Saturday, February 8, 2025

ಬಾಯಿ ಹುಣ್ಣು ಬಾರದಂತೆ ಮಾಡಲು ಏನು ಮಾಡಬೇಕು? ಇದಕ್ಕೆ ಮನೆ ಮದ್ದುಗಳೇನು?

 ಬಾಯಿ ಹುಣ್ಣುಗಳಿಗೆ ಮನೆಮದ್ದು :

ಬಾಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಸ್ವಲ್ಪಹೊತ್ತು ಮುಕ್ಕಳಿಸಿ ಉಗುಳಬೇಕು.

ಒಣಕೊಬ್ಬರಿ ತಿನ್ನುವುದರಿಂದ ಬಾಯಿಹುಣ್ಣು ವಾಸಿ ಆಗುವುದು.

Acasia catechu, ಕಾಚು ಗಂಧವು ತೇಯ್ದು ಹುಣ್ಣಿನ ಮೇಲೆ ಹಚ್ಚಿ ಅರ್ಧ ಗಂಟೆಯ ನಂತರ ಬಾಯಲ್ಲಿ ನೀರು ಹಾಕಿ ಮುಕ್ಕಳಿಸಿ ಉಗುಳಬಹುದು.ತಾಂಬೂಲದಲ್ಲಿ ಕಚು ಸೇರಿಸಿ ಸೇವಿಸಿದರೆ ದಂತಗಳು ದೃಢವಾಗಿ, ನಾಲಿಗೆ ಹುಣ್ಣು, ಬಾಯಿಹುಣ್ಣು, ದಂತಗಳಿಂದ ರಕ್ತಸೋರುವುದು ನಿವಾರಿಸುವುದು.

ತುಳಸಿ ಎಲೆಗಳನ್ನು ಅಗಿಯುವುದರಿಂದ ಬಾಯಿ / ನಾಲಿಗೆ ಹುಣ್ಣು ವಾಸಿಯಾಗುವುದು

ನನ್ನಾರಿ, ಅನಂತಮೂಲ್.

ಈ ಬೇರನ್ನು ಚೆನ್ನಾಗಿ ತೊಳೆದು ಬೆಣ್ಣೆಯಲ್ಲಿ ಹುರಿದು ಪುಡಿ ತಯಾರಿಸಿ ಒಂದು ಗ್ರಾಂ ಅಷ್ಟು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಮಕ್ಕಳಿಗೆ ಬರುವ ನಾಲುಗೆಹುಣ್ಣು, ಬಾಯಿಹುಣ್ಣು ನಿವಾರಿಸುವುದು.

ಹೆಚ್ಚಾಗಿ ಮೊಸರು, ಮಜ್ಜಿಗೆ ಸೇವಿಸಿದರೆ ನಾಲಿಗೆ,ಬಾಯಿಹುಣ್ಣು ಪೀಡಿಸಲಾರವು.