ಬ್ರಹ್ಮ ಸಮಾಜ
ಸ್ಥಾಪಕ:-ರಾಜಾ ರಾಮ್ ಮೋಹನ್ ರಾಯ್
ಸ್ಥಾಪನೆಯಾದ ವರ್ಷ:-1828
1814 ರಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು
1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು ನಂತರ 1828 ರಲ್ಲಿ ಬ್ರಹ್ಮ ಸಭಾ ಸ್ಥಾಪಿಸಿದರು
1829ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣಗೊಂಡಿತು
ಸತಿ ಪದ್ದತಿ.ಜಾತಿ ಪದ್ದತಿ.ಮೂರ್ತಿ ಪೂಜೆ.ಬಹುಪತ್ನಿತ್ವ.ಬಾಲ್ಯ ವಿವಾಹ ಹಾಗೂ ಎಲ್ಲ ತರಹದ ಮೂಢನಂಬಿಕೆಗಳನ್ನು ಬ್ರಹ್ಮ ಸಮಾಜ ವಿರೋಧಿಸಿತು
ಸತಿ ಪದ್ದತಿಯನ್ನು ನಿರ್ಮೂಲಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಕೋರಿದರು ಸತಿ ಪದ್ದತಿಯ ವಿರುದ್ದದ ರಾಜಾ ರಾಮ್ ಮೋಹನ್ ರಾಯರ ಹೋರಾಟದ ಫಲವಾಗಿ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ದತಿಯು ಕಾನೂನು ಬಾಹಿರ ಎಂದು ಘೋಷಿಸಿದನು
ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು
ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು
ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು
ವೇದಾಂತ ಕಾಲೇಜನ್ನು ಸ್ಥಾಪಿಸಿದರು
ಪ್ರಾರ್ಥನಾ ಸಮಾಜ
ಸ್ಥಾಪಕ:- ಆತ್ಮರಾಮ್ ಪಾಂಡುರಂಗ
ಸ್ಥಾಪನೆಯಾದ ವರ್ಷ:-1867
ಇವರು ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು
ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು
ವಿಧವೆಯರ ಉದ್ಧಾರಕ್ಕಾಗಿ ಶಾಲೆಗಳನ್ನು ತೆರೆದರು
ಸತ್ಯಶೋಧಕ ಸಮಾಜ
ಸ್ಥಾಪಕ:-ಮಹಾತ್ಮ ಜ್ಯೋತಿಬಾ ಪುಲೆ
ಸ್ಥಾಪನೆಯಾದ ವರ್ಷ:-1873
ಮಹಾರಾಷ್ರದಲ್ಲಿ ಆರಂಭವಾದ ಬ್ರಾಹ್ಮನೇತರ ಚಳುವಳಿ
ಅಸ್ಪ್ರಷ್ಯ.ಅನಾಥರಿಗಾಗಿ.ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು
ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದರು
ಗುಲಾಮಗಿರಿ ಎಂಬ ಕ್ರತಿ ರಚಿಸಿದರು
ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಪ್ರಾರಂಬಿಸಿದರು
1863 ರಲ್ಲಿ ಬಾಲ ವಿಧವೆಯರ ಉದ್ಧಾರಕ್ಕಾಗಿ ಪುನರ್ ವಸತಿ ಕೇಂದ್ರ ತೆರೆದರು
ಪುಲೆಯವರು ಅಂಬೇಡ್ಕರ್ ಅವರ ತಾತ್ವಿಕ ಗುರುವಾಗಿದ್ದರು