ರಿಕ್ಷಾ ಎಂಬ ಪದವು ಜಪಾನೀಸ್ ಭಾಷೆಯಿಂದ ಬಂದಿರುವುದು.
೧೮ ನೇ ಶತಮಾನದಲ್ಲಿ ಜಪಾನ್ ದೇಶದಲ್ಲಿ ರಿಕ್ಷಾಗಳು ಆರಂಭಗೊಂಡವು.
ಜಪಾನೀ ಭಾಷೆಯಲ್ಲಿ ಜಿಂರಿಕಿಷ ಎಂದರೆ ಮನುಷ್ಯರ ಬಲದಿಂದ ಎಳೆಯಲ್ಪಡುವ ಗಾಡಿಯೆಂದು.
ಜಿಂ - ಮನುಷ್ಯ
ರಿಕಿ - ಬಲ/ಶಕ್ತಿ
ಷ - ಗಾಡಿ
ಜಪಾನೀ ಭಾಷೆಯಿಂದ ಪ್ರಪಂಚದಾದ್ಯಂತ ಈ ಪದವು ಹರಡಿತು, ಹಾಗೆಯೇ ಭಾರತಕ್ಕೂ ಬಂದಿತು.
ಇನ್ನು ವೆಹಿಕಲ್ (vehicle) ಎಂಬ ಇಂಗ್ಲಿಷ್ ಪದವು ಲ್ಯಾಟಿನ್ ಭಾಷೆಯ ವೆಹೆರೆ (vehere) ಪದದಿಂದ ಬಂದಿದೆ, ಇದರ ಅರ್ಥ ಸಾಗಿಸುವುದು ಅಥವಾ ಒಯ್ಯುವುದು.
ನಮ್ಮ ಸಂಸ್ಕೃತ ಭಾಷೆಯಲ್ಲಿರುವ ವಾಹನ ಪದವು ಕೂಡ ಇದೆ ಮೂಲದಿಂದ ಬಂದಿದೆ.
ಸಂಸ್ಕೃತದಲ್ಲಿ ಒಯ್ಯುವುದು ಎನ್ನುವುದಕ್ಕೆ ವಹತಿ ಎನ್ನುತ್ತಾರೆ.
ಹಾಗಾಗಿ ವಾಹನ, ವೆಹಿಕಲ್, ವ್ಯಾಗನ್ (wagon) ಎಲ್ಲದರ ಅರ್ಥವೂ ಒಂದೇ.