Saturday, January 27, 2024

"ಭಾರತ"ವೇ ಇರಲಿ. "ಇಂಡಿಯಾ" ಕೈಬಿಡುವ ಅಗತ್ಯ ಏನು?

 ಯಾಕೆ " ಇಂಡಿಯಾ " ವನ್ನು ಕೈ ಬಿಡಬಾರದು ?

ಶತ ಶತ ಮಾನಗಳ ಕಾಲ ಭಾರತವನ್ನು ದೋಚಿ ಅದರಲ್ಲೇ ಸೌಧ ಕಟ್ಟಿಕೊಂಡ ಕಳ್ಳರ ನೆನಪಿಗಾಗಿ ಇಂಡಿಯಾ ಅಂತಲೇ ಇರಬೇಕೆ ? ಅಥವಾ ,

ಅವರ ದಾಸ್ಯದ ಕರಿನೆರಳಿನ ನೆನಪಿಗಾಗಿ ಇಂಡಿಯಾ ಅಂತ ಇರಬೇಕೆ ?

ಅರ್ಥವೇ ಇಲ್ಲದ ಗ್ರೀಸರು ಇಟ್ಟ ಮತ್ತು ಬ್ರಿಟಿಶರಿಂದ ಅಧಿಕೃತವಾದ ಆ ದಾಸ್ಯದ ಹೆಸರನ್ನ ಇಷ್ಟು ದಿನ ಬದಲಿಸದೇ ಇದ್ದದ್ದೇ ದೊಡ್ಡ ಪ್ರಮಾದವಾಗಿದೆ .

ನಮ್ಮ ಭಾರತವನ್ನು ಬಿಟ್ಡು ಅವರು ತೊಲಗಿದಾಗಲೇ ಅವರಿಟ್ಟ ಹೆಸರನ್ನ ಬದಲಿಸಬೇಕಿತ್ತು . ಇಂಡಿಯಾ ಅನ್ನುವ ಹೆಸರನ್ನೂ ಅವರೊಂದಿಗೇ ಕಳುಹಿಸಬೇಕಿತ್ತು .

ಆದರೆ ಅವರ ದಾಸ್ಯ ಪರಂಪರೆಯಲ್ಲೇ ಆಡಳಿತ ನಡೆಸಿದ ಸರಕಾರಗಳು ಅದನ್ನ ಮಾಡಿಲ್ಲ . ಅಥವಾ ಆ ಎದೆಗಾರಿಕೆ ಇರಲಿಲ್ಲವೇನೊ ?

ಕೊನೆಗೂ ನಮ್ಮ ಸಂವಿಧಾನದಲ್ಲಿ ನಮ್ಮ ದೇಶದ ಹೆಸರನ್ನ ಭಾರತ ಮತ್ತು ಇಂಡಿಯಾ ಅಂತ ಎರಡೂ ಹೆಸರಿನಲ್ಲಿ ಅಧಿಕೃತವಾಗಿ ನಮೂದಿಸಿಬಿಟ್ಟರು .

ಭಾರತ ದೇಶವು ಬ್ರಿಟಿಶರು ಅಥವಾ ಪಾಶ್ಚಿಮಾತ್ಯ ದಾಳಿಕೋರರು ಬಂದ ಮೇಲೆ ಹುಟ್ಟಿದ್ದಲ್ಲ .

  • ಭಾರತ ಅನ್ನುವ ಹೆಸರಿಗೆ ಭವ್ಯ ಇತಿಹಾಸವಿದೆ , ಪುರಾತನ ಪರಂಪರೆ ಇದೆ . ಮಾತೃತ್ವದ ಸ್ಥಾನವಿದೆ . ಅದರದ್ದೇ ಆದ ಘನತೆ ಇದೆ . ಪೌರಾಣಿಕ ಹಿನ್ನೆಲೆ ಇದೆ ‌. ಅದೆಲ್ಲಕ್ಕಿಂತಲೂ‌ ಹೆಚ್ಚಾಗಿ ಸುಂದರವಾದ ಅರ್ಥವಿದೆ . ''ಭಾ" ಅಂದರೆ ಬೆಳಕು ಅಥವಾ ಜ್ಞಾನ ಅನ್ನುವ ಅರ್ಥವಿದೆ . ' ರತ ' ಅಂದರೆ ಅದರೊಙದಿಗೆ ಇರುವವನು ಅಥವಾ ಸದಾ ಅದರ ಅನ್ವೇಶಣೆಯಲ್ಲೇ ಇರುವವನು ಅನ್ನುವ ಅರ್ಥ ಇದೆ . ಅಂದರೆ ಸದಾ ಜ್ಞಾನವನ್ನು ಅನ್ವೇಶಿಸುವವನು ಅನ್ನುವ ಅರ್ಥವಿದೆ . ಜ್ಞಾನಿಗಳ ನಾಡೇ ಭಾರತ .
  • ಮಹಾಭಾರತ , ಭಗವದ್ಗೀತೆ , ಮತ್ಸ್ಯಪುರಾಣ , ರಾಮಾಯಣ , ಮನುಸ್ಮೃತಿ ಹೀಗೆ ಎಲ್ಲ ಧರ್ಮ ಗ್ರಂಥಗಳಲ್ಲಿಯೂ ನಮ್ಮದು ಭಾರತವೇ . ಎಲ್ಲಿಯೂ ಇಂಡಿಯಾ ಅಂತ ಇಲ್ಲ .

ಆ ಪುರಾತನ ಪರಂಪಂರೆಗಾಗಿ , ಆ ಭವ್ಯ ಇತಿಹಾಸದ ನೆನಪಿಗಾಗಿ , ಆ ಘನತೆಯ ಸಾಕಾರಕ್ಕಾಗಿ ಮತ್ತು ಮಾತೃತ್ವದ ಪ್ರೀತಿಗಾಗಿ ಭಾರತಕ್ಕೆ ಭಾರತ ಅನ್ನುವ ಹೇಸರೇ ಬೇಕು . ಇಂಡಿಯಾ ಅನ್ನುವ ಹೆಸರು ಬೇಡ .

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...