Monday, June 9, 2025

ಕನ್ಯಾ ಪೂಜೆ: ಕನ್ಯೆಯರನ್ನೇಕೇ ಪೂಜಿಸಬೇಕು..?

 

ಶಕ್ತಿ ದೇವತೆಗಳನ್ನು ಆರಾಧಿಸುವ ಸಮಯದಲ್ಲಿ ಕನ್ಯಾ ಪೂಜೆಯನ್ನು ಕೂಡ ಮಾಡಲಾಗುತ್ತದೆ. ಕೆಲವು ಜನರು ಅಷ್ಟಮಿಯ ದಿನವೂ ಕನ್ಯೆಯನ್ನು ಪೂಜಿಸುತ್ತಾರೆ. ಆದರೆ ಈ ದಿನಾಂಕದಂದು ಉಪವಾಸ ಇರುವುದರಿಂದ, ಹೆಚ್ಚಿನ ಮನೆಗಳಲ್ಲಿ, ನವಮಿ ದಿನದಂದು ಪ್ರಾರ್ಥನೆ ಸಲ್ಲಿಸಿದ ನಂತರ ಕನ್ಯೆಯರನ್ನು ಪೂಜಿಸಲಾಗುತ್ತದೆ. ಕನ್ಯಾ ಪೂಜೆಯಲ್ಲಿ, ಹತ್ತು ವರ್ಷದವರೆಗಿನ ಹುಡುಗಿಯರನ್ನು ದುರ್ಗಾ ದೇವಿಯ ರೂಪವಾಗಿ ಕೂರಿಸಿ ಪೂಜಿಸಲಾಗುತ್ತದೆ. ಈ ಸಂಪ್ರದಾಯವನ್ನು ಕುಮಾರಿ ಪೂಜೆ ಎಂದೂ ಕರೆಯುತ್ತಾರೆ. 

​2 ರಿಂದ 10 ವರ್ಷದ ಕನ್ಯೆಯರನ್ನು ಪೂಜಿಸಿ

​ಸ್ಕಂದ ಪುರಾಣದ ಪ್ರಕಾರ, 2 ವರ್ಷದ ಹುಡುಗಿಯನ್ನು ಕುಮಾರಿ, 3 ವರ್ಷದ ಹುಡುಗಿಯನ್ನು ತ್ರಿಮೂರ್ತಿ, 4 ವರ್ಷದ ಹುಡುಗಿಯನ್ನು ಕಲ್ಯಾಣಿ, 5 ವರ್ಷದ ಹುಡುಗಿಯನ್ನು ರೋಹಿಣಿ, 6 ವರ್ಷದ ಹುಡುಗಿಯನ್ನು ಕಾಳಿಕಾ, 7 ವರ್ಷದ ಹುಡುಗಿಯನ್ನು ಚಂಡಿಕಾ, 8 ವರ್ಷದ ಹುಡುಗಿಯನ್ನು ರೋಹಿಣಿ, 9 ವರ್ಷದ ಹುಡುಗಿಯನ್ನು ಶಾಂಭವಿ ರೂಪವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, 10 ವರ್ಷ ವಯಸ್ಸಿನ ಹುಡುಗಿಯನ್ನು ಸುಭದ್ರಾ ಎಂದು ಕರೆಯಲಾಗುತ್ತದೆ. ಕನ್ಯಾ ಪೂಜೆಯಲ್ಲಿ ಹುಡುಗಿಯರ ಸಂಖ್ಯೆ ಎರಡಕ್ಕಿಂತ ಕಡಿಮೆಯಿರಬಾರದು ಮತ್ತು ಒಂಬತ್ತಕ್ಕಿಂತ ಹೆಚ್ಚಿರಬಾರದು. ಕನ್ಯಾ ಪೂಜೆಯಲ್ಲಿ ಓರ್ವ ಪುಟ್ಟ ಹುಡುಗನನ್ನು ಕೂರಿಸಬೇಕು. ಆತನನ್ನು ಬಟುಕ ಭೈರವ ಅಥವಾ ಲಾಂಗುರ ಎಂದು ಕರೆಯಲಾಗುತ್ತದೆ. ಪ್ರತಿ ಶಕ್ತಿಪೀಠದ ಮೇಲೆ ಭಗವಾನ್ ಶಿವನು ಒಬ್ಬ ಭೈರವನನ್ನು ಇರಿಸಿದಂತೆ, ಕನ್ಯಾ ಪೂಜೆಯಲ್ಲಿ ಒಂದು ಗಂಡು ಮಗುವನ್ನು ಇರಿಸಿಕೊಳ್ಳುವುದು ಅಗತ್ಯ ಎಂದು ನಂಬಲಾಗಿದೆ.

​ಕನ್ಯಾ ಪೂಜೆ ವಿಧಾನ

​ಕನ್ಯಾ ಪೂಜೆಗೆ ಎಲ್ಲಾ ಕನ್ಯೆಯರನ್ನು ಮನೆಗೆ ಆಹ್ವಾನಿಸಿದಾಗ, ಇಡೀ ಕುಟುಂಬವು ಅವರನ್ನು ಸ್ವಾಗತಿಸಬೇಕು. ಅವರಿಗೆ ತಾಯಿಯ ಸ್ಥಾನಮಾನ ನೀಡಿ, ಅವರಿಗೆ ಸೇವೆ ಮತ್ತು ಆತಿಥ್ಯ ನೀಡಬೇಕು. ಅದೇ ಸಮಯದಲ್ಲಿ, ತಾಯಿಯನ್ನು ಶ್ಲಾಘಿಸಬೇಕು. ಇದರ ನಂತರ ಅವರೆಲ್ಲರ ಪಾದ ಮತ್ತು ಕೈಗಳನ್ನು ತೊಳೆಯಿರಿ ಮತ್ತು ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ. ಇದರ ನಂತರ, ಎಲ್ಲಾ ಕನ್ಯೆಯರ ತಲೆಯ ಮೇಲೆ ಕೆಂಪು ಚುನಾರಿಯನ್ನು ಹಾಕಿ ಅಲಂಕರಿಸಿ. ನಂತರ ಭೋಜನ ಮಾಡಿದಿ. ಆಹಾರ ಸೇವಿಸಿದ ನಂತರ ಕುಂಕುಮ, ಅರಿಶಿನ ಮತ್ತು ಅಕ್ಷತೆಯನ್ನು ಹಣೆಗೆ ಹಚ್ಚಿ ಮತ್ತು ಅವರಿಗೆ ದಕ್ಷಿಣೆಯನ್ನು ನೀಡಿ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ. ಅದರ ನಂತರ, ಅವರನ್ನು ಗೌರವದಿಂದ ಕಳುಹಿಸಿ.

​ಕನ್ಯಾ ಪೂಜೆಯ ಮಹತ್ವ

​ ಕನ್ಯೆಯರನ್ನು ಪೂಜಿಸುವ ಮೂಲಕ, ದುರ್ಗಾ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲಾಗುತ್ತದೆ. ನವರಾತ್ರಿ ಸಮಯದಲ್ಲಿ ಕನ್ಯಾ ಪೂಜೆಯಿಲ್ಲದೇ ಪೂರ್ಣ ಫಲವನ್ನು ಪಡೆಯಲಾಗುವುದಿಲ್ಲ ಎಂದು ನಂಬಲಾಗಿದೆ. ಕನ್ಯಾ ಪೂಜೆ ಮಾಡುವುದರಿಂದ ದುರ್ಗಾ ದೇವಿಯು ಸಂತಿಷ್ಟಳಾಗಿ ನಿಮಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾಳೆ. ಕನ್ಯೆಯರನ್ನು ಪೂಜಿಸುವ ಮೂಲಕ, ಪ್ರೀತಿಯ ಭಾವನೆ ಕುಟುಂಬದ ಎಲ್ಲ ಸದಸ್ಯರ ನಡುವೆ ಉಳಿಯುತ್ತದೆ ಮತ್ತು ಎಲ್ಲಾ ಸದಸ್ಯರು ಪ್ರಗತಿ ಹೊಂದುತ್ತಾರೆ. 2 ರಿಂದ 10 ವರ್ಷ ವಯಸ್ಸಿನ ಹುಡುಗಿಯನ್ನು ಪೂಜಿಸುವುದರಿಂದ ಆ ವ್ಯಕ್ತಿಯು ಜೀವನದಲ್ಲಿ ವಿಭಿನ್ನ ಫಲವನ್ನು ಪಡೆದುಕೊಳ್ಳುತ್ತಾನೆ.

ಉದಾಹರಣೆಗೆ, ಕನ್ಯೆಯರನ್ನು ಪೂಜಿಸುವುದರಿಂದ ಆಯಸ್ಸು ಮತ್ತು ಶಕ್ತಿ ಹೆಚ್ಚುತ್ತದೆ. ತ್ರಿಮೂರ್ತಿಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಕೌಟುಂಬಿಕ ಬೆಳವಣಿಗೆಯಾಗುತ್ತದೆ, ಕಲ್ಯಾಣಿಯನ್ನು ಪೂಜಿಸುವುದರಿಂದ ಸಂತೋಷ, ಕಲಿಕೆ ಮತ್ತು ಗೆಲುವು ಸಿಗುತ್ತದೆ. ಕಾಳಿಕಾ ಪೂಜೆಯು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ ಮತ್ತು ಚಂಡಿಕಾ ಪೂಜೆಯು ಶ್ರೀಮಂತಿಕೆ ಮತ್ತು ಸಂಪತ್ತನ್ನು ಸಾಧಿಸಲು ಕಾರಣವಾಗುತ್ತದೆ. ಶಾಂಭವಿಯನ್ನು ಪೂಜಿಸುವುದರಿಂದ ವಿವಾದಗಳು ಕೊನೆಗೊಳ್ಳುತ್ತವೆ ಮತ್ತು ದುರ್ಗಾಳನ್ನು ಪೂಜಿಸುವುದರಿಂದ ಯಶಸ್ಸು ಸಿಗುತ್ತದೆ. ಸುಭದ್ರೆಯನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ ಮತ್ತು ರೋಹಿಣಿಯ ಆರಾಧನೆಯು ಎಲ್ಲಾ ಆಸೆಗಳನ್ನು ಪೂರೈಸುತ್ತದೆ.

​ಕನ್ಯಾ ಪೂಜೆ ಏಕೆ ಮಾಡಬೇಕು?

                                                      ಪ್ರತಿಯೊಬ್ಬ ಮನುಷ್ಯನಲ್ಲೂ ದೇವರು ಇರುತ್ತಾನೆ ಎಂಬುದನ್ನು ನಮ್ಮ ಪವಿತ್ರ ಗ್ರಂಥಗಳು ಪ್ರತಿಪಾದಿಸುತ್ತವೆ. ಆದರೆ, ಆ ಮನುಷ್ಯ ನಿಷ್ಕಲ್ಮಶ, ಮುಗ್ದನಾಗಿರಬೇಕು. ಪುಟ್ಟ ಮಕ್ಕಳು ಶುದ್ಧ ಹಾಗೂ ಮುಗ್ದ ಮನಸ್ಸಿನ ಮನುಷ್ಯನ ರೂಪವಾಗಿರುತ್ತಾರೆ. ಅವರ ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆಗಳಿರುವುದಿಲ್ಲ. ದೇವರನ್ನು ಪೂಜಿಸುವುದಕ್ಕಿಂತ ಮನುಷ್ಯ ತನ್ನೊಳಗೆ ಇರುವ ದೇವರನ್ನು ಪೂಜಿಸಿದರೆ ಪುಣ್ಯ ಫಲವು ಬೇಗನೆ ಪ್ರಾಪ್ತಿಯಾಗುತ್ತದೆ ಎಂದು ಹಿಂದೂ ಧರ್ಮ ಗ್ರಂಥಗಳು ಹೇಳುತ್ತವೆ.

​ಕನ್ಯಾ ಪೂಜೆಯ ಮುಖ್ಯ ಅಂಶಗಳು

                                                          ಕನ್ಯಾ ಪೂಜೆಯಲ್ಲಿ ಪಾಲ್ಗೊಳ್ಳುವ ಬಾಲೆಯರು ಆರೋಗ್ಯಕರವಾಗಿರಬೇಕು. ಅವರು ಎಲ್ಲಾ ಕಾಯಿಲೆಗಳಿಂದ ಮುಕ್ತರಾಗಿರಬೇಕು. ಅಂಗ ವೈಕಲ್ಯ ಇರಬಾರದು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕನ್ಯೆಯರನ್ನು ಆಯ್ಕೆ ಮಾಡಿದರೆ ನಮ್ಮೆಲ್ಲಾ ಆಸೆಗಳು ಬೇಗನೆ ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಕ್ಷತ್ರಿಯ ಸಮುದಾಯದ ಹುಡುಗಿಯರನ್ನು ಆಯ್ಕೆ ಮಾಡಿದರೆ ಸಮಾಜದಲ್ಲಿ ಒಳ್ಳೆಯ ಘನತೆ ಹಾಗೂ ಹೆಸರು ಬರುತ್ತದೆ. ವೈಶ್ಯ ಮನೆತನದ ಹೆಣ್ಣು ಮಕ್ಕಳನ್ನು ಪೂಜಿಸಿದರೆ ಸಂಪತ್ತು, ಆಸ್ತಿ ಸಿಗುತ್ತದೆ. ಇತರೆ ಸಮುದಾಯದ ಹೆಣ್ಣು ಮಕ್ಕಳನ್ನು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ಕನ್ಯಾ ಪೂಜೆ ಹಿಂದಿನ ಕಥೆ

                                         ‌   ಪುರಾಣದ ಕಥೆ ಪ್ರಕಾರ ಬಹಳ ಹಿಂದೆ ಮಹಿಷಾಸುರ ಎನ್ನುವ ರಾಕ್ಷನಿದ್ದನು. ಅವನನ್ನು ಕೊಲ್ಲುವ ಸಲುವಾಗಿ ಮಹಾಕಾಳಿ, ಮಹಾ ಲಕ್ಷ್ಮೀ ಹಾಗೂ ಮಹಾಸರಸ್ವತಿ ಅಂಶದಿಂದ ದುರ್ಗಾ ಸ್ವರೂಪದ ದೇವಿಯ ಅವತಾರವಾಗುತ್ತದೆ. ಸಂಹಾರಕ್ಕೂ ಮುನ್ನ ದೇವಿಯರು ಒಂಭತ್ತು ಅವತಾರ ತಾಳಬೇಕಾಯಿತು. ತಾಯಿ ದುರ್ಗೆಯ ಅವತಾರಗಳು, ಅವಳ ಶಕ್ತಿಯನ್ನು ಪೂಜಿಸುವ ಸಲುವಾಗಿ ಒಂಭತ್ತು ಹೆಣ್ಣುಮಕ್ಕಳಿಗೆ ದೇವಿಯರಂತೆ ಅಲಂಕರಿಸಿ ಅವರನ್ನು ಪೂಜೆ ಮಾಡಲಾಗುತ್ತದೆ.