Showing posts with label Thunder. Show all posts
Showing posts with label Thunder. Show all posts

Monday, January 27, 2025

ಆಕಾಶದಲ್ಲಿ ಗುಡುಗು ಹಾಗೂ ಮಿಂಚು ಹೇಗೆ ಉಂಟಾಗುತ್ತದೆ?

 ಮಿಂಚು ಒಂದು ವಿದ್ಯುತ್ ಪ್ರವಾಹ.

ಆಕಾಶದಲ್ಲಿ ಮೋಡದೊಳಗೆ, ಅನೇಕ ಸಣ್ಣ ಸಣ್ಣ ಮಂಜುಗಡ್ಡೆಗಳು (ಹೆಪ್ಪುಗಟ್ಟಿದ ಮಳೆಹನಿಗಳು) ಗಾಳಿಯಲ್ಲಿ ಚಲಿಸುವಾಗ ಪರಸ್ಪರ ಬಡಿದುಕೊಳ್ಳುತ್ತವೆ. ಈ ಎಲ್ಲಾ ಘರ್ಷಣೆಗಳಿಂದ ವಿದ್ಯುತ್ ಚಾರ್ಜ್ ಉತ್ಪತ್ತಿಯಾಗುತ್ತದೆ.‌‌‌‌ ಸ್ವಲ್ಪ ಸಮಯದ ನಂತರ, ಇಡೀ ಮೋಡವೇ ವಿದ್ಯುತ್ ಚಾರ್ಜ್ ನಿಂದ ತುಂಬಿಹೋಗುತ್ತದೆ. ಧನಾತ್ಮಕ ಚಾರ್ಜ್ ಗಳು ಅಥವಾ ಪ್ರೋಟಾನ್‌ಗಳು ಮೋಡದ ಮೇಲ್ಭಾಗದಲ್ಲಿ ರೂಪುಗೊಳ್ಳುತ್ತವೆ ಮತ್ತು ಮೋಡದ ಕೆಳಭಾಗದಲ್ಲಿ ಋಣಾತ್ಮಕ ಚಾರ್ಜ್ ಗಳು ಅಥವಾ ಎಲೆಕ್ಟ್ರಾನ್‌ಗಳು ರೂಪುಗೊಳ್ಳುತ್ತವೆ. ಪ್ಲಸ್ ಮತ್ತು ಮೈನಸ್ ಚಾರ್ಜ್ ಗಳು ಪರಸ್ಪರ ಆಕರ್ಷಿಸುವುದರಿಂದ, ಮೋಡದ ಕೆಳಗೆ ನೆಲದ ಮೇಲೆ ಎತ್ತರದ ಬೆಟ್ಟ ಪರ್ವತ, ಜನರು ಅಥವಾ ಮರಗಳಂತಹ ಯಾವುದಾದರೂ ವಸ್ತುವಿನ ಮೇಲೆ ಧನಾತ್ಮಕ ಚಾರ್ಜ್ ಕೇಂದ್ರೀಕರಿಸುತ್ತದೆ. ಈ ವಸ್ತು ಮತ್ತು ಮೇಲಿನ ಮೋಡದ ಮಧ್ಯೆ ಸರಕ್ಕನೇ ಒಂದು ವಿದ್ಯುತ್ ಹರಿಯುತ್ತದೆ. ಇದೇ ಮಿಂಚು!

ನೀವು ಎಂದಾದರೂ ಕಾರ್ಪೆಟ್ ಅಡ್ಡಲಾಗಿ ನಿಮ್ಮ ಪಾದಗಳನ್ನು ಉಜ್ಜಿಕೊಂಡು ನಂತರ ಲೋಹದ ಬಾಗಿಲಿನ ಹ್ಯಾಂಡಲ್ ಅನ್ನು ಮುಟ್ಟಿನೋಡಿ. ಮೈಯಲ್ಲಿ ಕರೆಂಟ್ ಹರಿಯುತ್ತದೆ! ಮಿಂಚು ಹಾಗೇನೇ!

ಮಿಂಚು ಸರಿಸುಮಾರು 30,000 ಡಿಗ್ರಿ ಸೆಲ್ಸಿಯಸ್ ಅಷ್ಟು ಬಿಸಿ ಇರುತ್ತದೆ. ಸೂರ್ಯನ ಮೇಲ್ಮೈಗಿಂತ ಆರು ಪಟ್ಟು ಹೆಚ್ಚು ಬಿಸಿ!

ಒಂದು ಮಿಂಚಿನಲ್ಲಿ ಕೋಟಿಗಟ್ಟಲೆ ವೋಲ್ಟ್ ಲಕ್ಷಗಟ್ಟಲೆ ಆಂಪೇರ್ ಪ್ರವಾಹ ಕೆಲವೇ ಮೈಕ್ರೋಸೆಕೆಂಡುಗಳ ಕಾಲ ಹರಿಯುತ್ತದೆ!

ಗುಡುಗಿಗೆ ಕಾರಣವೇನು?

ಮಿಂಚಿನಿಂದ ಗುಡುಗು ಉಂಟಾಗುತ್ತದೆ. ಮಿಂಚಿನ ಭೈರಿಗೆ ಮೋಡದಿಂದ ನೆಲಕ್ಕೆ ಅಪ್ಪಳಿಸಿದಾಗ ಗಾಳಿಯಲ್ಲಿ ಸ್ವಲ್ಪ ರಂಧ್ರವನ್ನು ಕೊರೆಯುತ್ತದೆ. ಇದರ ಮೂಲಕ ಕರೆಂಟ್ ಹರಿದ ನಂತರ ಸುತ್ತಲಿನ ಗಾಳಿ ಈ ನಿರ್ವಾತದ ಕೊಳವೆಗೆ ನುಗ್ಗಿ ಶಬ್ದ ತರಂಗವನ್ನು ಸೃಷ್ಟಿಸುತ್ತದೆ. ಗುಡುಗು ಕೇಳುವ ಮೊದಲು ನಾವು ಮಿಂಚನ್ನು ನೋಡುವ ಕಾರಣವೆಂದರೆ ಬೆಳಕು ಶಬ್ದಕ್ಕಿಂತ ವೇಗವಾಗಿ ಚಲಿಸುತ್ತದೆ!

ಮಿಂಚು 100 ಮೈಲಿಯವರೆಗೂ ಕಾಣಿಸಬಹುದು. ಗುಡುಗು 5 ರಿಂದ 15 ಮೈಲಿಯವರೆಗೂ ಕೇಳಿಸಬಹುದು.

ಇಂಟ್ರಾಕ್ಲೌಡ್ ಮಿಂಚು ಮಿಂಚಿನ ಸಾಮಾನ್ಯ ವಿಧ. ಒಂದೇ ಮೋಡದೊಳಗೆ ಧನಾತ್ಮಕ ಮತ್ತು ಋಣಾತ್ಮಕ ಚಾರ್ಜ್ ಗಳು ಇದ್ದಾಗ ಇದು ಸಂಭವಿಸುತ್ತದೆ. ಸಾಮಾನ್ಯವಾಗಿ, ಈ ಪ್ರಕ್ರಿಯೆಯು ಮೋಡದೊಳಗೇ ನಡೆಯುತ್ತದೆ. ನೋಡಲು ಪ್ರಕಾಶಮಾನವಾಗರುತ್ತದೆ.

ಇಂಟರ್ಕ್ಲೌಡ್ ಮಿಂಚು ಕಡಿಮೆ ಸಾಮಾನ್ಯ. ವಿಭಿನ್ನ ಮೋಡಗಳೊಳಗೆ ಧನಾತ್ಮಕ ಮತ್ತು ಋಣಾತ್ಮಕ ಚಾರ್ಜ್ಗಳು ಇದ್ದಾಗ ಮತ್ತು ಅವುಗಳ ನಡುವೆ ಮಿಂಚಿನ ಹೊಡೆತ ಸಂಭವಿಸಬಹುದು.