*ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ?*
*ಕರ್ಪುರದ ಮರನ ಕಡಿದು ಕಳ್ಳಿಗೆ ಬೇಲಿಯನಿಕ್ಕುವರೆ?**ಶ್ರೀಗಂಧದ ಮರನ ಕಡಿದು ಬೇವಿಂಗೆ ಅಡೆಯನಿಕ್ಕುವರೆ?*
*ನಮ್ಮ ಕೂಡಲಸಂಗನ ಶರಣರಿಗಲ್ಲದೆ*
*ಬೇರೆ ಇಚ್ಛಾಭೋಜನವನಿಕ್ಕಿದರೆ*
*ಕಿಚ್ಚಿನೊಳಗೆ ಉಚ್ಚೆಯ ಹೊಯಿದು*
*ಹವಿಯ ಬೇಳ್ದಂತಾಯಿತ್ತು.*
*✍🏻✍🏻ಕ್ರಾಂತಿಯೋಗಿ ಬಸವಣ್ಣನವರು.*
*ವಚನದ ಸಂಕ್ಷಿಪ್ತ ಭಾವಾರ್ಥ*
*ಬಂಗಾರ ನೇಗಿಲದಿಂದ ಹರಗಿ ಎಕ್ಕಿಯ ಬೀಜ ಬಿತ್ತಬಹುದೇ ? ಕರ್ಪೂರ ಗಿಡ ಕಡಿದು ಕಳ್ಳಿಯ ರಕ್ಷಣೆಗೆ ಬೇಲಿಯಂತೆ ಕಟ್ಟಬಹುದೇ ? ಶ್ರೀಗಂಧದ ಗಿಡ ಕಡೆದು ಬೇವಿನ ಕಾಯಿಗೆ ಅಡಿಗೆ ಹಾಕಬಹುದೇ ? ಕೂಡಲಸಂಗಮೇಶನ ಹೊರತು ಬೇರೆಯವರಿಗೆ ಮೃಷ್ಟಾನ್ನ ಮಾಡಿ ನೀಡಿದರೆ ಬೆಂಕಿಯಲ್ಲಿ ಮೂತ್ರ ವಿಸರ್ಜಿಸಿ, ಯಜ್ಞಕ್ಕಾಹುತಿ ಕೊಡುವ ತುಪ್ಪದಂತಾಗುವದು.*
*ಶರಣು ಶರಣಾರ್ಥಿಗಳು.*