ಮಾನವ ಸತ್ತ ನಂತರ ದಹನ ಅಥವಾ ಹೂಳುವುದರ ತನಕ ಮಾಡುವ ಕಾರ್ಯಗಳೆಲ್ಲ ವ್ಯಕ್ತಿ ಸಂಪೂರ್ಣವಾಗಿ ಸತ್ತಿದ್ದಾನೆ ಎಂದು ಪರೀಕ್ಷಿಸಿ ಖಾತರಿ ಪಡಿಸಿ ಕೊಳ್ಳೋದು. ಏಕೆಂದರೆ ಕುಟುಕು ಜೀವ ಇದ್ದರೂ ಅಥವಾ coma ಸ್ಥಿತಿಯಲ್ಲಿ ಇದ್ದರೂ ಸಂಸ್ಕಾರ ಮಾಡೋದು ತಪ್ಪಾಗುತ್ತೆ . ಶವಕ್ಕೆ ತಣ್ಣೀರು ಹಾಕೋದು,ಬಾಯಿಗೆ ಅಕ್ಕಿ ಹಾಕೋದು, ಹೋಗುವಾಗ ಜೋರಾಗಿ ಅಳೋದು, ಬ್ಯಾಂಡ್ ಬಾರಿಸೋದು, ಕಾಯ್ನ್ ಬಿಸಾಕೋದು, ಮಡಕೆಯ ತಣ್ಣೀರು ಸುತ್ತ ಬೇಳೋ ಹಾಗೆ ಮಾಡೋದು, ಕತ್ತರಿಲೀ ಬಟ್ಟೆ cut ಮಾಡೋದು , ಎದೆ ಮೇಲೆ ಕರ್ಪೂರ ಹಚ್ಚೋದು, ಇತ್ಯಾದಿಗಳು ಕೂಡ ನೀರಿನ ಮಡಕೆ ಒಡೆಯಲು ಕಾರಣವಾಗಿದೆ.
ಶವದ 2 ಕಾಲಿನ ಹೆಬ್ಬೆರಳುಗಳನ್ನು ದರ್ಭೆ ಹುಲ್ಲಿನಿಂದ ಕಟ್ಟುತ್ತಾರೆ. ಒಂದು ವೇಳೆ ದರ್ಭೆ ತುಂಡಾದರೆ ಶರೀರವು ಶವವಲ್ಲ, ಬದುಕಿದ್ದಾನೆ ಅಂತ ತಿಳಿಯುತ್ತದೆ. ಇದು ಕೂಡಾ ಒಂದು ಪರೀಕ್ಷಾ ವಿಧಾನ ಅಂತ ಹಿರಿಯರು ಹೇಳುತ್ತಿದ್ದರು.ಇವುಗಳೂ ಕೂಡ ವ್ಯಕ್ತಿಯು ಮೃತಪಟ್ಟಿದ್ದಾನೆ ಅನ್ನೋಕೆ ನೀರು ತುಂಬಿದ ಮಡಕೆ ಹೊಡೆಯಲು ಕಾರಣವಾಗಿದೆ.
ಚಿತೆಗೆ ಬೆಂಕಿಯಿಡುವ ವ್ಯಕ್ತಿಯು ತನ್ನ ಹೆಗಲ ಮೇಲೆ ನೀರಿನ ಪಾತ್ರೆಯೊಂದಿಗೆ ಸತ್ತ ವ್ಯಕ್ತಿಯ ಚಿತೆಯ ಸುತ್ತಲೂ ನಡೆಯುತ್ತಾನೆ. ಆ ಚಿತೆಯ ಸುತ್ತ ಒಂದೊಂದು ಸುತ್ತು ಬಂದಾಗಲು ನೀರಿನ ಮಡಕೆಯು ಒಂದೊಂದು ರಂಧ್ರವನ್ನು ಪಡೆಯುತ್ತದೆ. ಇದರಿಂದ ನೀರು ಹರಿಯುತ್ತದೆ. ಅಂತ್ಯಕ್ರಿಯೆಯ ಚಿತೆಯ ಸುತ್ತಲೂ ಬೀಳುತ್ತದೆ. ಅಂತಿಮವಾಗಿ ಮಡಿಕೆಯನ್ನು ಹೊತ್ತ ವ್ಯಕ್ತಿಯು ನೀರು ತುಂಬಿದ ಮಣ್ಣಿನ ಮಡಕೆಯನ್ನು ತನ್ನ ಹಿಂದೆ ಬೀಳಿಸಿ ಒಡೆಯುತ್ತಾನೆ.
ಈ ಸಂದರ್ಭದಲ್ಲಿ ಆತ್ಮಕ್ಕೆ ಮುಕ್ತಿ ದೊರೆತು ತನ್ನ ದೇಹದೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ತೊರೆಯುತ್ತದೆ.
ಆ ಕಾಲದಲ್ಲಿ ಶವವನ್ನು ಕಾಡಿನಲ್ಲಿ, ಅಡವಿಗಳಲ್ಲಿ, ಗಿಡಮರಗಳು ತುಂಬಿದ ಸ್ಮಶಾನದಲ್ಲಿ ಸುಡಲಾಗುತ್ತಿತ್ತು.ಚಿತೆಯ ಸುತ್ತಲೂ ನೀರು ಬೀಳುವುದರಿಂದ ಚಿತೆಯ ಬೆಂಕಿಯು ಬೇರೆಡೆಗೆ ಹಬ್ಬುವುದನ್ನು ತಡೆಯುತ್ತದೆ.
ಆತ್ಮವು ಕೂಡ ಮಡಕೆಯಲ್ಲಿದ್ದ ನೀರಿನಂತೆ ಒಂದಲ್ಲ ಒಂದು ದೇಹವನ್ನು ಬಿಟ್ಟು ಹೋಗುತ್ತದೆ ಅಂತ ಅಲ್ಲಿಗೆ ಬಂದವರಿಗೆ ಇದನ್ನು ಹೇಳುತ್ತದೆ.
ಮಡಕೆಯು ಭೂಮಿಯ ಮೇಲಿನ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅನುಭವಿಸಿದ ಅವನ ಸಂಬಂಧಗಳು ಮತ್ತು ಹಣದಂತಹ ಎಲ್ಲಾ ವಸ್ತುಗಳನ್ನು ಸಹ ಸೂಚಿಸುತ್ತದೆ.
ಈ ದೇಹವು ಒಂದು ಮಡಿಕೆಯ ಹಾಗೆ. ದೇಹದೊಳಗಿರುವ ಜೀವಾತ್ಮ ಹೊರಗೆ ಹೋಯಿತು ಎಂಬ ಸಂಕೇತವನ್ನು ಮಡಿಕೆಯೊಳಗೆ ನೀರು ತುಂಬಿ ಅದನ್ನು ಹೊಡೆದು ನೀರು ಚೆಲ್ಲುವ ಪದ್ಧತಿಯಾಗಿದೆ.