ಎಚ್ಚರಿಕೆಯ ಏಳು ಗಂಟೆಗಳು !!!

SANTOSH KULKARNI
By -
0

 





-1-

ಮಾತಾ ನಾಸ್ತಿ ಪಿತಾ ನಾಸ್ತಿ, ನಾಸ್ತಿ ಬಂಧು ಸಹೋದರ:|
ಅರ್ಥಂ ನಾಸ್ತಿ ಗೃಹಂ ನಾಸ್ತಿ "
ತಸ್ಮಾತ್ ಜಾಗ್ರತ ಜಾಗ್ರತ"||

ತಾಯಿ-ತಂದೆ,ಬಂಧು-ಸಹೋದರ, ಹಣ, ಮನೆ, ಯಾವುದೂ ಸತ್ಯವಲ್ಲ , ಆದ್ದರಿಂದ ಹುಷಾರಾಗಿರಿ, ಎಚ್ಚರಿಕೆ, ಎಚ್ಚರಿಕೆ!!

-2-

ಜನ್ಮ ದು:ಖಂ ಜರಾ ದುಖಂ, ಜಾಯಾ ದು:ಖಂ ಪುನ: ಪುನ:|ಸಂಸಾರ ಸಾಗರಂ ದುಖಂ,
ತಸ್ಮಾತ್ ಜಾಗ್ರತ ಜಾಗ್ರತ||

ಜನ್ಮವೂ ದು:ಖವೇ, ಮುಪ್ಪೂ ದು:ಖವೇ, ಪತ್ನಿಯೂ ದು:ಖವೇ, ಇಷ್ಟೇ ಏಕೆ? ಸಂಸಾರ ಸಾಗರವೇ ದು:ಖ,ನೆನಪಿರಲಿ,ಎಚ್ಚರಿಕೆ, ಎಚ್ಚರಿಕೆ!!

-3-

ಕಾಮ: ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾ:|
ಜ್ಞಾನರತ್ನಾಪಹಾರಾಯ
ತಸ್ಮಾತ್ ಜಾಗ್ರತ ಜಾಗ್ರತ||

ಕಾಮಕ್ರೋಧಗಳೆಂಬ ಕಳ್ಳರು ನಿನ್ನೊಳಗೇ ಇರುವ ಜ್ಞಾನರತ್ನವನ್ನು ಅಪಹರಿಸುವುದಕ್ಕಾಗಿ ಹೊಂಚುಹಾಕುತ್ತಿದ್ದಾರೆ.ಎಚ್ಚರಿಕೆ, ಎಚ್ಚರಿಕೆ!!

-4-

ಆಶಯಾ ಬಧ್ಯತೇ ಲೋಕ: ಕರ್ಮಣಾ ಬಹು ಚಿಂತಯಾ|
ಆಯು: ಕ್ಷೀಣಂ ನ ಜಾನಾತಿ
ತಸ್ಮಾತ್ ಜಾಗ್ರತ ಜಾಗ್ರತ||

ಆಶೆಯಿಂದ, ಕರ್ಮದಿಂದ,ಚಿಂತೆಯಿಂದ ಮನುಷ್ಯನು ಬದ್ಧನಾಗಿರುತ್ತಾನೆ. ಆಯುಷ್ಯವು ಸವೆಯುತ್ತಿದ್ದರೂ ಅದನ್ನು ಗಮನಿಸುತ್ತಿಲ್ಲ,ಎಚ್ಚರಿಕೆ, ಎಚ್ಚರಿಕೆ!!

-5-

ಸಂಪದ: ಸ್ವಪ್ನಸಂಕಾಶಾ:,ಯೌವನಂ ಕುಸುಮೋಪಮಮ್|
ವಿದ್ಯುಚ್ಚಂಚಲಮಾಯುಷ್ಯಂ
ತಸ್ಮಾತ್ ಜಾಗ್ರತ ಜಾಗ್ರತ||

ಸಂಪತ್ತು ಸ್ವಪ್ನಸಮಾನ, ಯೌವನವು ಹೂವಿನಂತೆ ಬಾಡುತ್ತಿದೆ, ಆಯುಷ್ಯವಂತೂ ಮಿಂಚಿನಂತೆ ಹಾರಿಹೋಗುತ್ತಿದೆ,ಎಚ್ಚರಿಕೆ, ಎಚ್ಚರಿಕೆ!!

-6-

ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ,ಕ್ಷಣಂ ಜೀವಿತಮೇವಚ|
ಯಮಸ್ಯ ಕರುಣಾ ನಾಸ್ತಿ,
ತಸ್ಮಾತ್ ಜಾಗ್ರತ ಜಾಗ್ರತ||

ವಿತ್ತ, ಚಿತ್ತ,ಜೀವಿತ ಎಲ್ಲವೂ ಕ್ಷಣಿಕವೇ.ಯಮನಿಗೆ ದಯೆ ಎಂಬುದಿಲ್ಲ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

-7-

ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಾ:|
ನಿತ್ಯಂ ಸನ್ನಿಹಿತೋ ಮೃತ್ಯು:,
ತಸ್ಮಾತ್ ಜಾಗ್ರತ ಜಾಗ್ರತ||

ದೇಹಗಳು ಅನಿತ್ಯ,ಸಂಪತ್ತೆಲ್ಲವೂ ಅಶಾಶ್ವತ, ಮರಣವು ಹತ್ತಿರದಲ್ಲಿದೆ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

ಶ್ರೀ ಆದಿ ಶಂಕರಾಚಾರ್ಯರು

Post a Comment

0Comments

Please Select Embedded Mode To show the Comment System.*