ಮಧುಮೇಹ ಎಂಬುದು ಈಗಿನ ಜೀವನ ಶೈಲಿಯಲ್ಲಿ ಸಾಮಾನ್ಯವಾದಂತ ಒಂದು ರೋಗವಾಗಿ ಪರಿಣಮಿಸಿದೆ ಇದರ ನಿರ್ಮೂಲನೆಗೆ ಅನೇಖ ಪಥ್ಯಗಳನ್ನು ಮಾಡುವುದರ ಮುಖಾಂತರ ಅಯುರ್ವೇದದ ಮನೆ ಮದ್ದುಗಳನ್ನು ಬಳಸಿಕೊಂಡು ನಮ್ಮ ನಡುವೆಯೇ ಇರ ತಕ್ಕಂತಹ ಅನೇಕ ವಿಧಧ ಪದಾರ್ಥಗಳನ್ನು ಬಳಸಿಕೊಂಡು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದಾಗಿದೆ. ನಾವು ಸೇವಿಸುವ ಆಹಾರದಲ್ಲಿರುವ ಪಿಷ್ಟ ಮತ್ತು ಸಕ್ಕರೆ ಅಂಶಗಳು ವಿವಿಧ ರಾಸಾಯನಿಕ ಕ್ರಿಯೆಗಳಿಂದ ಶಕ್ತಿಯಾಗಿ ಪರಿರ‍್ತನೆಗೊಳ್ಳುವವು. ಈ ಕ್ರಿಯೆಗಳನ್ನು ನರ‍್ವಹಿಸಲು ಬೇಕಾದ ರಸ ವಿಶೇಷದ (ಇನ್ಸುಲಿನ್) ಕೊರತೆ ಉಂಟಾದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿ ಅದು ಮೂತ್ರದೊಂದಿಗೆ ಹೊರ ಹೋಗುವುದು. ಅದಕ್ಕೇನೇ ಮಧುಮೇಹ ಎನ್ನುವರು.ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿ ಪ್ರಮಾಣ ಕಡಿಮೆಯಾಗಿ ಮಧುಮೇಹ ಕಾಯಿಲೆ ಬರುವುದು. ಸಿಹಿ ಪದರ‍್ಥಗಳನ್ನು ಹೆಚ್ಚು ತಿನ್ನುವುದರಿಂದ ಮಧುಮೇಹ ಬರುತ್ತದೆನ್ನುವುದು ತಪ್ಪು ಗ್ರಹಿಕೆ. ಆದರೆ ಸಕ್ಕರೆ ಕಾಯಿಲೆ ಇರುವವರು ಮಾತ್ರ ಸಿಹಿ ತಿನ್ನಬಾರದು.ಉದರದ ಮೇಲ್ಬಾಗದಲ್ಲಿ ಎಡಗಡೆ ಇರುವ ಮೇದೋಜೀರಕ ಗ್ರಂಥಿಯ (ಪ್ಯಾನ್ ಕ್ರೀಜಿನ) ನಿಷ್ಕ್ರಿಯತೆ ಅಥವಾ ಅಸರ‍್ಪಕ ಕ್ರಿಯೆಯಿಂದ ಪಿಷ್ಟ ಮತ್ತು ಸಕ್ಕರೆಯನ್ನು ಶಕ್ತಿಯಾಗಿ ಬದಲಾಯಿಸುವ ಇನ್ಸುಲಿನ್ ತಯಾರಾಗದೆ ಅದರ ಕೊರತೆಯುಂಟಾಗುವುದು. ಕೆಲವೊಮ್ಮೆ ಮಧುಮೇಹ ಅನುವಂಶಿಕವಾಗಿಯೂ ಬರುವುದು. ಹಿಂದೆ ಈ ರೋಗ ಕೇವಲ ವೃದ್ಧರನ್ನೇ ಕಾಡುತ್ತಿತ್ತು ಆದರೆ ಇಂದು ಚಿಕ್ಕವರಿಗೂ ಅಂಟಿಕೊಳ್ಳಹತ್ತಿದೆ.
ರಕ್ತದಲ್ಲಿ ಗ್ಲಕೋಜಿನ ಪ್ರಮಾಣ ಹೆಚ್ಚಾಗಿರುವ ಸ್ಥಿತಿಗೆ ಮಧುಮೇಹ ಎನ್ನುವರು. ರಕ್ತದಲ್ಲಿ ಗ್ಲಕೋಜಿನ ಪ್ರಮಾಣ ಕಡಿಮೆಯಾಗಿರುವ ಸ್ಥಿತಿಗೆ ಹೈಪೊ ಗೈಸಿಮಿಯಾ ಎನ್ನುವರು. ಕೈಕಾಲು ನಡುಕ, ತಲೆಸುತ್ತುವಿಕೆ, ಮೈ ಬೆವರುವುದು, ಸುಸ್ತು ಇವು ಅದರ ಲಕ್ಷಣಗಳು.
ಗ್ಲಕೋಜಿನ ಪ್ರಮಾಣ ರಕ್ತದಲ್ಲಿ ಬಹಳ ಕಡಿಮೆಯಾದರೆ ಫಿಟ್ಸ್ ಕೂಡ ಬರಬಹುದು. ಆಗ ಉಪಶಮನವನ್ನು ಕೂಡಲೇ ಕೈಕೊಳ್ಳಬೇಕು. ಅಲಕ್ಷ ಮಾಡಿದರೆ ರೋಗಿ ಕೋಮಾದಲ್ಲಿ ಹೋಗಿ ಸಾವನ್ನಪ್ಪುವ ಸಂಭವ ಉಂಟು ಹೈಪೊ ಫೊಸಿಮಿಯಾ ಸಂಭವಿಸಿದಾಗ ಕೂಡಲೇ ಒಂದು ಚಮಚ ಗ್ಲಕೋಜನ್ನು ನೀರಿನಲ್ಲಿ ಕಲೆಸಿ ಕುಡಿಸಬೇಕು. ಗ್ಲಕೋಜ್ ಇಲ್ಲದಿದ್ದರೆ ಸಕ್ಕರೆಯನ್ನು ಗ್ಲಕೋಜಿಗೆ ಬದಲಾಗಿ ಬಳಸಬಹುದು. ಹಣ್ಣಿನ ರಸವನ್ನು ಕುಡಿಸಬಹುದು.
ಮಧುಮೇಹದ ಲಕ್ಷಣಗಳು
ಬಾಯಾರಿಕೆ, ಹಸಿವು ಅತಿಯಾಗುವುದು, ಶರೀರದ ಬಲವು ದಿನೇ ದಿನೇ ಕುಗ್ಗುತ್ತಾ ಹೋಗುವುದು, ಅದರಿಂದ ಆಯಾಸ, ತೂಕಡಿಕೆ ಹೆಚ್ಚುವುದು. ಕೈಕಾಲುಗಳಲ್ಲಿ ಉರಿ ಮತ್ತು ನೋವುಂಟಾಗುವುದು. ಮೇಲಿಂದ ಮೇಲೆ ಮೂತ್ರ ವಿಸರ್ಜನೆಗೆ ಹೋಗಬೇಕಾಗುವುದು. ಶರೀರಕ್ಕೇನಾದರೂ ಗಾಯವಾದರೆ ಅದು ಮಾಯುವುದು ಕಷ್ಟವಾಗುವುದು. ದೇಹದ ತೂಕ ಇಳಿಯುತ್ತ ಹೋಗುವುದು. ದೃಷ್ಟಿಯೂ ಕೂಡ ಮಂದಾಗುವುದು.
ಕಾಲಾಂತರದಲ್ಲಿ ದೃಷ್ಟಿ ನರ ಮಂಡಲ, ಹೃದಯ ಮತ್ತು ರಕ್ತನಾಳಗಳು, ಮೂತ್ರಪಿಂಡಗಳು, ಯಕೃತ್ ಮತ್ತು ಮೆದುಳನ್ನು ಹಾಳು ಮಾಡುವ ಒಂದು ಉಪದ್ರವವಾಗಿರುವುದು ಮಧುಮೇಹ.
ಮಧುಮೇಹದಲ್ಲಿ ಬೇರೆ ಬೇರೆ ಪ್ರಕಾರಗಳಿರುವವು, ಮೈ ಮುರಿದು ಕೆಲಸ ಮಾಡುವವರಿಗೆ ಈ ರೋಗ ಬರುವುದು ಕಡಿಮೆ. ಯಾವ ವ್ಯಾಯಾಮವೂ ಇಲ್ಲದೆ ಕುಳಿತಲ್ಲೇ ಕುಳಿತಿರುವವರಿಗೆ ಈ ಬೇನೆ ಬಹು ಬೇಗ ಅಂಟಿಕೊಳ್ಳುತ್ತದೆ. ಈ ವ್ಯಾಧಿ ಕೇವಲ ಔಷಧಿ ಸೇವಿಸುವುದರಿಂದ ಗುಣವಾಗಲಾರದು. ಚಿಕಿತ್ಸೆಗೆ ಪೂರಕವಾಗಿ ರೋಗಿಯು ತನ್ನ ಆಹಾರ- ವಿಹಾರಗಳನ್ನು, ಆಚಾರ-ವಿಚಾರಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಒಟ್ಟಾರೆ ಅವನು ತನ್ನ ಜೀವನ ಶೈಲಿಯನ್ನೇ ಮಾರ್ಪಡಿಸಿಕೊಳ್ಳಬೇಕಾಗುತ್ತದೆ.
ಔಷಧದ ಜೊತೆಗೆ ಪಥ್ಯಾಹಾರ, ಶಾಸ್ಪೋಕ್ತವಾದ ಯೋಗಸಾಧನೆ, ಅಂಗ ಸಾಧನೆಯನ್ನಿಟ್ಟುಕೊಂಡು ಕ್ರಮಬದ್ಧವಾದ ಜೀವನ ಸಾಗಿಸ ಹತ್ತಿದರೆ ಮಧುಮೇಹದಿಂದ ಮುಕ್ತಿ ಪಡೆಯಬಹುದು. ದೇಹದ ತೂಕ ಹೆಚ್ಚದಂತೆ ನೋಡಿಕೊಳ್ಳಬೇಕು. ದೇಹದ ತೂಕದೊಂದಿಗೆ ಮಾನಸಿಕ ನೆಮ್ಮದಿಯನ್ನು ಕಾಯ್ದುಕೊಳ್ಳುವುದು ಮಧುಮೇಹಿಗಳಿಗೆ ಅತ್ಯವಶ್ಯವಾಗಿರುವುದು.
ನುಣ್ಣಗೆ ಅರೆದ ನೆಲ್ಲಿಕಾಯಿಯೊಡನೆ ಸಕ್ಕರೆ ಬೆರೆಸಿ ತಿಂದರೆ ಮಧುಮೇಹ ರೋಗ ಹತೋಟಿಗೆ ಬರುವುದು
ಮಧುಮೇಹ ರೋಗಗಳಿಗೆ ಸಿಹಿಕುಂಬಳಕಾಯಿ ಅತ್ಯುತ್ತಮವಾಗಿದೆ.
ಖರ್ಜೂರವನ್ನು ದಿನ ನಿತ್ಯ ಸೇವಿಸುವೂದರಿಂದ ಮಧುಮೇಹ ರೋಗ ಗುಣಮುಖವಾಗುವುದು.
ರಾಗಿ ಮುದ್ದೆ, ದೋಸೆ ಮುಂತಾದ ಪದಾರ್ಥಗಳನ್ನು ಮನೆಯಲ್ಲಿ ದಿನ ನಿತ್ಯ ಬಳಕೆ ಮಾಡಿ ತಿನ್ನುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ.
ಬೇಯಿಸಿದ ಹುರುಳಿಕಾಳಿನ ಕಟ್ಟನ್ನು ಬಸಿದು ತಯಾರಿಸಿದ ಸಾರನ್ನು ಸೇವಿಸುವುದರಿಂದ ಮಧುಮೇಹ ರೋಗ ದೂರ ಆಗುವುದು.
ದಿನನಿತ್ಯ ನೆಲ್ಲಿಕಾಯಿಯನ್ನು ಹೆಚ್ಚಾಗಿ ಬಳಸುತ್ತಿದ್ದರೆ ಮಧುಮೇಹ ರೋಗವು ಕಡಿಮೆಯಾಗುವುದು.
ಪ್ರತಿ ದಿನ 8ರಿಂದ 10 ಕರಿಬೇವಿನ ಎಲೆಗಳನ್ನು ಸುಮಾರು ಮೂರು ತಿಂಗಳ ಕಾಲ ಸೇವಿಸಿದರೆ ಮೂತ್ರ ರೋಗದಲ್ಲಿ ಗುಣ ಕಂಡುಬರುವುದು.
ಆಹಾರದ ರೂಪದಲ್ಲಿ ಹಗಲಕಾಯಿಯನ್ನು ಸೇವಿಸುತ್ತಾ ಬಂದರೆ ರಕ್ತ ದೋ಼ಷದಿಂದ ಉಂಟಾದತಹ ಮಧುಮೇಹ ಕಡಿಮೆಯಾಗುವುದು.
ತೊಂಡೆಬಳ್ಳಿಯ ರಸವನ್ನು 2ಸ್ಪೂನ್ ಬೆಳಿಗ್ಗೆ ಸಂಜೆ ಸೇವಿಸಲು ಮಧುಮೇಹ ಕಡಿಮೆ ಯಾಗುವುದು.
ಬೆಳಗ್ಗೆ ಎಳೆ ಗೋಧಿ ಹುಲ್ಲಿನ ರಸ, ಸಾಯಂಕಾಲ ಭತ್ತದ ಎಳೆಹುಲ್ಲಿನ ರಸ ಅರ್ಧ ಲೋಟ ಕುಡಿಯಲು ಸಿಹಿಮೂತ್ರ ಕಡಿಮೆ ಯಾಗುತ್ತದೆ.
ಕರಿಬೇವಿನ ಎಲೆ, ಹಾಗಲಕಾಯಿ ಹೋಳು, ಹುರಿದ ಹುರಿಗಡಲೆ, ಕರಿ ಮೆಣಸು, ಉಪ್ಪು ಸೇರಿಸಿ ಊಟದಲ್ಲಿ ಸೇರಿಸಿ ಸೇವಿಸಲು ಮಧುಮೇಹ ನಿವಾರಣೆಯಾಗುವುದು.
ಮುಟ್ಟಿದರೆ ಮುನಿ ಎಲೆ ಒಣಗಿಸಿ 3 ತೊಲೆ ಕಲ್ಲುಸಕ್ಕರೆ, 5 ಬಿಳಿ ಈರುಳ್ಳಿಯ ರಸದಲ್ಲಿ ಸೇರಿಸಿ ಸೇವಿಸಲು ಸಕ್ಕರೆ ರೋಗ ಕಡಿಮೆಯಾಗುದು.
ಜೀರಿಗೆ 1 ತೊಲ ಪುಡಿ ಮಾಡಿ, ಕಷಾಯ ಮಾಡಿ ಸೇವೆದಿರೆ ಮಧುಮೇಹ ತಕ್ಕ ಮಟ್ಟಿಗೆ ನಿವಾರಣೆಯಾಗುವುದು.
ನೇರಳೆ ಬೀಜದ ಕಷಾಯಕ್ಕೆ ಅರಿಶಿನ, ನೆಲ್ಲಿರಸ ಸೇರಿಸಿ ಸೇವಿಸಿದರೆ ಮಧುಮೇಹ ಬಾದೆ ಕಡಿಮೆಯಾಗುವುದು.
ಇಂದ್ರವಾರಣಿ ತೈಲ 1 ಚಮಚ ಪ್ರತಿದಿನ ಬೆಳಗ್ಗೆ ಸೇವಿಸಿದರೆ ಕಡಿಮೆ ಯಾಗುವುದು
ನೆಲತಂಡಗಿಯನ್ನು ಅತ್ತಿ ಹಾಲಿನಲ್ಲಿ ಅರೆದು ಮಾತ್ರೆ ಮಾಡಿ ದಿನಕ್ಕೆರಡು ಸಾರಿ ಸೇವಿಸಿ.
ಅರಿಶಿನ ಪುಡಿಯನ್ನು ಹಸುವಿನ ಹಾಲಿನಲ್ಲಿ ಅರ್ಧ ಚಮಚ ಸೇವಿಸಿ.
ಗೋಕ್ಷುರಾದಿ ಲೇಹ್ಯ, ಜಂಬಾದಿ ಲೇಹ್ಯ, ಅಶ್ವಗಂಧಿ ಲೇಹ್ಯ, ಭಲ್ಲಾಶಕ್ತಿ ಲೇಹ್ಯಗಳಲ್ಲಿ ಯಾವುದಾದರೊಂದನ್ನು 1 ತೊಲದಂತೆ 48 ದಿನ ಸೇವಿಸಬೇಕು.
ಕೊಳೋವಳಿಕೆ ಬೀಜ, ಉದ್ದಿನ ಹಿಟ್ಟು ಎಮ್ಮೆಯ ಮೊಸರಲ್ಲಿ ಸೇವಿಸಬೇಕು
ತ್ರಿಫಲೆ ಜೇನುತುಪ್ಪದಲ್ಲಿ, ಸೇವಿಸಿದರೆ ಅಮೃತಬಳ್ಳಿ, ಶರ್ಕರ,
ಆವರಿಕೆ ಪಂಚಾಗವನ್ನು ಮೊಸರಿನಲ್ಲಿ ಸೇರಿಸಿ, ಮೊಸರನು ಸೇವಿಸಬೇಕು.
ಪಾದರಿಚಕ್ಕೆ, ಬಲಿತ ತುರುಚೆ ಬೇರು ಮಜ್ಜಿಗೆಯಲ್ಲಿ ಸೇವಿಸಿ, ಮಜ್ಜಿಗೆ ಪಥ್ಯ ವಿರಬೇಕು.
ಜಾಯಿಕಾಯಿ ಚೂರ್ಣ, 1 ತೊಲ ತುಪ್ಪದಲ್ಲಿ ಸೇವಿಸಿ.
ಹೊಂಗೆ ಹೂವಿನ ಕಷಾಯ ಸೇವಿಸಲು ಸಿಹಿಮೂತ್ರ ರೋಗ ಹರವಾಗುವುದು.
ಚಂದನಾದಿ ಕಷಾಯವನ್ನು ಮೂರು ತಿಂಗಳು ಸೇವಿಸಬೇಕು.
ಅರಿಶಿನ, ಯವಕ್ಷಾರ, ನೆಲ್ಲಚಟ್ಟುಗಳ ಚೂರ್ಣವನ್ನು ಬಾಳೆಗಡ್ಡೆ ರಸದಲ್ಲಿ ಸೇವಿಸಬೇಕು.
ಕರಿಕಾಚೀ ಸೊಪ್ಪಿನ ರಸ 2 ಸ್ಪೂನ್ ಪ್ರತಿದಿನ ಕುಡಿಯಬೇಕು.
ಬಿಳಿಗಾರ ಭಸ್ಮ (ಟಂಕಣಕಾರ) ಹಾಲಿನೊಡನೆ ಸೇವಿಸಿ, ಮಜ್ಜಿಗೆ ಅನ್ನಪಥ್ಯ ವಿರಬೇಕು.
ಇಪ್ಪೆ ಹೂವಿನ ಮೊರಬ್ಬಾ ಪ್ರತಿದಿನ, ದಿನಕ್ಕೆರಡು ಸಾರಿ 1 ತೊಲ ಸೇವಿಸಬೇಕು.
ಒಂದು ಹಿಡಿ ಗಿರಿಕರ್ಣಿಕೆ ಸೊಪ್ಪಿನ ರಸವನ್ನು ಮಜ್ಜಿಗೆಯಲ್ಲಿ ಸೇವಿಸಿ, ಮಜ್ಜಿಗೆ ಅನ್ನ ಪಥ್ಯವಿರಬೇಕು.
ವಿಷ್ಣುಕ್ರಾಂತಿ ಸೊಪ್ಪನ್ನು 1 ಹಿಡಿ ತಂದು ಕುಟ್ಟಿ ರಸವನ್ನು ಪ್ರತಿದಿನ ಸೇವಿಸಲು ಸಿಹಿಮೂತ್ರ ಕಡಿಮೆಯಾಗುವುದು.
ಉತ್ತರಣಿ, ಅಕ್ಕಿಯ ಪಾಯಸ ಮಾಡಿ ಸೇವಿಸೆ ಸಿಹಿಮೂತ್ರ ಗುಣ,
ಹೊನ್ನೆ ಮರದ ಚಕ್ಕೆ ತೊಗಟೆ ಒಂದು ಕಲಾಯಿ ಪಾತ್ರೆಯಲ್ಲಿ ಹಾಕಿ ಯಾವಾಗಲೂ ಬಾಯಾರಿ ನೀರು ಕುಡಿಯಬೇಕೆಂದಾಗ ಆ ನೀರನ್ನೇ ಕುಡಿಯುತ್ತಿರಬೇಕು. ಬೇರೆ ನೀರನ್ನು ಕುಡಿಯಬಾರದು.
ಬ್ರಹ್ಮದಂಡೆ ಬೇರನ್ನು ಹಾಲಿನಲ್ಲಿ ಅರೆದು ಕುಡಿಯುತ್ತಿರಲು ಸಿಹಿಮೂತೃರೋಗಹರ
ಬನ್ನಿ ಸೊಪ್ಪನ್ನು ಮೇಕೆ ಹಾಲಿನಲ್ಲಿ ಸೇವಿಸುತ್ತಾ ಬರಲು ಮಧುಮೇಹ ಗುಣವಾಗುವುದು.
ಜಗಳಗಂಟೆ ಸೊಪ್ಪು ತಂದು ಒಣಗಿಸಿ ಪುಡಿ ಮಾಡಿ, 1 ಚಮಚ ಬೆಳಗ್ಗೆ ಹಾಲಿನಲ್ಲಿ ಕುಡಿಯಬೇಕು. ಹಸಿ ಸೊಪ್ಪಿನ ರಸ ಕುಡಿಸಿ ಹಾಲು ಅನ್ನದ ಪಥ್ಯವಿರಬೇಕು. ಹೀಗೆ 3 ತಿಂಗಳು ಮಾಡಬೇಕು.
ನೆಲ್ಲಿಕಾಯಿ ರಸ ಅರ್ಧ ತೊಲೆ, 4 ಗುಂಜಿ ಅರಿಶಿನ ಪುಡಿ, 1 ತೊಲ ಜೇನನ್ನು ನಿತ್ಯ ಬೆಳಗ್ಗೆ 1 ಸಾರಿ 48 ದಿನ ಸೇವಿಸಬೇಕು.
ಕೊಡಸಿಗೆಯ ಬೇರಿನ ತೊಗಟೆ, (ಇದನ್ನು ಗುಡ್‌ಮಾರ್ ಮಧುನಾಶಿ ಎನ್ನುತ್ತಾರೆ ಮತ್ತು ಅಶ್ವಗಂಧಿಯನ್ನು ಸಮಭಾಗ ಚೂರ್ಣಿಸಿ ದಿನಕ್ಕೆ 2 ವೇಳೆ ಅರ್ಧ ತೊಲೆ ಸೇವಿಸಿ ತಣ್ಣೀರನ್ನು ಕುಡಿಯಬೇಕು.
ಅತ್ತಿ ಚಕ್ಕೆಯನ್ನು ನೆರಳಲ್ಲಿ ಒಣಗಿಸಿ ಅದರ ಚೂರ್ಣ ಕಷಾಯ ಮಾಡಿ ದಿನಕ್ಕೆ ಎರಡು ಸಾರಿ ಸೇವಿಸಲು ಮಧುಮೇಹ ನಿವಾರಣೆಯಾಗುವುದು.
ಬಿಲ್ವಪತ್ರೆ ರಸ 3 ಚಮಚ, ಅಮೃತಬಳ್ಳಿ 1 ತೊಲ, ನೇರಳೆ ಬೀಜದ ಚೂರ್ಣ 1 ತೊಲ ಮಿಶ್ರ ಮಾಡಿ ಸೇವಿಸಬೇಕು.
ಅಮೃತ ಕಲ್ಪವನ್ನು ನಿತ್ಯ ಸೇವಿಸಿ, ಮಧುಮೇಹ ನಿವಾರಣೆಯಾಗುತ್ತದೆ.
Post a Comment
0Comments
3/related/default