ಗಣಪತಿಯನ್ನು ಚಿಂತಾಮಣಿ ಎಂದು ಏಕೆ ಕರೆಯುತ್ತಾರೆ...!?

SANTOSH KULKARNI
By -
0

     


    ಮಿತ್ರರೇ, ಗಣಪತಿಯು ವಿದ್ಯಾದೇವತೆಯಾಗಿದ್ದಾರೆ. ಅವರು ನಮಗೆ ಒಳ್ಳೆಯ ಬುದ್ಧಿಯನ್ನು ನೀಡುತ್ತಾರೆ. ಎಲ್ಲಾ ವಿಘ್ನಗಳನ್ನು ದೂರ ಮಾಡುವುದರಿಂದ ಅವರಿಗೆ ವಿಘ್ನಹರ್ತನೆಂದು ಕರೆಯುತ್ತೇವೆ. ಗಣಪತಿಗೆ ಚಿಂತಾಮಣಿ ಎಂದೂ ಕರೆಯುತ್ತಾರೆ, ಅದು ಯಾಕೆಂದು ನಾವಿಂದು ತಿಳಿಯೋಣ.

    ಕಣ ಎಂಬ ಒಬ್ಬ ಕೆಟ್ಟ ರಾಜಕುಮಾರನಿದ್ದ. ಅವನು ದೀನ ದುರ್ಬಲರಿಗೆ ತೊಂದರೆ ನೀಡುತ್ತಿದ್ದ. ಋಷಿಮುನಿಗಳ ತಪಸ್ಸಿನಲ್ಲಿ ಅಡಚಣೆಯನ್ನು ನಿರ್ಮಾಣ ಮಾಡುತ್ತಿದ್ದ. ಒಂದು ಸಲ ಅವನು ತನ್ನ ಜೊತಗಾರರೊಂದಿಗೆ ಕಾಡಿನಲ್ಲಿ ಶಿಕಾರಿಗಾಗಿ ಹೋದನು. ಆ ಕಾಡಿನಲ್ಲಿ ಕಪಿಲ ಮುನಿಗಳ ಆಶ್ರಮವಿತ್ತು. ಕಪಿಲ ಮುನಿಗಳು ಕಣನನ್ನು ಸ್ವಾಗತಿಸಿದರು ಮತ್ತು ಅವರೆಲ್ಲರಿಗೆ ಊಟ ಮಾಡಲು ಆಮಂತ್ರಿಸಿದರು. ಕಪಿಲ ಮುನಿಗಳ ಕುಟೀರವನ್ನು ನೋಡಿ ಕಣನಿಗೆ ನಗು ಬಂತು. ಅವನು ಹೇಳಿದನು, “ನಿನ್ನಂತ ಬಡ ಸಾಧು ಇಷ್ಟು ಜನರಿಗೆ ಊಟ ಹಗೆ ಕೊಡಬಹುದು?” ಆಗ ಕಪಿಲ ಮುನಿಗಳು ತಮ್ಮ ಕೊರಳಿಗೆ ಹಾಕಿದ್ದ ಚಿಂತಾಮಣಿಯನ್ನು ತೆಗೆದು ಚಾಪೆಯ ಮೇಲೆ ಇಟ್ಟರು. ಆ ಮಣಿಗೆ ನಮಸ್ಕಾರವನ್ನು ಮಾಡಿ, ಪ್ರಾರ್ಥನೆಯನ್ನು ಮಾಡಿದರು. ಅದರಿಂದಾಗಿ ಒಂದು ಸುಂದರವಾದ ಭೋಜನಗೃಹ ನಿರ್ಮಾಣವಾಯಿತು. ಎಲ್ಲಾರು ಕೂರಲು ಚಂದನದ ಮಣೆ, ಮೇಜು ನಿರ್ಮಾಣವಾಗಿತ್ತು. ಬೆಳ್ಳಿಯ ತಟ್ಟೆಗಳಲ್ಲಿ ಅನೇಕ ವಿಧದ ಪಕ್ವಾನ್ನಗಳನ್ನು ಬಡಿಸಲಾಗಿತ್ತು. ಕಣ ಮತ್ತು ಅವನ ಜೊತೆಗಾರರು ಆ ರೀತಿಯ ಸ್ವರ್ಗದ ಭೋಜನವನ್ನು ತಿಂದು ಸಂತುಷ್ಟವಾದರು.

    ಕಣನಿಗೆ ಆ ಮಣಿಯನ್ನು ಪಡೆಯಬೇಕೆಂದು ಆಸೆಯಾಯಿತು. ಅವನು ತನ್ನ ಇಚ್ಛೆಯನ್ನು ಕಪಿಲ ಮುನಿಗಳಿಗೆ ಹೇಳಿದನು. ಆದರೆ ಕಣನ ಸ್ವಭಾವ ತಿಳಿದಿದ್ದ ಕಪಿಲ ಮುನಿಗಳು ಅವನಿಗೆ ಮಣಿಯನ್ನು ನೀಡಲು ನಿರಾಕರಿಸಿದರು. ಅದಕ್ಕೆ ಕಣನು ಆ ಮಣಿಯನ್ನು ಮೋಸದಿಂದ ಕದ್ದನು.

    ನಂತರ ಕಪಿಲಮುನಿಗಳು ಗಣಪತಿಯ ಆರಾಧನೆಯನ್ನು ಮಾಡಿದರು. ಕಪಿಲ ಮುನಿಗಳ ಭಕ್ತಿಗೆ ಗಣಪತಿಯು ಪ್ರಸನ್ನರಾಗಿ, ಕಣನಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದರು. ಕಪಿಲ ಮುನಿಗಳು ತನ್ನ ಮೇಲೆ ಯುದ್ಧಕ್ಕೆ ಬರಬಹುದೆಂದು ತಿಳಿದು ಕಣನು ಯುದ್ಧ ಮಾಡಲು ತಯಾರಾಗಿದ್ದನು. ಗಣಪತಿಯ ಕೃಪೆಯಿಂದ ಅರಣ್ಯದಲ್ಲಿ ತುಂಬಾ ದೊಡ್ಡ ಸೈನ್ಯವು ನಿರ್ಮಾಣವಾಯಿತು. ಈ ಸೈನ್ಯವು ಕಣನ ಸೈನ್ಯದ ಎಲ್ಲಾ ಸೈನಿಕರನ್ನು ಸೊಲಿಸಿದರು. ಆಗ ಗಣಪತಿಯು ಸ್ವತಃ ರಣರಣಗಕ್ಕೆ ಆಗಮಿಸಿದರು. ಆಗ ಕಣನು ಗಣಪತಿಗೆ ತಕ್ಷಣ ಬಾಣಗಳ ಸುರಿಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಆದರೆ ಗಣಪತಿಯು ತನ್ನ ಬಾಣಗಳಿಂದ ಅವುಗಳನ್ನು ಸೋಲಿಸಿದನು. ಆಗ ಗಣಪತಿಯು ತನ್ನ ಪಾಶವನ್ನು ಕಣನತ್ತ ಹಾಕಿದರು. ತಕ್ಷಣ ಕಣನು ಸತ್ತು ಬಿದ್ದನು. ಕಣನ ಅಪ್ಪ ಅಭಿಜಿತ ರಾಜನು ರಣರಂಕ್ಕೆ ಬಂದು ಗಣಪತಿಗೆ ನಮಸ್ಕಾರವನ್ನು ಮಾಡಿದರು. ಕಪಿಲ ಮುನಿಗಳ ಚಿಂತಾಮಣಿಯನ್ನು ಅವರಿಗೆ ಹಿಂತಿರುಗಿಸಿದರು. ನನ್ನ ಮಗನನ್ನು ಕ್ಷಮಿಸಿ ಅವನಿಗೆ ಸದ್ಗತಿಯನ್ನು ನೀಡಿ ಎಂದು ಗಣಪತಿಗೆ ಪ್ರಾರ್ಥನೆಯನ್ನು ಮಾಡಿದರು. ದಯಾಮಯಿಯಾದ ಗಣಪತಿಯು ಅವನ ವಿನಂತಿಯನ್ನು ಮನ್ನಿಸಿದರು. ಗಣಪತಿಯು ಕಪಿಲ ಮುನಿಗಳ ಚಿಂತಾಮಣಿಯನ್ನು ಪುನಃ ಸಿಗುವಂತೆ ಮಾಡಿದ್ದರಿಂದ ಅವರಿಗೆ ಚಿಂತಾಮಣಿ ಎಂದು ಕರೆಯುತ್ತಾರೆ.

    ಗಣಪತಿಯು ವಿದ್ಯಾದೇವತೆ ಎಂದು ತಿಳಿಯಿತಲ್ಲವೇ! ಹಾಗಾಗಿ ಅಬ್ಯಾಸಕ್ಕಾಗಿ ಕೂರುವ ಮುನ್ನ ಗಣಪತಿಗೆ ಪ್ರಾರ್ಥನೆಯನ್ನು ಮಾಡಿ, ’ಗಣೇಶಾಯ ನಮಃ’ ಎಂದು ನಾಮಜಪವನ್ನು ಮಾಡಿದರೆ, ಕಠಿಣ ವಿಷಯಗಳೂ ಸಹ ಸುಲಭ ಅನಿಸಿ ಅಭ್ಯಾಸ ಮಾಡಲು ಆನಂದ ಸಿಗುತ್ತದೆ. ಹಾಗಿದ್ದರೆ ಇಂದಿನಿಂದ ನಾಮಜಪ ಮಾಡಿಯೇ ಅಭ್ಯಾಸ ಪ್ರಾರಂಬಿಸುತ್ತೀರಲ್ಲವೇ! 🙏🌼🙏

Post a Comment

0Comments

Please Select Embedded Mode To show the Comment System.*