ಶಿವಲಿಂಗವನ್ನು ಪೂಜಿಸುವ ಸಮಯದಲ್ಲಿ ಬಳಸಬಾರದ ವಸ್ತುಗಳು ಯಾವುದು ಗೊತ್ತೆ..?

SANTOSH KULKARNI
By -
0

 ಶಿವಲಿಂಗವನ್ನು ಪೂಜಿಸುವಾಗ ಬಳಸಬಹುದಾದ ಮತ್ತು ಬಳಸಬಾರದ ವಸ್ತುಗಳ ಕುರಿತು ತಿಳಿದುಕೊಳ್ಳೊಣ

1. ಶ್ರಾವಣ ಸೋಮವಾರ ಉಪಾವಾಸ ಮಾಡಿ ಶಿವನನ್ನು ಆರಾಧಿಸಬೇಕು. ನಂತರ ಪಾರ್ವತಿ ದೇವಿಗೆ ಕುಂಕುಮ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ವಿವಾಹಿತ ಸ್ತ್ರೀಯರಿಗೆ ಒಳ್ಳೆಯದಾಗುತ್ತೆಂದು ನಂಬಿಕೆ ಇದೆ.

2. ಪುರಾಣಗಳು ಹೇಳುವಂತೆ ತುಲಸಿ ಪತಿಯಾದ ಶಂಕಾಸುರ ಎಂಬ ರಾಕ್ಷಸನನ್ನು ಶಿವ ಸಂಹರಿಸಿದ. ಅಂದಿನಿಂದ ತುಲಸಿ ಎಲೆಗಳಿಂದ ಶಿವನನ್ನು ಪೂಜಿಸುವುದು ನಿಲ್ಲಿಸಲಾಯಿತು. ಇಂದಿಗೂ ಮುಂದುವರೆದಿದೆ. ತುಳಸಿ ಎಲೆಗಳಿಂದ ಶಿವನಿಗೆ ಪೂಜೆ ಮಾಡಿದವರಿಗೆ ಕಷ್ಟಗಳು ಎದುರಾಗುತ್ತವೆ. ಆದ್ದರಿಂದ ಶಿವನಿಗೆ ತುಲಸಿ ಎಲೆಗಳಿಂದ ಪೂಜೆ ಮಾಡಬಾರದು.

3. ಸಾವಿರಾರು ವರ್ಷಗಳ ಹಿಂದೆ ಬೃಹತ್ ಶಿವಲಿಂಗ ಸೃಷ್ಠಿಯಾಯಿತು. ಅದಕ್ಕೆ ಆರಂಭ-ಅಂತ್ಯ ಇರಲಿಲ್ಲ. ಅದನ್ನು ಕಂಡು ಹಿಡಿಯಲು ಬ್ರಹ್ಮ, ವಿಷ್ಣು ದ್ವಯರು ಶಿವನ ಆಜ್ಞೆ ಪಡೆದು ಹೋದರು. ಲಿಂಗದ ಆರಂಭ ತಿಳಿಯಲು ವಿಷ್ಣು, ಅಂತ್ಯ ಕಂಡು ಹಿಡಿಯಲು ಬ್ರಹ್ಮ ತಲಾ ಒಂದು ದಿಕ್ಕಿಗೆ ಹೋದರು. ಲಿಂಗದ ಆರಂಭ ಕಂಡು ಹಿಡಿಯಲು ಸಾಧ್ಯವಾಗದಿದ್ದರಿಂದ ವಿಷ್ಣು ವಾಪಸ್ ಆಗುತ್ತಾನೆ. ಆದರೆ ಬ್ರಹ್ಮ ದೇವ ತಾನು ಅಂತ್ಯ ನೋಡಿದ್ದೇನೆ ಎಂದು ಶಿವನ ಮುಂದೆ ಸುಳ್ಳು ಹೇಳುತ್ತಾನೆ. ಆದ್ದರಿಂದ ಬ್ರಹ್ಮ ಹೂವು ಶಿವನ ಪೂಜೆಯಲ್ಲಿ ಸ್ಥಾನ ಕಳೆದುಕೊಂಡಿತು. ಶಿವ ಪೂಜೆಯಲ್ಲಿ ಬ್ರಹ್ಮಹೂವು ಮಾತ್ರ ಬಳಸಬಾರದು.

4. ಅರಿಶಿಣವನ್ನು ನಾವು ಪೂಜೆಗಳಲ್ಲಿ ಬಳಸುತ್ತೇವೆ. ಆದರೆ ಶಿವನ ಪೂಜೆಯಲ್ಲಿ ಮಾತ್ರ ಅರಿಶಿಣ ಬಳಸಬಾರದಂತೆ. ಏಕೆಂದರೆ ಶಿವಲಿಂಗ ಎರಡು ಭಾಗಗಳಲ್ಲಿಇರುತ್ತದೆ. ಒಂದು ಲಿಂಗ ಮತ್ತೊಂದು ಜಲಧಾರೆ. ಲಿಂಗ ಶಿವನನ್ನು ಸೂಚಿಸಿದರೆ, ಜಲಧಾರೆ ಪಾರ್ವತಿಯನ್ನು ಸೂಚಿಸುತ್ತದೆ. ಆದ್ದರಿಂದ ಅರಿಶಿಣದಿಂದ ಲಿಂಗವನ್ನು ಪೂಜಿಸಬಾರದು. ಅದರ ಬದಲು ಜಲಧಾರೆಯನ್ನು ಪೂಜಿಸಬೇಕು.

Tags:

Post a Comment

0Comments

Please Select Embedded Mode To show the Comment System.*