ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಶನ ಮಾಡೋಣ |ತುಂಗಾ ನದಿಯಲಿ ಮೀಯೋಣಸುರಗಂಗಾ ಸ್ನಾನವದನ್ನೋಣ |ಮಂಗಳ ಮೂರುತಿ ರಾಘವೇಂದ್ರನಆಂಧ್ರಗಳಿಗೆ ಶರಣಾಗೋಣ ॥ ಮಂತ್ರಾಲಯಕ್ಕೆ ॥ಅನಂತ ಜನುಮವ ಕೇಳೋಣಆ ಮುಕುತಿಯ ಬೇಡಾ ಎನ್ನೋಣ |ಜನುಮ ಜನುಮದಲು ಚರಣಕಮಲದಿ ಶೃಂಗಗಳಾಗಿ ನಲಿಯೋಣ ॥ ಮಂತ್ರಾಲಯಕ್ಕೆ ॥
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ |ನಾಮ ಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ || ರಾಘವೇಂದ್ರ ||ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ |ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ |ಹೇಗೆ ಇರಲಿ ಎಲ್ಲೆ ಇರಲಿ ಅವನ ಸ್ಮರಣೆ ಮಾಡಿರಿ |ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ || ರಾಘವೇಂದ್ರ ||ಮನಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ |ಗುರುವೆ ನಿನ್ನ ಕರುಣೆಯೊಂದೆ ಸಾಕು ನಮಗೆ ಎನ್ನಿರಿ |ಕಲ್ಲೋ ಮುಳ್ಳೋ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ|ಏನೇ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ || ರಾಘವೇಂದ್ರ ||ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು |ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು || ರಾಘವೇಂದ್ರ ||