ಜೀರಿಗೆಯಿಂದ ಆಗುವ ಉಪಯೋಗ

SANTOSH KULKARNI
By -
1 minute read
0
   

ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ.

ರಕ್ತ ಶುದ್ಧಿ ಮಾಡುತ್ತದೆ‌ ಕುಡಿಯುವ ನೀರಿನ ಕೊಳಕ್ಕೆ ಒಂದೆರಡು ಚಮಚ ಜೀರಿಗೆ ಮುಂಜಾನೆ ಸೇರಿಸಿರಿ ಇದರಿಂದ ಪರಿಮಳಯುಕ್ತ ಜೀರಿಗೆ ಮಿಶ್ರಿತ ನೀರು ಮನೆ ಮಂದಿಗೆಲ್ಲಾ ದೊರೆಯುತ್ತದೆ. ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

*ಜೀರಿಗೆ ಕಷಾಯ:*

ಸ್ವಲ್ಪ ಜೀರಿಗೆ ಹದವಾಗಿ ಬಿಸಿ ಮಾಡಿ, ಮಿಕ್ಸಿಯಲ್ಲಿ ನುಣುಪಾಗಿ ಹುಡಿ ಮಾಡಿ, ಕಾಫಿ – ಟೀ ಬದಲಾಗಿ, ಬಿಸಿ ನೀರಿನಲ್ಲಿ ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಗೂ ಹಾಲು ಸೇರಿಸಿ ಮುಂಜಾನೆ ತಿಂಡಿ ತಿನ್ನುವಾಗ ಹಾಗೂ ಸಾಯಂಕಾಲ ಕುಡಿಯಿರಿ. ಇದರಿಂದ ಬಾಯಿರುಚಿ ಹಾಗೂ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.

*ಕೆಮ್ಮು ತಲೆ ನೋವು ಜ್ವರಕ್ಕೆ*

ನಾಲ್ಕು ಗ್ಲಾಸ್‌ ನೀರಿಗೆ 3–4 ಚಮಚ ಜೀರಿಗೆ ಪುಡಿ, 6–8 ಮೆಣಸಿನಕಾಳು ಪುಡಿ, ಒಣ ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ, ತಣಿಸಿ, ದಿನಕ್ಕೆ 3–4 ಬಾರಿ ಕುಡಿದರೆ ಕೆಮ್ಮು, ತಲೆನೋವು, ಜ್ವರ ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.

ಒಂದು ಚಿಟಕಿ ಜೀರಿಗೆ ಬಾಯಿಯಲ್ಲಿ ಹಾಕಿ ಅಗಿಯುತ್ತಿದ್ದರೆ ಇದರಿಂದ ಬರುವ ರಸ, ಬಾಯಿ ಜೊಲ್ಲಿನಲ್ಲಿ ಸೇರಿ ದೇಹದ ಅಂಗಾಂಗ ಪ್ರವೇಶಿಸುತ್ತದೆ. ಈ ಪ್ರಕ್ರಿಯೆಯಿಂದ ಲವಲವಿಕೆ ಉಂಟಾಗುತ್ತದೆ. ಜೊತೆಗೆ ಕಾಯಿಲೆಗೆ ನೋ ಎಂಟ್ರಿ ಸಿಗ್ನಲ್‌ ತೋರಿಸುತ್ತದೆ. ಬಾಯಿ ವಾಸನೆ ಮಾಯವಾಗುತ್ತದೆ.

*ಜೀರಿಗೆ ಬೆಲ್ಲದ ಉಂಡೆ:*
ಜೀರಿಗೆ ಪುಡಿ ಹಾಗೂ ಅದಕ್ಕೆ ಸಮಾನ ತೂಕದ ಬೆಲ್ಲ ಸೇರಿಸಿ, ಬಾಣಲೆಯಲ್ಲಿ ಹದವಾಗಿ ಕುದಿಸಿ,ತಣ್ಣಗಾದ ನಂತರ ಆ ಮಿಶ್ರಣದಿಂದ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿರಿ ಬಾಯಾರಿಕೆ ಆದಾಗ ಒಂದು ಉಂಡೆ ಸೇವಿಸಿ ನೀರು ಕುಡಿಯಿರಿ. ಇದರಿಂದ ದೇಹ ತಂಪಾಗಿರುತ್ತದೆ ಮಕ್ಕಳು ಈ ಉಂಡೆ ತುಂಬಾ ಇಷ್ಟ ಪಡುತ್ತಾರೆ. ಓದುವ ಮಕ್ಕಳ ಜ್ಞಾಪಕ ಶಕ್ತಿ ಕೂಡಾ ವೃದ್ಧಿಯಾಗುತ್ತದೆ..

Post a Comment

0Comments

Post a Comment (0)
Today | 8, March 2025