*ನಮ್ಮ ದೇಹಕ್ಕೆ ಯಾವ್ದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವ್ದು ಶೀತ ಯಾವ್ದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು... ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕೆ ಬ್ರಹ್ಮಾಂಡದಷ್ಟಿದೆ. ಅದರಲ್ಲಿ ನೀವು ಪ್ರಾಯಶಃ ಕೇಳಿಲ್ಲದಿರೋ 42 ವಿಷಯಗಳ್ನ ಹೇಳ್ತೀವಿ ಕೇಳಿ… ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯ ಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*
*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*
*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*
*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*
*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*
*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*
*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*
*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*
*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*
*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*
*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*
*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*
*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*
*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!*
*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*
*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*
DMW
*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*
*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*
*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*
*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*
*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು*
*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*
*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*
*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*
*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*
*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*
*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*
*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*
*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*
*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*
*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*
*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*
*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*
*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*
*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*
*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*
*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*
*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*
*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*DMW
*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ* DMW
*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*
*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*
*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*