Monday, March 17, 2025

ಭಗವತ್ ಶ್ರೀ ಶಂಕರರು ಎಲ್ಲಾ ದೇವರಗಳನ್ನ ಸ್ತುತಿಸಿದರು. ಸ್ತೋತ್ರಗಳನ್ನ ಬರೆದು ಈ ಲೋಕಕ್ಕೆ ಅರ್ಪಣೆ ಮಾಡಿದರು.


ಅದು ವೈಷ್ಣವರ ದೇವರೇ ಇರಲಿ, ಶೈವರ ದೇವರೇ ಇರಲಿ ಶಕ್ತರ ದೇವತೆಯೇ ಇರಲಿ, ಸ್ಕಂದ ಆರಾಧಕರ ಆರಾಧ್ಯ ದೇವನೇ ಇರಲಿ ಒಂದೂ ದೇವ ದೇವತೆಯನ್ನ ಬಿಡದೆ ಯಾವ ಭಕ್ತರ ಮನಸ್ಸಿಗೆ ನೋಯಿಸದೆ ಆಯಾಯ ದೇವತೆಗಳನ್ನ ಉದ್ದೇಶಿಸಿ ನಿನ್ನ ಅಣತೆಗಾಗಿ ಎಲ್ಲಾ ದೇವತೆಗಳು ಕಾಯುತ್ತಿದ್ದಾರೆ ಅನ್ನೋ ಅರ್ಥ ದಲ್ಲಿ ಸ್ತೋತ್ರಗಳನ್ನ ಬರೆದರು ಹಾಗು ಸ್ತುತಿಸಿದರು.

ನಾನು ಒಬ್ಬ ದೇವನ ಬಗ್ಗೆ ಸ್ತುತಿಸಿದರೆ ಬೇರೆ ದೇವ ದೇವತೆಯ ಭಕ್ತರು ಬೇಸರಿಸಿ ಕೊಂಡಾರು, ಮತ್ತೆ ಅವರೆಲ್ಲಾ ಒಂದುಗೂಡುವುದಿಲ್ಲ ಅಂದುಕೊಂಡು ಸಮತೋಲನದಿಂದ ವರ್ತಿಸಿದರು.

ಅದಕ್ಕಾಗಿಯೇ ಇಂದಿಗೂ ಕೂಡ ಬಂಗಾಳದ ಶಕ್ತ ಮತದವರಿಗೆ, ಉತ್ತರದ ಕಾಶಿ ಶೈವರಿಗೆ, ತಮಿಳುನಾಡಿನ ಸ್ಕಂದ ಮತದವರಿಗೆ ಮತ್ತು ಅದ್ವೈತಿಗಳಾದ ಸ್ಮಾರ್ತ ಮತದವರಿಗೆ ಶಂಕರರ ಶ್ಲೋಕಗಳು ಇಂದಿಗೂ ಕೂಡ ವಿರಾಜಮಾನವಾಗಿದೆ ಮತ್ತೆ ವಿಜೃಂಭಿಸುತ್ತಿದೆ.

ವಿಷ್ಣುವಿನ ಮೇಲೆ ಅನೇಕ ಶ್ಲೋಕ ಸ್ತೋತ್ರಗಳನ್ನ ಬರೆದಿದ್ದಾರೆ. ಉದಾಹರಣೆಗೆ ಅಚ್ಚುತಮ್ ಕೇಶವಂ, ಭಜಗೋವಿಂದಂ, ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಇನ್ನೂ ಅನೇಕ ಕೃತಿಗಳನ್ನ ರಚಿಸಿದ್ದಾರೆ.

ಅವರಿಗೆ ಗೊತ್ತಿತ್ತು. ಮುಂದೊಂದು ದೇವರ ಹೆಸರಲ್ಲಿ ನಾವೆಲ್ಲಾ ಹೇಗೆಲ್ಲಾ ಕಿತ್ತಾಡಬಹುದೆಂದು ,

ಅದಕ್ಕಾಗಿ ನಿಮ್ಮ ನಿಮ್ಮ ಆರಾಧ್ಯ ದೇವ ದೇವತೆಗೆ ಸ್ತೋತ್ರಗಳನ್ನ ಬರೆದಿದ್ದೇನೆ, ಅದನ್ನ ಸ್ತುತಿಸಿದರೆ ಸಾಕು. ನಿಮಗೆಲ್ಲಾ ಸದ್ಗತಿಯೇ ಪ್ರಾಪ್ತಿ ಆಗುತ್ತೆ ಎಂದು ಹೇಳುವಲ್ಲಿ ಒಂದು ಮಾತನ್ನ ಕೂಡ ಕೆಳಕಂಡಂತೆ ಅತೀ ಸ್ಪಷ್ಟವಾಗಿ ಹೇಳಿದರು..

ಶಿವಾಯ ವಿಷ್ಣು ರೂಪಾಯ

ಶಿವ ರೂಪಾಯ ವಿಷ್ಣುವೇ

ಶಿವಸ್ಯ ಹೃದಯಂ ವಿಷ್ಣು

ವಿಷ್ಣೊಶ್ಚ ಹೃದಯಗಮ್ ಶಿವಾಯ||

ನಮ್ಮ ಶಂಕರರು ಎಷ್ಟು ಪ್ರಸಿದ್ಧರಾಗಿದ್ದರೋ ಅಷ್ಟೇ ವಿನಯ ಉಳ್ಳವರೂ ಆಗಿದ್ದರು ಮತ್ತು ಮೊಟ್ಟ ಮೊದಲಬಾರಿಗೆ ಅಸ್ಪೃಶ್ಯತೆಯನ್ನ ತೊಲಗಿಸಿದ್ದೇ ನಮ್ಮ ಹೆಮ್ಮೆಯ ಶಂಕರರು. ಅದು ಕಾಶಿ ವಿಶ್ವನಾಥನ ಬಳಿಯಲ್ಲಿ ಆದ ಒಂದು ಪ್ರಸಂಗ.. ಆಗ ನಮ್ಮ ಭಗವತರು ಕಾಶಿ ವಿಶ್ವನಾಥನ ದರ್ಶನಕ್ಕೆ ಬೆಟ್ಟಿಕೊಟ್ಟಾಗ ಹೊರಗಡೆ ಕ್ಷೇತ್ರಪಾಲಕನಾಗಿ ಇದ್ದ ಕಾಲಭೈರವನನ್ನ ನಮಸ್ಕರಿಸದೇ ಹಾಗೆ ಹೋಗುತ್ತಾರೆ. ಆಗ ಶಿವ ಚಾಂಡಾಲ ರೂಪದಲ್ಲಿ ಶಂಕರರಿಗೆ ದಾರಿಗೆ ಅಡ್ಡವಾಗಿ ಬರುತ್ತಾನೆ. ಆಗ ಶಿಷ್ಯಂದಿರು ಆ ಚಂಡಾಲನನ್ನ ಬದಿಗೆ ಸರಿ ಎಂದು ಎಷ್ಟು ಕೇಳಿಕೊಂಡರೂ ಅವನು ಸರಿಯಲಿಲ್ಲ. ಆಗ ಆ ಚಾಂಡಾಲ ಶಂಕರರನ್ನ ಉದ್ದೇಶಿಸಿ ಕೇಳುತ್ತಾನೆ. ಬದಿಗೆ ಸರಿಯೆಂದು ಯಾರಿಗೆ ಹೇಳಿದ್ದು, ಆತ್ಮಕ್ಕೋ ಅಥವ ದೇಹಕ್ಕೋ ?ನೀನು ಆತ್ಮ ಪರಮಾತ್ಮನ ಬಗ್ಗೆ ಅದ್ವೈತವನ್ನೂ ಪ್ರಪಂಚಕ್ಕೆ ಸಾರುವವನು ಯಾವದಕ್ಕೆ ಪಕ್ಕಕ್ಕೆ ಸರಿ ಎಂದು ಕೇಳಿದೆ?

ಇದಕ್ಕೆ ತಬ್ಬಿಬ್ಬಾದ ಶಂಕರರು ತನ್ನ ತಪ್ಪಿನ ಅರಿವಾಗಿ ಕೂಡಲೇ ಚಾಂಡಾಲನ ಪಾದಕ್ಕೆ ನಮಸ್ಕರಿಸಿದರು.. ಆ ಘಳಿಗೆಯಿಂದಲೇ ಅಸ್ಪೃಶರನ್ನ ಮೊದಲ ಬಾರಿ ಗೌರವಿಸಿದ ಪ್ರಥಮ ವ್ಯಕ್ತಿ ಶ್ರೀ ಶಂಕರರೇ ಆಗಿದ್ದಾರೆ. ಕೂಡಲೇ ಕಾಲಭೈರಾವಸ್ಟಕ ರಚಿಸಿ ಈ ಲೋಕಾರ್ಪಣೆ ಮಾಡಿದರು. ..

ಆ ದಿವ್ಯ ಚೇತನ ಮತ್ತೆ ಹುಟ್ಟಿಬರಬೇಕು ಈ ಹಿಂದುಗಳನ್ನ ಮತ್ತೆ ಒಗ್ಗಟ್ಟಾಗಿಸಲು..

ಜೈ ಶಂಕರ, ಓಂ ನಮಃ ಶಿವಾಯ..

ಓಂ ನಮೋ ಭಗವತೇ ವಾಸುದೇವಾಯ.