Monday, July 6, 2020

CA Short News

👆👆👆👆👆👆👆👆
✍ ಬಾಬು ಜಗಜೀವನ ರಾಮ್
( ಉಪ ಪ್ರಧಾನಿಗಳು ಹಾಗು ಭಾರತದ ರಕ್ಷಣಾ ಸಚಿವರು)
"34ನೇ ಪುಣ್ಯಸ್ಮರಣೆ"
====================
> ಜನನ: ಏಪ್ರಿಲ್ 5, 1908
> ನಿಧನ: ಜುಲೈ 6, 1986
ಬಾಬು ಜಗಜೀವನ ರಾಮ್ "ಬಾಬೂಜಿ" ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
================

👆👆👆👆👆👆👆
ಪ್ಲಾಸ್ಮಾ ಬ್ಯಾಂಕ್ ಎಂದರೇನು..?
======================
ಸೋಂಕಿತ ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿ , ವೈರಾಣು ನಿಷ್ಕ್ರಿಯಗೊಳಿಸುವುದಕ್ಕಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನಡೆಸಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಸೋಂಕಿತರಿಗೆ ಪಾಸ್ಕಾ ಚಿಕಿತ್ಸೆಯ ಅಗತ್ಯ ಕಂಡುಬರುತ್ತಿದೆ . ಪ್ಲಾಸ್ಮಾ ಚಿಕಿತ್ಸೆಗೆ ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿರುವ ಪ್ಲಾಸ್ಮಾ ಮಾತ್ರ ಬಳಸಿಕೊಳ್ಳಲಾಗುತ್ತಿದ್ದು , ಅಂತಹ ದಾನಿಗಳು ನೀಡುವ ಪ್ಲಾಸ್ಮಾವನ್ನು ಸಂಗ್ರಹಿಸಿಡುವ ಕೇಂದ್ರವೆ , "ಪ್ಲಾಸ್ಮಾನಿಧಿ" ಅಥವಾ "ಪ್ಲಾಸ್ಮಾ ಬ್ಯಾಂಕ್"

👆👆👆👆👆👆👆👆
👉 ನವದೆಹಲಿ ಮತ್ತು ಬೆಂಗಳೂರಿನಲ್ಲಿ ಅತಿ ದೊಡ್ಡ ಕೋವಿಡ್-19‌ ಆರೈಕೆ ಕೇಂದ್ರಗಳು
=======================
👉 ವಿಶ್ವದ ಅತಿ ದೊಡ್ಡ ಕೋವಿಡ್-19‌ ಆರೈಕೆ ಕೇಂದ್ರ ಉದ್ಘಾಟನೆ ( ನವದೆಹಲಿ )
======================
ಛತರ್‌ಪುರದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್‌ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ‘ಸರ್ದಾರ್‌ ಪಟೇಲ್‌ ಕೋವಿಡ್‌ ಆರೈಕೆ ಕೇಂದ್ರ’ವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್‌ ಅನಿಲ್‌ ಬೈಜಲ್‌ ಅವರು ಭಾನುವಾರ ಉದ್ಘಾಟಿಸಿದರು
===========
ಈ ಆರೈಕೆ ಕೇಂದ್ರ ಒಟ್ಟು 10,000 ಹಾಸಿಗೆಗಳನ್ನು ಒಳಗೊಂಡಿದ್ದು, ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು
=========
👉 ದೇಶದಲ್ಲಿಯೇ ಅತಿ ದೊಡ್ಡ ಕೋವಿಡ್‌ ಕೇರ್‌ ಸೆಂಟರ್‌ ( ಬೆಂಗಳೂರು )
========================
BIECನಲ್ಲಿ ಈಗ 7000 ಬೆಡ್‌ಗಳ ವ್ಯವಸ್ಥೆ ಇದ್ದು, ಮುಂದೆ ಇದನ್ನು 10,100 ಬೆಡ್‌ಗಳಿಗೆ ವಿಸ್ತರಿಸಲಾಗುವುದು. ಇದು ದೇಶದಲ್ಲೇ ಅತೀ ದೊಡ್ಡ ಕೋವಿಡ್ ಸೆಂಟರ್ ಆಗಲಿದೆ.
=================

👆👆👆👆👆👆👆👆
👉 ನಿಮಗಿದು ತಿಳಿದಿರಲಿ
=============
21 ವರ್ಷದ ಒಳಗಿನ ಹುಡುಗ ಮತ್ತು 18 ವರ್ಷದ ಒಳಗಿನ ಹುಡುಗಿಯ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ
=====
👉 2009ರ ಯುನಿಸೆಫ್ ಸ್ಟೇಟ್ ಆಫ್ ದಿ ವರ್ಡ್ಡ್ ಚಿಲ್ಡ್ರನ್ ವರದಿಯ ಪ್ರಕಾರ
=====
> ವಿಶ್ವದಲ್ಲಿ ನಡೆಯುವ ಬಾಲ್ಯವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ
> ಶೇ.56 ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದವರು
===
ಬಾಲ್ಯವಿವಾಹ ನಿಷೇಧ ಕಾಯಿದೆ 2006 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲು ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪಿನಂತೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾನ್ಯ ನಿವೃತ್ತ ನ್ಯಾಯಮೂರ್ತಿಯವರಾದ ಡಾ: ಶಿವರಾಜ್ ವಿ. ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಲಾಗಿತ್ತು. ಸದರಿ ಕೋರ್ ಕಮಿಟಿಯ ವರದಿಯಲ್ಲಿನ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ದಿನಾಂಕ: 16-11-2011 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯಲ್ಲಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.
===
👉 ಉದ್ದೇಶ
===
ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಮತ್ತು ಬಾಲ್ಯವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸುವುದು.
===

👆👆👆👆👆👆👆
"2020"ರ ಸಾಲಿನ "ಕಾಳಿಂಗ ನಾವಡ ಪ್ರಶಸ್ತಿ"ಗೆ
ಯಕ್ಷಗಾನ ಕಲಾವಿದ "ಗೋವಿಂದ ಉರಾಳರು" ಆಯ್ಕೆಯಾಗಿದ್ದಾರೆ

👆👆👆👆👆👆👆👆
> ಕೇರಳದಲ್ಲಿ "1ವರ್ಷ ಮಾಸ್ಕ್" ಕಡ್ಡಾಯಗೊಳಿ ಆದೇಶ ಹೊರಡಿಸಿದೆ.
> ಕೇರಳ ಸರ್ಕಾರ ಕೊರೋನಾ ಸುಗ್ರೀವಾಜ್ನೆಗೆ ತಿದ್ದುಪಡಿ ಮಾಡಿದೆ.
========

👆👆👆👆👆👆👆👆
> ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ 13 ಆಟಗಾರ ತಂಡವನ್ನು ಪ್ರಕಟಿಸದೆ.
> "ಡಾಮ್ ಬೆಸ್" ಏಕೈಕ ಸ್ಪಿನ್ನರ್ ಆಗಿದ್ದಾರೆ
> ಪಂದ್ಯ ಜುಲೈ 8ರಿಂದ ಸೌತಾಂಪ್ಟನ್ ನಲ್ಲಿ ಆರಂಭವಾಗಲಿದೆ
> ಕೊರೊನಾ ಕಾಲದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ 
====================

👆👆👆👆👆👆👆
👉 ಜಗತ್ತಿನ ಮೊದಲ ಬಂಗಾರದ ಹೋಟೆಲ್ :- "ಡೋಲ್ಸ್ ಹನೋಯ್ ಗೋಲ್ಡನ್ ಲೇಕ್"

👆👆👆👆👆👆👆👆👆
🌷 'ವರ್ಣದ್ವೇಷದ ಬೆಂಕಿ"ಯಲ್ಲಿ "ಅರಳಿದವರು"
====================
👉 ಕ್ರಿಸ್ ಗೇಲ್ (ಕ್ರಿಕೆಟ್)
===============
> ಒಟ್ಟು ಗಳಿಕೆ: ₹187 ಕೋಟಿ
> ದೇಶ: ವೆಸ್ಟ್‌ಇಂಡೀಸ್
=================
ಜಮೈಕಾದ ಬೀದಿಗಳಲ್ಲಿ ಕಳೆದು ಹೋಗಬೇಕಿದ್ದ ಕ್ರಿಸ್‌ ಗೇಲ್ ತಮ್ಮ ಕ್ರಿಕೆಟ್‌ ಪ್ರತಿಭೆಯಿಂದಲೇ ’ಯುನಿವರ್ಸ್‌ ಬಾಸ್‘ ಆಗಿ ಬೆಳೆದಿದ್ದಾರೆ. ಅವರ ತಂದೆ ಪೊಲೀಸ್ ಆಗಿದ್ದರು. ತಾಯಿ ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರುತ್ತಿದ್ದರು. ಅಮ್ಮನೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದ ಕ್ರಿಸ್ಟೋಫರ್ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಲೂಕಾಸ್ ಕ್ರಿಕೆಟ್ ಅಕಾಡೆಮಿ ಸೇರಿದ ನಂತರ ಅವರ ಬದುಕು ಬದಲಾಯಿತು.  ವಿವಿಯನ್ ರಿಚರ್ಡ್ಸ್‌, ಬ್ರಯನ್ ಲಾರಾ, ಗಾರ್ಡನ್ ಗ್ರಿನಿಜ್ ಅವರ ನಂತರ ವಿಂಡೀಸ್ ಕಂಡ ಅದ್ಭುತ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಅವರದ್ದು.  ವಿಂಡೀಸ್ ತಂಡದ ನಾಯಕನೂ ಆದರು. ಆದರೆ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ವಿಶ್ವದ ಎಲ್ಲ ದೇಶಗಳಲ್ಲಿಯೂ ಅಭಿಮಾನಿಗಳನ್ನು ಗಳಿಸಿದರು. ದೊಡ್ಡ ದೊಡ್ಡ ಕ್ರಿಕೆಟಿಗರೇ ಅವರ ಅಭಿಮಾನಿಗಳಾಗಿದ್ದು ಸುಳ್ಳಲ್ಲ. ಐಪಿಎಲ್ ಸೇರಿದಂತೆ ವಿವಿಧ ಲೀಗ್‌ಗಳಲ್ಲಿ ಮಿಂಚಿದರು. ತಮ್ಮ ತುಂಟಾಟ, ಕೀಟಲೆ ಸ್ವಭಾವದಿಂದ ವಿವಾದಗಳನ್ನು ಮೈಮೇಲೆಳೆದುಕೊಂಡರು.  ಸ್ವಂತ ಐಷಾರಾಮಿ ಬಾರ್, ದುಬಾರಿ ಕಾರ್‌, ಬಂಗ್ಲೆಗಳ ಒಡೆಯನಾಗಿದ್ದಾರೆ.
===================

Note💐💐
=======
ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ 39 ತಾಲ್ಲೂಕುಗಳನ್ನು ತೀರಾ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿ 18 ವರ್ಷಗಳು ಕಳೆದುಹೋಗಿವೆ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗಬೇಕಾದರೆ, ಸಂಕಷ್ಟಕ್ಕೀಡಾದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಂಜುಂಡಪ್ಪ ಸಮಿತಿಯ ನಿರೀಕ್ಷೆಯಂತೆ ಅಭಿವೃದ್ಧಿಯಾಗಬೇಕು ಎನ್ನುವುದು ರಾಜ್ಯದಲ್ಲಿ ವಿಕಸನ ಹೊಂದಿದ ‘ಕೈಗಾರಿಕಾ ವಿಕಾಸ’ ಯೋಜನೆಯ ಗುರಿ.

Note💐💐
=======
ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ 39 ತಾಲ್ಲೂಕುಗಳನ್ನು ತೀರಾ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿ 18 ವರ್ಷಗಳು ಕಳೆದುಹೋಗಿವೆ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗಬೇಕಾದರೆ, ಸಂಕಷ್ಟಕ್ಕೀಡಾದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಂಜುಂಡಪ್ಪ ಸಮಿತಿಯ ನಿರೀಕ್ಷೆಯಂತೆ ಅಭಿವೃದ್ಧಿಯಾಗಬೇಕು ಎನ್ನುವುದು ರಾಜ್ಯದಲ್ಲಿ ವಿಕಸನ ಹೊಂದಿದ ‘ಕೈಗಾರಿಕಾ ವಿಕಾಸ’ ಯೋಜನೆಯ ಗುರಿ.

👆👆👆👆👆👆👆👆
🌷**ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ "ಕ್ವಿಂಟನ್ ಡಿ ಕಾಕ್" ಭಾಜನರಾಗಿದ್ದಾರೆ
ಇದು ಎರಡನೇ ಬಾರಿ ಆಯ್ಕೆಯಾಗಿದ್ದಾರೆ**
==========================
> ವನಿತೆ ವಿಭಾಗದ ವರ್ಷದ ಆಟಗಾರ್ತಿ ಪ್ರಶಸ್ತಿ :- "ಲಾರ ವೋಲ್ವಾರ್ಟ್" 
> ವರ್ಷದ ಫೇಸ್ ಬೌಲರ್ :- "ಲುಂಗಿ ಎನ್ ಗಿಂಡಿ"
> ವರ್ಷದ ಅಭಿಮಾನಿಗಳ ನೆಚ್ಚಿನ ಆಟಗಾರ :- "ಡೇವಿಡ್ ಮಿಲ್ಲರ್"
==================

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...