Saturday, November 30, 2024

ಭಾರತದ ಇತಿಹಾಸದಲ್ಲಿ ವೀರಗಲ್ಲುಗಳ ಮಹತ್ವವೇನು?

 ವೀರಗಲ್ಲು ಎಂದರೆ ಕಲ್ಲು ಸ್ಮಾರಕಗಳು, ಪೂರ್ವದಲ್ಲಿ ಒಬ್ಬ ವ್ಯಕ್ತಿಯು ತನ್ನ ಹಳ್ಳಿ ಅಥವಾ ರಾಜ್ಯವನ್ನು ಉಳಿಸಲು ಹೋರಾಟ ಮಾಡಿ ಕಾಳಗ ಅಥವಾ ಯುದ್ಧದಲ್ಲಿ ಮಡಿದಾಗ ಆತನ ನೆನಪು ಮತ್ತೆ ಗೌರವಾರ್ಥವಾಗಿ ನಿರ್ಮಾಣ ಮಾಡುತ್ತಿದ್ದ ಕಲ್ಲುಗಳೇ ವೀರಗಲ್ಲು.

ಇದು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಇತ್ಯಾದಿಗಳಲ್ಲಿ ಕಂಡುಬರುತ್ತದೆ.

ಸಾಮಾನ್ಯವಾಗಿ ಅವು ಕಲ್ಲಿನ ಸ್ಮಾರಕದ ರೂಪದಲ್ಲಿರುತ್ತವೆ ಮತ್ತು ಯುದ್ಧದ ಕೆಳಭಾಗದಲ್ಲಿ ನಿರೂಪಣೆಯೊಂದಿಗೆ ಒಂದು ವಿವರಣೆಯನ್ನು ಹೊಂದಿರಬಹುದು. ಇತಿಹಾಸಕಾರ ಉಪಿಂದರ್ ಸಿಂಗ್ ಅವರ ಪ್ರಕಾರ, ಅಂತಹ ಸ್ಮಾರಕ ಕಲ್ಲುಗಳ ಅತಿ ಹೆಚ್ಚಿನ ಸಾಂದ್ರತೆಯು ಭಾರತದ ಕರ್ನಾಟಕದಲ್ಲಿ ಕಂಡುಬರುತ್ತದೆ. ಸುಮಾರು ಎರಡು ಸಾವಿರದ ಆರುನೂರ ಐವತ್ತು ವೀರ ಕಲ್ಲುಗಳು, 5 ನೇ ಶತಮಾನದಷ್ಟು ಹಳೆಯದು ಕರ್ನಾಟಕದಲ್ಲಿ ಪತ್ತೆಯಾಗಿದೆ.

ಈ ವೀರಗಲ್ಲನ್ನು ಸಾಮಾನ್ಯವಾಗಿ 3 ಭಾಗಗಳಾಗಿ ವಿಂಗಡಿಸಲಾಗಿದೆ, ಮೇಲಿನ ಭಾಗವು ಶಿವಲಿಂಗದಂತಹ ದೇವರ ಚಿತ್ರವನ್ನು ಹೊಂದಿರುತ್ತದೆ, ಮಧ್ಯ ಭಾಗವು ಅಪ್ಸರೆಯರ ಜೊತೆಗೆ ಸ್ವರ್ಗಕ್ಕೆ ಪ್ರಯಾಣವನ್ನು ಚಿತ್ರಿಸುತ್ತದೆ ಮತ್ತು ಕೆಳಭಾಗದಲ್ಲಿ ಯುದ್ಧದ ವಿವರಣೆಯನ್ನು ಚಿತ್ರದ ರೂಪದಲ್ಲಿ ಮತ್ತು ಬರವಣಿಗೆಯ ರೂಪದಲ್ಲಿ ಹೊಂದಿರುತ್ತದೆ.

ವೀರಗಲ್ಲಿನ ಕೆಲವು ಚಿತ್ರಗಳು.

ವಿಕಿಪೀಡಿಯಾದಿಂದ ತೆಗೆದ ಮೇಲಿನ ಎಲ್ಲಾ ಚಿತ್ರಗಳು 10, 12 ನೇ ಶತಮಾನದಂತಹ ಹಳೆಯ ಕಾಲಕ್ಕೆ ಸೇರಿವೆ.

ಊಟವಾದ ಕೂಡಲೇ ನಾವು ಯಾಕೆ ನೀರು ಕುಡಿಯಬೇಕು/ಕುಡಿಯಬಾರದು?

 ನೀರು ಪ್ರಪಂಚದ ಪ್ರಮುಖ ವಸ್ತುಗಳಲ್ಲಿ ಒಂದಾಗಿದೆ. ಇದು ನಮ್ಮ ದೇಹದ ಮುಖ್ಯ ಅಂಶವಾಗಿದೆಮತ್ತು ನೀರಿನ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಆರೋಗ್ಯವಾಗಿರಲು, ನಾವು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು.]

ಹೆಚ್ಚು ನೀರು ಕುಡಿಯುವುದರಿಂದ ನೀವು ಹೈಡ್ರೇಟ್ ಆಗಿರಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು. ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವಂತಹ ನೀರನ್ನು ಕುಡಿಯುವುದನ್ನು ತಪ್ಪಿಸುವುದು ಉತ್ತಮವಾದ ಸಂದರ್ಭಗಳಿವೆ.

ವ್ಯಾಯಾಮ ಮಾಡಿದ ತಕ್ಷಣ:

ನೀವು ವ್ಯಾಯಾಮ ಮಾಡುವಾಗ, ನಿಮ್ಮ ದೇಹದ ಉಷ್ಣತೆಯು ಹೆಚ್ಚಾಗುತ್ತದೆ ಮತ್ತು ತಣ್ಣಗಾಗಲು ನೀವು ಬೆವರು ಮಾಡುತ್ತೀರಿ. ಆದ್ದರಿಂದ, ನೀರನ್ನು ಕುಡಿಯುವ ಮೊದಲು ನಿಮ್ಮ ದೇಹವನ್ನು ನೈಸರ್ಗಿಕವಾಗಿ ತಣ್ಣಗಾಗಲು ಬಿಡುವಂತೆ ಮಾಡುವುದು ಮುಖ್ಯ. ನಿಮಗೆ ಬಾಯಾರಿಕೆಯಾದಾಗ ಸಣ್ಣ ಸಿಪ್ಸ್ ನೀರನ್ನು ಕುಡಿಯಿರಿ, ಆದರೆ ಬಾಟಲಿಯ ನೀರನ್ನು ಕುಡಿಯುವ ಮೊದಲು ನಿಮ್ಮ ದೇಹವುನಾರ್ಮಲ್ ಆಗುವವರೆಗೆ ಕಾಯಿರಿ.

ಊಟದ ನಂತರ:

ನೀರು ಕುಡಿಯುವುದನ್ನು ತಪ್ಪಿಸುವುದು ಉತ್ತಮವಾದ ಕೆಲವು ಸಮಯಗಳಿವೆ. ಉದಾಹರಣೆಗೆ, ಊಟದ ಮೊದಲು ಅಥವಾ ಸಮಯದಲ್ಲಿ, ಇದು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು.

ಊಟದೊಂದಿಗೆ ನೀರು ಕುಡಿಯುವುದರಿಂದ ನೀವು ಸೇವಿಸುವ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಆದ್ದರಿಂದ ನೀವು ನಿಮ್ಮ ಊಟದಿಂದ ಹೆಚ್ಚಿನ ಪೋಷಕಾಂಶವನ್ನು ಪಡೆಯಲು ಬಯಸಿದರೆ, ಅರ್ಧ ಘಂಟೆಯ ನಂತರ ನೀರನ್ನು ಕುಡಿಯುವುದು ಉತ್ತಮ

ನೀರು ಕುಡಿಯಲು ಉತ್ತಮ ಸಮಯ

ಊಟವಾದ ಅರ್ಧ ಗಂಟೆಯ ನಂತರ ಯಾವಾಗಲೂ ನೀರು ಕುಡಿಯಿರಿ. ಇದರಿಂದ ದೇಹವು ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ ಒಂದು ಲೋಟ ನೀರು ಕುಡಿಯಿರಿ. ಇದು ರೋಗಗಳ ವಿರುದ್ಧ ಹೋರಾಡಲು ಮತ್ತು ಇಮ್ಮ್ಯೂನಿಟಿ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ನೀರು ಕುಡಿಯಲು ಉತ್ತಮ ಸಮಯವೆಂದರೆ ಬೆಳಗಿನ ಉಪಾಹಾರದ ಮೊದಲು. ಇದು ನಿಮ್ಮ ದೇಹವನ್ನು ಪುನರ್ಜಲೀಕರಣಗೊಳಿಸಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ

ಬಾಯಿ ಹುಣ್ಣು ಬಾರದಂತೆ ಮಾಡಲು ಏನು ಮಾಡಬೇಕು? ಇದಕ್ಕೆ ಮನೆ ಮದ್ದುಗಳೇನು?

 


ಬಾಯಿ ಹುಣ್ಣುಗಳು ಸಾಮಾನ್ಯ ಮತ್ತು ನೋವಿನ ಸ್ಥಿತಿಯಾಗಿದ್ದು ಅದು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಬಾಯಿಯ ಹುಣ್ಣುಗಳಿಗೆ ಸಂಬಂಧಿಸಿದ ನೋವಿನಿಂದ ಪರಿಹಾರವನ್ನು ನೀಡಲು ಸಹಾಯ ಮಾಡುವ ಅನೇಕ ಆಹಾರಗಳಿವೆ. ಬಾಯಿ ಹುಣ್ಣುಗಳನ್ನು ಎದುರಿಸಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಈ ಪೋಸ್ಟ್ನ ಉದ್ದೇಶವಾಗಿದೆ

ಬಾಯಿ ಹುಣ್ಣಿಗೆ ಕಾರಣವೇನು?/ ಪದೇ ಪದೇ ಬಾಯಿ ಹುಣ್ಣು ಬರಲು ಕಾರಣವೇನು?

ಅನೇಕ ಜನರು ಸಾಂದರ್ಭಿಕಬಾಯಿ ಹುಣ್ಣುಗಳನ್ನು ಅನುಭವಿಸಿದರೆ, ಕೆಲವರಿಗೆ ಇದು ದೀರ್ಘಕಾಲದ ಸಮಸ್ಯೆಯಾಗಿರಬಹುದು. ಬಾಯಿ ಹುಣ್ಣುಗಳ ನಿಖರವಾದ ಕಾರಣಗಳು ಯಾವಾಗಲೂ ತಿಳಿದಿಲ್ಲ, ಆದರೆ ಅವುಗಳ ಬೆಳವಣಿಗೆಗೆ ಕಾರಣವಾಗುವ ಹಲವಾರು ಅಂಶಗಳಿವೆ.

ಒತ್ತಡ ಅಥವಾ ಭಾವನಾತ್ಮಕ ಯಾತನೆ

ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು

ನಿಮ್ಮ ಕೆನ್ನೆ ಅಥವಾ ನಾಲಿಗೆಯ ಒಳಭಾಗವನ್ನು ಕಚ್ಚುವುದು

ಕಳಪೆ ಹಲ್ಲಿನ ನೈರ್ಮಲ್ಯ ಅಭ್ಯಾಸಗಳು

ಕಲುಷಿತ ಪಾತ್ರೆಗಳ ಬಳಕೆ

ಕೆಲವು ವೈದ್ಯಕೀಯ ಪರಿಸ್ಥಿತಿಗಳು

ಅರಿಶಿನ ನೀರು:

ಅರಿಶಿನ ನೀರು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿ ಹೊರಹೊಮ್ಮಿದೆ.ಈ ಪ್ರಾಚೀನ ಪರಿಹಾರವನ್ನು ಭಾರತದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ ಮತ್ತುಬಾಯಿ ಹುಣ್ಣುಗಳ ಮೇಲೆ ಅನ್ವಯಿಸಿದಾಗ ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.

ಇದರ ಉರಿಯೂತದ ಗುಣಲಕ್ಷಣಗಳು ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಚರ್ಮಕ್ಕೆ ಆಳವಾದ ತೇವಾಂಶವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಅರಿಶಿನ ನೀರು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಬಾಹ್ಯ ಆಕ್ರಮಣಕಾರರಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಜೊತೆಗೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಬಾಯಿ ಹುಣ್ಣುಗಳ ಗುಣಪಡಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಗುಳ್ಳೆ ಸಂಪೂರ್ಣವಾಗಿ ಗುಣವಾಗುವವರೆಗೆ ತುಪ್ಪ ಮತ್ತು ತೆಂಗಿನ ಎಣ್ಣೆ ಎರಡನ್ನೂ ದಿನಕ್ಕೆ ಮೂರು ಬಾರಿಹಚ್ಚ ಬಹುದು .

ಗ್ಲಿಸರಿನ್‌ನಿಂದ ಪರಿಹಾರ :

ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಗ್ಲಿಸರಿನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ , ಏಕೆಂದರೆ ಇದು ಶಕ್ತಿಯುತವಾದ ಹೈಡ್ರೇಟಿಂಗ್ ಏಜೆಂಟ್ ಆಗಿದೆ. ಗ್ಲಿಸರಿನ್ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ ಏಕೆಂದರೆ ಇದು ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಗಾಯದ ಪ್ರದೇಶದಲ್ಲಿ ಹೊಸ ಕೋಶಗಳನ್ನು ತ್ವರಿತವಾಗಿ ರೂಪಿಸಲು ಅನುವು ಮಾಡಿಕೊಡುತ್ತದೆ. .

ಲೈಕೋರೈಸ್ (ಜೇಷ್ಠ ಮದ್ದು )ಮತ್ತು ಜೇನುತುಪ್ಪ:

ಲೈಕೋರೈಸ್ ಬೇರಿನ ಸಾರವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬಹುದುಅದನ್ನು ನೇರವಾಗಿ ಪೀಡಿತ ಪ್ರದೇಶಕ್ಕೆ ಅನ್ವಯಿಸುವುದರಿಂದ ಅಸ್ವಸ್ಥತೆಯಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.

ದಾನ ಹೇಗಿರಬೇಕು?

 ಎರಡೂವರೆ ಸಾವಿರ ವರ್ಷಗಳ ಹಿಂದಿನ ಕತೆ. ಭಗವಾನ್ ಬುದ್ಧರು ಅನೇಕ ದಿನಗಳ ವಿಹಾರದ ಬಳಿಕ ಮಗಧ ದೇಶದ ರಾಜಧಾನಿಯತ್ತ ಹೊರಟರು. ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು.

ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು "ಹೇ ಮಹಾಪ್ರಭು, ನಾನು ಬಡವಿ. ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ" ಎಂದು ಅರ್ಧ ತಿಂದ ಮಾವಿನ ಹಣ್ಣನ್ನು ಮುಂದಕ್ಕೆ ಚಾಚಿದಳು. ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು "ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?" ಎಂದು ಪ್ರಶ್ನಿಸಿದಾಗ ಮುದುಕಿ "ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ಸಿಕ್ಕಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ" ಎಂದು ಉತ್ತರಿಸಿದಳು.

ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು. ಆಗ ಬಿಂಬಸಾರ "ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?" ಎಂದು ಕೇಳಿದ. ಮುಗುಳ್ನಗುತ್ತಾ ಬುದ್ಧ "ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ವೌಲ್ಯವಲ್ಲ" ಎಂದರು. ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ.

ನೀತಿ :-- ಕೊಡುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ. ಶುದ್ಧ ಅಂತಃಕರಣದಿಂದ ಪ್ರೀತಿ, ಸ್ನೇಹ, ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವದ್ದಾಗಬಲ್ಲುದು. ವಸ್ತುವಲ್ಲ ಮನಸ್ಸು ಮುಖ್ಯ.

ಯಾವಾಗಲೂ ಒಳ್ಳೆಯದನ್ನೇ ಯೋಚಿಸಿ

 ದಡ್ಡ ಶಿಖಾಮಣಿಯೊಬ್ಬ ಬಸ್ಸಿಗೆ ಕಾಸಿಲ್ಲದೇ ಕಾಲುದಾರಿಯಲ್ಲಿ ನಡೆದುಕೊಂಡು ಹೊರಟಿದ್ದ, ಅವನು ದೂರದ ಸಂಬಂಧಿಕರ ಮನೆಗೆ ತೆರಳುತ್ತಿದ್ದ. ಅವರ ಊರಿನಿಂದ ನೆಂಟರ ಊರಿಗೆ ಸಾಕಷ್ಟು ದೂರವಿತ್ತು, ಕೈಯಲ್ಲಿ ಕಾಸಿಲ್ಲದ ಕಾರಣ ನಡೆದೇ ಹೋಗುವುದೆಂದು ನಿರ್ಧರಿಸಿದ್ದ. ದಾರಿ ಮಧ್ಯೆ ದೊಡ್ಡದೊಂದು ಕಾಡಿತ್ತು. ಆ ಕಾಡಿನ ಕಾಲುದಾರಿಯಲ್ಲಿ ಅದಾಗಲೇ ಅರ್ಧ ಸವೆಸಿ ಬಂದುಬಿಟ್ಟಿದ್ದ. ಸಾಕಷ್ಟು ಬಿಸಿಲಿದ್ದ ಕಾರಣ ಆಯಾಸವೆನಿಸಿ ಒಂದರೆಕ್ಷಣ ವಿಶ್ರಮಿಸೋಣವೆಂದುಕೊಂಡು ಕಾಡಿನೊಳಗಿದ್ದ ಒಂದು ಮರದ ಕೆಳಗೆ ಕುಳಿತುಕೊಂಡ. ನೆರಳು ಮತ್ತು ತಂಪಾದ ಗಾಳಿಯು ಅವನ ಆಯಾಸವನ್ನು ಕಡಿಮೆ ಮಾಡಿತ್ತು.

ಅವನು ಮರದ ಬಗ್ಗೆ ತಿಳಿಯದೇ ಅದರ ಕೆಳಗೆ ಕುಳಿತುಬಿಟ್ಟಿದ್ದ. ಅದು ಕೇಳಿದ್ದು, ಬಯಸಿದ್ದು ಕೊಡುವ ಮರವಾಗಿತ್ತು. ಹಾಗಾಗಿ ಅವನು ಬಯಸಿದ್ದೆಲ್ಲವೂ ಸಿಗುವುದಿತ್ತು. ಅದ್ಯಾವುದರ ಪರಿವೆಯೇ ಇಲ್ಲದ ಹೆಡ್ಡನು ಮರದ ಕೆಳಗೆ ಕುಳಿತು "ಅಬ್ಬಾ.. ಎಷ್ಟೊಂದು ತಂಪಿದೆ. ಕುಡಿಯಲು ತಣ್ಣನೆಯ ನೀರಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಎಂದುಕೊಂಡನು. ತಕ್ಷಣಕ್ಕೆ ಅವನೆದುರಿಗೆ ತಂಪಾದ ನೀರು ಲಭ್ಯವಾಯಿತು. ನೀರನ್ನು ಕಂಡೊಡನೆ ಗಟಗಟನೆ ಕುಡಿದ ಹೆಡ್ಡನು "ಸ್ವಲ್ಪ ಹೊತ್ತು ನಿದ್ರೆ ಬರುವಂತಿದ್ದರೆ ಚೆನ್ನಿತ್ತು" ಎಂದುಕೊಳ್ಳುವಷ್ಟರಲ್ಲಿ ಅವನನ್ನು ನಿದ್ರಾದೇವಿ ಆವರಿಸಿದಳು. ಮಲಗಿಕೊಂಡೇ "ಅಲ್ಲಿಂದಾ ನಡೆದು ಕಾಲು ನೋವುತ್ತಿವೆ. ಯಾರಾದರೂ ಆಳು ಕಾಲೊತ್ತುವಂತಿದ್ದರೆ ಮಜವಾಗಿರುತ್ತಿತ್ತು" ಎಂದುಕೊಂಡ. ತಕ್ಷಣವೇ ಆಳೊಬ್ಬ ಅವನ ಕಾಲನ್ನು ಮೃದುವಾಗಿ ಒತ್ತುತ್ತಿರುವುದು ಅವನ ಗಮನಕ್ಕೆ ಬಂತು. ಸ್ವಲ್ಪ ನಿದ್ರೆಯ ನಂತರ ಎಚ್ಚೆತ್ತ ಹೆಡ್ಡನು "ಆಯಾಸವೇನೋ ಪರಿಹಾರವಾಯ್ತು. ತಿನ್ನಲು ಒಂದಿಷ್ಟು ರುಚಿಯಾದ ಆಹಾರ ಸಿಕ್ಕರೆ ಒಳ್ಳೆಯದಿತ್ತು" ಎಂದುಕೊಳ್ಳುವಾಗಲೇ ಅವನೆದುರಿಗೆ ವಿವಿಧ ಭಕ್ಷ್ಯಭೋಜ್ಯಗಳು ಪ್ರತ್ಯಕ್ಷವಾದವು.

ತನಗೆ ರುಚಿಯೆನಿಸಿದ್ದೆಲ್ಲವನ್ನೂ ಗಬಗಬನೆ ತಿಂದ ಹೆಡ್ಡನು "ಏನಾಶ್ಚರ್ಯ.. ನಾನು ಮನದಲ್ಲಿ ಅಂದುಕೊಂಡಿದ್ದೆಲ್ಲವೂ ನಿಜವಾಗುತ್ತಿದೆ. ಇಲ್ಲಿ ಯಾರಾದರೂ ದೈವಿಕ ಶಕ್ತಿಯುಳ್ಳವರು ಕುಳಿತು ನನ್ನ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಾರೆಯೇ?, ಇಲ್ಲಾ.. ಯಾವುದಾದರೂ ದೆವ್ವ ಪಿಶಾಚಿಗಳು ನನ್ನನ್ನು ಹೀಗೆ ಆಟವಾಡಿಸುತ್ತಿರಬಹುದೇ?” ಎಂದು ಯೋಚಿಸತೊಡಗಿದನು. ಇಂಥಹ ಆಲೋಚನೆಯಿಂದ ಸ್ವಲ್ಪ ವಿಚಲಿತನಾದಂತೆ ಕಂಡ ಹೆಡ್ಡನು ಅಂಜಿಕೆಯಿಂದ ಮೇಲೆದ್ದು “ಅಯ್ಯೋ.. ಈ ಕಾಡಿನಲ್ಲಿ ಕ್ರೂರ ಹುಲಿಯೊಂದಿದೆ ಎಂದು ನಮ್ಮಜ್ಜಿ ಹೇಳುತ್ತಿದ್ದಳು. ಒಂದೊಮ್ಮೆ ಆ ಹುಲಿಯೇನಾದರೂ ಪ್ರತ್ಯಕ್ಷವಾದರೇ?” ಎಂದು ಯೋಚಿಸುತ್ತಿರುವಾಗಲೇ ಅವನೆದುರಿಗೆ ದೊಡ್ಡದಾದೊಂದು ಹುಲಿ ಪ್ರತ್ಯಕ್ಷವಾಯಿತು. ಅದನ್ನು ಕಂಡು ಭಯಬಿದ್ದ ಹೆಡ್ಡನು "ಈ ಹುಲಿ ಏನಾದರೂ ನನ್ನನ್ನು ಹೊತ್ತೊಯ್ದು ಕೊಂದು ತಿಂದುಬಿಟ್ಟರೇ” ಎಂದು ಯೋಚಿಸಿದ. ತಕ್ಷಣವೇ ಹುಲಿಯು ಅವನನ್ನು ಹೊತ್ತೊಯ್ದು ಕೊಂದು ತಿಂದುಬಿಟ್ಟಿತು.

ನೀತಿ :-- ಯಾವಾಗಲೂ ಒಳ್ಳೆಯದನ್ನೇ ಯೋಚಿಸಬೇಕು. ಕೆಟ್ಟದ್ದನ್ನು ಯೋಚಿಸಿದರೆ ಕೆಟ್ಟದ್ದೇ ಆಗುತ್ತ

ಮಣ್ಣಿನ ಉಂಡೆಯಲ್ಲಿ ವಜ್ರ

 ಒಬ್ಬ ಮನುಷ್ಯ ಸಮುದ್ರ ತೀರಕ್ಕೆ ಹೋಗಿ ತೆರೆಗಳೊಂದಿಗೆ ಆಟವಾಡಿ ಸ್ನಾನ ಮಾಡಿದ. ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿಗಾಗಿ ಸ್ಥಳ ಹುಡು ಕಾಡಿದ. ಹತ್ತಿರದಲ್ಲೆಲ್ಲೂ ಮರಗಳಿರಲಿಲ್ಲ. ಮುಂದೆ ಕೆಲವು ದೊಡ್ಡ ದೊಡ್ಡ ಬಂಡೆಗಳಿದ್ದವು. ಅವುಗಳ ಹಿಂದೆ ಬೆಟ್ಟದ ಪ್ರದೇಶ. ಮರಗಳ ಕೆಳಗೆ ಮಲಗಿ ವಿಶ್ರಾಂತಿ ಪಡೆಯುವುದು ಅವನ ಉದ್ದೇಶದಿಂದ ಬೆಟ್ಟದ ಕಡೆಗೆ ನಡೆದ.

ಅವನಿಗೆ ಮರಗಳ ಹಿಂದೆ ಒಂದು ಗುಹೆ ಕಾಣಿಸಿತು. ಕುತೂಹಲದಿಂದ ಅಲ್ಲಿಗೆ ಹೋದ. ಅದೊಂದು ದೊಡ್ಡ ಗುಹೆ. ಸಾಕಷ್ಟು ಸ್ವಚ್ಛವಾಗಿದೆ. ಯಾರೋ ಅಲ್ಲಿ ಇದ್ದು, ಹೋದ ಲಕ್ಷಣಗಳಿವೆ. ಯಾರೋ ಗರಿಯ ಚಾಪೆಯನ್ನು ಹಾಸಿ ಬಿಟ್ಟು ಹೋಗಿದ್ದಾರೆ. ಇವನು ಚಾಪೆಯ ಮೇಲೆ ಮಲಗಿ ನಿದ್ರೆಹೋದ. ಗುಹೆ ತಂಪಾಗಿತ್ತು. ಚೆನ್ನಾಗಿ ಗಾಳಿ ಬರುತ್ತಿತ್ತು. ಒಂದೆರಡು ತಾಸು ನಿದ್ರೆ ಮುಗಿಸಿ ಎದ್ದ. ಮೈ ಮುರಿದು ಹೊರಡಲು ಸಿದ್ಧನಾದ. ಹೊರಡುವ ಮುನ್ನ ಗುಹೆಯ ಮೂಲೆಯಲ್ಲಿದ್ದ ಒಂದು ಬಟ್ಟೆಯ ಚೀಲವನ್ನು ಗಮನಿಸಿದ, ಅದನ್ನೆತ್ತಿಕೊಂಡು ನೋಡಿದ. ಅದರಲ್ಲಿ ನೂರಾರು ಮಣ್ಣಿನ ಉಂಡೆಗಳು. ಪ್ರತಿ ಯೊಂದೂ ಸುಮಾರು ಟೆನ್ನೀಸ್ ಚೆಂಡಿನಷ್ಟು ದೊಡ್ಡದಾಗಿತ್ತು. ಬಹುಶಃ ಈ ಗುಹೆ ಯಲ್ಲಿ ಯಾರೋ ಕೆಲವರು ಮಕ್ಕಳನ್ನು ಕರೆದುಕೊಂಡು ಬಂದು ಉಳಿದಿರಬಹುದು. ಆಗ ಮಕ್ಕಳು ಈ ಮಣ್ಣಿನ ಉಂಡೆಗಳನ್ನು ಮಾಡಿ ಇಟ್ಟಿರ ಬಹುದೆಂದು ಊಹಿಸಿದ.

ಚೀಲವನ್ನು ಹೆಗಲಿಗೇರಿಸಿ ಮತ್ತೆ ಸಮುದ್ರದೆಡೆಗೆ ಹೊರಟ. ತೀರದಲ್ಲಿ ನೀರಿನ ಅಲೆಗಳ ಪಕ್ಕದಲ್ಲೇ ನಡೆಯುತ್ತಿದ್ದ. ಆಗ ಚೀಲದ ಭಾರವನ್ನು ಕಡಿಮೆ ಮಾಡ ಬೇಕೆನ್ನಿಸಿತು ಆತನಿಗೆ. ಒಂದು ಉಂಡೆಯನ್ನು ತೆಗೆದು ಶಕ್ತಿ ಪ್ರಯೋಗಿಸಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ನೀರಿನಲ್ಲಿ ಎಸೆದು ಬಿಟ್ಟ. ನಂತರ ಸ್ವಲ್ಪ ದೂರ ನಡೆದು ಮತ್ತೊಂದು ಉಂಡೆಯನ್ನು ಎಸೆದ ಅವನಿಗೆ ಅದೊಂದು ಬಗೆಯ ಆಟವೇ ಆಯಿತು. ಕೆಲ ಸಮಯದ ನಂತರ ಆತ ಹತ್ತಿರದ ಕಲ್ಲುಬಂಡೆ ಯೊಂದನ್ನು ಏರಿ ನಿಂತ. ಅಲ್ಲಿಂದಲೂ ಒಂದೆರಡು ಉಂಡೆಗಳನ್ನು ನೀರಿಗೆಸೆದ. ಇನ್ನು ಮೂರ್ನಾಲ್ಕು ಉಂಡೆಗಳು ಉಳಿದಿದ್ದವು. ಮತ್ತೊಂದನ್ನು ತೆಗೆದು ಎಸೆಯುವುದಕ್ಕೆ ಹೋದಾಗ ಕಾಲು ಜಾರಿತು. ಕೈಯಲ್ಲಿಯ ಉಂಡೆ ಬಂಡೆಯ ಮೇಲೆ ಬಿದ್ದು ಒಡೆಯಿತು. ಒಳಗಿನಿಂದ ಫಳ್ಳೆಂದು ಬೆಳಕು ಮಿಂಚಿತು. ಏನದು ಎಂದು ಬಗ್ಗಿನೋಡಿ ತೆಗೆದುಕೊಂಡ. ಅದೊಂದು ಹೊಳೆಹೊಳೆಯುವ ವಜ್ರ! ಅವನಿಗೆ ಆಶ್ಚರ್ಯ! ಉಳಿದೆರಡು ಉಂಡೆಗಳನ್ನು ಒಡೆದು ನೋಡಿದ. ಅವುಗಳಲ್ಲಿಯೂ ಒಂದೊಂದು ವಜ್ರ .ಅವುಗಳನ್ನು ಕಂಡು ಅವನಿಗೆ ಸಂತೋಷವಾಗಲಿಲ್ಲ. ಬದಲಿಗೆ ಅಳು ಬಂತು. ಕೆಳಗೆ ಕುಳಿತು ಬಿಕ್ಕಳಿಸಿ ಅತ್ತ. ಅವನ ಚೀಲದಲ್ಲಿ ನೂರಾರು ಮಣ್ಣಿನ ಉಂಡೆಗಳಲ್ಲಿ ವಜ್ರಗಳು ಕುಳಿತಿದ್ದವು. ಅವುಗಳ ಬೆಲೆ ಅರಿಯದೇ ಅವುಗಳನ್ನು ಕೇವಲ ಮಣ್ಣಿನ ಉಂಡೆಗಳೆಂದು ಬಗೆದು ನೀರಿಗೆ ಎಸೆದು ಬಿಟ್ಟಿದ್ದ! ಅವುಗಳ ಬೆಲೆ ಮೊದಲೇ ತಿಳಿದಿದ್ದರೆ ಆತ ಭಾರೀ ಶ್ರೀಮಂತನಾಗಿ ಬಿಡುತ್ತಿದ್ದ.

ನೀತಿ :-- ಜೀವನದಲ್ಲಿ ನಮಗೆ ಬೇಕೋ, ಬೇಡವೋ ನೂರಾರು ಘಟನೆಗಳು ನಡೆಯುತ್ತವೆ. ನೂರಾರು ಜನರ ಸಂಪರ್ಕ ಬರುತ್ತದೆ. ಅವು ಪ್ರತಿಯೊಂದೂ ಮಣ್ಣಿನ ಉಂಡೆಗಳಿದ್ದಂತೆ. ಅವುಗಳನ್ನು ಹತ್ತಿರದಿಂದ ಗಮನಿಸಿದ್ದರೆ, ಪ್ರೀತಿಯಿಂದ ತಟ್ಟದಿದ್ದರೆ ಒಳಗಿನ ವಜ್ರ ಕಾಣಲಿಕ್ಕಿಲ್ಲ. ಅವನ್ನು ನಾವು ಮರೆತು ಬಿಡುತ್ತೇವೆ. ಒಳಗಿನ ವಜ್ರವನ್ನು ಕಾಣುವ ಅವಕಾಶದಿಂದ ವಂಚಿತರಾಗುತ್ತೇವೆ. ನಮ್ಮ ಸಂಪರ್ಕಕ್ಕೆ ಬಂದ ಪ್ರತಿ ವ್ಯಕ್ತಿಯೂ ಒಂದು ವಜ್ರವೆಂಬಂತೆ ಭಾವಿಸಿ ನಡೆದರೆ ಬರಿ ತಪ್ಪುಗಳನ್ನೇ ಕಾಣುವುದು ತಪ್ಪಿ ಎಲ್ಲರಲ್ಲೂ ಒಳ್ಳೆಯದನ್ನು ಕಾಣುವ ಮನೋಭಾವ ಬೆಳೆಯುತ್ತದೆ ಅಲ್ಲವೇ?

ಬದುಕನ್ನು ಧೈರ್ಯದಿಂದ ಎದುರಿಸಿ

 ದಟ್ಟವಾದ ಕಾಡು, ಅಲ್ಲೊಂದು ಸರೋವರ, ಬದಿಯಲ್ಲಿ ಸಾವಿರಾರು ಮೊಲಗಳು, ಅವುಗಳಿಗೆ ಅಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು. ಅವುಗಳ ಪರಿ­ವಾರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇತ್ತು. ಮೊಲಗಳು ಮೊದಲೇ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳು. ಒಂದು ಚೂರು ಸದ್ದಾ­ದರೂ ಹೆದರಿ ಓಡು­ವಂಥ ಜೀವಿಗಳು.

ಒಂದು ಬಾರಿ ಮೊಲಗಳೆಲ್ಲ ಸಭೆ ಸೇರಿದ್ದಾಗ ಹಿರಿಯ ಮೊಲ­ವೊಂದು ಗಂಭೀರವಾಗಿ "ಬಂಧು­ಗಳೇ, ನಾವೆಲ್ಲ ಈ ಅರಣ್ಯದಲ್ಲಿ ಚೆನ್ನಾಗಿದ್ದೇವೆ ಎಂಬುದು ಒಂದು ಭಾವನೆ. ಆದರೆ, ನಿಜವಾಗಿ ನೋಡಿದರೆ ನಾವು ಇರುವಷ್ಟು ಆತಂಕದಲ್ಲಿ ಬೇರೆ ಯಾವ ಪ್ರಾಣಿಯೂ ಕಾಡಿನಲ್ಲಿ ಇರು­ವುದು ಸಾಧ್ಯವಿಲ್ಲ. ನಮ್ಮ ಸ್ವಭಾವವೇ ಪುಕ್ಕಲು. ನಾವು ಪಕ್ಕಾ ಸಸ್ಯಾಹಾರಿಗಳು, ಯಾರಿಗೂ ತೊಂದರೆ ಕೊಡುವವರಲ್ಲ. ಆದರೆ, ಎಲ್ಲರೂ ನಮ್ಮ ಮೇಲೆ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾರೋ ತಿಳಿ­ಯದು" ಎಂದು ಮಾತನಾಡಿತು.

ಅಲ್ಲದೆ, ಮಾಂಸಾಹಾರಿಗಳಾದ ಪ್ರಾಣಿ­ಗಳು ನಮಗೋಸ್ಕರ ಕಾಯುತ್ತಿರುತ್ತವೆ. ಸಿಕ್ಕಸಿಕ್ಕಲ್ಲಿ ನಮ್ಮವರನ್ನು ಹೊಡೆದು ತಿನ್ನು­ತ್ತವೆ. ಇನ್ನೊಂದೆಡೆಗೆ ಬೇಟೆ­ಗಾ­ರರೂ ನಮ್ಮನ್ನೇ ಹುಡುಕಿಕೊಂಡು ಬರುತ್ತಾರೆ. ಅಲ್ಲಲ್ಲಿ ಬಲೆ ಹಾಕಿ ನಮ್ಮನ್ನು ಹಿಡಿಯುತ್ತಾರೆ. ಸಿಕ್ಕವರನ್ನು ಹಿಡಿದುಕೊಂಡು ಹೋಗಿ ಕೆಲವರನ್ನು ಕೊಂದು ಮಾಂಸ ಮಾರುತ್ತಾರೆ. ಇನ್ನೂ ಕೆಲವರನ್ನು ಹಿಡಿದುಕೊಂಡು ಹೋಗಿ ಪಂಜರದಲ್ಲಿಟ್ಟು ಸಾಕುತ್ತಾರೆ. ಪಾಪ! ಆ ಮೊಲಗಳಿಗೆ ಜೀವನಪರ್ಯಂತ ಜೈಲು ವಾಸ. ನಾವು ಏನು ಮಾಡಬೇಕು ಎಂಬುದು ತಿಳಿಯ­ದಾಗಿದೆ ಎಂದಿತ್ತು ಇನ್ನೊಂದು ಮೊಲ.

ಒಂದೆಡೆಗೆ ನಮ್ಮನ್ನು ಬೇಟೆಯಾಡುವ ಕಾಡುಪ್ರಾಣಿ­ಗಳು, ಮತ್ತೊಂದೆ­ಡೆಗೆ ಬೇಟೆಗಾರರು. ಇಬ್ಬರಿಂದಲೂ ಹೇಗೆ ಪಾರಾಗಬೇ­ಕೆಂಬುದನ್ನು ನಾವು ಯೋಚಿಸಬೇಕ­ಲ್ಲವೇ? ಹಿರಿಯ ಮೊಲದ ಮಾತು­ಗಳನ್ನು ಶ್ರದ್ಧೆಯಿಂದ ಎಲ್ಲ ಮೊಲ­ಗಳು ಕೇಳಿದವು. ಅವುಗಳ ಕಣ್ಣ ಮುಂದೆ ತಮ್ಮ ಅತ್ಯಂತ ಅನಿಶ್ಚಿತವಾದ ಬದುಕು ತೇಲಿಬಂತು. ಪ್ರತಿಕ್ಷಣವೂ ಸಾವಿಗೆ ಹೆದರಿ ಓಡಬೇಕಾದ ಪರಿಸ್ಥಿತಿ ತಮ್ಮದು ಎಂದು ಚಿಂತಿಸಿ ಕಂಗಾಲಾದವು.

ಆಗ ಮತ್ತೊಂದು ಮೊಲ ಎದ್ದು ನಿಂತಿತು. ಅದು ಕಣ್ಣೀರು ಸುರಿಸುತ್ತಲೇ, "ಹೌದು, ಹಿರಿಯರು ಹೇಳಿ­ದಂತೆ ನಮ್ಮ ಬದುಕಿಗೆ ಯಾವ ಅರ್ಥವೂ ಇಲ್ಲ. ಹೀಗೆ ಕ್ಷಣಕ್ಷಣವೂ ಸಾಯು­ವುದಕ್ಕಿಂತ ಒಮ್ಮೆಯೇ ಸತ್ತು ಹೋಗುವುದು ವಾಸಿ. ನನ್ನ ಮಾತು ಕೇಳುವು­ದಾದರೆ ನಾವೆಲ್ಲ ಒಂದೇ ಬಾರಿ ಕೊಳದಲ್ಲಿ ಮುಳುಗಿ ಸತ್ತು ಹೋಗುವುದು ಸರಿಯಾದ ದಾರಿ" ಎಂದಿತು. ಅಲ್ಲಿ ಸೇರಿದ ಎಲ್ಲ ಮೊಲಗಳಿಗೆ ಈ ವಿಚಾರ ಅತ್ಯಂತ ಸರಿ ಎನ್ನಿಸಿತು. ಹಾಗಾದರೆ ತಡವೇಕೆ? ಇಂದೇ, ಈಗಲೇ ಹೋಗಿ ಕೊಳದಲ್ಲಿ ಹಾರಿಕೊಳ್ಳೋಣ ಎಂದು ಸಾವಿರಾರು ಮೊಲಗಳು ಕೊಳದ ಕಡೆಗೆ ನಡೆದವು.

ಆಗ ಒಂದು ಘಟನೆ ನಡೆಯಿತು. ಸಾವಿರಾರು ಮೊಲಗಳು ಕೊಳದ ಹತ್ತಿರ ಬಂದಾಗ ದಂಡೆಯಲ್ಲಿ ಕುಳಿತಿದ್ದ ಸಾವಿ­ರಾರು ಕಪ್ಪೆಗಳು ಗಾಬರಿಯಾಗಿ ನೀರಿಗೆ ಹಾರಿದವು. ಇದನ್ನು ಕಂಡ ಒಂದು ತರುಣ ಮೊಲ, "ಎಲ್ಲರೂ ನಿಲ್ಲಿ, ಯಾರೂ ನೀರಿಗೆ ಹಾರಬೇಕಿಲ್ಲ. ನಾವು ಬರುವುದನ್ನು ಕಂಡು ಗಾಬರಿ­ಯಾಗಿ ಹಾರಿದ ಕಪ್ಪೆಗಳನ್ನು ಕಂಡಿರಾ? ಅಂದರೆ ನಮ್ಮಂತಹ ಪುಕ್ಕಲು ಪ್ರಾಣಿ­ಗಳಿಗೂ ಹೆದರುವ ಪ್ರಾಣಿಗಳಿವೆಯಲ್ಲ! ನಮ್ಮ ಬದುಕು ಅವುಗಳಿಗಿಂತ ಎಷ್ಟೋ ವಾಸಿ. ಕಪ್ಪೆಗಳೇ ಬದುಕುವುದಕ್ಕೆ ಉತ್ಸಾಹ ತೋರುವಾಗ ನಾವೇಕೆ ಬದುಕಿನಿಂದ ಮುಖ ತಿರುಗಿಸಬೇಕು?" ಎಂದಿತು. ಮೊಲಗಳಿಗೆ ಈ ಮಾತು ಸರಿ ಎನ್ನಿಸಿತು. ಅವುಗಳ ಮುಖದಲ್ಲಿ ಸಂತೋಷ ತೇಲಾಡಿತು. ಅವು ಮತ್ತೆ ಕುಪ್ಪಳಿಸುತ್ತ ಕಾಡಿಗೆ ನಡೆದವು.

ನೀತಿ :-- ನಮಗೂ ಅನೇಕ ಬಾರಿ ಹೀಗೆಯೇ ಎನ್ನಿಸಿ, ನಿರಾಸೆ ಮೂಡುತ್ತದೆ. ಬದುಕು ವ್ಯರ್ಥವೆನ್ನಿ­ಸುತ್ತದೆ. ಆಗ ಸುತ್ತಲೂ ಕಣ್ತೆರದು ನೋಡಿದರೆ ನಮಗಿಂತ ಹೆಚ್ಚು ಕಷ್ಟದಲ್ಲಿ­ರುವವರು ನಗುನಗುತ್ತ ಬದುಕುವುದು ಕಾಣುತ್ತದೆ. ಅವರೇ ಸಂತೋಷವಾ­ಗಿರುವಾಗ ನಮಗೇಕೆ ಕೊರಗು ಎಂಬ ಧೈರ್ಯ ಮೂಡುತ್ತದೆ. ಕಾರಿನಲ್ಲಿ ಹೋಗುವವರನ್ನು ನೋಡಿ ಸಂಕಟಪಡು­ವುದಕ್ಕಿಂತ ಕಾಲಿನಲ್ಲಿ ಚಪ್ಪಲಿ ಕೂಡ ಇಲ್ಲದವರನ್ನು ನೋಡಿ ಸಮಾಧಾನ ಪಡುವುದು ಒಳ್ಳೆಯದು.

ಹನುಮಂತ ಶನಿಯನ್ನು ಕ್ಷಮಿಸಿ, ಒಳ್ಳೆಯ ಮಾರ್ಗ ತೋರಿದ

 ಒಮ್ಮೆ, ಶನಿ ದೇವರು ತನ್ನ ಹೆತ್ತವರ ಮೇಲೆ ಕೋಪಗೊಂಡು ಮನೆಯಿಂದ ಓಡಿಹೋಗಿದ್ದ. ಕೋಪದಲ್ಲಿ, ತನ್ನ ಶಕ್ತಿಯನ್ನು ಪ್ರದರ್ಶಿಸಲು ಆರಂಭಿಸಿದ. ಅವನು ಒಂದು ಗ್ರಾಮಕ್ಕೆ ಬಂದು, ಅಲ್ಲಿನ ಜನರು ತನಗೆ ನೀರು ಕೊಡಲು ನಿರಾಕರಿಸಿದಾಗ, ಕೋಪದಿಂದ ಗ್ರಾಮವನ್ನು ಸುಟ್ಟು ಹಾಕಲು ಪ್ರಯತ್ನಿಸಿದ.

ಗ್ರಾಮಸ್ಥರು ಭಯಭೀತರಾಗಿ, ಶನಿಯನ್ನು ಸುತ್ತುವರಿದು ಹಿಡಿಯಲು ಪ್ರಯತ್ನಿಸಿದರು. ಆಗ, ಅಲ್ಲಿಗೆ ಹನುಮಂತನು ಬಂದ. ಹನುಮಂತನು ಶನಿಯನ್ನು ಶಾಂತಗೊಳಿಸಿ, ಮನೆಗೆ ಹೋಗುವಂತೆ ಬೇಡಿಕೊಂಡ. ಆದರೆ, ಶನಿ ತನ್ನ ಅಹಂಕಾರದಿಂದ ಹನುಮಂತನ ಮಾತನ್ನು ಕೇಳಲಿಲ್ಲ. ಬದಲಾಗಿ, ಹನುಮಂತನೊಂದಿಗೆ ಯುದ್ಧಕ್ಕೆ ಸಿದ್ಧನಾದ.

ಇಬ್ಬರ ನಡುವೆ ಭೀಕರವಾದ ಗಧಾ ಯುದ್ಧ ನಡೆಯಿತು. ಆಕಾಶವು ಗುಡುಗು ಸದ್ದು ಮತ್ತು ಮಿಂಚಿನಿಂದ ಕಂಪಿಸುತ್ತಿತ್ತು. ಆದರೆ, ಹನುಮಂತನ ಶಕ್ತಿಯು ಅಪಾರವಾಗಿತ್ತು. ಅವನು ಶನಿಯನ್ನು ಸೋಲಿಸಿ, ತನ್ನ ಬಾಲದಲ್ಲಿ ಕಟ್ಟಿಕೊಂಡು, ಶನಿಯ ತಂದೆಯ ಬಳಿಗೆ ಕರೆದೊಯ್ದ.

ಶನಿಯ ತಂದೆಯು ತನ್ನ ಮಗನನ್ನು ನೋಡಿ ಬಹಳ ವಿಷಾದಿಸಿದ. ಅವನು ಹನುಮಂತನನ್ನು ಕ್ಷಮಿಸಿ, ಶನಿಯನ್ನು ಸರಿಯಾದ ಮಾರ್ಗಕ್ಕೆ ತರಲು ಸಹಾಯ ಮಾಡುವಂತೆ ಕೇಳಿಕೊಂಡ. ಹನುಮಂತನು ಕರುಣಾಳುವಾಗಿ ಶನಿಯನ್ನು ಕ್ಷಮಿಸಿ, ಅವನಿಗೆ ಒಳ್ಳೆಯ ಮಾರ್ಗವನ್ನು ತೋರಿಸಿದನು.

ನೀತಿ :-- ಅಹಂಕಾರವನ್ನು ತೊರೆದು, ಕರುಣೆ ಮತ್ತು ಗುರುವಿನ ಮಾತನ್ನು ಆಲಿಸುವಂತೆ ಕಲಿಸುತ್ತದೆ.

ಹನುಮಂತನನ್ನು ತನ್ನ ಗುರುವಾಗಿ ಸ್ವೀಕರಿಸಿ, ಆಜ್ಞೆಯನ್ನು ಪಾಲಿಸಿದ ಶನಿ

 ಹನುಮಂತನಲ್ಲಿ ಕ್ಷಮೆ ಮತ್ತು ಸಹನಾ ಗುಣಗಳು ಕಾಣಬಹುದು. ಇಂತಹ ಅನೇಕ ಗುಣಗಳಿರುವ ಹನುಮಂತನ ಅಪಾರ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಒಂದು ಸುಂದರ ಕಥೆ ನೋಡಬಹುದು. ಅವನು ಶನಿದೇವನಂತಹ ಶಕ್ತಿಶಾಲಿ ದೇವತೆಯನ್ನು ಸಹ ತನ್ನ ಇಚ್ಛೆಗೆ ಒಳಪಡಿಸಿದ. ಮತ್ತು ಭಗವಂತನ ಆಶ್ರಯದಲ್ಲಿ ಇದ್ದರೆ ಯಾವುದೇ ಕಷ್ಟವನ್ನು ಸುಲಭವಾಗಿ ಜಯಿಸಬಹುದು ಎಂಬ ವಿಶ್ವಾಸವನ್ನು ನೀಡುವ ಹನುಮಂತ ಹಾಗೂ ಶನಿಯ ಕುರಿತ ಕಥೆ ಇಲ್ಲಿ ನೋಡಬಹುದು.

ಕಲಿಯುಗದ ಆಗಮನದೊಂದಿಗೆ ಭೂಮಿಯಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿತ್ತು. ಧರ್ಮ ಕ್ಷೀಣಿಸಿ ಅಧರ್ಮ ಬೆಳೆಯುತ್ತಿತ್ತು. ಈ ಮಹಾಪರಿವರ್ತನದ ಸಮಯದಲ್ಲಿ ಶನಿದೇವನು ಹನುಮಂತನನ್ನು ಭೇಟಿಯಾಗಲು ನಿರ್ಧರಿಸಿದ. ಹನುಮಂತನಂತಹ ಭಕ್ತನ ಮೇಲೂ ತನ್ನ ಗ್ರಹದೋಷದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಚಿಂತೆಯಿಂದಲೇ ಅವನು ಹನುಮಂತನ ಆಶ್ರಯಕ್ಕೆ ಬಂದಿದ್ದ. "ಆಂಜನೇಯ, ಕಲಿಯುಗದ ಆಗಮನದಿಂದ ದೇವತೆಗಳಿಗೆ ಭೂಮಿಯಲ್ಲಿ ಇರುವುದು ಕಷ್ಟವಾಗಿದೆ. ಎಲ್ಲರ ಮೇಲೂ ನನ್ನ ಗ್ರಹದೋಷದ ಪ್ರಭಾವ ಬೀರುತ್ತಿದೆ. ನಿನು ರಾಮನ ಅಪಾರ ಭಕ್ತ. ಆದ್ದರಿಂದ ನನ್ನ ದೋಷವು ನಿನ್ನ ಮೇಲೆ ಪ್ರಭಾವ ಬೀರದಿರಬಹುದು. ಆದ್ದರಿಂದ ನೀನು ನನ್ನನ್ನು ಬಿಟ್ಟು ಬೇರೆ ಕಡೆ ಹೋಗು," ಎಂದು ಶನಿದೇವ ವಿಜ್ಞಾಪಿಸಿದ.

ಹನುಮಂತನು ಶಾಂತವಾಗಿ ನಗುತ್ತಾ, "ಶನಿದೇವ, ನೀನು ಧರ್ಮದ ರಕ್ಷಕ. ನಿನ್ನ ಕರ್ಮವನ್ನು ನಿರ್ವಹಿಸು. ನಾನು ನನ್ನ ಕರ್ಮವನ್ನು ನಿರ್ವಹಿಸುತ್ತೇನೆ," ಎಂದು ಹೇಳಿದ.

ಶನಿದೇವನಿಗೆ ಹನುಮಂತನ ಈ ಉತ್ತರ ಅಚ್ಚರಿಯನ್ನುಂಟು ಮಾಡಿತು. ಅವನು ತನ್ನ ಕೆಲಸವನ್ನು ಮಾಡಲು ನಿರ್ಧರಿಸಿ ಹನುಮಂತನ ಹಣೆಯ ಮೇಲೆ ಕುಳಿತುಕೊಂಡನು. ತಕ್ಷಣವೇ ಹನುಮಂತನ ಹಣೆಯಲ್ಲಿ ತುರಿಕೆ ಶುರುವಾಯಿತು. ಅವನು ಸಹಿಸಲಾಗದ ನೋವಿನಿಂದ ಪರ್ವತವೊಂದನ್ನು ಎತ್ತಿ ತನ್ನ ಹಣೆಯ ಮೇಲೆ ಇಟ್ಟುಕೊಂಡ. "ಆಂಜನೇಯ, ನೀನು ಏನು ಮಾಡುತ್ತಿದ್ದೀಯ?" ಎಂದು ಶನಿದೇವನು ಆತಂಕದಿಂದ ಕೇಳಿದ. "ನೀನು ನಿನ್ನ ಕೆಲಸ ಮಾಡು, ನಾನು ನನ್ನ ಕೆಲಸ ಮಾಡುತ್ತೇನೆ," ಎಂದು ಹನುಮಂತ ಶಾಂತವಾಗಿ ಹೇಳಿದ.

ತುರಿಕೆ ಇನ್ನೂ ನಿಲ್ಲದಿದ್ದರಿಂದ ಹನುಮಂತನು ಮತ್ತೊಂದು ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡನು. ಪರ್ವತದ ಭಾರವನ್ನು ತಾಳಲಾರದೆ ಶನಿದೇವನು ಹನುಮಂತನನ್ನು ಬಿಟ್ಟುಬಿಡುವಂತೆ ಬೇಡಿಕೊಂಡ. ಆದರೆ ಹನುಮಂತ ಶನಿಯ ಸೊಕ್ಕನ್ನು ಮುರಿಯಲು ಮತ್ತೊಂದು ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ಶನಿದೇವನಿಗೆ ಹನುಮಂತನ ಈ ಕೃತ್ಯ ಆಘಾತವನ್ನುಂಟು ಮಾಡಿತು. ಅವನು ತನ್ನ ತಪ್ಪನ್ನು ಅರಿತು ಹನುಮಂತನಲ್ಲಿ ಕ್ಷಮೆಯಾಚಿಸಿದ. ಆದರೆ ಹನುಮಂತನು ನಾಲ್ಕನೇ ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ಶನಿದೇವ ದುಃಖದಿಂದ ಹನುಮಂತನನ್ನು ಬಿಟ್ಟುಬಿಡುವಂತೆ ಕೇಳಿಕೊಂಡ. ಅಂತಿಮವಾಗಿ ಹನುಮಂತನು ಶನಿಯನ್ನು ನೋವಿನಿಂದ ಮುಕ್ತಗೊಳಿಸಿದ.

ಈ ಘಟನೆಯ ನಂತರ ಶನಿದೇವನಿಗೆ ಹನುಮಂತನ ಬಗ್ಗೆ ಅಪಾರ ಗೌರವ ಮೂಡಿತು. ಅವನು ಹನುಮಂತನನ್ನು ತನ್ನ ಗುರುವಾಗಿ ಸ್ವೀಕರಿಸಿ ಅವನ ಆಜ್ಞೆಯನ್ನು ಪಾಲಿಸುವೆನೆಂದು ಪ್ರತಿಜ್ಞೆ ಮಾಡಿದ.

ನೀತಿ :-- ಭಕ್ತಿಯ ಶಕ್ತಿ ಅಪಾರ. ಸತ್ಯ ಮತ್ತು ಧರ್ಮವನ್ನು ಎಂದಿಗೂ ಬಿಡಬಾರದು. ಅಲ್ಲದೆ ಸೊಕ್ಕು ಮತ್ತು ಅಹಂಕಾರವು ನಮ್ಮನ್ನು ನಾಶ ಮಾಡುತ್ತದೆ.

ಭಕ್ತಿಯ ಶಕ್ತಿ ಎಷ್ಟೇ ಕಷ್ಟದ ಪರಿಸ್ಥಿತಿಯೂ ಶಾಂತವಾಗುತ್ತದೆ

 ಕಿಷ್ಕಿಂದೆಯ ಕಾಡಿನಲ್ಲಿ, ಹನುಮಂತನು ತನ್ನ ಆತ್ಮೀಯ ಸ್ವಾಮಿ ಶ್ರೀರಾಮನನ್ನು ಸ್ಮರಿಸುತ್ತಾ ಆಸೀನನಾಗಿದ್ದ. ಅವನ ಮನಸ್ಸು ರಾಮನ ಸುಂದರ ರೂಪದಲ್ಲಿ ಮುಳುಗಿತ್ತು. ಆ ಸಮಯದಲ್ಲಿ, ತನ್ನ ಶಕ್ತಿಯನ್ನು ಪ್ರದರ್ಶಿಸುವ ಆಸೆಯಿಂದ ಶನಿದೇವನು ಅಲ್ಲಿಗೆ ಆಗಮಿಸಿದ. ಶನಿದೇವನು ಹನುಮಂತನನ್ನು ನೋಡಿ, "ಹೇ ಹನುಮಂತ! ನಾನು ಶನಿದೇವ. ನಿನ್ನ ಶಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ನನ್ನ ಶಕ್ತಿಯನ್ನು ನೀನು ಇನ್ನೂ ಅನುಭವಿಸಿಲ್ಲ. ನನ್ನೊಂದಿಗೆ ಯುದ್ಧಕ್ಕೆ ಸಿದ್ಧನಾಗು!" ಎಂದು ಸವಾಲು ಹಾಕಿದ.

ಹನುಮಂತನು ತನ್ನ ಧ್ಯಾನದಿಂದ ಹೊರಬಂದು ಶನಿದೇವನನ್ನು ನೋಡಿದ. ಆದರೆ ಅವನ ಮನಸ್ಸು ಇನ್ನೂ ರಾಮನಲ್ಲಿ ಮುಳುಗಿತ್ತು. ಶನಿದೇವನ ಮಾತನ್ನು ಅವನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಶನಿದೇವನು ಪದೇ ಪದೇ ಕಿರಿಕಿರಿ ಮಾಡುತ್ತಿದ್ದರಿಂದ ಅಂತಿಮವಾಗಿ ಹನುಮಂತನು ಕೋಪಗೊಂಡು ಯುದ್ಧಕ್ಕೆ ಸಿದ್ಧನಾದ. ಅವರ ನಡುವೆ ಭೀಕರ ಯುದ್ಧ ನಡೆಯಿತು. ಆಕಾಶವು ಕಪ್ಪು ಮೋಡಗಳಿಂದ ಕೂಡಿತು. ಮಿಂಚು ಹೊಳೆಯಿತು, ಗುಡುಗು ಸದ್ದು ಕೇಳಿಸಿತು. ಭೂಮಿ ಕಂಪಿಸುತ್ತಿತ್ತು. ಹನುಮಂತನ ಬಾಲವು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿತ್ತು. ಅವನ ಪ್ರತಿಯೊಂದು ಹೊಡೆತವೂ ಶನಿದೇವನನ್ನು ಹಿಂದಕ್ಕೆ ತಳ್ಳುತ್ತಿತ್ತು.

ಆದರೆ ಶನಿದೇವನೂ ಸಹ ಸುಲಭವಾಗಿ ಹಿಂದೆ ಸರಿಯಲಿಲ್ಲ. ಅವನು ತನ್ನ ಎಲ್ಲಾ ಶಕ್ತಿಯಿಂದ ಹನುಮಂತನನ್ನು ಹೋರಾಡಿದನು. ಆದರೆ ಹನುಮಂತನ ಶಕ್ತಿಯನ್ನು ನೋಡಿ ಆತನಿಗೆ ಆಶ್ಚರ್ಯವಾಯಿತು. ಹನುಮಂತನ ಬಾಲದಿಂದ ಹೊರಟ ಬೆಂಕಿಯ ಜ್ವಾಲೆಗಳು ಶನಿದೇವನನ್ನು ಸುಟ್ಟು ಹಾಕುತ್ತಿದ್ದವು. ಕೊನೆಗೆ ತನ್ನ ಸೋಲನ್ನು ಅರಿತುಕೊಂಡ ಶನಿದೇವನು ಹನುಮಂತನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. "ಹನುಮಂತ, ದಯವಿಟ್ಟು ನನ್ನನ್ನು ಕ್ಷಮಿಸು. ನನ್ನ ಅಹಂಕಾರದಿಂದಾಗಿ ನಾನು ನಿನ್ನನ್ನು ಕೆರಳಿಸಿದೆ. ದಯವಿಟ್ಟು ನನ್ನನ್ನು ಬಿಡುಗಡೆ ಮಾಡು" ಎಂದು ಅಳುತ್ತಾ ಕೇಳಿಕೊಂಡನು.

ಹನುಮಂತನ ಹೃದಯವು ಕರುಣೆಯಿಂದ ತುಂಬಿತು. ಅವನು ಶನಿದೇವನನ್ನು ತನ್ನ ಬಾಲದಲ್ಲಿ ಕಟ್ಟಿಟ್ಟುಕೊಂಡು ಆಕಾಶದಲ್ಲಿ ಎತ್ತಿಕೊಂಡು ಹೋದ. ಭೂಮಿಯ ಮೇಲೆ ಎಲ್ಲೆಲ್ಲಿ ನೋಡಿದರೂ ಶನಿದೇವನಿಗೆ ತಂಪಾದ ನೀರು ಸಿಗುತ್ತಿರಲಿಲ್ಲ. ಬಹಳ ಸಮಯದ ನಂತರ ಅವನಿಗೆ ಸಾಸಿವೆ ಎಣ್ಣೆಯ ಸಮುದ್ರ ಸಿಕ್ಕಿತು. ಹನುಮಂತನು ಶನಿದೇವನನ್ನು ಆ ಎಣ್ಣೆಯಲ್ಲಿ ಮುಳುಗಿಸಿದನು. ಸಾಸಿವೆ ಎಣ್ಣೆಯ ತಂಪಾದ ಸ್ಪರ್ಶದಿಂದ ಶನಿದೇವನಿಗೆ ಬಹಳ ಆರಾಮವಾಯಿತು. ಅದಾದ ಮೇಲೆ ಹನುಮಂತನು ಶನಿದೇವನನ್ನು ಬಿಡುಗಡೆ ಮಾಡಿದ. ಶನಿದೇವನು ಹನುಮಂತನ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದನು. ಅಂದಿನಿಂದ ಶನಿದೇವ ಹನುಮಂತನ ಅಪಾರ ಭಕ್ತನಾದ.

ನೀತಿ :-- ಅಹಂಕಾರದಿಂದ ಅಪಾಯ. ಭಕ್ತಿಯ ಶಕ್ತಿ ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಶಾಂತವಾಗುತ್ತದೆ.

ಮೂವತ್ತು ವರ್ಷಗಳ ಹಿಂದಿನ ಸತ್ಯ

 ಸೂರ್ಯನ ಕಿರಣಗಳು ವೃದ್ಧಾಶ್ರಮದ ಕಿಟಕಿಗಳ ಮೂಲಕ ಒಳ ನುಸುಳುತ್ತಿದ್ದವು. ಅದರಲ್ಲಿ ಒಂದು ಕೋಣೆಯಲ್ಲಿ, ಮೂವತ್ತು ವರ್ಷದ ಸುಮಿತ್ ತನ್ನ ತಂದೆ ರಾಮಚಂದ್ರನ ವಸ್ತುಗಳನ್ನು ಜೋಡಿಸುತ್ತಿದ್ದ. ಸುಮಿತ್‌ನ ಮನಸ್ಸು ಒಂದು ಕಡೆ ತನ್ನ ತಂದೆಯನ್ನು ವೃದ್ಧಾಶ್ರಮದಲ್ಲಿ ಬಿಟ್ಟ ಬೇಸರದಿಂದಲೂ, ಮತ್ತೊಂದೆಡೆ ಹೆಂಡತಿ ಅನುಜಾಳ ಮಾತುಗಳಿಂದಲೂ ತುಂಬಿತ್ತು. ಅನುಜಾ ಫೋನಿನಲ್ಲಿ ಹೇಳಿದ್ದ ಮಾತುಗಳು ಇನ್ನೂ ಅವನ ಕಿವಿಗಳಲ್ಲಿ ರಿಂಗಣಿಸುತ್ತಿದ್ದವು. "ತಂದೆಗೆ ಮತ್ತೆ ಮನೆಗೆ ಬರುವುದು ಬೇಡ, ವರ್ಷವಿಡೀ ಹಬ್ಬ ಹರಿದಿನಗಳಲ್ಲೂ ಅಲ್ಲೇ ಇರುವಂತೆ ಹೇಳು."

ಸುಮಿತ್ ತನ್ನ ತಂದೆಯನ್ನು ನೋಡಿದಾಗ, ಅವರು ವೃದ್ಧಾಶ್ರಮದ ಮೇಲ್ವಿಚಾರಕರೊಂದಿಗೆ ನಗುನಗುತ್ತಾ ಮಾತನಾಡುತ್ತಿದ್ದರು. ಇದನ್ನು ನೋಡಿ ಸುಮಿತ್‌ಗೆ ಆಶ್ಚರ್ಯವಾಯಿತು. ತನ್ನ ತಂದೆಗೆ ಅಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ತಿಳಿದು ಸಂತೋಷವಾಯಿತು. ಆದರೆ, ಅನುಜಾಳ ಮಾತುಗಳು ಮತ್ತೆ ಅವನ ಮನಸ್ಸನ್ನು ಕೆರೆದುಕೊಂಡವು.

ಸುಮಿತ್ ತನ್ನ ತಂದೆಯ ಕೋಣೆಗೆ ಸಾಮಾನು ಇಡಲು ಹೋದಾಗ ಮೇಲ್ವಿಚಾರಕರನ್ನು ಕೇಳಿದ, "ನನ್ನ ಅಪ್ಪನಿಗೆ ನಿಮ್ಮ ಪರಿಚಯ ಇದೆಯಾ?" ಮೇಲ್ವಿಚಾರಕರು ನಗುತ್ತಾ ಹೇಳಿದರು, "ನನ್ನ ನಿಮ್ಮ ತಂದೆಯ ಪರಿಚಯ ಮೂವತ್ತು ವರ್ಷದ ಹಿಂದಿನದು. ಮೂವತ್ತು ವರ್ಷದ ಹಿಂದೆ ಅವರು ಈ ಅನಾಥಾಶ್ರಮಕ್ಕೆ ಬಂದು ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರು."

ಸುಮಿತ್‌ಗೆ ಆಗ ಅರ್ಥವಾಯಿತು. ತನ್ನ ತಂದೆ ಯಾವಾಗಲೂ ದಯಾಳು ಮತ್ತು ಕರುಣಾಮಯಿ. ಅವರು ಒಬ್ಬ ಅನಾಥನಿಗೆ ತಂದೆಯಾಗಿದ್ದರು. ಆದರೆ, ತಾನು ಅದನ್ನು ಮರೆತಿದ್ದೆ. ತನ್ನ ಹೆಂಡತಿಯ ಮಾತುಗಳಿಗೆ ಬಲಿಯಾಗಿ ತನ್ನ ತಂದೆಯ ಈ ಮಹಾನ್ ಕಾರ್ಯವನ್ನು ಮರೆತಿದ್ದೆ.

ಸುಮಿತ್‌ಗೆ ತನ್ನ ತಂದೆಯ ಮೇಲೆ ಅಪಾರ ಗೌರವ ಮತ್ತು ಪ್ರೀತಿ ಹುಟ್ಟಿಕೊಂಡಿತು. ಅವನ ಕಣ್ಣುಗಳಲ್ಲಿ ನೀರು ತುಂಬಿತ್ತು. ತನ್ನ ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಅಂದು ಸುಮಿತ್‌ಗೆ ಅರ್ಥವಾಯಿತು, ಜೀವನದಲ್ಲಿ ಸಂಬಂಧಗಳು ಎಷ್ಟು ಮುಖ್ಯ ಮತ್ತು ಅವುಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು.

ನೀತಿ :-- ಮುಂದಿನ ದಿನಗಳಲ್ಲಿ ಸುಮಿತ್ ತನ್ನ ತಂದೆಯನ್ನು ಹೆಚ್ಚು ಹೆಚ್ಚು ಭೇಟಿ ಮಾಡುತ್ತಿದ್ದ. ಅವರೊಂದಿಗೆ ಸಮಯ ಕಳೆಯುತ್ತಿದ್ದ. ತಂದೆಯ ಜೊತೆ ಕಳೆದ ಪ್ರತಿ ಕ್ಷಣವನ್ನು ಅವನು ಆನಂದಿಸುತ್ತಿದ್ದ. ಸುಮಿತ್‌ಗೆ ಅರ್ಥವಾಯಿತು, ಜೀವನದಲ್ಲಿ ಹಣ, ಆಸ್ತಿಗಿಂತ ಸಂಬಂಧಗಳು ಬಹಳ ಮುಖ್ಯ.

ಆಹಾರ ಮತ್ತು ಆತ್ಮದ ಸಂಬಂಧ

 ಒಂದು ಕಾಲದಲ್ಲಿ, ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಸರಳ ಮನುಷ್ಯ ವಾಸಿಸುತ್ತಿದ್ದ. ಅವನು ಪ್ರತಿದಿನ ಬೆಳಗ್ಗೆ ಎದ್ದು, ತನ್ನ ತೋಟದಿಂದ ತಾಜಾ ತರಕಾರಿಗಳನ್ನು ಕೊಯ್ದು, ಅದನ್ನು ಕೈಯಲ್ಲಿ ಹಿಡಿದು, ಮನೆಯಲ್ಲಿ ಸರಳವಾದ ಊಟ ಮಾಡುತ್ತಿದ್ದ. ಅವನು ಊಟ ಮಾಡುವಾಗ, ಪ್ರತಿ ಬೆರಳು ಆಹಾರವನ್ನು ಸ್ಪರ್ಶಿಸುವಾಗ, ಅವನಿಗೆ ಅನುಭವವಾಗುತ್ತಿತ್ತು, ಆಹಾರವು ಅವನ ದೇಹಕ್ಕೆ ಪೋಷಣೆ ನೀಡುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ, ಅದು ಅವನ ಆತ್ಮಕ್ಕೆ ಶಾಂತಿ ನೀಡುತ್ತಿದೆ.

ಒಮ್ಮೆ, ಅವನ ಹಳ್ಳಿಗೆ ಒಬ್ಬ ವಿದೇಶಿಯೊಬ್ಬ ಬಂದ. ಅವನು ಚಮಚ ಮತ್ತು ಫೋರ್ಕ್ ಬಳಸಿ ಊಟ ಮಾಡುತ್ತಿದ್ದ. ಗ್ರಾಮಸ್ಥರು ಅವನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆ ವಿದೇಶಿಯು ಚಮಚ ಮತ್ತು ಫೋರ್ಕ್ ಬಳಸುವುದು ಏಕೆ ಎಂದು ಕೇಳಿದಾಗ, ಗ್ರಾಮಸ್ಥನು, "ಕೈಗಳಿಂದ ತಿನ್ನುವುದು ನಮ್ಮ ಸಂಸ್ಕೃತಿ. ಕೈಗಳು ಆಹಾರವನ್ನು ಪವಿತ್ರಗೊಳಿಸುತ್ತವೆ ಮತ್ತು ನಮ್ಮ ಆತ್ಮಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತವೆ." ಎಂದು ಹೇಳಿದ.

ವಿದೇಶಿಯು ಇದನ್ನು ಕೇಳಿ ಆಶ್ಚರ್ಯಚಕಿತನಾದ. ಅವನು ಕುತೂಹಲದಿಂದ ಗ್ರಾಮಸ್ಥನೊಂದಿಗೆ ಊಟ ಮಾಡಲು ಕುಳಿತ. ಅವನು ಕೈಗಳಿಂದ ಊಟ ಮಾಡಿದಾಗ, ಅವನಿಗೆ ಒಂದು ವಿಚಿತ್ರವಾದ ಅನುಭವವಾಯಿತು. ಆಹಾರವು ಅವನ ದೇಹಕ್ಕೆ ಮಾತ್ರವಲ್ಲ, ಅವನ ಮನಸ್ಸಿಗೂ ಶಾಂತಿ ನೀಡುತ್ತಿದೆ ಎಂದು ಅವನಿಗೆ ಅನಿಸಿತು.

ಅವನು ಮನೆಗೆ ಹೋದ ನಂತರ, ಅವನು ಈ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲು ಪ್ರಾರಂಭಿಸಿದ. ಅವನು "ನಮ್ಮ ಕೈಗಳಲ್ಲಿ ಐದು ಅಂಶಗಳ ಶಕ್ತಿ ಇರುತ್ತದೆ. ಅದು ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ. ಈ ಅಂಶಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತವೆ" ಎಂದುಬಕಂಡುಕೊಂಡ.

ಅವನು ತನ್ನ ದೇಶಕ್ಕೆ ಹಿಂದಿರುಗಿದಾಗ, ಅವನು ತನ್ನ ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಕೈಗಳಿಂದ ತಿನ್ನುವ ಬಗ್ಗೆ ಹೇಳಿದ. ಅವರೆಲ್ಲರೂ ಇದನ್ನು ಪ್ರಯತ್ನಿಸಿ ನೋಡಿದರು ಮತ್ತು ಅವರಿಗೆ ಇದು ತುಂಬಾ ಇಷ್ಟವಾಯಿತು. ಇಂದಿಗೂ, ಅನೇಕ ಜನರು ಕೈಗಳಿಂದ ತಿನ್ನುವುದನ್ನು ಮುಂದುವರಿಸುತ್ತಾರೆ. ಏಕೆಂದರೆ ಅವರಿಗೆ ಗೊತ್ತು, ಕೈಗಳು ಆಹಾರಕ್ಕಿಂತ ಹೆಚ್ಚಾಗಿ, ನಮ್ಮ ಆತ್ಮಕ್ಕೆ ಸಂಪರ್ಕ ಕಲ್ಪಿಸುತ್ತವೆ.

ನೀತಿ :-- ಕೈಗಳಿಂದ ತಿನ್ನುವುದು ಕೇವಲ ಆಹಾರವನ್ನು ಸೇವಿಸುವ ವಿಧಾನವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮದ ಭಾಗವಾಗ. ಕೈಗಳು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಕೈಗಳಿಂದ ತಿನ್ನುವುದರಿಂದ ಆಹಾರವನ್ನು ಹೆಚ್ಚು ಆನಂದಿಸಬಹುದು. ಆದ್ದರಿಂದ ನಮ್ಮ ಪೂರ್ವಜರ ಸಂಸ್ಕೃತಿಯಲ್ಲಿ ಅನೇಕ ವಿಶೇಷ ವಿಷಯಗಳಿವೆ, ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|

ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||

ಅಂದರೆ ಕೈಗಳ ಮುಂದಿನ ಭಾಗದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿ ನೆಲೆಸಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು. ಈ ಶ್ಲೋಕ, ದೈವತ್ವ ನಮ್ಮ ಕೈಗಳ ಒಳಗೆ ಇರುತ್ತದೆ ಎಂಬುದನ್ನು ಸೂಚಿಸುತ್ತದೆ.

ಅನ್ನದಾನದ ಮಹಿಮೆ

 ಸತ್ಯಜಿತ್‌ ಎಂಬ ಬ್ರಾಹ್ಮಣ. ಆತ ಸದಾಚಾರ ಸಂಪನ್ನ. ಅಲ್ಲದೆ ಆತ ಗಂಗೆಯ ಭಕ್ತ. ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ ಮಾಡುತಿದ್ದ. ಯವಾಗಲೂ ತೀರ್ಥ ಯಾತ್ರೆ ಮಾಡುತಿದ್ದ.

ಒಮ್ಮೆ ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲದಿಂದ ಹೊರಟ. ಕುರುಕ್ಷೇತ್ರ ಎನ್ನುವ ಊರಿಗೆ ಬರುತ್ತಾನೆ. ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ. ಆ ಗ್ರಾಮದ ಜನರು ಸತ್ಯಕೇತು ಎನ್ನುವ ಬ್ರಾಹ್ಮಣ ಆತ ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ, ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದೆಂದು ಹೇಳಿದರು.

ಸತ್ಯಜಿತ್‌ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು 'ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ, ಆಗಮನ ನನ್ನ ಜನ್ಮಾಂತರದ ಪುಣ್ಯದ ಫಲ, ನಮ್ಮಪಿತೃದೇವತೆಗಳು ಇಂದು ಸಂತೃಪ್ತಿ ಹೊಂದುವರು. ಅಲ್ಲದೆ ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು. ಏಳಿ, ತಮ್ಮ ಸ್ನಾನ ಆಹ್ನೀಕಗಳನ್ನು ಮುಗಿಸಿಕೊಂಡು ಭೋಜನ ಮಾಡಲು ಸಿದ್ದರಾಗಿ ಎಂದು ಕೈಮುಗಿದು ವಿಜ್ಞಾಪಿಸಿದ.

ಸತ್ಯಜಿತ್‌ ಎನ್ನುವ ಬ್ರಾಹ್ಮಣ ಅವನ ಮಾತಿಗೆ ಸಂತಸಗೊಂಡು 'ಅಯ್ಯಾ, ಸತ್ಯಕೇತು ಎಲ್ಲಾ ಕಡೆಯಿಂದ ಹಾರಿ ಬರುವ ಪಕ್ಷಿಗಳಿಗೆ ವೃಕ್ಷಗಳು ಹೇಗೆ ಆಶ್ರಯ ನೀಡುವದೋ, ಅದೇ ರೀತಿಯಲ್ಲಿ ನೀನು ಬರುವಂತಹ ಯಾತ್ರಿಕರಿಗೆ ಆಶ್ರಯದಾತ ನಾಗಿದ್ದೀ, ನಿನ್ನಂತಹ ಗೃಹಸ್ಥ ಇನ್ನೊಬ್ಬ ಇಲ್ಲ" ಎನ್ನುತ್ತ, "ನೀನು ಗಂಗಾಸ್ನಾನ ಮಾಡಿರುವೆಯಾ?" ಎಂದು ಕೇಳಿದ. ಅದಕ್ಕೆ ಸತ್ಯಕೇತು "ಕ್ಷಮಿಸಿ. ನಾನು ಇದುವರೆಗೆ ಗಂಗಾಸ್ನಾನ ಮಾಡಿಲ್ಲ. ನಾನು ಗಂಗಾಸ್ನಾನ ಮಾಡಲು ಹೊರಟರೆ ಇಲ್ಲಿ ನಿತ್ಯ ಬರುವ ಯಾತ್ರಿಕರಿಗೆ ತೊಂದರೆ ಆಗುತ್ತದೆ. ಮತ್ತು ನನ್ನ ಅನ್ನದಾನ ಮಾಡುವ ಸಂಕಲ್ಪ ನಿಂತು ಹೋಗುತ್ತದೆ. ಹಾಗಾಗಿ ಹೋಗಿಲ್ಲ. ಎಂದು ಉತ್ತರಿರಿಸಿದ. ಈ ಮಾತನ್ನು ಕೇಳಿ ಸತ್ಯಜಿತ್‌ 'ಛೇ! ಗಂಗಾ ಸ್ನಾನ ಮಾಡದ ನಿನ್ನ ಮುಖ ದರುಶನ, ನಿನ್ನ ಮನೆಯ ಭೋಜನ ಆತಿಥ್ಯ ಎಲ್ಲಾ ನಿಷಿದ್ಧ, ತಿಳಿಯದೆ ನಿನ್ನ ಮನೆಗೆ ಬಂದೆ" ಎಂದು ಅವನ ಮನೆಯ ಆತಿಥ್ಯ ನಿರಾಕರಿಸಿ, ಅವನಿಗೆ ನಿಂದಿಸಿ ಹಾಗೇ ಹೊರಟ.

ಅಲ್ಲಿಂದ ಗಂಗಾನದಿಯ ದಡಕ್ಕೆ ಬಂದು ನೋಡಿದ, ಸುತ್ತಲೂ ಬರಿ ಮರುಳು. ಒಂದು ಹನಿ ಸಹ ಗಂಗಾ ನದಿಯ ಕಾಣುತ್ತಾ ಇಲ್ಲ "ಅಮ್ಮಾ, ಗಂಗಾ ಮಾತೆ!" ನಾನು ಯಾವ ಅಪರಾಧ ಮಾಡಿಲ್ಲ. ಯಾಕೇ ನಿನ್ನ ದರುಶನ, ಸ್ನಾನ ನನಗೆ ಇಲ್ಲ, ದಯವಿಟ್ಟು ಕೃಪೆ ಮಾಡೆಂದು ಮರುಳಲ್ಲಿ ಬಿದ್ದು ಗೋಳಾಡಿದ. ಆಗ ತಾಯಿ ಗಂಗೆ "ಎಲೈ ಮೂಢ! ಸತ್ಯಕೇತುವಿನ ಮನೆಯ ಅನ್ನವನ್ನು ತಿರಸ್ಕರಿಸಿ, ಅವನನ್ನು ನಿಂದಿಸಿ ಬಂದ ಕಾರಣದಿಂದ ನಿನಗೆ ನಾನು ಒಲಿಯುವದಿಲ್ಲ" ಎಂದಳು. "ಅನ್ನದಾನ ಕ್ಕೆ ಸಮನಾದ ದಾನ ಇನ್ನೊಂದು ಇಲ್ಲ. ನಿತ್ಯ ಅನ್ನದಾನ ಮಾಡುತ್ತಾ, ಯಾತ್ರೆ ಮಾಡಿದರೆ ಚ್ಯುತಿ ಆಗುವುದೆಂದು ಗಂಗಾಸ್ನಾನ ಮಾಡದೇ ಮನೆಯಲ್ಲಿ ಬಂದಂತಹ ಅತಿಥಿಗಳ ಸತ್ಕಾರ ಮಾಡಿ ಅವರನ್ನು ಸಂತಸ ಪಡಿಸುವ ಸತ್ಯಕೇತು ಎಂಬ ಸಜ್ಜನ ವ್ಯಕ್ತಿಯ ಮನಸ್ಸು ನೋಯಿಸಿ, ಅವನ ಆತಿಥ್ಯ ತಿರಸ್ಕರಿಸಿದ ಪಾಪಕ್ಕೆ ಇದು ಶಿಕ್ಷೆ. ಹೋಗಿ ಅವನ ಮನೆಯ ಆತಿಥ್ಯ ಸ್ವೀಕರಿಸಿ ಬಾ" ಎಂದು ಗಂಗಾದೇವಿ ಆದೇಶಿಸಿದಳು.

ತಾಯಿಯ ಆದೇಶದಂತೆ ಬೇಗನೆ ಅವನ ಮನೆಗೆ ಹೊರಡುತ್ತನೆ. ಅಲ್ಲಿ ಬಂದಂತಹ‌ ಅತಿಥಿ ಊಟ ಮಾಡದೆ ಹೊರಟ ಎನ್ನುವ ದುಃಖ ದಿಂದ ಸತ್ಯಕೇತು ಕುಳಿತಿದ್ದ. ಮತ್ತೆ ತಿರುಗಿ ಬಂದ ಬ್ರಾಹ್ಮಣನಿಗೆ ಮತ್ತೆ ಉಪಚಾರ ಮಾಡಿ ಭೋಜನ ಮಾಡಿಸಿ ಕಳುಹಿಸಿದ.

ಹೋಗುವ ಮುಂಚೆ "ಅನ್ನದಾನದ ಮಹಿಮೆಯನ್ನು ತಿಳಿಯದೇ ನಿನಗೆ ನಿಂದಿಸಿದೆ‌, ನನ್ನ ಕ್ಷಮಿಸಿ" ಎಂದು ಹೇಳಿ ಅವನ ಅಪ್ಪಣೆ ಪಡೆದು ಗಂಗಾನದಿಯ ಕಡೆ ಬರುತ್ತಾನೆ. ಆಗ ತುಂಬಿ ಹರಿಯುವ ಗಂಗೆಯ ಪ್ರವಾಹವನ್ನು ಕಂಡು ಸಂತಸ ಪಟ್ಟ. ಗಂಗೆಯಲ್ಲಿ ಮಿಂದು ಪುನೀತನಾಗುತ್ತಾನೆ ಸತ್ಯಜಿತ್.

ನೀತಿ :-- ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ. ಅನ್ನವೇ ಪ್ರಾಣ. ಅನ್ನದಾನ ಮಾಡುವವನು ಹಸಿದವರಿಗೆ ಪ್ರಾಣದಾನ ಮಾಡಿದಂತೆ. ಅನ್ನದಾನವನ್ನು ಯಾರು ಮಾಡುತ್ತಾರೆಯೋ ಅವರು ಉತ್ತಮ ಲೋಕವನ್ನು ಪಡೆದು, ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಆನೆಯ ಬೆನ್ನ ಮೇಲಿನ ಸವಾರಿ

 ಒಂದು ದಟ್ಟವಾದ ಕಾಡು. ಅಲ್ಲಿ ಆನೆಯೊಂದಿತ್ತು. ದಿನಾಲೂ ನೀರು ಕುಡಿಯಲು ಸಮೀಪದ ಕೊಳಕ್ಕೆ ಹೋಗಿ, ನೀರು ಕುಡಿದು ಸಂಗಡಿಗರೊಂದಿಗೆ ಕೊಳದಲ್ಲಿ ಈಜುತ್ತಿತ್ತು. ಆ ಕೊಳದಲ್ಲೊಂದು ಕಪ್ಪೆ ವಾಸವಾಗಿತ್ತು. ಆನೆ ನೀರು ಕುಡಿದು ಈಜಾಡುವುದನ್ನು ಅದು ದಿನವೂ ನೋಡುತ್ತಿತ್ತು. ಅದಕ್ಕೆ ಒಮ್ಮೆಯಾದರೂ ಆನೆಯ ಬೆನ್ನನ್ನೇರಿ ಸವಾರಿ ಮಾಡಬೇಕೆಂಬ ಆಸೆಯಾಗಿತ್ತು. ಆದರೆ ಆನೆಯನ್ನು ಕೇಳಲು ಭಯ. ಹಾಗೂಹೀಗೂ ಒಂದು ದಿನ ಧೈರ್ಯ ಮಾಡಿ "ಆಯ್ಯಾ, ಆನೆ ನನ್ನದೊಂದು ಕೋರಿಕೆ ಇದೆ. ಸಾಯುವ ಮೊದಲು ನಿನ್ನ ಬೆನ್ನನ್ನು ಏರಿ ಕಾಡಿನಲ್ಲಿ ಸವಾರಿ ಮಾಡಬೇಕು" ಎಂದು ಕೇಳಿಯೇ ಬಿಟ್ಟಿತು. ಆನೆಗೆ ಕಪ್ಪೆಯ ಮೇಲೆ ಕನಿಕರ ಪಟ್ಟು ಅಷ್ಟೇ ತಾನೇ ಎಂದು ಅನುಮತಿ ನೀಡಿತು.

ಒಂದು ದಿನ ಬಿಡುವು ಮಾಡಿಕೊಂಡು ಆನೆ, ಕಪ್ಪೆ ಬಳಿಗೆ ಬಂದಿತು. ಕಪ್ಪೆಯ ಮುಂದೆ ಮಂಡಿಯೂರಿ ನೆಲದತ್ತ ಬಾಗಿತು. ಕಪ್ಪೆ ಆನೆಯ ಬೆನ್ನ ಮೇಲೆ ಹಾರಿತು. ಆನೆ ಕಪ್ಪೆಯನ್ನು ಸವಾರಿ ಕರೆದೊಯ್ಯಿತು. ಕಡೆಗೂ ಕಪ್ಪೆಯ ಬಹುದಿನಗಳ ಕನಸು ನೆರವೇರಿತ್ತು. ಆನೆ ಮತ್ತೆ ಕೊಳದ ಬಳಿ ತಂದುಬಿಟ್ಟಿತು. ಆದರೆ ಕಪ್ಪೆಗೆ ಆನೆಯ ಬೆನ್ನ ಮೇಲಿನ ಸವಾರಿ ತುಂಬಾ ಹಿಡಿಸಿತ್ತು. ಅದು ಕೆಳಕ್ಕಿಳಿಯಲು ಒಪ್ಪಲಿಲ್ಲ. ಆನೆ ಕಪ್ಪೆಯನ್ನು ಎಷ್ಟು ಕೇಳಿಕೊಂಡರೂ ಕಪ್ಪೆ ಹಿಡಿದ ಹಠವನ್ನು ಬಿಡಲಿಲ್ಲ. ಆನೆಗೆ ಸಿಟ್ಟು ಬಂದು ಸೊಂಡಿಲಿನಲ್ಲಿ ಕಪ್ಪೆಯನ್ನು ಬೀಳಿಸಲು ಯತ್ನಿಸಿತು. ಆದರೆ ಆಗಲಿಲ್ಲ. ಕಡೆಗೆ ಒಂದುಪಾಯ ಮಾಡಿತು. ದಾರಿಯಲ್ಲಿ ಸಿಕ್ಕ ಹಾವನ್ನು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿತು. ಹಾವು ಆನೆಯ ಬೆನ್ನನ್ನೇರಿತು. ಹಾವನ್ನು ನೋಡುತ್ತಲೇ ದಿಗಿಲು ಬಿದ್ದ ಕಪ್ಪೆ ಜಾಗ ಖಾಲಿ ಮಾಡಿತು.

ಹಾವು ಆನೆಯನ್ನು ಸವಾರಿ ಮಾಡಿಸುವಂತೆ ಕೇಳಿಕೊಂಡಿತು. ಕಪ್ಪೆಯನ್ನು ಓಡಿಸಿ ಸಹಾಯ ಮಾಡಿದ್ದರಿಂದ ಆನೆ ಅದರ ಕೋರಿಕೆಯನ್ನು ಮನ್ನಿಸಿತು. ಸವಾರಿ ಮುಗಿಯುವಷ್ಟರಲ್ಲಿ ಹಾವಿಗೆ ಆನೆಯ ಬೆನ್ನು ತುಂಬಾ ಹಿಡಿಸಿತ್ತು. ಅದು ಮೆತ್ತನೆಯ ಹಾಸಿಗೆಯಂತೆ ತೋರಿತ್ತು. ಹೀಗಾಗಿ ಹಾವು ಕೂಡಾ ಬೆನ್ನ ಮೇಲಿಂದ ಕೆಳಕ್ಕಿಳಿಯಲು ಒಪ್ಪಲಿಲ್ಲ. ಇದ್ಯಾವ ಗ್ರಹಚಾರವೆಂದು ಆನೆ ಹಣೆ ಚಚ್ಚಿಕೊಂಡಿತು. ಅದೇ ಸಮಯಕ್ಕೆ ಮುಂಗುಸಿಯೊಂದು ಬಂದಿತು. ಹಾವು ಮುಂಗುಸಿಯ ಶತ್ರುವಾಗಿದ್ದರಿಂದ ಆನೆ ಅದರ ಸಹಾಯ ಕೋರಿತು. ಮುಂಗುಸಿ ಒಂದೇ ಏಟಿಗೆ ಆನೆಯ ಬೆನ್ನನ್ನೇರಿದ ಮರುಕ್ಷಣವೇ ಹಾವು ಕೆಟ್ಟೆನೋ ಬಿಟ್ಟೆನೋ ಎಂದು ಸರಸರನೆ ಪಲಾಯನಗೈದಿತು.

ಆನೆಗೆ ನೆಮ್ಮದಿಯಾಯಿತು. ಆದರೆ ಅದರ ನೆಮ್ಮದಿ ಬಹಳ ಕಾಲ ಉಳಿಯಲಿಲ್ಲ. ಆನೆಯ ಗ್ರಹಾಚಾರಕ್ಕೆ ಮುಂಗುಸಿ ಕೂಡಾ ಕೆಳಕ್ಕಿಳಿಯಲಿಲ್ಲ. ಆನೆಯ ಬೆನ್ನ ಮೇಲೆಯೇ ಅದೂ ಲಂಗರು ಹಾಕಿತು. ಮುಂಗುಸಿಯನ್ನು ಕೆಳಗಿಳಿಸಲು ಆನೆ ತನ್ನ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ನೋಡಿತು. ಅದೆಲ್ಲವೂ ನಿರರ್ಥಕ ಎಂದು ಆನೆಗೆ ಅನಿಸಿದಾಗ ಅದು ಕೆಂಡಾಮಂಡಲವಾಯಿತು. ನಾಯಿಯೊಂದು ಅಲೆಯುತ್ತಾ ಆ ದಾರಿಯಾಗಿ ಬಂದಿತು. ಆನೆ, ನಾಯಿಯನ್ನು ಸಹಾಯ ಮಾಡುವಂತೆ ಕೇಳಿಕೊಂಡಿತು. ನಾಯಿ ಬೊಗಳಿ ಬೊಗಳಿ ದಂತಕೋರೆಗಳನ್ನು ಪ್ರದರ್ಶಿಸಿ ಮುಂಗುಸಿಯನ್ನು ಹೆದರಿಸಿತು. ಮುಂಗುಸಿಯೂ ಅಲ್ಲಿಂದ ಓಡಿ ಹೋಯಿತು. ಈಗ ಮುಂಗುಸಿಯ ಸ್ಥಾನವನ್ನು ನಾಯಿ ಅಲಂಕರಿಸಿತು. ರಾಜಾರೋಷವಾಗಿ ಆನೆಯ ಬೆನ್ನ ಮೇಲೆ ಸವಾರಿ ಮಾಡಿತು.

ಆನೆಯ ಬೆನ್ನ ಮೇಲೆ ಕೂತಾಗ ಇತರೆ ಪ್ರಾಣಿಗಳು ತನ್ನನ್ನು ಗೌರವಯುತವಾಗಿ ಕಾಣುವುದನ್ನು ನಾಯಿ ಗಮನಿಸಿತು. ಹೀಗಾಗಿ ಅದು ಕೂಡಾ ಅಲ್ಲಿಂದ ಕಾಲ್ದೆಗೆಯಲು ಒಪ್ಪಲಿಲ್ಲ. ಆನೆಗೆ ಯಾಕೋ ಇದು ಅತಿಯಾಯಿತು ಎಂದೆನಿಸಿತು. ಯಾರ ಸಹಾಯವನ್ನು ಕೇಳಲೂ ಹಿಂದೆಗೆಯಿತು. ನಾಯಿಯನ್ನು ಬೆನ್ನ ಮೇಲಿಂದ ಓಡಿಸಲು ಉಪಾಯ ಹೊಳೆಯಿತು. ಆನೆ ಕೊಳದ ಬಳಿ ಬಂದಿತು. ಅದಕ್ಕೆ ನಾಯಿಯ ದೌರ್ಬಲ್ಯ ಗೊತ್ತಿತ್ತು. ನಾಯಿಗೆ ನೀರನ್ನು ಕಂಡರೆ ಆಗುತ್ತಿರಲಿಲ್ಲ. ಆನೆ ಕೊಳದಲ್ಲಿ ಎರಡು ಮೂರು ಡುಬುಕಿ ಹೊಡೆಯಿತು. ಜನ್ಮದಲ್ಲಿ ಮೈಗೆ ನೀರು ಸೋಕಿಸಿಕೊಳ್ಳದ ನಾಯಿ ಬೊಬ್ಬೆ ಹೊಡೆಯುತ್ತಾ ಕೊಳದಿಂದ ಎದ್ದು ಓಡಿ ಹೋಯಿತು. ಆನೆ ಕಡೆಗೂ ನಿಟ್ಟುಸಿರು ಬಿಟ್ಟಿತು. ಸಂಗಡಿಗರೆಲ್ಲ ಅದರ ಬುದ್ಧಿವಂತಿಕೆಗೆ ಬೆನ್ನುತಟ್ಟಿದವು.

ನೀತಿ :-- ಅತಿಯಾದ ಆಸೆ ಒಳ್ಳೆಯದಲ್ಲ. ಕಪ್ಪೆ, ಹಾವು, ಮುಂಗುಸಿ ಮತ್ತು ನಾಯಿ ತಮ್ಮ ಆಸೆಗೆ ಆನೆಯ ಸಹಾಯ ಪಡೆಯಲು ಪ್ರಯತ್ನಿಸಿದವು. ಆದರೆ ಅವುಗಳ ಆಸೆ ಅತಿಯಾಗಿಯಾದರೆ ಆಗುವ ಪರಿಣಾಮ ಇಲ್ಲಿ ಕಾಣಬಹುದು.

ಅವರವರ ಕರ್ಮದ ಫಲ ಅವರೇ ಅನುಭವಿಸಬೇಕು

 ಒಂದೂರಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು ಇದ್ದರು. ಆದರೆ ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ, ಒಳಗಳೊಗೆ ರಾಜನ ಆಜ್ಞೆಯನ್ನು ಅವಲಕ್ಷಿಸುತ್ತಿದ್ದರು. ಇದರಿಂದ ಪ್ರಾಮಾಣಿಕನಿಗೆ ಬೆಲೆ ಇಲ್ಲವಾಗುತ್ತದೆ.

ಒಂದು ದಿನ ರಾಜ ತನ್ನ ಮೂರು ಮಂತ್ರಿಗಳನ್ನು ಕರೆಯುತ್ತಾನೆ. ಮೂರು ಜನರಿಗೆ ಒಂದೊಂದು ಗೋಣಿ ಚೀಲವನ್ನು ಕೊಟ್ಟು, ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು ತುಂಬಿಕೊಂಡು ಬರುವಂತೆ ಆಜ್ಞೆ ಮಾಡಿದ.

ಮೂರು ಮಂತ್ರಿಗಳಲ್ಲಿ ಒಬ್ಬ ರಾಜನ ಆಜ್ಞೆಯನ್ನು ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಆಯ್ದು ತುಂಬಿಸಿಕೊಳ್ಳುತ್ತಾನೆ. ಎರಡನೆಯವನು "ಅಯ್ಯೋ ರಾಜರು ಒಳಗೆಲ್ಲಿ ನೋಡುತ್ತಾರೆ?" ಮೇಲೆ ಸ್ವಲ್ಪ ಒಳ್ಳೆಯ ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು ಮೂರನೆಯವನು "ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು ಸುತ್ತಿ ಹಣ್ಣು ಆರಿಸಿ ತರೋದು ?" ಎಂದು ತರಗೆಲೆ ಮತ್ತು ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ.

ಮಾರನೇ ದಿನ ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ ಮುಂದಿಡುತ್ತಾರೆ. ಅರಸ ಅದನ್ನು ಪರೀಕ್ಷಿಸುವುದಿಲ್ಲ. ಬದಲಾಗಿ ಭಟರನ್ನು ಕರೆದು ಹೇಳುತ್ತಾನೆ "ಈ ಮೂರು ಜನರನ್ನು ಜೈಲಿಗಟ್ಟಿ, ಅವರವರು ತಂದ ಹಣ್ಣಿನ ಮೂಟೆ ಅವರವರ ಬಳಿ ಇರಲಿ. ಒಂದು ತಿಂಗಳು ತಿನ್ನಲು ಏನನ್ನೂ ಕೊಡಬೇಡಿ" ಎಂದು ಆಜ್ಞೆ ಮಾಡಿದ.

ಒಂದು ತಿಂಗಳ ನಂತರ ಬಾಗಿಲು ತೆರೆದಾಗ, ಪ್ರಾಮಾಣಿಕವಾಗಿ ಉತ್ತಮವಾದ ಹಣ್ಣುಗಳನ್ನು ತಂದವ ಆರೋಗ್ಯವಂತನಾಗಿ ಹೊರ ಬರುತ್ತಾನೆ. ಕೊಳೆತ ಹಣ್ಣುಗಳನ್ನು ಪೇರಿಸಿಟ್ಟ ಮಂತ್ರಿ ರೋಗಗ್ರಸ್ತನಾಗಿದ್ದ. ಇನ್ನು ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಂದ ಮಂತ್ರಿ ಕೊನೆಯುಸಿರೆಳೆದಿದ್ದ.

ನೀತಿ :-- ಇದೆ ಕರ್ಮದ ಫಲ. ಉತ್ತಮವಾದ ಕೆಲಸಕ್ಕೆ ಉತ್ತಮವಾದ ಪರಿಣಾಮ, ಕೆಟ್ಟ ಕೆಲಸದಿಂದ ಕೆಟ್ಟ ಪರಿಣಾಮ.

ಲಕ್ಷ್ಮಿ ಭೂಮಿಯ ಮೇಲೆ ಇಲ್ಲವಾದರೆ?

 ಲಕ್ಷ್ಮಿ ವ್ಯಕ್ತಿಗೆ ಧನ, ಸಂಪತ್ತನ್ನು ಕರುಣಿಸುವ ದೇವತೆ. ಈಕೆಯ ಅನುಗ್ರಹವನ್ನು ಅಥವಾ ಆಶೀರ್ವಾದವನ್ನು ಹೊಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ಎಂದಿಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿರಬಹುದು ಅಥವಾ ಬಡತನವನ್ನಾಗಿರಬಹುದು ಎದುರಿಸುವುದಿಲ್ಲ ಎನ್ನುವ ನಂಬಿಕೆ ನಮ್ಮವರಲ್ಲಿದೆ. ಧಾರ್ಮಿಕ ಗ್ರಂಥ ಹಾಗೂ ಪುರಾಣಗಳಲ್ಲಿ ಲಕ್ಷ್ಮಿ ದೇವಿಗೆ ಸಂಬಂಧಿಸಿದಂತೆ ಅನೇಕ ಕಥೆಗಳನ್ನು ಉಲ್ಲೇಖಿಸಲಾಗಿದೆ.

ವಿಷ್ಣುವಿನಿಂದ ಲಕ್ಷ್ಮಿಯ ಅಪಹರಣ!

ಹೌದು. ಒಂದು ದಂತಕಥೆಯು ಲಕ್ಷ್ಮಿಯನ್ನು ಅಪಹರಿಸಲಾಗಿತ್ತು ಎಂದು ಹೇಳುತ್ತದೆ. ಹೇಗೆಂದರೆ, ಒಮ್ಮೆ ಲಕ್ಷ್ಮಿಯು ತನ್ನ ಪತಿ ವಿಷ್ಣು ದೇವನೊಂದಿಗೆ ಜಗಳ ಮಾಡಿದಳು. ಈ ವಿವಾದವು ಲಕ್ಷ್ಮಿ ದೇವಿಯ ಅಪಹರಣಕ್ಕೆ ಕಾರಣವಾಯಿತು ಎನ್ಮಲಾಗುತ್ತದೆ. ಲಕ್ಷ್ಮಿ ವಿಷ್ಣುವಿನ ಬಳಿ ಬಂದು ನೀವು ತುಳಸಿ ಪರ್ವತದಲ್ಲಿ ನೆಲೆಸಬೇಕೆಂದು ಹೇಳುತ್ತಾಳೆ. ಇದಕ್ಕೆ ಒಪ್ಪದ ವಿಷ್ಣು ದೇವನು ತಾನು ವೈಕುಂಠದಲ್ಲಿ ಮಾತ್ರ ನೆಲೆಸುವುದಾಗಿ ಹೇಳುತ್ತಾನೆ. ಈ ವಾದ ವಿವಾದದಿಂದ ಬೇಸರಗೊಂಡ ಲಕ್ಷ್ಮಿಯು ಭೂಮಿಯನ್ನು ತೊರೆದು ತನ್ನ ಪತಿ ಇರುವ ವೈಕುಂಠಕ್ಕೆ ಹೊರಟು ಹೋಗುತ್ತಾಳೆ. ಭೂಮಿಯಲ್ಲಿ ಲಕ್ಷ್ಮಿಯ ಅನುಪಸ್ಥಿತಿಯಿಂದಾಗಿ ಜನರು ಸಂಪತ್ತು ಮತ್ತು ಸಮೃದ್ಧಿಯ ಕೊರತೆಯನ್ನು ಎದುರಿಸುವಂತಾಯಿತು. ಇದನ್ನು ನೋಡಿದ ಜನರು ವಿಷ್ಣುವನ್ನು ಪ್ರಾರ್ಥಿಸಿದರು ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಿ ಮತ್ತೆ ಭೂಲೋಕಕ್ಕೆ ಬರುವಂತೆ ಮಾಡಿದರು. ಇದಾದ ನಂತರ ಭಗವಾನ್ ವಿಷ್ಣುವು ಲಕ್ಷ್ಮಿಯನ್ನು ತನ್ನೊಂದಿಗೆ ವೈಕುಂಠಕ್ಕೆ ಕರೆದೊಯ್ದ. ಈ ರೀತಿಯಾಗಿ ವಿಷ್ಣು ದೇವನು ಲಕ್ಷ್ಮಿಯನ್ನು ಅಪಹರಿಸಿಕೊಂಡು ವೈಕುಂಠಕ್ಕೆ ಕರೆದುಕೊಂಡ. ಆದರೆ, ನಂತರ ಲಕ್ಷ್ಮಿ ದೇವಿಯನ್ನು ಪುನಃ ಭೂಲೋಕಕ್ಕೆ ಕಳುಹಿಸಲೂ ಮುಂದಾದ.

ವಿಷ್ಣು ದೇವನನ್ನು ಹೊರತುಪಡಿಸಿ, ಒಂದು ಪೌರಾಣಿಕ ಕಥೆಯ ಪ್ರಕಾರ, ಲಕ್ಷ್ಮಿಯನ್ನು ಇಂದ್ರ ದೇವನ ಮಗನಾದ ದೇವರಾಜ ಬಾಲಿಯೂ ಅಪಹರಿಸಿಕೊಂಡು ಹೋಗಿದ್ದ. ಈ ಕಥೆಯಂತೆ ಲಕ್ಷ್ಮಿ ದೇವಿಯನ್ನು ಭೂಲೋಕದಿಂದಲೇ ಅಪಹರಿಸಿಕೊಂಡು ಹೋಗಲಾಗಿತ್ತು. ಇದರಲ್ಲಿ ದೇವರಾಜ ಬಾಲಿಯ ಪಾತ್ರ ಪ್ರಮುಖವಾಗಿದೆ. ಒಮ್ಮೆ ದೇವರಾಜ ಬಾಲಿಯು ತನ್ನ ತಪಸ್ಸು ಮತ್ತು ಭಕ್ತಿಯ ಬಲದಿಂದ ಲಕ್ಷ್ಮಿಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಬಾಲಿಯು ಲಕ್ಷ್ಮಿ ದೇವಿಯನ್ನು ಕಂಡು ಅವಳನ್ನು ತನ್ನ ರಾಜ್ಯದಲ್ಲಿ ತನ್ನ ನಿಯಂತ್ರಣಕ್ಕೆ ತಂದು ತನ್ನೊಂದಿಗೆ ಅಲ್ಲಿ ನೆಲೆಸುವಂತೆ ಮಾಡಿದ.

ಬಾಲಿಯು ಲಕ್ಷ್ಮಿಯನ್ನು ಅಪಹರಿಸಿಕೊಂಡು ಹೋಗಿದ್ದಕ್ಕಾಗಿ ಭೂಮಿಯ ಮೇಲೆ ಬಡತನ ಮತ್ತು ದಾರಿದ್ರ್ಯವು ತಲೆಯೆತ್ತತೊಡಗಿತು. ಜನರು ಊಟಕ್ಕೂ ಪರದಾಡಬೇಕಾಯಿತು. ತಮ್ಮಲ್ಲಿ ಸಂಪತ್ತು ಮತ್ತು ಅದೃಷ್ಟ ಕಡಿಮೆಯಾಗುತ್ತಿರುವುದನ್ನು ಕಂಡು ಜನರು ವಿಷ್ಣುವನ್ನು ಪ್ರಾರ್ಥಿಸಿದರು. ಭಗವಾನ್ ವಿಷ್ಣುವು ಲಕ್ಷ್ಮಿಯನ್ನು ಮರಳಿ ಪಡೆದುಕೊಳ್ಳಬೇಕೆಂದು ನಿರ್ಧರಿಸಿದ. ಮತ್ತು ಪ್ರಹ್ಲಾದನ ರೂಪದಲ್ಲಿ ಅಪಹರಣಕಾರ ಬಾಲಿಯನ್ನು ಮೋಡಿ ಮಾಡುವ ಮೂಲಕ ದೇವಿಯನ್ನು ಮುಕ್ತಗೊಳಿಸಿದ.

ಸಂಕಷ್ಟ, ಸಮಸ್ಯೆಗಳು ಕೇವಲ ಮನುಷ್ಯನಿಗೆ ಮಾತ್ರವಲ್ಲ, ದೇವರಿಗೂ ತಪ್ಪಿದ್ದಲ್ಲ. ಆದರೆ, ಭೂಮಿಯಲ್ಲಿ ಯಾವುದೇ ಜೀವಿ, ಕಷ್ಟದಲ್ಲಿದ್ದಾಗ ದೇವರು ಮೊದಲು ಅದನ್ನು ಪರಿಹರಿಸಲು ಬರುತ್ತಾನೆ. ಲಕ್ಷ್ಮಿಯು ಭೂಮಿಯ ಮೇಲೆ ಇಲ್ಲವಾದರೆ ಅನಾಹುತಗಳು ಸಂಭವಿಸಬಹುದು.

ನೀತಿ :-- ಲಕ್ಷ್ಮಿ ಭೂಮಿಯ ಮೇಲೆ ಇಲ್ಲವಾದರೆ, ಏನೆಲ್ಲ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ಈ ಎರಡು ಕಥೆಗಳು ಉತ್ತಮ ಉದಾಹರಣೆಯಾಗಿವೆ.

ಸ್ತ್ರೀ ರೂಪ ಧರಿಸಿದ ಶನಿ

 ಗುಜರಾತ್‌ನ ಭಾವನಗರದ ಸಾರಂಗಪುರದಲ್ಲಿರುವ ಕಷ್ಟಭಂಜನ ಹನುಮಾನ್ ದೇವಸ್ಥಾನವು ವಿಶೇಷ ಹಾಗೂ ಆಕರ್ಷಣೆಯ ಕೇಂದ್ರವಾಗಿದೆ. ಇದು ಅನೇಕ ಭಕ್ತರ ಅಪಾರ ನಂಬಿಕೆಯ ಶ್ರದ್ಧಾ ಕೇಂದ್ರವಾಗಿದೆ. ಬಜರಂಗಬಲಿಯ ಪಾದದ ಬಳಿ ಶನಿದೇವನು ಕುಳಿತಿರುವುದು ಈ ದೇವಾಲಯದಲ್ಲಿನ ವಿಶೇಷವಾಗಿದೆ. ಅಷ್ಟೇ ಅಲ್ಲ, ಇಲ್ಲಿ ಶನಿದೇವನು ಸ್ತ್ರೀ ರೂಪದಲ್ಲಿ ಕಂಡುಬರುವುದು ಇನ್ನೊಂದು ವಿಶೇಷ ಅಂಶ. ಈ ಅದ್ಭುತ ದೃಶ್ಯದ ಹಿಂದೆ ಒಂದು ಆಸಕ್ತಿದಾಯಕ ಕಥೆ ಅಡಗಿದೆ.

ಒಮ್ಮೆ ಶನಿದೇವನ ಕೋಪವು ಭೂಮಿಯ ಮೇಲೆ ತುಂಬಾ ಹೆಚ್ಚಾಯಿತು. ಅವನ ಕೋಪದಿಂದ ಆಗ ಜನರು ತುಂಬಾ ಕಷ್ಟಪಡುತ್ತಿದ್ದರು. ಕೆಟ್ಟ ಸಂಭವಗಳು, ರೋಗಗಳು ಮತ್ತು ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿದ್ದವು. ಜನರು ತಮ್ಮ ಸಂಕಷ್ಟಗಳಿಂದ ಮುಕ್ತಿ ಹೊಂದಲು ಹನುಮಂತನನ್ನು ಪ್ರಾರ್ಥಿಸಲು ಶುರು ಮಾಡಿದರು. "ಓ ದೇವರೇ, ನಮ್ಮನ್ನು ರಕ್ಷಿಸು" ಎಂದು.

ಅವರು ಹನುಮಂತನನ್ನು ಬೇಡಿಕೊಳ್ಳುತ್ತಿದ್ದರು.

ಹನುಮಂತನು ತನ್ನ ಭಕ್ತರ ಕೂಗನ್ನು ಕೇಳಿ ಕೋಪಗೊಂಡು. ಶನಿಯು ತನ್ನ ಭಕ್ತರಿಗೆ ತೊಂದರೆ ಕೊಡುತ್ತಿರುವುದನ್ನು ಸಹಿಸಲಾಗದೆ, ಅವನು ತನ್ನ ಗಧೆಯನ್ನು ಎತ್ತಿಕೊಂಡು ಶನಿಯನ್ನು ಹುಡುಕಲು ಹೊರಟ. ಈ ವಿಷಯ ತಿಳಿದ ಶನಿಗೆ ತುಂಬಾ ಭಯವಾಯಿತು. ಅವನಿಗೆ ಈಗ ಯಾರು ತನ್ನನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅರಿವಾಯಿತು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದೇ ಮಾರ್ಗ ಸಿಗದಿದ್ದಾಗ, ಅವನು ಒಂದು ಕುತಂತ್ರವನ್ನು ರೂಪಿಸಿ, ಶನಿ ತನ್ನನ್ನು ತಾನು ಸ್ತ್ರೀ ವೇಷಕ್ಕೆ ಹಾಕಿಕೊಂಡ.

ಹನುಮಂತನು ಬ್ರಹ್ಮಚಾರಿ ಎಂದು ಅವನಿಗೆ ಗೊತ್ತಿತ್ತು. ಹಾಗಾಗಿ ಸ್ತ್ರೀ ವೇಷದಲ್ಲಿ ಇದ್ದರೆ ಹನುಮಂತನು ತನ್ನನ್ನು ಮುಟ್ಟುವುದಿಲ್ಲ ಅಥವಾ ತನ್ನ ಮೇಲೆ ಕೈ ಎತ್ತುವುದಿಲ್ಲ ಎಂದು ಭಾವಿಸಿದ. ಹೀಗೆ ಸ್ತ್ರೀ ವೇಷದಲ್ಲಿ ಹನುಮಂತನ ಪಾದದ ಬಳಿ ಕುಳಿತು ಕ್ಷಮೆಯಾಚಿಸಿದ. ಹನುಮಂತನು ಶನಿಯ ಕ್ಷಮೆಯಾಚನೆಯನ್ನು ಸ್ವೀಕರಿಸಿ ಅವನ ತಪ್ಪನ್ನು ಮನ್ನಿಸಿದ. ಅಂದಿನಿಂದ ಶನಿಯು ಹನುಮಂತನ ಪಾದದ ಬಳಿಯೇ ಕುಳಿತುಕೊಂಡಿದ್ದಾನೆ. ಇದೇ ಕಾರಣಕ್ಕೆ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನದಲ್ಲಿ ಶನಿದೇವನು ಸ್ತ್ರೀ ರೂಪದಲ್ಲಿ ಹನುಮಂತನ ಪಾದದ ಬಳಿ ಕುಳಿತಿರುವ ದೃಶ್ಯವನ್ನು ನೋಡಬಹುದು.

ನೀತಿ :-- ಕಥೆಯು ಭಕ್ತಿಯ ಶಕ್ತಿ ಮತ್ತು ಕ್ಷಮೆಯ ಮಹತ್ವ. ಶನಿಯ ಕೋಪ ಮತ್ತು ಅದರ ಪರಿಣಾಮ, ಹನುಮಂತನ ಕರುಣೆ ಮತ್ತು ಕ್ಷಮೆ, ಶನಿಯ ಕುತಂತ್ರ ಮತ್ತು ವೇಷ ಬದಲಾವಣೆ ಹಾಗೂ ಸಾರಂಗಪುರದ ದೇವಾಲಯದ ವಿಶೇಷತೆ ತಿಳಿಸುತ್ತದೆ.

ಹನುಮಂತನಲ್ಲಿರುವ ದಯಾಗುಣ

 ಲಂಕೆಯ ಅಹಂಕಾರಿ ರಾಜ ರಾವಣನಿಗೆ ಆಕಾಶವೇ ಮಿತಿಯೆಂಬಂತೆ ತೋರುತ್ತಿತ್ತು. ತನ್ನ ಶಕ್ತಿಯ ಅತಿಯಾದ ಅಂದಾಜು ಮತ್ತು ಅತಿಮಾನುಷ ಸ್ವಭಾವದಿಂದಾಗಿ ದೇವತೆಗಳನ್ನೂ ಕೀಳಾಗಿ ನೋಡುತ್ತಿದ್ದ. ಒಮ್ಮೆ ತನ್ನ ಅಧಿಕಾರ ಪ್ರದರ್ಶನಕ್ಕೆ ಮುಂದಾದ ರಾವಣ, ಶನಿ ದೇವರನ್ನೇ ಬಂಧಿಸಿ ಲಂಕೆಯ ಕತ್ತಲ ಕೋಣೆಯಲ್ಲಿ ಬಂಧಿಸಿದ.

ಇದೇ ಸಮಯದಲ್ಲಿ ಸೀತಾ ಮಾತೆಯನ್ನು ಹುಡುಕಿಕೊಂಡು ಹನುಮಂತನು ಲಂಕೆಗೆ ಆಗಮಿಸಿದ್ದ. ಅರಮನೆಯ ಎಲ್ಲಾ ಕೋಣೆಗಳನ್ನು ಅಲೆದಾಡುತ್ತಿದ್ದಾಗ, ಒಂದು ಕೋಣೆಯಿಂದ ದೀನವಾದ ನರಳಾಟ ಕೇಳಿಸಿತು. ಆ ಶಬ್ದದ ಕಡೆಗೆ ಹೋಗುತ್ತ ಹೋಗುತ್ತ ಕತ್ತಲ ಕೋಣೆಯೊಂದನ್ನು ತಲುಪಿದ. ಅಲ್ಲಿ ಬಂಧಿತನಾಗಿದ್ದ ಶನಿ ದೇವರನ್ನು ಕಂಡು ಹನುಮಂತನಿಗೆ ಆಶ್ಚರ್ಯವಾಯಿತು.

ಶನಿ ದೇವರು ಹನುಮಂತನನ್ನು ಕಂಡು ಸಂತೋಷಗೊಂಡು "ಹನುಮಂತ, ನನ್ನನ್ನು ಈ ಸೆರೆಯಿಂದ ಬಿಡಿಸಿಕೊ" ಎಂದು ಕೇಳಿಕೊಂಡ. ಹನುಮಂತನಿಗೆ ಶನಿ ದೇವರನ್ನು ಕಂಡು ತುಂಬಾ ವಿಷಾದವಾಯಿತು. ತಕ್ಷಣವೇ ತನ್ನ ಬಲವನ್ನು ಪ್ರಯೋಗಿಸಿ ಕೋಣೆಯ ಬಾಗಿಲು ಒಡೆದು ಶನಿ ದೇವರನ್ನು ಬಂಧನದಿಂದ ಬಿಡಿಸಿದ.

ಶನಿ ದೇವರು ಹನುಮಂತನ ಕಾಲಿಗೆ ಬಿದ್ದು ಧನ್ಯವಾದಗಳನ್ನು ಅರ್ಪಿಸಿ, "ಹನುಮಂತ, ನೀನು ನನ್ನನ್ನು ಈ ಸಂಕಟದಿಂದ ಮುಕ್ತಗೊಳಿಸಿದ್ದೀ. ನಾನು ನಿನ್ನನ್ನು ಎಂದಿಗೂ ಮರೆಯುವುದಿಲ್ಲ. ನೀನು ಭಕ್ತರನ್ನು ಎಂದಿಗೂ ಕಷ್ಟಕ್ಕೆ ಸಿಲುಕಿಸುವುದಿಲ್ಲ" ಎಂದು ವರವನ್ನು ನೀಡಿದ.

ಹನುಮಂತನು ಶನಿ ದೇವರ ಆಶೀರ್ವಾದವನ್ನು ಪಡೆದು ಸೀತಾ ಮಾತೆಯನ್ನು ಹುಡುಕುವ ಕೆಲಸವನ್ನು ಮುಂದುವರಿಸಿದ. ಶನಿ ದೇವರು ಹನುಮಂತನಿಗೆ ಕೊಟ್ಟ ವರದಿಂದಾಗಿ ಇಂದಿಗೂ ಹನುಮಂತನ ಭಕ್ತರ ಮೇಲೆ ಶನಿಯ ದೋಷ ಬೀರುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ.

ನೀತಿ :-- ಶ್ರೀರಾಮನ ಅನುಗ್ರಹದಿಂದ ಹನುಮಂತನಿಗೆ ಅಪಾರ ಶಕ್ತಿ ಸಿಕ್ಕಿತ್ತು. ತನ್ನ ಶಕ್ತಿಯನ್ನು ಅಹಂಕಾರಕ್ಕೆ ಬಳಸಿಕೊಳ್ಳದೆ, ಇತರರ ಸಹಾಯ ಮಾಡಿರುವುದರಿಂದಾಗಿ ದೇವತೆಗಳ ಆಶೀರ್ವಾದವೂ ಅವನಿಗೆ ಸಿಕ್ಕಿತು. ಹೀಗೆ ಹನುಮಂತನು ಒಬ್ಬ ಆದರ್ಶ ಪುರುಷನಾಗಿ ನಮ್ಮ ಮನಸ್ಸಿನಲ್ಲಿ ನೆಲೆಸಿದ್ದಾನೆ.

ಚೀನೀ ಪ್ರವಾಸಿ ಹ್ಯೂಯೆನ್ ತ್ಸಾಂಗ್ ತಮ್ಮ ಪ್ರವಾಸದ ಕಥನದಲ್ಲಿ ಭಾರತದ ಬಗ್ಗೆ ಏನು ವಿವರಿಸಿದರು ?


ಹ್ಯೂಯೆನ್ ತ್ಸಾಂಗ್ ಅವರು ಸುಮಾರು 16,000 ಕಿಲೋಮೀಟರ್ ದೂರದಿಂದ ಕಾಲು ನಡಿಗೆಯಲ್ಲಿ ಬೆಟ್ಟ , ಕಾಡು , ನದಿ ದಾಟಿ ಭಾರತದಲ್ಲಿ ಜ್ಞಾನ ಪಡೆಯಲು ಬಂದಿದ್ದರು.

ಹ್ಯೂಯೆನ್ ತ್ಸಾಂಗ್ ಭಾರತವನ್ನು ಶ್ರೀಮಂತ ಮತ್ತು ಸಮೃದ್ಧ ದೇಶ ಎಂದು ವಿವರಿಸಿದರು ಮತ್ತು ಏಳನೇ ಶತಮಾನದಲ್ಲಿ ಅದರ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಜೀವನದ ಬಗ್ಗೆ ಬರೆದಿದ್ದಾರೆ :

  1. ಮನೆಗಳು ಮರ, ಇಟ್ಟಿಗೆ ಮತ್ತು ಸಗಣಿಯಿಂದ ಮಾಡಲ್ಪಟ್ಟವು ಮತ್ತು ವಿಧಗಳಲ್ಲಿ ವೈವಿಧ್ಯಮಯವಾಗಿವೆ.
  2. ನಗರದ ಬೀದಿಗಳು ಕೊಳಕು ಮತ್ತು ವೃತ್ತಾಕಾರವಾಗಿದ್ದವು.
  3. ಹೊಸ ನಗರಗಳು ಅಭಿವೃದ್ಧಿ ಹೊಂದಿದ್ದವು, ಆದರೆ ಅನೇಕ ಹಳೆಯ ನಗರಗಳು ಪಾಳುಬಿದ್ದಿವೆ.
  4. ಆ ಸಮಯದಲ್ಲಿ ಪ್ರಯಾಗ ಒಂದು ಮಹತ್ವದ ನಗರವಾಗಿತ್ತು, ಆದರೆ ಪಾಟಲಿಪುತ್ರದ ಪ್ರಾಮುಖ್ಯತೆಯನ್ನು ಕನೌಜ್‌ಗೆ ಬದಲಾಯಿಸಲಾಯಿತು.
  5. ನಳಂದ ಮತ್ತು ವಲಭಿ ಬೌದ್ಧರ ಕಲಿಕೆಯ ಪ್ರಾಥಮಿಕ ಸ್ಥಳಗಳಾಗಿವೆ.
  6. ಶಿಕ್ಷಣವನ್ನು ಮೌಖಿಕವಾಗಿ ನೀಡಲಾಯಿತು ಮತ್ತು ಚರ್ಚೆಗಳು , ಬೋಧನೆಯ ಪ್ರಾಥಮಿಕ ಸಾಧನಗಳಾಗಿವೆ.
  7. ಪ್ರಾಥಮಿಕ ಧರ್ಮಗಳೆಂದರೆ ಬೌದ್ಧ ಧರ್ಮ , ಜೈನ ಧರ್ಮ ಮತ್ತು ಬ್ರಾಹ್ಮಣ ಧರ್ಮ
  8. ಚಕ್ರವರ್ತಿ ಹರ್ಷನ ರಾಜ್ಯವು ಸುವ್ಯವಸ್ಥಿತವಾಗಿತ್ತು ಮತ್ತು ಸೈನ್ಯವು 60,000 ಯುದ್ಧ ಆನೆಗಳು, 50,000 ಅಶ್ವದಳದ ರಥಗಳು ಮತ್ತು 1,00,000 ಪದಾತಿ ಸೈನಿಕರನ್ನು ಹೊಂದಿತ್ತು.

ಹ್ಯೂಯೆನ್ ತ್ಸಾಂಗ್ ಚೀನೀ ಬೌದ್ಧ ಸನ್ಯಾಸಿ ಮತ್ತು ವಿದ್ವಾಂಸರಾಗಿದ್ದರು, ಅವರು 7 ನೇ ಶತಮಾನದಲ್ಲಿ ನಳಂದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು. ನಳಂದಾ ವಿಶ್ವವಿದ್ಯಾನಿಲಯದೊಂದಿಗೆ ಹ್ಯೂಯೆನ್ ತ್ಸಾಂಗ್ ಅವರ ಅನುಭದ ಕುರಿತು ಕೆಲವು ಪ್ರಮುಖ ಅಂಶಗಳು ಇಲ್ಲಿವೆ:

  1. ಹ್ಯೂಯೆನ್ ತ್ಸಾಂಗ್ ಅವರು ಪ್ರಸಿದ್ಧ ಬೌದ್ಧ ವಿದ್ವಾಂಸರಾದ ಶಿಲಾಭದ್ರ ಅವರ ಮಾರ್ಗದರ್ಶನದಲ್ಲಿ ಐದು ವರ್ಷಗಳ ಕಾಲ ನಳಂದಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.
  2. ವಿದ್ವಾಂಸರೊಂದಿಗೆ ಚರ್ಚೆಗಳು ಮತ್ತು ಚರ್ಚೆಗಳಲ್ಲಿ ತೊಡಗಿದ್ದರು ಮತ್ತು ಬೌದ್ಧ ಧರ್ಮಗ್ರಂಥಗಳ ಬಗ್ಗೆ ಕಲಿಯುತ್ತಿದ್ದರು.
  3. ನಳಂದಾ ವಿಶ್ವವಿದ್ಯಾನಿಲಯವು ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ಬೌದ್ಧ ಕಲಿಕೆಯ ಕೇಂದ್ರಗಳಲ್ಲಿ ಒಂದಾಗಿದೆ.
  4. ಇದು ಪ್ರಮುಖವಾಗಿ ಬೌದ್ಧ ವಿಹಾರ ಅಂತ ಹೇಳಬಹುದು.
  5. ನಳಂದಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕಠಿಣವಾದ ಮೌಖಿಕ ಪ್ರವೇಶ ಪರೀಕ್ಷೆಯಿಂದ ಅವರು ಪ್ರಭಾವಿತರಾದರು, ಅಲ್ಲಿ ಸುಮಾರು 20% ಅರ್ಜಿದಾರರು ಮಾತ್ರ ಸ್ವೀಕರಿಸುತ್ತಿದ್ದರು.
  6. ಹ್ಯೂಯೆನ್ ತ್ಸಾಂಗ್ ಬರಹಗಳು ನಳಂದ ವಿಶ್ವವಿದ್ಯಾಲಯದ ಭವ್ಯತೆ, ಅದರ ವಿಸ್ತಾರವಾದ ಗ್ರಂಥಾಲಯ ಮತ್ತು ಅದರ ಶೈಕ್ಷಣಿಕ ಕಾರ್ಯಕ್ರಮಗಳ ಕಠಿಣತೆಯನ್ನು ವಿವರಿಸುತ್ತದೆ.
  7. ಅವರ ವಾಸ್ತವ್ಯದ ಸಮಯದಲ್ಲಿ, ಅವರು ನಳಂದ ವಿಶ್ವವಿದ್ಯಾಲಯದಲ್ಲಿ ಅದರ ವಾಸ್ತುಶಿಲ್ಪ, ಶೈಕ್ಷಣಿಕ ಪರಿಸರ ಮತ್ತು ಅದರ ಶಿಕ್ಷಕರ ಜ್ಞಾನವನ್ನು ಒಳಗೊಂಡಂತೆ ಜೀವನದ ವಿವಿಧ ಅಂಶಗಳನ್ನು ವೀಕ್ಷಿಸಿದರು ಮತ್ತು ದಾಖಲಿಸಿದ್ದಾರೆ.
  8. ಹ್ಯೂಯೆನ್ ತ್ಸಾಂಗ್ ಅವರ ಬರಹಗಳು ಆ ಯುಗದಲ್ಲಿ ಭಾರತೀಯ ಸಮಾಜ, ಸಂಸ್ಕೃತಿ, ಧರ್ಮ ಮತ್ತು ರಾಜಕೀಯದ ಸ್ಥಿತಿಯ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಒದಗಿಸುತ್ತವೆ.
  9. ಅವರು ಅನೇಕ ಭಾರತೀಯ ಪಠ್ಯಗಳನ್ನು ಚೈನೀಸ್‌ಗೆ ಅನುವಾದಿಸಿದರು, ಚೀನಾದಲ್ಲಿ ಬೌದ್ಧ ಜ್ಞಾನ ಮತ್ತು ಸಂಸ್ಕೃತಿಯ ಹರಡುವಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡಿದರು.

Thursday, November 28, 2024

ವಿಶ್ವ ಸಂಸ್ಥೆ(WHO)

 

ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು.

ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ

ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು
1) ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್
2) ಇಂಗ್ಲೇಂಡ್ ನ ಚರ್ಚಿಲ್
3) ರಷ್ಯಾದ ಜೋಸೆಪ್ ಸ್ಟಾಲಿನ್

ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
1) ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್
2) ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್
3) ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್
4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ)
5) ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್

ವಿಶ್ವಸಂಸ್ಥೆಯ ಧ್ವಜ:
ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು

*ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್
* ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್
ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು
* ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ
* ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ
* ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ
* ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ
* ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ
* ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ
* ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು
1) ಸಾಮಾನ್ಯ ಸಭೆ
2) ಭಧ್ರತಾ ಮಂಡಳಿ
3) ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
4) ಅಂತರಾಷ್ಟ್ರೀಯ ನ್ಯಾಯಲಯ
5) ಧರ್ಮದರ್ಶಿ ಮಂಡಳಿ
6) ಸಚಿವಾಲಯ

ವಿಶ್ವಸಂಸ್ಥೆಯ ವಿಶೇಷ ಅಂಶಗಳು
* ಅಂತರಾಷ್ಟ್ರೀಯ ನ್ಯಾಯಲಯವೊಂದನ್ನು ಹೊರತು ಪಡಿಸಿ ಉಳಿದ ಐದೂ ಅಂಗ ಸಂಸ್ಥೆಗಳ ಕೇಂದ್ರ ಕಛೇರಿ ನ್ಯೂಯಾರ್ಕ್
* ವಿಶ್ವಸಂಸ್ಥೆ ಸಂಪೂರ್ಣವಾಗಿ ನಿವಾರಿಸಿದ ರೋಗ ಸಿಡುಬು
* ವಿಶ್ವಸಂಸ್ಥೆಯಲ್ಲಿ ಮೊದಲು ಚರ್ಚಿಸಲ್ಪಟ್ಟ ವಿಷಯ ರೋಗ ಏಡ್ಸ್
* ವಿಶ್ವಸಂಸ್ಥೆಗೆ ಸವಾಲಾಗಬಹುದಾದ ಪ್ರಸ್ತುತ ರೋಗ ಎಬೋಲಾ
* ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿ ಸೇವೆ ಸಲ್ಲಿಸದ ಭಾರತೀಯ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ
* ವಿಶ್ವಸಂಸ್ಥೆಯ ಶಿಕ್ಷಣದ ಮಾರ್ಗದರ್ಶಕರಾಗಿ ಸೇವೆ ಭಾರತದ ವ್ಯಕ್ತಿ ಡಾ: ರಾಧಕೃಷ್ಣನ್
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಾರತದ ಮಹಿಳೆ ಕಿರಣ್ ಬೇಡಿ
* ವಿಶ್ವಸಂಸ್ಥೆಯ ಏಡ್ಸ್ ರಾಯಭಾರಿಯಾಗಿ ನೇಮಕವಾದ ಭಾರತದ ಮಹಿಳೆ ಐಶ್ವರ್ಯಾ ರೈ
* ವಿಶ್ವಸಂಸ್ಥೆಯ ಮಕ್ಕಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ವ್ಯಕ್ತಿ ರವಿಶಾಸ್ತ್ರೀ
* ವಿಶ್ವಸಂಸ್ಥೆಯ ಹವಮಾನ ವೈಪರಿತ್ಯದ ಕುರಿತು ಭಾಷಣ ಮಾಡಿದ ಭಾರತದ ಬಾಲಕಿ ಯುಗರತ್ನ ಶ್ರೀವಾಸ್ತವ
* ವಿಶ್ವಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಹಿಳೆಯರು (ಇತ್ತೀಚೆಗೆ) ಕರ್ನಾಟಕದ ಅಶ್ವಿನಿ ಅಂಗಡಿ ಉತ್ತರ ಪ್ರದೇಶದ ರಜಿಯಾ