Monday, April 15, 2013

ನೆನಪಿನ ಕಂಠದ ಪಿ ಬಿ ಶ್ರೀನಿವಾಸ್


ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವರು ಹಾಡಿದ ಹಾಡುಗಳಿಂದಲೇ ಎಲ್ಲವೂ ಪ್ರಾರಂಭ. ನಿಜಕ್ಕೂ ಸರಸ್ವತಿಯ ಕೃಪೆಯೆಂಬಂತೆ ನಾಲ್ಕೈದು ಭಾಷೆಗಳಲ್ಲಿ ಅದೇ ಭಾಷೆಯವರು ಹಾಡುವದಕ್ಕಿಂತಲೂ ಉತ್ತಮವಾಗಿ ತುಂಬು ಹೃದಯದ ನುಡಿಯಲ್ಲಿ ಹಾಡಿದ ಕೆಲವೇ ಕೆಲವರ ಪಟ್ಟಿಗೆ ಪಿ ಬಿ ಶ್ರೀನಿವಾಸ್ ಸೇರುತ್ತಾರೆ.
ಸ್ಕೂಲಿನಲ್ಲಿದ್ದಾಗ ಆಕಾಶವಾಣಿ, ದೂರದರ್ಶನದಲ್ಲಿ ಇವರ ಹಾಡುಗಳನ್ನು ಕೇಳಿದ್ದ ನನಗೆ ಇವರು ತೆಲುಗು, ತಮಿಳು ಹಾಗು ಇನ್ನುಳಿದ ಭಾಷೆಗಳಲ್ಲೂ ಹಾಡುತ್ತಿದ್ದರು ಎಂಬುದು ತಿಳಿದಿರಲೇ ಇಲ್ಲ. ಕಾಲೇಜಿನಲ್ಲಿದ್ದಾಗ ಒಮ್ಮೆ ಪಿ ಬಿ ಎಸ್ ಧ್ವನಿಯಲ್ಲೇ ಒಂದು ತಮಿಳು ಹಾಡು ಕೇಳಿ - "ಅರೆರೆ, ನಮ್ಮ ಕನ್ನಡದವರು ಇಷ್ಟು ಚೆನ್ನಾಗಿ ತಮಿಳು ಹಾಡನ್ನೂ ಹೇಳಿದ್ದಾರಲ್ಲ" ಎಂದನಿಸಿತ್ತು. ಆ ಲೆಕ್ಕಕ್ಕೆ ಪಿ ಬಿ ಎಸ್ ಈಗಲೂ ನಮಗೆಲ್ಲ ಕನ್ನಡದವರೇ. ಅವರು ಹಾಡಿದ ನನ್ನ ನೆಚ್ಚಿನ ಕೆಲವು ಹಾಡುಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 

Average: 5 (2 votes)
To prevent automated spam submissions leave this field empty.
Yahoo Twitter Facebook Google

No comments:

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...