ಶ್ರೀಗರುಡ ದೇವರ ಅಷ್ಟೋತ್ತರ ಫಲ !

SANTOSH KULKARNI
By -
0


1
. ಕಣ್ಣಿಗೆ ಸಂಭಂದ ಪಟ್ಟ ಸಮೀಪ ದೃಷ್ಟಿದೋಷ, ದೂರದೃಷ್ಟಿದೋಷ ನಿವಾರಣೆಯಾಗುತ್ತದೆ.. ಕಣ್ಣು ಕೆಂಪಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ..

2. ದ್ವಿತೀಯ ರಾಹು, ಪಂಚಮ ರಾಹು, ಸಪ್ತಮ ರಾಹು, ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತದೆ..

3. ಮನಸ್ಸಿನಲ್ಲಿ ನೋವು, ಅಸಮಾಧಾನ , ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಓದಿದರೆ ಮನಸ್ಸು ನಿರ್ಮಲವಾಗುತ್ತದೆ.. ಶಾಂತವಾಗಿರುತ್ತಾರೆ..

4. ಸರ್ಪದೋಷ, ಕಾಳಸರ್ಪದೋಷ, .. ಇತ್ಯಾದಿ ಸರ್ಪದೋಷಗಳ ಪೂರ್ಣವಾಗಿ ನಿವಾರಣೆಯಾಗುತ್ತದೆ..

5. ಸಮಸ್ತ ಕುಜದೋಷಗಳು ನಿವಾರಣೆಯಾಗುತ್ತದೆ..

6. ಸರ್ಪಸುತ್ತು ವಾಸಿಯಾಗುತ್ತದೆ..

7. ರಾಹು ನಕ್ಷತ್ರಗಳಲ್ಲಿ ಜನಿಸಿದ್ದರೆ ಆರಿದ್ರಾ, ಸ್ವಾತಿ, ಶತಭಿಷ..!
ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ ಅಶ್ವಿನಿ, ಮಖಾ, ಮೂಲಾ ..!
ಕುಜನ ನಕ್ಷತ್ರಗಳಲ್ಲಿ ಜನಿಸಿದ್ದರೆ ಮೃಗಶಿರ, ಚಿತ್ತ, ಧನಿಷ್ಟ..!
ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ..

8. ಮಿಥುನಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು ಓದಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ..

9. ದೈವದೋಷವಿರುವವರು, ದೈವಶಾಪವಿರುವವರು, ಆಶ್ಲೇಷ ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ ಅನುಭವಿಸುತ್ತಿದ್ದರೆ ಅಂತವರು ಗರುಡ ಅಷ್ಟೋತ್ತರ ಓದಿದರೆ ಸರ್ವ ದೋಷಗಳು ನಿವಾರಣೆಯಾಗುತ್ತದೆ..

10. ಸರ್ಪಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತವರು ಓದಿದರೆ ಶುಭವಾಗುತ್ತದೆ..

11. ಸತಿಪತಿಗಳ ಜಗಳ ನಿವಾರಣೆಯಾಗುತ್ತದೆ.. ರಾಹು-ಕೇತು ದೋಷಗಳು ನಿವಾರಣೆಯಾಗುತ್ತದೆ..
12. ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತದೆ..

13. ಪ್ರಸವ ಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಅನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ..

14. ಮಕ್ಕಳು ತುಬಾ ಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸೊಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಆ ಮನೆಯವರು, ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತರಾಗುತ್ತಾರೆ..

15. ಕಣ್ಣಿನಲ್ಲಿ ಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, ಉರಿ ಬರುತ್ತಿದ್ದರೆ, ಗರುಡ ಮಂತ್ರವನ್ನು ನೀರಿನಲ್ಲಿ ಅಭಿಮಂತ್ರಿಸಿ, ಆ ನೀರನ್ನು EYE CUP ಗೆ ಹಾಕಿ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

ಗರುಡ ಮಂತ್ರ :

"ಕುಂಕುಮಾಂಕಿತ ವರ್ಣಾಯ ಕುದೆಂದು ಧವಳಾಯಚ!, ವಿಷ್ಣುವಾಹನ ನಮಸ್ತುಭ್ಯಂ; ಪಕ್ಷೀರಾಜಾಯ ತೇ ನಮಃ"

Post a Comment

0Comments

Please Select Embedded Mode To show the Comment System.*