ಒಂದು ದಿನ ನಾರದ ಮತ್ತು ಪರಾಶ ಮಹರ್ಷಿಗಳೊಂದಿಗೆ ತ್ರಿಲೋಕಗಳನ್ನು ಸಂಚರಿಸಿ ವಿಶ್ರಾಂತಿ ಪಡೆಯಲು ಭೂಲೋಕದ ಗ್ರಾಮವನ್ನು ತಲುಪುತ್ತಾರೆ. ಇದೇ ಸಂದರ್ಭದಲ್ಲಿ ಊರಿನ ನಾಲ್ಕು ವರ್ಗದ ಜನರು ಮನೆಗಳನ್ನು ಸಗಣಿಯಿಂದ ಸಾರಿಸಿ ಮನೆಮುಂದೆ ರಂಗೋಲಿ ಹಾಕುತ್ತಾರೆ. ಮಹಿಳೆಯರೆಲ್ಲರೂ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ತೊಡುತ್ತಾರೆ.
ನಾಲ್ಕು ವರ್ಗದ ಜನರು ಒಂದೆಡೆ ಸೇರಿ ಲಕ್ಷ್ಮೀ ಪೂಜೆಯನ್ನು ಮಾಡಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಹಾಡುಗಳನ್ನು ಹಾಡುತ್ತಿರುವಾಗ ಇದನ್ನು ಗಮನಿಸಿದ ನಾರದ ಅಶ್ಚರ್ಯಪಟ್ಟು ಮಹರ್ಷಿ ಪರಾಶರಿಗೆ ಹೀಗೆ ಕೇಳುತ್ತಾರೆ. ಮಹರ್ಷಿಗಳೇ ಇಷ್ಟು ಸಂತೋಷದಿಂದ ಜನರು ಸೇರಿ ಮಾಡುತ್ತಿರುವ ಈ ಪೂಜೆ ಯಾವುದು ಎಂದು ಕೇಳುತ್ತಾರೆ. ಅಲ್ಲದೆ, ಈ ಪೂಜೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದೆ ವಿವರವಾಗಿ ಹೇಳು ಎನ್ನುತ್ತಾರೆ
ಆಗ ಮಹರ್ಷಿಗಳು ವಿವರಿಸುತ್ತಾರೆ. ಗುರುವಾರ ಮಾಡುವ ಈ ಪೂಜೆಯನ್ನು ಲಕ್ಷ್ಮೀ ಪೂಜೆ ಎನ್ನುತ್ತಾರೆ. ವರ್ಷಕೊಮ್ಮೆ ಬರುವ ಮಾರ್ಗಶಿರ ಮಾಸದಲ್ಲಿ ಈ ಪೂಜೆಯನ್ನು ಮಾಡಲು ಉತ್ತಮ ತಿಂಗಳು. ಇದು ಲಕ್ಷ್ಮೀದೇವಿಗೆ ಬಹಳ ಇಷ್ಟವಾಗುತ್ತದೆ ಎಂದು ಪರಾಶರ ಮಹರ್ಷಿಗಳು ನಾರದನಿಗೆ ಹೇಳುತ್ತಾರೆ.
ಆಗ ನಾರದ ಮರು ಪ್ರಶ್ನೆಯನ್ನು ಕೇಳುತ್ತಾನೆನ. ಮಹರ್ಷಿಗಳೇ ಈ ಪೂಜೆಯನ್ನು ಈ ಹಿಂದೆ ಯಾರಾದರೂ ಮಾಡಿದ್ದಾರೆಯೇ? ಒಂದು ವೇಳೆ ಮಾಡಿದ್ದರೇ ಯಾರು ಮಾಡಿದ್ದರು? ಅವರಿಗೆ ಯಾವ ಫಲ ಸಿಕ್ಕಿದೆ ಎಂಬುದನ್ನ ತಿಳಿದುಕೊಳ್ಳಬಹುದೇ ಎನ್ನುತ್ತಾರೆ. ಆಗ ಪರಾಶರು ಕಥೆಯನ್ನು ಹೇಳುತ್ತಾರೆ
ಒಂದು ದಿನ, ಲಕ್ಷ್ಮೀವಾರದಂದು ವಿಷ್ಣುಪಾದಗಳ ನಿಂತ ಮಹಾಲಕ್ಷ್ಮೀ ದೇವಿ ಸ್ವಾಮಿಗೆ ಕೇಳುತ್ತಾಳೆ. ಸ್ವಾಮಿ ಇಂದು ಮಾರ್ಗಶಿರ ಲಕ್ಷ್ಮೀವಾರ. ಜನರು ನನ್ನ ಉಪವಾಸವನ್ನು ಆಚರಿಸುವ ದಿನ. ನೀನು ನನಗೆ ಅವಕಾಶ ಕೊಟ್ಟರೆ ನಾನು ಭೂಲೋಕಕ್ಕೆ ಹೋಗಿ ನನ್ನ ವ್ರತವನ್ನು ಮಾಡಿದವರನ್ನು ಆಶೀರ್ವದಿಸುತ್ತೇನೆ ಎಂದು ಹೇಳುತ್ತಾರೆ.
ಇದಕ್ಕೆ ಭಗವಾನ್ ವಿಷ್ಣು ಸರಿ ಆಯ್ತು ಹೋಗಿ ಬಾ ಎಂದು ಹೇಳಿದಾಗ ಮಹಾಲಕ್ಷ್ಮೀ ಸರ್ವಾಲಂಕೃತಗೊಂಡು ಭೂಲೋಕಕ್ಕೆ ಪ್ರಯಾಣಿಸುತ್ತಾರೆ. ವಿಷ್ಣು ಬ್ರಾಹ್ಮಣ ಸಮುದಾಯದ ಒರ್ವ ವೃದ್ಧೆ ರೂಪದಲ್ಲಿ ಮನೆಯೊಂದಕ್ಕೆ ಪ್ರವೇಶಿಸುತ್ತಾನೆ. ಅದೇ ಊರಿನಲ್ಲಿ ಅಲೆದಾಡುತ್ತಿದ್ದ ಮಹಾಲಕ್ಷ್ಮೀ ದೇವಿಯುವ ಆ ಮನೆಗೆ ಬಂದು, ಅಯ್ಯೋ ಇಂದು ಮಾರ್ಗಶಿರ ಲಕ್ಷ್ಮೀವಾರದ ಲಕ್ಷ್ಮೀ ಪೂಜೆ. ಮನೆಯನ್ನು ಸಗಣಿಯಿಂದ ಸಾರಿಸಿ, ಮನೆ ಮುಂದೆ ರಂಗೋಲಿ ಬಿಡಿಸಿಲ್ಲ ಯಾಕೆ ಅಂತ ಕೇಳುತ್ತಾಳೆ. ಅದಕ್ಕೆ ಆ ವೃದ್ದೆ ಅಮ್ಮ ಏನದು ವ್ರತ?, ಹೇಗೆ ಮಾಡಬೇಕು? ನೀವು ಹೇಳಿದರೆ ನಾನು ಕೂಡ ಮಾಡುತ್ತೇನೆ ಎಂದಾಗ ಮಹಾಲಕ್ಷ್ಮೀ ಮಂದಹಾಸದಿಂದ ಹೀಗೆ ಹೇಳುತ್ತಾಳೆ.
ಮಾರ್ಗಶಿರ ಮಾಸದ ಗುರುವಾರ ಬೆಳಗ್ಗೆ ಬೇಗ ಎದ್ದು ಮನೆಗೆ ಗೋವಿನ ಸಗಣಿಯಿಂದ ಸಾರಿಸಿ ರಂಗೋಲಿಯಲ್ಲಿ ಲಕ್ಷ್ಮೀದೇವಿಯ ಚಿತ್ರವನ್ನು ಬಿಡಿಸಬೇಕು. ಹೊಸ ಸೇರನ್ನು ತಂದು ಅದನ್ನು ತೊಳೆದು ಒಣಗಿಸಬೇಕು. ಬಳಿಕ ಆ ಪಾತ್ರೆಗೆ ವಿವಿಧ ರೀತಿಯ ಚಿತ್ರಗಳನ್ನು ಸುಂದರಾಗಿ ಬಿಡಿಸಿ ಅಲಂಕರಿಸಬೇಕು. ಒಂದು ಹೊಸ ಪೀಠವನ್ನು ತೆಗೆದುಕೊಂಡು ಅದನ್ನು ತೊಳೆದು ಅದರ ಮೇಲೆ ಧಾನ್ಯಗಳನ್ನು ಹಾಕಬೇಕು. ಅದರ ಮೇಲೆ ಅಳತೆಯ ಬಟ್ಟಲನ್ನು ಇಡಬೇಕು. ಅರಿಶಿನ ನೀರಿನಿಂದ ತೊಳೆದ ಪೋಕಾ ಮರದ ತುಂಡನ್ನು ಇಡಬೇಕು. ಅದರ ಸೇರಿನಲ್ಲಿ ಬಿಳಿ ಧಾನ್ಯವನ್ನು ಅಳೆಯಬೇಕು. ಮನಸ್ಸಿನಲ್ಲೇ ತಮ್ಮ ಕೋರಿಕೆಗಳನ್ನು ಹೇಳಿಕೊಂಡು ಸೇರಿನ ಮೇಲೆ ಬಿಳಿ ಧಾನ್ಯವನ್ನು ಸುರಿಯಬೇಕು.
ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಕೆಂಪು ಹೂಗಳಿಂದ ಪೂಜಿಸಿ ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಬೇಕು. ಮೊದಲು ಹಾಲಿನ ನೈವೇದ್ಯ ಮಾಡಬೇಕು. ಅದರ ನಂತರ ಎಣ್ಣೆಯನ್ನು ಬಳಸದೆ ಮಾಡಿದ ಆಹಾರವನ್ನು ಅರ್ಪಿಸಬೇಕು. ಇದು ಒಂದು ವಿಧಾನವೆಂದು ಹೇಳುತ್ತಾರೆ.
ಎರಡನೇ ವಿಧಾನ ತುಂಬಾ ಸರಳವಾಗಿದೆ. ಗುರುವಾರದಂದು ಬರುವ ಮಾರ್ಗಶಿರ ಸುದ್ಧ ದಶಮಿ ತಿಥಿಯಂದು ಭಕ್ತಿಯಿಂದ ಈ ವ್ರತ ಮಾಡಿದರೆ ಸಂಪತ್ತು ಸಿಗುವುದು ಖಂಡಿತ. ಈ ವ್ರತವನ್ನು ಮಾಡಿ ನೈವೇದ್ಯವನ್ನು ಹಂಚಿದರೆ ಲಕ್ಷ್ಮೀ ಕಟಾಕ್ಷ ಸಿಗುತ್ತದೆ. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಹತ್ತು ಮಂದಿಯನ್ನು ಕರೆದು ಈ ವ್ರತವನ್ನು ಮಾಡಿ. ಅರಿಶಿನ ಕುಂಕುಮ ನೀಡಿದರೆ ಮನೆ ಲಕ್ಷ್ಮೀಯಿಂದ ತುಂಬುತ್ತದೆ.
ಈ ವ್ರತವಷ್ಟೇ ಅಲ್ಲ, ಇನ್ನೂ ಕೆಲವನ್ನು ಆಚರಿಸಬೇಕು. ಗುರುವಾರ ಬೆಳಗ್ಗೆ ಎದ್ದು ಒಲೆಯಿಂದ ಬೂದಿ ತೆಗೆಯದಿದ್ದರೆ, ಮನೆ ಮುಂದೆ ಗುಡಿಸದಿದ್ದರೆ ಮನೆಯಲ್ಲಿ ಅದೃಷ್ಟ ನಿಲ್ಲುವುದಿಲ್ಲ. ಗುರುವಾರ ಶುಭ್ರವಾದ ಮಡಿ ಬಟ್ಟೆಯನ್ನು ಧರಿಸಿ ಅಡುಗೆ ಮಾಡಿ ಪೂಜಿಸುವ ಮಹಿಳೆಯ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಯಾವುದೇ ಹೆಣ್ಣಿಗೆ ತಿನ್ನುವ ಅಥವಾ ಮಕ್ಕಳನ್ನು ಬಯ್ಯುತ್ತಾಳೋ, ಹೊಡೆಯುತ್ತಾಳೋ, ಗುರುವಾರದಂದು ಮನೆ ಮುಂದೆ ಗುಡಿಸುವುದಿಲ್ಲೋ ಅಥವಾ ಪಾತ್ರೆ ತೊಳೆಯುವುದಿಲ್ಲೋ ಅವಳು ಒಂದು ಕ್ಷಣವೂ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದಿಲ್ಲ. ಮಹಿಳೆ ಸಂಜೆ ವೇಳೆ ಮನೆಯ ಬಾಗಿಲಿನ ಎರಡೂ ಬದಿಗಳಲ್ಲಿ ದೀಪಗಳನ್ನು ಇಡುವುದಿಲ್ಲೋ ಆ ಮನೆಯಲ್ಲಿ ಲಕ್ಷ್ಮೀ ದೇವಿ ನಿಲ್ಲುವುದಿಲ್ಲ. ಮೇಲಾಗಿ ಆ ಮನೆ ಮತ್ತು ಮಕ್ಕಳ ಹಣಕ್ಕೆ ಧಕ್ಕೆಯಾಗುತ್ತದೆ
ಅದೇ ರೀತಿಯಾಗಿ ಬೇಯಿಸದ ಆಹಾರ ಸೇವಿಸುವ, ನಿಷೇಧಿತ ಆಹಾರ ಪದಾರ್ಥಗಳನ್ನು ತಿನ್ನುವ, ಶುಚಿತ್ವ ಇಲ್ಲದ ಸ್ಥಳಗಳಲ್ಲಿ ತಿರುಗಾಡುವ, ಅತ್ತೆ, ಮಾವ ಅವರನ್ನು ನಿಂದಿಸುವ ಮಹಿಳೆಯ ಮನೆಗೆ ಲಕ್ಷ್ಮೀ ಕಾಲಿಡುವುದಿಲ್ಲ. ಊಟ ಮಾಡುವ ಮೊದಲು ಮತ್ತು ನಂತರ ಕಾಲು, ಕೈ, ಮುಖ ತೊಳೆಯದವರ ಮನೆಗೂ ಲಕ್ಷ್ಮೀ ಬರುವುದಿಲ್ಲ. ಇತರರೊಂದಿಗೆ ಮಾತನಾಡುತ್ತಾ ಕಾರಣವಿಲ್ಲದೆ ಪ್ರತಿ ಮಾತಿಗೂ ಯಾವ ಮಹಿಳೆ ನಗುತ್ತಾಳೋ ಅಲ್ಲಿ ಲಕ್ಷ್ಮೀ ಇರುವುದಿಲ್ಲ. ಯಾವ ಮಹಿಳೆ ಎಲ್ಲರ ಗೌರವ ಹಾಗೂ ಮಚ್ಚುಗೆಗೆ ಪಾತ್ರವಾಗುತ್ತಾಳೋ ಅಲ್ಲಿ ಲಕ್ಷ್ಮೀ ಇರುತ್ತಾಳೆ. ಯಾವ ಮಹಿಳೆ ಗುರುವಾರ ಧಾನಧರ್ಮ ಮಾಡುವುದಿಲ್ಲವೋ, ಪೂಜೆ ಮಾಡುವದಿಲ್ಲವೋ, ಗಂಡನ ಜೊತೆ ಜಗಳವಾಡುತ್ತಾಳೋ ಆ ಮಹಿಳೆಯ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ.
ಗುರುವಾರ, ಅಮವಾಸ್ಯೆ ಮತ್ತು ಸಂಕ್ರಾಂತಿ ತಿಥಿಗಳಂದು ನಿಷೇಧಿತ ಪದಾರ್ಥಗಳನ್ನು ಸೇವಿಸುವ ಮಹಿಳೆ ಯಮಪುರಿಗೆ (ನರಕ) ಹೋಗುತ್ತಾಳೆ. ಈ ಮೂರು ತಿಥಿಗಳಲ್ಲಿ ನಿಷೇಧಿತ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿದ್ದರೆ ಅಥವಾ ರಾತ್ರಿ ವೇಳೆ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ, ಮಹಿಳೆಯ ಮನೆಯು ಐಶ್ವರ್ಯ ವೃದ್ಧಿಯಾಗುತ್ತದೆ. ಪುತ್ರ-ಪುತ್ರಿಯರಿಂದ ಸಮೃದ್ಧಿಯಾಗುತ್ತದೆ. ಊಟ ಮಾಡುವಾಗ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿಗೆ ಮುಖಹಾಕಿ ಕುಳಿತುಕೊಳ್ಳಬಾರದು.
ಹಾಗೆಯೇ ನಿತ್ಯವೂ ದೀಪಾರಾಧನೆ ಮಾಡದೆ ಮನೆಯಲ್ಲಿ ಊಟ ಮಾಡುವುದು ಒಳ್ಳೆಯದಲ್ಲ. ಕತ್ತಲಾದ ನಂತರ ತಲೆಗೆ ಎಣ್ಣೆ ಹಚ್ಚಬೇಡಿ, ಬಿಚ್ಟಿದ ಬಟ್ಟೆ, ಕೊಳಕು ಬಟ್ಟೆ ಎಲ್ಲೆಂದರಲ್ಲಿ ಬಿಸಾಡುವುದು ದಾರಿದ್ರ್ಯವಾಗಿದೆ. ಗಂಡನ ಒಪ್ಪಿಗೆ ಇಲ್ಲದೆ ಬೇರೆಯವರ ಮನೆಗೆ ಹೋಗುವ ಮಹಿಳೆಯ ಮನೆ, ಗಂಡನ ಮಾತು ಕೇಳದ ಮಹಿಳೆಯ ಮನೆ, ದೇವರಲ್ಲಿ ಅಥವಾ ಬ್ರಾಹ್ಮಣರ ಮೇಲೆ ನಂಬಿಕೆ ಇಲ್ಲದ ಹೆಂಗಸರು ಇರುವ ಮನೆಗೆ ಲಕ್ಷ್ಮಿ ದೇವಿ ಬರುವುದಿಲ್ಲ. ಇಂತಹ ಮನೆಯನ್ನು ಬಡತನ ಶಾಶ್ವತವಾಗಿ ಕಾಡುತ್ತದೆ. ಲಕ್ಷ್ಮೀ ದೇವಿ ಆ ಬ್ರಾಹ್ಮಣ ವೃದ್ಧೆಗೆ ವಿವರಿಸಿದಳು. ಆ ಹಳ್ಳಿಯ ಪ್ರತಿ ಮನೆಗೆ ಭೇಟಿ ನೀಡುತ್ತಾಳೆ.
ಸಮಯದಲ್ಲಿ ಹಳ್ಳಿಯ ಮಹಿಳೆಯರೆಲ್ಲಾ ಮಲಗಿರವುದನ್ನು ಕಂಡು ಲಕ್ಷ್ಮೀದೇವಿ ಆಶ್ಚರ್ಯಚಕಿತಳಾಗುತ್ತಾಳೆ. ಆ ಹಳ್ಳಿಯ ಕೊನೆಗೆ ಹೋಗುತ್ತಾಳೆ. ಅಲ್ಲಿ ಒಬ್ಬ ಬಡ ಮಹಿಳೆ ಪ್ರತಿ ದಿನವೂ ಗೋವಿನ ಸಗಣಿಯಿಂದ ಮನೆಯನ್ನು ಸಾರಿಸಿ, ರಂಗೋಲಿ ಬಿಡಿಸುತ್ತಿದ್ದಳು. ಅಕ್ಕಿ ಹಿಟ್ಟಿನಿಂದ ಲಕ್ಷ್ಮೀದೇವಿ ಚಿತ್ರವನ್ನು ಬಿಡಿಸಿ, ದೇವಿಯ ವಿಗ್ರಹಕ್ಕೆ ದೀಪಗಳನ್ನು ಹಚ್ಚಿ ಧೂಪವನ್ನು ಅರ್ಪಿಸುತ್ತಿದ್ದಳು. ನೈವೇದ್ಯಗಳನ್ನು ಸಲ್ಲಿಸಿ ಪದ್ಮಾಸನದಲ್ಲಿ ಕುಳಿತು ಲಕ್ಷ್ಮೀಯನ್ನು ಪೂಜಿಸುತ್ತಿದ್ದಳು. ಬಡ ಮಹಿಳೆಯ ಭಕ್ತಿಗೆ ಮೆಚ್ಚಿದ ಮಹಾಲಕ್ಷ್ಮೀ ಅವಳ ಮನೆಗೆ ಭೇಟಿ ನೀಡುತ್ತಾಳೆ. ಓ ಭಕ್ತ ಮಹಿಳೆ, ನಿಮ್ಮ ಭಕ್ತಿಯನ್ನು ಮೆಚ್ಚುತ್ತೇನೆ ಎಂದಳು. ಸಾಕ್ಷಾತ್ ಲಕ್ಷ್ಮೀದೇವಿಯನ್ನು ನೋಡಿದ ಆ ಮಹಿಳೆ ಮೂಕವಿಸ್ಮಿತಳಾಗುತ್ತಾಳೆ ಅಲ್ಲದೆ, ದೇವಿಯಿಂದ ಏನನ್ನೂ ಬಯಸಲಿಲ್ಲ.
ಆಗ ಲಕ್ಷ್ಮೀದೇವಿ ನೀನು ಕೇಳದೆಯೇ ನಾನು ವರಗಳನ್ನು ಕೊಡುತ್ತಿದ್ದೇನೆ. ನೀವು ಸಾಯುವವರೆಗೂ ಎಲ್ಲಾ ಸಂಪತ್ತನ್ನು ಅನುಸುತ್ತೀರಿ. ಮರಣಾನಂತರ ನೀನು ವೈಕುಂಠಕ್ಕೆ ಹೋಗುವೆ. ನನ್ನ ಹೆಸರಿನಲ್ಲಿ ಮಾಡುವ ಉಪವಾಸ ಬಿಡಬೇಡ. ವಿಷ್ಣು ಮೂರ್ತಿಯ ಕೃಪೆಯೂ ಸಿಗಲಿದೆ ಎಂದು ಹೇಳುತ್ತಾಳೆ. ಮಹಾಲಕ್ಷ್ಮೀ ಹೇಳಿದಂತೆಯೇ ಆ ಮಹಿಳಾ ದೇವಿಯನ್ನು ಪೂಜಿಸುತ್ತಾ ಸಕಲ ಸಂಪತ್ತು, ಸುಖ-ಭೋಗಗಳು ಮತ್ತು ಐವರು ಪುತ್ರರೊಂದಿಗೆ ಸುಖವಾಗಿ ಬಾಳುತ್ತಾಳೆ. ಈ ವ್ರತವನ್ನು ಮಹಾಲಕ್ಷ್ಮೀಯೇ ಹೇಳಿಕೊಂಡಿದ್ದು ಬಹಳ ವಿಶೇಷವಾಗಿದೆ. ನಿತ್ಯವೂ ಈ ಕತೆಯನ್ನು ಓದುವುದರಿಂದ ಪುಣ್ಯ ಲಭಿಸುತ್ತದೆ ಎಂದು ಪುರಾಣಗಳು ಹೇಳುತ್ತವೆ .
ಶುಭವಾಗಲಿ
▬▬▬ஜ۩۞۩ஜ▬▬▬
🪷 *ಸರ್ವಂ ಶ್ರೀ*
*ಕೃಷ್ಣಾರ್ಪಣಮಸ್ತು* . 🪷
▬▬▬ஜ۩۞۩ஜ▬▬▬