Showing posts with label Mahatva. Show all posts
Showing posts with label Mahatva. Show all posts

Monday, June 9, 2025

ಮಾಂಗಲ್ಯಂ ತಂತು ನಾನೇನ ಮಂತ್ರದ ಅರ್ಥ ಹಾಗು ಮಹತ್ವ

ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ| ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್‌' ಮಂತ್ರದ ಅಂತರಾರ್ಥ ಹೀಗಿದೆ.

 ನನ್ನ ಜೀವನಕ್ಕಾಗಿ ಈ ಮಾಂಗಲ್ಯ ತಂತುವನ್ನು ನಿನ್ನ ಕಂಠಕ್ಕೆ ಕಟ್ಟುತ್ತಿದ್ದೇನೆ! ನೀನು ನನ್ನೊಂದಿಗೆ ನೂರು ವರ್ಷಗಳ ಕಾಲ ಬಾಳುವಂತವಳಾಗು ಎಂದು ಅಭಿಪ್ರಾಯಿಸುತ್ತಾನೆ.

ಗೃಹಸ್ಥಾಶ್ರಮದ ಮೂಲಾಧಾರವೇ ಮಹಿಳೆ. ಸಂಸಾರ ಸುಖಕ್ಕೆ ಮಹಿಳೆಯೇ ಮೂಲ ಕಾರಣ. ಭಾರ್ಯೆಯೇ ಮನೆಗೆ ಶೋಭೆ.

ಗೃಹಸ್ಥಾಶ್ರಮದ ಮೂಲಾಧಾರವೇ ಮಹಿಳೆ. ಸಂಸಾರ ಸುಖಕ್ಕೆ ಮಹಿಳೆಯೇ ಮೂಲ ಕಾರಣ. ಭಾರ್ಯೆಯೇ ಮನೆಗೆ ಶೋಭೆ. ತಮ್ಮ ವಿವೇಕಯುತವಾದ ಆಚಾರ ವಿಚಾರಗಳಿಂದ ಮನೆಯನ್ನು ಸದಾ ಆನಂದವನ್ನಾಗಿ ಮಾಡುವುದೇ ಗೃಹಿಣಿಯ ಲಕ್ಷಣ.

ಸಮಾಜದಲ್ಲಿ ಮಹಿಳೆಗೊಂದು ಉತ್ತಮ ಹಾಗೂ ಗೌರವಯುತ ಸ್ಥಾನ ಕೊಡುವ ಸಂಸ್ಕಾರವೇ ವಿವಾಹ.

ವಿವಾಹ ಸಂಸ್ಕಾರದಲ್ಲಿ ಮಂತ್ರಸಹಿತವಾಗಿ, ಅಗ್ನಿಸಾಕ್ಷಿಯಾಗಿ, ಗುರುಹಿರಿಯರ ಸಮ್ಮುಖ ಆಚರಿಸುವ ಕರ್ಮಗಳಲ್ಲಿ ನಿರೀಕ್ಷಣ - ಅಂತರ್ಪಟಗಳ ಸಂಬಂಧ, ಪಾಣಿಗ್ರಹಣ, ಕನ್ಯಾದಾನ, ಆಜ್ಯಹೋಮ, ಲಾಜಾಹೋಮ, ಸಪ್ತಪದಿ ಮುಖ್ಯವಾಗಿವೆ.

ನಿರೀಕ್ಷಣೆ ಎಂದರೆ ಪರಸ್ಪರ ದೃಷ್ಟಿಸುವುದು ಎಂದರ್ಥ. ಅಂತರಪಟ ತೆಗೆದಾಗ ವಧು ವರರಿಬ್ಬರು ಪರಸ್ಪರ ದೃಷ್ಟಿಯನ್ನು ಹರಿಸುತ್ತಾರೆ. ದೃಷ್ಟಿಯ ಮೂಲಕ ಪರಸ್ಪರರ ಮೇಲೆ ಪ್ರಭಾವ ಬೀರುತ್ತಾರೆ. ವಧುವಿನ ಕಣ್ಣಲ್ಲಿ ಕಣ್ಣನ್ನಿಡುವ ವರನು ನಿನ್ನ ನೋಟ ಸೌಮ್ಯವಾಗಿರಲಿ ಎಲ್ಲರಿಗೂ ಒಳಿತು ಮಾಡಲಿ ಎನ್ನುತ್ತಾನೆ. ನೀನು ಒಳ್ಳೆಯ ಮನಸ್ಸಿನವಳೂ, ತೇಜೋವಂತಳೂ ಆಗಿ ಉತ್ತಮ ಸಂತಾನವನ್ನು ಹೊಂದಿ ಎಲ್ಲರಿಗೂ ಒಳಿತು ಉಂಟುಮಾಡುವಂತವಳಾಗು ಎಂದು ಆಶಿಸುತ್ತಾನೆ.

ಈ ಅಂಶವನ್ನೇ ಉಲ್ಲೇಖಿಸುವ ಮಂತ್ರವೊಂದು ಹೀಗಿದೆ. ಅಘೋರ ಚಕ್ಷುಃ ಅಭಾಋುತ್ರಘ್ನೀಂ, ಅಪತಿಘ್ನೀಂ ... ಈ ಮಂತ್ರವನ್ನು ಉಚ್ಛರಿಸುವ ವರ ವಧುವಿನ ಭ್ರೂಮಧ್ಯೆಯ ಮೇಲೆ ದರ್ಭೆಯನ್ನಿಟ್ಟು ಮಂತ್ರಶಕ್ತಿಯನ್ನು ಅಲ್ಲಿ ಪ್ರಚೋದಿಸುತ್ತಾನೆ.

ಅಂತರಪಟ ಸರಿದ ನಂತರ ಕಾಣಸಿಗುವುದೇ ಮಾಂಗಲ್ಯಭಾಗ್ಯ. ವಿವಾಹ ಸಂಸ್ಕಾರದಲ್ಲಿ ಮಾಂಗಲ್ಯ ಧಾರಣೆಗೆ ವಿಶಿಷ್ಟವಾದ ಮಹತ್ವವಿದೆ. ಇದು ದಂಪತಿಗಳಲ್ಲಿ 'ತಾವು ಪರಸ್ಪರ ಸರ್ವಸ್ವ' ಎಂಬ ಭಾವವನ್ನು ಮೂಡಿಸುತ್ತದೆ. 'ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ| ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್‌' ಮಂತ್ರದ ಅಂತರಾರ್ಥ ಹೀಗಿದೆ.

ನನ್ನ ಜೀವನಕ್ಕಾಗಿ ಈ ಮಾಂಗಲ್ಯ ತಂತುವನ್ನು ನಿನ್ನ ಕಂಠಕ್ಕೆ ಕಟ್ಟುತ್ತಿದ್ದೇನೆ! ನೀನು ನನ್ನೊಂದಿಗೆ ನೂರು ವರ್ಷಗಳ ಕಾಲ ಬಾಳುವಂತವಳಾಗು ಎಂದು ಅಭಿಪ್ರಾಯಿಸುತ್ತಾನೆ. ಅಂತೆಯೇ ಕನ್ಯಾದಾನ ಮಾಡುವಾಗ ಹೇಳುವ ಮಂತ್ರದ ಅಂತರಾರ್ಥವು ಹೀಗಿದೆ. 'ಸುವರ್ಣದಂತೆ ಪ್ರಕಾಶಮಾನವುಳ್ಳವಳೂ, ಸುವರ್ಣ ಆಭರಣಗಳಿಂದ ಕೂಡಿದವಳೂ ಆದ ಈ ಕನ್ಯೆಯನ್ನು ಬ್ರಹ್ಮಲೋಕವನ್ನು ಗೆಲ್ಲುವುದಕ್ಕೋಸ್ಕರ ವಿಷ್ಣುರೂಪಿಯಾದ ನಿನಗೆ ಕೊಡುತ್ತಿದ್ದೇನೆ. ಪಿತೃಗಳ ಉದ್ದಾರಕ್ಕೋಸ್ಕರ ಈ ಕನ್ಯೆಯನ್ನು ಭಗವಂತನನ್ನು, ಪಂಚಭೂತಗಳನ್ನು ಮತ್ತು ಎಲ್ಲಾ ದೇವತೆಗಳನ್ನು ಸಾಕ್ಷಿಯಾಗಿಟ್ಟುಕೊಂಡು ನಿನಗೆ ಕೊಡುತ್ತಿದ್ದೇನೆ. ಯಥಾಶಕ್ತಿ ಸಾಲಂಕೃತಳೂ, ಒಳ್ಳೆಯ ನಡತೆಯುಳ್ಳವಳೂ, ಸಾಧ್ವಿಯೂ ಆದ ಈ ಕನ್ಯೆಯನ್ನು ಒಳ್ಳೆಯ ನಡೆಯುಳ್ಳವನೂ ಮೇಧಾಶಾಲಿಯೂ ಆದ ನಿನಗೆ ಸ್ಥಿರಮನಸ್ಸಿನಿಂದ ಕೊಡುತ್ತಿದ್ದೇನೆ. ಇದರಿಂದ ನಿನಗೆ ಧರ್ಮ, ಅರ್ಥ, ಕಾಮಗಳು ಸಿದ್ಧಿಯಾಗಲೆಂದು ಹಾರೈಸುತ್ತೇನೆ. ಲಕ್ಷ್ಮೇ ಸ್ವರೂಪಳಾದ ಈ ಕನ್ಯೆಯನ್ನು ವಿಷ್ಣು ಸ್ವರೂಪನಾದ ನಿನಗೆ ಕೊಡುತ್ತಿದ್ದೇ®'æ. ಈ ರೀತಿಯಾಗಿ ಹೇಳಿ ಉದಕಧಾರಾ ಪುರಸ್ಸರವಾಗಿ ತ್ರಿಕರಣ ಶುದ್ದಿಯಿಂದ ಈ ವರನಿಗೆ ಕನ್ಯೆಯನ್ನು ಕೊಡುತ್ತಿದ್ದೇನೆ ಎನ್ನುತ್ತಾನೆ ಕನ್ಯೆಯ ತಂದೆ.

ಮುಂದಿನ ಹಂತವೇ ಪಾಣಿಗ್ರಹಣ. ಪಾಣಿಗ್ರಹಣ ಅಜೀವ ಸಂಬಂಧಕ್ಕಾಗಿ ವರನು ವಧುವಿನ ಕೈಹಿಡಿಯುವ ಸಂಪ್ರದಾಯ. ಪಾಣಿಗ್ರಹಣದ ನಂತರ ಬರುವುದೇ ಲಾಜಾಹೋಮ. ಲಾಜಾ ಎಂದರೆ ಅರಳು ಅಥವಾ ನೆನೆದ ಧಾನ್ಯ ಎಂದರ್ಥ. ಅರಳು, ಸಮಿತ್ತುಗಳನ್ನು ಅಗ್ನಿಗೆ ಹೋಮಿಸುವುದಷ್ಟೇ ಲಾಜಾಹೋಮದ ಉದ್ದೇಶವಲ್ಲ.

ಈ ಸಂದರ್ಭದಲ್ಲಿ ವಧು ಹೋಮ ಮಾಡುತ್ತಾ 'ಹೇ ಆರ್ಯಮಾ ನನ್ನನ್ನು ತಂದೆಯ ಕುಲದಿಂದ ಬಿಡಿಸು. ಸದಾ ಪತಿಯೊಂದಿಗಿರುವಂತೆ ಮಾಡು. ನನ್ನ ಪತಿಯ ಅನುರಾಗವು ಅನುಮೋದಿತವಾಗಲಿ ಎಂದು ಬೇಡಿಕೊಳ್ಳುವ ಮೂಲಕ ಮಾನಸಿಕವಾಗಿ ಪತಿಯನ್ನು ಸಮೀಪಿಸುವಂತೆ ಮಾಡುವುದ ಇದರ ವೈಜ್ಞಾನಿಕ ಉದ್ದೇಶ. ಲಾಜಾಹೋಮದ ನಂತರದ ಪದ್ಧತಿಯೇ ಅಶ್ಮಾರೋಹಣ ಎಂದರೆ ಕಲ್ಲನ್ನು ಹತ್ತಿ ನಿಲ್ಲುವುದು

ವರನು ಪತ್ನಿಯ ಕೈ ಹಿಡಿದು ಅವಳನ್ನು ಒಂದು ಬಂಡೆಕಲ್ಲಿನ ಮೇಲೆ ನಿಲ್ಲಿಸಿ 'ನಿನ್ನ ದೇಹ ಮತ್ತು ಮನಸ್ಸುಗಳು ಈ ಬಂಡೆಯಂತೆಯೇ ದೃಢವಾಗಿರಲಿ. ಎಂತಹ ಸನ್ನಿವೇಶವನ್ನು ಎದುರಿಸುವ ಮನೋಬಲ ನಿನಗೆ ಬರಲಿ' ಎಂಬ ದೃಢತೆಯನ್ನು ಪತ್ನಿಯ ಮನಸ್ಸಿನಲ್ಲಿ ತುಂಬುವ ವಿಧಾನವಾಗಿದೆ.

ವಿವಾಹ ಸಂಸ್ಕಾರದ ಪ್ರಮುಖ ಹಂತವೇ ಸಪ್ತಪದಿ. ಸಂಕ್ಷೇಪವಾಗಿ ಹೇಳಬೇಕೆಂದರೆ ಪತ್ನಿಯ ಕೈಹಿಡಿವ ವರನು ಪ್ರತಿಯೊಂದು ಹೆಜ್ಜೆಯನ್ನು ಇಡುವಾಗಲೂ 'ಇಷ ಏಕಪದೀ ಭವ' (ಅನ್ನ), ಊರ್ಜೇ ದ್ವಿಪದೀ ಭವ (ಬಲವರ್ಧನೆ), ರಾಜಸ್ಪೋಷಾಯ ತ್ರಿಪದೀ ಭವ (ಆರ್ಥಿಕ ಸಬಲತೆ), ಮಾಯೋಭವಾಯ ಚತುಷ್ಪದೀ ಭವ (ದಾಂಪತ್ಯ ಸುಖ), ಪ್ರಜಾಭ್ಯಃ ಪಂಚಪದೀ ಭವ (ಸತ್ಸಂತತಿ), ಋುತುಭ್ಯಃ ಷಟ್ಪದೀ ಭವ (ಸಂತೋಷ), ಸಖಾ ಸಪ್ತಪದೀ ಭವ (ಸದಾ ಜೊತೆಯಾಗಿರು) ಎಂದು ಹೇಳುತ್ತಾ ಕೈಹಿಡಿದು ನಡೆಸುತ್ತಾನೆ. ಸಪ್ತಪದಿಯೇ ವಿವಾಹ ಸಂಸ್ಕಾರದ ಜೀವ-ಜೀವಾಳ.


Tuesday, March 11, 2025

ಹಿಂದೂ ಪುರಾಣಗಳಲ್ಲಿ ಅಗ್ನಿ ದೇವರ ಮಹತ್ವವೇನು?

 ಹಲವಾರು ಕಾರಣಗಳಿಗಾಗಿ ಹಿಂದೂ ಪುರಾಣಗಳಲ್ಲಿ ಅಗ್ನಿ ದೇವರು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ:

1. ಅಗ್ನಿ ದೇವರು: ಅಗ್ನಿ ದೇವರು ಅಗ್ನಿಯ ದೈವಿಕ ಅಂಶ ಮತ್ತು ಅದರ ಪರಿವರ್ತಕ ಶಕ್ತಿಯನ್ನು ಪ್ರತಿನಿಧಿಸುವ ಅಗ್ನಿ ದೇವರು. ಹಿಂದೂ ಧರ್ಮದಲ್ಲಿ ಬೆಂಕಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿ ಬಳಸಲಾಗುತ್ತದೆ.

2. ಮನುಷ್ಯರು ಮತ್ತು ದೇವರುಗಳ ನಡುವೆ ಸೈತಾನ: ಅಗ್ನಿ ಮನುಷ್ಯರು ಮತ್ತು ದೇವರುಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ. ಅವನು ಮರ್ತ್ಯ ಲೋಕದಿಂದ ಸ್ವರ್ಗೀಯ ಲೋಕಗಳಿಗೆ ಉಡುಗೊರೆಗಳನ್ನು ಒಯ್ಯುತ್ತಾನೆ ಮತ್ತು ಮನುಷ್ಯರು ಮತ್ತು ದೈವಿಕರ ನಡುವೆ ಸಂವಹನವನ್ನು ಖಚಿತಪಡಿಸುತ್ತಾನೆ.

3. ಶುದ್ಧೀಕರಣ ಮತ್ತು ಪರಿವರ್ತನೆ: ಅಗ್ನಿಯು ತಾನು ಮುಟ್ಟುವ ಎಲ್ಲವನ್ನೂ ಶುದ್ಧೀಕರಿಸುತ್ತದೆ ಮತ್ತು ಪರಿವರ್ತಿಸುತ್ತದೆ ಎಂದು ನಂಬಲಾಗಿದೆ. ಆಚರಣೆಗಳಲ್ಲಿ, ಆಲೋಚನೆಗಳು ಮತ್ತು ಕಾರ್ಯಗಳ ಶುದ್ಧೀಕರಣವನ್ನು ಸಂಕೇತಿಸುವ ಬೆಂಕಿಗೆ ತ್ಯಾಗಗಳನ್ನು ಮಾಡಲಾಗುತ್ತದೆ.

4. ದೈವಿಕ ಸಾಕ್ಷಿ: ಪವಿತ್ರ ಸಮಾರಂಭಗಳು ಮತ್ತು ಆಚರಣೆಗಳಿಗೆ ಸಾಕ್ಷಿಯಾಗಿ ಭಗವಾನ್ ಅಗ್ನಿಯನ್ನು ಹೆಚ್ಚಾಗಿ ಆಹ್ವಾನಿಸಲಾಗುತ್ತದೆ, ಅವುಗಳ ಪಾವಿತ್ರ್ಯ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸುತ್ತದೆ. ಅವನ ಉಪಸ್ಥಿತಿಯು ಆಚರಣೆಗಳ ಯಶಸ್ಸು ಮತ್ತು ನೆರವೇರಿಕೆಯನ್ನು ಖಚಿತಪಡಿಸುತ್ತದೆ ಎಂದು ನಂಬಲಾಗಿದೆ.

5. ಮನೆ ಮತ್ತು ಒಲೆಯ ರಕ್ಷಕ: ಅಗ್ನಿಯನ್ನು ಮನೆ ಮತ್ತು ಒಲೆಗಳ ರಕ್ಷಕನಾಗಿ ಪೂಜಿಸಲಾಗುತ್ತದೆ. ಮನೆ ಮತ್ತು ಅದರ ನಿವಾಸಿಗಳನ್ನು ಆಶೀರ್ವದಿಸಲು ಮತ್ತು ರಕ್ಷಿಸಲು ದೇಶೀಯ ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಅವನನ್ನು ಆಹ್ವಾನಿಸಲಾಗುತ್ತದೆ.

6. ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತ: ಅಗ್ನಿಯು ಜ್ಞಾನ, ಬುದ್ಧಿವಂತಿಕೆ ಮತ್ತು ಜ್ಞಾನೋದಯದೊಂದಿಗೆ ಸಂಬಂಧ ಹೊಂದಿದ್ದಾನೆ. ಅವನನ್ನು ಸಾಮಾನ್ಯವಾಗಿ ಏಳು ನಾಲಿಗೆಗಳೊಂದಿಗೆ ಚಿತ್ರಿಸಲಾಗುತ್ತದೆ, ಇದು ಏಳು ರೀತಿಯ ಜ್ಞಾನವನ್ನು ಸಂಕೇತಿಸುತ್ತದೆ.

7. ವೈದಿಕ ಅರ್ಥ: ವೇದಗಳಲ್ಲಿ, ಅಗ್ನಿಯು ಅತ್ಯಂತ ಪ್ರಮುಖ ದೇವರುಗಳಲ್ಲಿ ಒಬ್ಬನಾಗಿದ್ದು, ಹಲವಾರು ಸ್ತೋತ್ರಗಳಲ್ಲಿ ಅವನ ಉಲ್ಲೇಖವಿದೆ. ದೇವರುಗಳಿಗೆ ಅನ್ನದಾತ ಮತ್ತು ಅರ್ಪಣೆಗಳನ್ನು ನೀಡುವ ಪಾತ್ರಕ್ಕಾಗಿ ಅವನನ್ನು ಪ್ರಶಂಸಿಸಲಾಗುತ್ತದೆ.

ಸಾಮಾನ್ಯವಾಗಿ, ಹಿಂದೂ ಪುರಾಣಗಳಲ್ಲಿ ಭಗವಾನ್ ಅಗ್ನಿಯ ಪ್ರಾಮುಖ್ಯತೆಯು ಬೆಂಕಿಯ ದೈವಿಕ ಪ್ರಾತಿನಿಧ್ಯ, ಶುದ್ಧೀಕರಣ, ರೂಪಾಂತರ ಮತ್ತು ಮಾನವರು ಮತ್ತು ದೈವಿಕ ಪ್ರಪಂಚದ ನಡುವಿನ ಸಂಪರ್ಕದ ಪಾತ್ರದಲ್ಲಿದೆ.