ರಿವರ್ಸ್ ಸರ್ಚ್ ಎಂದರೇನು? ಅತ್ಯಂತ ಪರಿಣಾಮಕಾರಿಯಾಗಿ ರಿವರ್ಸ್ ಸರ್ಚ್ ಮಾಡುವುದು ಹೇಗೆ?

SANTOSH KULKARNI
By -
0

 ರಿವರ್ಸ್ ಸರ್ಚ್ (reverse search) ಎಂದರೆ ಸಾಧಾರಣವಾಗಿ ಚಿತ್ರ (image/picture/photo) ವನ್ನು ಉಪಯೋಗಿಸಿ ಅಂತರ್ಜಾಲದಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕುವುದು. ಇದರಲ್ಲಿ AI (artificial intelligence) ಕೂಡ ಬಳಕೆಯಾಗುತ್ತದೆ. ಇದರ ಉಪಯೋಗಗಳು ಹಲವಾರು...

  • ಯಾವುದೇ ಒಂದು ಚಿತ್ರದ ಮೂಲವನ್ನು ಹುಡುಕುವುದು.
  • ಚಿತ್ರದ ಕಲಾವಿದನನ್ನು ಪತ್ತೆಹಚ್ಚುವುದು.
  • ಒಂದು ಚಿತ್ರವನ್ನು ಎಲ್ಲೆಲ್ಲಿ ಬಳಕೆ ಮಾಡಿದ್ದಾರೆ ಎಂದು ಕಂಡು ಹಿಡಿಯುವುದು.
  • ಒಂದು ಚಿತ್ರದ ವಿಭಿನ್ನ ರೂಪಗಳನ್ನು ಪತ್ತೆಹಚ್ಚುವುದು.
  • ಚಿತ್ರದಲ್ಲಿರುವ ವ್ಯಕ್ತಿ, ವಸ್ತು ಅಥವಾ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವುದು.

ಗೂಗಲ್ ಇಮೇಜ್ ಸರ್ಚ್ (Google image search) ನಲ್ಲಿ ಇದನ್ನು ಈ ರೀತಿ ಬಳಸಬಹುದು. ಅದರಲ್ಲಿರುವ ಕ್ಯಾಮೆರಾ ಚಿತ್ರ (camera icon) ದ ಮೇಲೆ ಕ್ಲಿಕ್ (click) ಮಾಡಿದರೆ Search by image ಎಂಬ ಆಯ್ಕೆ ಕಾಣುತ್ತದೆ. ಇದರಲ್ಲಿ ಹುಡುಕಬೇಕಾದ ಚಿತ್ರದ ಮಾಹಿತಿಯನ್ನು ಎರಡು ರೀತಿಯಾಗಿ ನೀಡಬಹುದು. ಮೊದಲನೆಯದಾಗಿ ಆ ಚಿತ್ರ ಅಂತರ್ಜಾಲದಲ್ಲಿ ಇದ್ದರೆ, ಚಿತ್ರದ ಲಿಂಕ್ (web link/URL) ಅನ್ನು ಉಪಯೋಗಿಸಿ ಹುಡುಕಬಹುದು. ಎರಡನೆಯದಾಗಿ ಆ ಚಿತ್ರ ನಮ್ಮ ಕಂಪ್ಯೂಟರ್ ನಲ್ಲಿ ಇದ್ದರೆ ಅದನ್ನು ನೇರವಾಗಿ ಅಪ್ಲೋಡ್ (upload) ಮಾಡಿ ಹುಡುಕಬಹುದು.

ಈ ಸೌಲಭ್ಯವನ್ನು ನೀಡುವ ಇತರ ವೆಬ್ ಸೈಟ್ (website) ಗಳು ಕೂಡ ಇವೆ. ಇವುಗಳಲ್ಲಿ TinEye, Pixsy ಮುಖ್ಯವಾದವು. ಇವುಗಳನ್ನು ಸಾಧಾರಣವಾಗಿ ಕಾಪಿರೈಟ್ (copyright) ಆದ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿರುವುದನ್ನು ಪತ್ತೆಹಚ್ಚಲು ಉಪಯೋಗಿಸುತ್ತಾರೆ.

ಇತ್ತೀಚೆಗೆ ರಿವರ್ಸ್ ಸರ್ಚ್ ಅನ್ನು ವಿಡಿಯೋ (video) ಗಳನ್ನು ಉಪಯೋಗಿಸಿ ಅವುಗಳ ಮೂಲವನ್ನು ಹುಡುಕಲು ಸಹ ಅಭಿವೃದ್ಧಿಪಡಿಸಲಾಗುತ್ತಿದೆ.

Post a Comment

0Comments

Please Select Embedded Mode To show the Comment System.*