಗಾಗ ಒರೆಸುತ್ತಿರಬೇಕು*
🚩 *ಸ್ವಸ್ತಿಕ್ ಲಾಂಛನವು ಹಿತ್ತಾಳೆ ಅಥವಾ ಪಂಚಲೋಹದಿಂದ ಮಾಡಿದ್ದರೆ ಒಳ್ಳೆಯದು.*
🚩 *ಸ್ವಸ್ತಿಕ್ ಲಾಂಛನವು ಮನೆಯಲ್ಲಿ ಸುಖ, ಸಂತೋಷ, ಶಾಂತಿ, ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.*
🚩 *ಸ್ವಸ್ತಿಕ್ ಲಾಂಛನವು ಮನೆಯ ಸುತ್ತಲಿನ ಜಾಗವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ*
🚩 *ಮನೆಯ ಗೇಟ್ ಹಾಗೂ ಕಾಂಪೌಂಡ್ ಗೋಡೆ ಮೇಲೆ ಸ್ವಸ್ತಿಕ್ ಲಾಂಛನವನ್ನು ಹಾಕಬೇಕು*

🕉️🚩 *ಜೈ ಸನಾತನ ಹಿಂದೂ ಧರ್ಮ*🚩🕉️

Post a Comment

0Comments

Post a Comment (0)