ಕೋಹಿನೂರ್‌ ವಜ್ರ

SANTOSH KULKARNI
By -
0


    ಕೋಹಿನೂರ್‌ ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ವಜ್ರವಾಗಿದ್ದ 105 ಕ್ಯಾರಟ್ (6 ಗ್ರಾಂ) ವಜ್ರವಾಗಿದೆ. ಇದಕ್ಕೆ ಪರ್ಷಿ ಯನ್‌ನಲ್ಲಿ “ಬೆಟ್ಟದಷ್ಟು ಬೆಳಕು”[Mountain Of Light] ಎಂಬರ್ಥವಿದೆ. ಕೋಹಿನೂರ್‌ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಮೊದಲು ಕಂಡು ಬಂದಿತು. ಈ ವಜ್ರಕ್ಕಾಗಿ ಇತಿಹಾಸದಲ್ಲಿ ಅನೇಕ ಹಿಂದು, ಮೊಘಲ್, ಪರ್ಷಿಯನ್, ಅಫ್ಘನ್, ಸಿಖ್ ಮತ್ತು ಬ್ರಿಟಿಷ್ ಆಡಳಿತಗಾರರು ತೀವ್ರವಾಗಿ ಕಾದಾಡಿದ್ದಾರೆ. ಅಲ್ಲದೇ ಯುದ್ಧದ ಸಂದರ್ಭದಲ್ಲಿ ಲೂಟಿ ಮಾಡಿದ್ದಾರೆ. ಇದು ಅಂತಿಮವಾಗಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಸೂರೆಮಾಡಲ್ಪಟ್ಟಿತು. ಅದಲ್ಲದೇ ರಾಣಿ ವಿಕ್ಟೋರಿಯಾಳು 1877ರಲ್ಲಿ ಭಾರತದ ಸರ್ವಾಧಿಕಾರಿಣಿ ಎಂಬುದಾಗಿ ಘೋಷಿಸಲ್ಪಟ್ಟಾಗ ಬ್ರಿಟಿಷ್ ರಾಜಪ್ರಭುತ್ವದ ಆಭರಣಗಳ ಭಾಗವಾಯಿತು.

☘ಕೊಹಿನೂರ್‍ ವಜ್ರದ ಮೂಲ ಈಗಿನ ಆಂದ್ರಪ್ರದೇಶ. ಅದು ಸುಮಾರು 5 ಸಾವಿರ ವರ್ಷಗಳ ಹಿಂದಿಮದ್ದೆಂಬ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಜಾಂಬವಂತನಿಂದ ಈ ವಜ್ರವನ್ನು ಪಡೆದ ಎಂದು ಅನೇಕ ಕಥೆಗಳಲ್ಲಿ ಉಲ್ಲೇಖವಿದೆ.

☘ಇತಿಹಾಸಕಾರರ ಪ್ರಕಾರ ಕೊಹಿನೂರ್‍ ವಜ್ರ ಸುಮಾರು 3000 ವರ್ಷಗಳ ಹಿಂದಿನದ್ದು. ಅಂದರೆ ಮಹಾಭಾರತದ ಕಾಲಘಟ್ಟದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

☘ಈ ವಜ್ರ ಪ್ರಸಿದ್ದಿಗೆ ಬಂದದ್ದು 14ನೇ ಶತಮಾನದಲ್ಲಿ,ಮೂಲದಲ್ಲಿ ಕೊಹಿನೂರ್‍ ವಜ್ರ ಕಾಕತೀಯ ಅರಸರ ಸೊತ್ತಾಗಿತ್ತು. 1320ರಲ್ಲಿ ಕಾಕತೀಯ ಅರಸರನ್ನು ಸೋಲಿಸಿದ ದೆಹಲಿ ಸುಲ್ತಾನರು ವಜ್ರವನ್ನು ದೆಹಲಿಗೆ ಕೊಂಡ್ಯೋಯ್ದರು. ಕಾಲ ಕ್ರಮೇಣ ಅದು ಮೊಘಲ್ ಚಕ್ರವರ್ತಿ ಬಾಬರ್‍ ನ ಕೈ ಸೇರಿತು ಎಂದು ಬಾಬರ್‍ ನಾಮಾ ದಲ್ಲಿ ಉಲ್ಲೇಖವಿದೆ.

☘ಕೊಹಿನೂರ್ ವಜ್ರದ ನಿಖರ ಮೌಲ್ಯ ಗೊತ್ತಿಲ್ಲವಾದರೂ, ದಿನವೊಂದರಲ್ಲಿ ವಿಶ್ವದ ಒಟ್ಟಾರೆ ಉತ್ಪಾದನಾ ವೆಚ್ಚಗಳ ಸುಮಾರು ಅರ್ಧದಷ್ಟು ಭಾಗಕ್ಕೆ ಈ ವಜ್ರದ ಬೆಲೆ ಸಮ ಎಂದು 1500ರ ಅವಧಿಯಲ್ಲಿ ಬಾಬರ್ ಇದರ ಮೌಲ್ಯ ನಿರ್ಣಯಿಸಿದ್ದನಂತೆ

☘ಕೊಹಿನೂರ್ ವಜ್ರದ ಬೆಲೆನಿಗದಿಯ ಕುರಿತು ಮತ್ತೊಂದು ದಂತಕಥೆಯೂ ಚಾಲ್ತಿಯಲ್ಲಿದೆ. 
—ಈ ವಜ್ರ ಪರ್ಷಿಯಾದ ನಾದಿರ್ ಷಾ ಬಳಿಯಿದ್ದಾಗ ಅವನ ಹೆಂಡತಿಯರಲ್ಲೊಬ್ಬಳು ‘ದೃಢಕಾಯನಾದ ವ್ಯಕ್ತಿಯೊಬ್ಬ ಐದು ಕಲ್ಲುಗಳನ್ನು ತೆಗೆದು ಕೊಂಡು ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ದಿಕ್ಕುಗಳಿಗೆ ಮತ್ತು ಕೊನೆಯದನ್ನು ತಲೆಯ ಮೇಲ್ಭಾಗದಲ್ಲಿ ನೇರವಾಗಿ ಎತ್ತರಕ್ಕೆ ಎಸೆದರೆ ಅವುಗಳ ನಡುವಿನ ಸ್ಥಳಾವಕಾಶದಲ್ಲಿ ಬಂಗಾರ ಮತ್ತು ರತ್ನಗಳನ್ನು ತುಂಬಿಸಿದರೆ ಎಷ್ಟು ಮೌಲ್ಯ ಬರುತ್ತದೆಯೋ ಅದು ಕೊಹಿನೂರ್ ವಜ್ರದ ನಿಜವಾದ ಮೌಲ್ಯ’ ಎಂದಳಂತೆ!.

☘ನಂತರದಲ್ಲಿ ವಜ್ರ ಮೊಘಲ್ ದೊರೆ ಔರಂಗಜೇಬನ ಸುಪರ್ದಿಗೆ ಸೇರುತ್ತದೆ. ಆತ ನಂತರ ಕೊಹಿನೂ‍ರನ್ನು ಲಾಹೋರ್ ದೊರೆಯಾದ ರಣಜಿತ್ ಸಿಂಗ್ ನಿಗೆ ಕಾಣಿಕೆಯಾಗಿ ನೀಡುತ್ತಾನೆ.

☘ಕೊಹಿನರ್‍ ಪರಂಪರೆಯ ಗೌರವಾರ್ಥವಾಗಿ ತನ್ನ ಕಾಲಾನಂತರದಲ್ಲಿ ವಜ್ರವನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ಉಯಿಲು ಬರೆದಿಡುತ್ತಾನೆ ಆದರೆ 1839ರಲ್ಲಿ ನಡೆದ ಎರಡನೇ ಆಂಗ್ಲೋ ಸಿಖ್ ಯುದ್ದದ ನಂತರ ಲಾರ್ಡ್ ಡಾಲ್ ಹೌಸಿಯು ಮೋಸದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಪಡೆದುಕೊಳ್ಳುತ್ತಾನೆ. ಈ ಒಪ್ಪಂದದ ಪ್ರಕಾರ ಕೊಹಿನೂರ್‍ ವಜ್ರವನ್ನು ಬ್ರಿಟನ್ ಅರಸೊತ್ತಿಗೆಗೆ ಕಾಣಿಕೆಯಾಗಿ ನೀಡುವುದಾಗಿ ಲಾಹೋರ್‍ ಒಪ್ಪಂದದ 3ನೇಯ ವಿಧಿಯಲ್ಲಿ ಮೋಸದಿಂದ ಸೇರಿಸಲಾಗುತ್ತದೆ ಈಗೆ ವಜ್ರ ಬ್ರಿಟೀಷರ ಪಾಲಾಯಿತು.

Post a Comment

0Comments

Please Select Embedded Mode To show the Comment System.*