Monday, July 6, 2020

ನಿಮಗಿದು ತಿಳಿದಿರಲಿ


> ರಾಜಸ್ಥಾನದ "ಚುರು" ಜಿಲ್ಲೆ ದೇಶದಲ್ಲಿಯೇ ಅತ್ಯಂತ "ಹೆಚ್ಚಿನ ತಾಪಮಾನ" ಇರುವ ಪ್ರದೇಶ. ಬೇಸಿಗೆ ಕಾಲದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ
> ರಾಜಸ್ಥಾನದ ವಾಟರ್ ಮ್ಯಾನ್ :-
 "ಮೊಹಮದ್ ಅಬಾದ್"


🌷 36 ನೇ ಆಸಿಯಾನ್ ಶೃಂಗಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ 26 ಜೂನ್ 2020 ರಂದು ವಾಸ್ತವಿಕವಾಗಿ  ವಿಯೆಟ್ನಾಂನಲ್ಲಿ ನಡೆಯಿತು
===================
👉 ಅಧ್ಯಕ್ಷತೆ :- ವಿಯೆಟ್ನಾಂ ಪ್ರಧಾನ ಮಂತ್ರಿ,"ನ್ಗುಯಾನ್ ಕ್ಸುವಾನ್ ಫಾಕ್"
(Nguyễn Xuân Phúc)
==================
👉 ಶೃಂಗಸಭೆಯ ವಿಷಯ :- 
================
 “ಒಗ್ಗೂಡಿಸುವ ಮತ್ತು ಜವಾಬ್ದಾರಿಯುತ ಆಸಿಯಾನ್” / "Cohesive and Responsible ASEAN ”
=============
👉 10 ಆಸಿಯಾನ್ ಸದಸ್ಯ ರಾಷ್ಟ್ರಗಳು:
=============
> Indonesia
> Thailand
> Singapore
> Philippines
> Malaysia
> Vietnam
> Brunei
> Cambodia
> Myanmar (Burma)
> Laos


ಉತ್ತರಾಖಾಂಡ್  ಕುಮೌನ್ ಪ್ರಾಂತ್ಯದ ಮುನ್ಷಿಯಾರಿ ಬೆಟ್ಟದಲ್ಲಿ ನಿರ್ಮಿಸಲಾಗಿರುವ ದೇಶದ ಮೊಟ್ಟಮೊದಲ ಲೈಕೆನ್ ( ಕಲ್ಲು ಹೂ )ಉದ್ಯಾನವನ
> ಕಲ್ಲುಹೂವು ಪ್ರಭೇದಗಳನ್ನು ಆಹಾರ, ಸುಗಂಧ ದ್ರವ್ಯಗಳು, ಬಣ್ಣಗಳು ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ.
================
👉 ಇಲ್ಲಿ ಕಲ್ಲುಹೂವುಗಳ ಜಾತಿಗಳು ಕಂಡುಬರುತ್ತವೆ
===================
> ಉತ್ತರಾಖಂಡ್ ನಲ್ಲಿ - 600 ಜಾತಿಗಳು
> ಹಿಮಾಚಲ ಪ್ರದೇಶ - 503 ಜಾತಿಗಳು
> ಜಮ್ಮು ಮತ್ತು ಕಾಶ್ಮೀರ - 386 ಜಾತಿಗಳು
====================
👉 "ಕಲ್ಲುಹೂವು" ಎಂದರೇನು?
===================
ಕಲ್ಲುಹೂವು ಒಂದು ಸಂಯುಕ್ತ ಜೀವಿ, ಇದು ಪರಸ್ಪರ ಸಂಬಂಧದಲ್ಲಿ ಅನೇಕ ಶಿಲೀಂಧ್ರ ಪ್ರಭೇದಗಳ ತಂತುಗಳ ನಡುವೆ ವಾಸಿಸುವ ಪಾಚಿ ಅಥವಾ ಸೈನೋಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಅವು ಅನೇಕ ಬಣ್ಣಗಳು, ಗಾತ್ರಗಳು ಮತ್ತು ರೂಪಗಳಲ್ಲಿ ಬರುತ್ತವೆ. ಗುಣಲಕ್ಷಣಗಳು ಕೆಲವೊಮ್ಮೆ ಸಸ್ಯ-ತರಹದವು ಆದರೆ ಕಲ್ಲುಹೂವುಗಳು ಸಸ್ಯಗಳಲ್ಲ. ಕಲ್ಲುಹೂವುಗಳು ಸಣ್ಣ, ಎಲೆಗಳಿಲ್ಲದ ಕೊಂಬೆಗಳು, ಚಪ್ಪಟೆ ಎಲೆಗಳಂತಹ ರಚನೆಗಳನ್ನು ಹೊಂದಿರುತ್ತವೆ
===============
👉 ಚಮೋಲಿ (Chamoli ) ಜಿಲ್ಲೆಯ ಗೈರ್‌ಸೇನ್ (  Gairsain ) ಅನ್ನು ಇತ್ತೀಚೆಗೆ ಉತ್ತರಾಖಂಡದ ಬೇಸಿಗೆ ರಾಜಧಾನಿಯಾಗಿ ಘೋಷಿಸಲಾಗಿದೆ./ Gairsain in Chamoli district has been formally declared as the summer capital of Uttarakhand.
==============

> "ಮುಂಬೈ ಮತ್ತು ಪುಣೆ" ನಗರಗಳ ನಡುವೆ ದೇಶದ ಮೊದಲ "ಇಂಟರ್ -  ಸಿಟಿ ಎಲೆಕ್ಟ್ರಿಕ್ ಬಸ್" ಸೇವೆ ಆರಂಭಗೊಂಡಿದೆ.
> ಕೇಂದ್ರ ಸಂಚಾರ ಮತ್ತು ಹೆದ್ದಾರಿಗಳ ಸಚಿವ 
 "ನಿತಿನ್ ಗಡ್ಕರಿ" ಚಾಲನೆ ನೀಡಿದ್ದಾರೆ.
> "ಮಿತ್ರ ಮೊಬಿಲಿಟಿ  ಸೊಲ್ಯೂಷನ್" ಕಂಪನಿ ನಿರ್ಮಿಸಿದೆ
==============
> ಒಮ್ಮೆ ಎಲೆಕ್ಟ್ರಿಸಿಟಿ ಚಾರ್ಜ್ ಮಾಡಿದರೆ ಮುಂಬೈ ಮತ್ತು ಪುಣೆ ನಡುವಿನ 300 ಕಿಲೋಮೀಟರ್ ದೂರವನ್ನು  ಕ್ರಮಿಸುತ್ತದೆ
===========

ಗಲ್ಲು ಶಿಕ್ಷೆಗೆ ಗುರಿಯಾದ ಪ್ರಕರಣಗಳಲ್ಲಿ ಸಲ್ಲಿಕೆಯಾಗುವ ಮೇಲ್ಮನವಿಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತು. ಇದರಂತೆ ಅಧೀನ ನ್ಯಾಯಾಲಯಗಳು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದ ಪ್ರಕರಣಗಳಲ್ಲಿ "ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗುವ ಮೇಲ್ಮನವಿಗಳು ಆರು ತಿಂಗಳೊಳಗೆ" ತನ್ನ ತ್ರಿಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಸಿದ್ಧವಿರಬೇಕೆಂದು ಸುಪ್ರೀಂ ಕೋರ್ಟ್ ನಿಯಮ ರೂಪಿಸಿದೆ.


ನ್ಯಾಯಮೂರ್ತಿ "ಡಿ.ವೈ. ಚಂದ್ರಚೂಡ್" ಮತ್ತು "ಅಜಯ್ ರಸ್ತೋಗಿ" ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಇತ್ತೀಚೆಗೆ ಭಾರತೀಯ ಭೂಸೇನೆಯಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನಾಗಿ ಖಾಯಂ ಸೇವೆಗಾಗಿ "ಕಮಾಂಡ್ ಅಂದರೆ ಬಹುಮುಖ್ಯ ಹುದ್ದೆಗಳ ನಿರ್ವಹಣೆಗೆ" ಅವಕಾಶ ನೀಡಬೇಕೆಂದು ಮಹತ್ವದ ತೀರ್ಪು ನೀಡಿತ್ತು.

ಈ ಶಿಫಾರಸುಗಳಿಗೆ ಕೇಂದ್ರ ಸಂಪುಟ ಮನ್ನಿಸಿ ಇದೀಗ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ 2020ಕ್ಕೆ ಒಪ್ಪಿಗೆ ಸೂಚಿಸಿದೆ
=======================
👉 23 ಸದಸ್ಯರು ರಾಜ್ಯಸಭಾ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿತ್ತು.
=======================
> 35 ರಿಂದ 45 ವರ್ಷದೊಳಗಿನ ವಿಧವೆ ಅಥವಾ ವಿಚ್ಛೇದಿತ ಮಹಿಳೆಗೂ ಬಾಡಿಗೆ ತಾಯ್ತನ ಪಡೆಯಲು ಅವಕಾಶ ನೀಡಬೇಕು
> 'ಬಂಜೆತನ' ಪದ ತೆಗೆದು ಹಾಕಿ ಇದರ ಬದಲಿಗೆ 'ಅಸಮರ್ಥತೆ' ಪದ ಸೇರಿಸಬೇಕು.*"
====================
> ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ - 2019 ರಲ್ಲಿ ಬಾಡಿಗೆ ತಾಯಿ ಕುಟುಂಬದ ನಿಕಟ ಸಂಬಂಧಿಯಾಗಿರಬೇಕೆಂಬ ಉಲ್ಲೇಖವಿತ್ತು.


🧑‍🎓  ಅಂತರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ
( ಇಂಟರ್ ನ್ಯಾಷನಲ್ ಜುಡಿಷಿಯಲ್ ಕಾನ್ಫರೆನ್ಸ್ ) ಫೆಬ್ರವರಿ 22 ರಂದು ದೆಹಲಿಯಲ್ಲಿ ನಡೆಯಿತು.
===================
> ವಿಷಯ :- "ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು" ವಿಷಯದ ಕುರಿತು ನ್ಯಾಯಾಂಗ ಕ್ಷೇತ್ರದ ಪರಿಣಿತರು ಸಮಾಲೋಚನೆ ನಡೆಸಿದರು
> ಸಮ್ಮೇಳನದ ಧ್ಯೇಯವಾಕ್ಯ :-
 "Gender Just World"
=============


ಸಲಿಂಗ ಪ್ರೇಮಿಗಳು ಮತ್ತು ತೃತೀಯ ಲಿಂಗಿ ಗಳಂತಹ ವ್ಯಕ್ತಿಗಳು ತಮ್ಮನ್ನು ಸಮಾಜ ತಾರತಮ್ಯ/ ಕೀಳುಭಾವದಿಂದ ನೋಡುತ್ತಾರೆ ಎಂಬ ಭಯದ ಮನೋಭಾವ ಬೆಳೆಸಿಕೊಂಡಿರುತ್ತಾರೆ ಇದನ್ನೇ "ಹೋಮೋಫೋಬಿಯ" ( Homophobia)ಎನ್ನುತ್ತಾರೆ


"ಹೋಮೋಫೋಬಿಯ" ದಿಂದ ರಕ್ಷಣೆ ನೀಡುವುದಕ್ಕಾಗಿ ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಜನಮತಗಣನೆ ( ರೆಫರೆಂಡಂ) ನಡೆಯಿತು


"ಭಾರತ ಮತ್ತು ಬ್ರಿಟನ್" ವಾಯುಪಡೆಗಳು ಫೆಬ್ರುವರಿಯಲ್ಲಿ "ಇಂದ್ರಧನುಷ್" ಹೆಸರಿನ ಜಂಟಿ ಸಮರಾಭ್ಯಾಸ ನಡೆಸಿದವು. ಇದು ಇಂದ್ರಧನುಷ್ "ಐದನೇ ಆವೃತ್ತಿ"ಯ ಸಮರಾಭ್ಯಾಸವಾಗಿತ್ತು.
👉 ಈ ಆವೃತ್ತಿಯ ಘೋಷವಾಕ್ಯ :-
=====================
 "ಬೇಸ್ ಡಿಫೆನ್ಸ್ ಆಂಡ್ ಫೋರ್ಸ್ ಪ್ರೊಡಕ್ಷನ್"
(  ‘Base Defence and Force Protection’)
=======

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...