ಖಂಡಿತ ಹೊಟ್ಟೆ ಸರಿಯಾಗಿದ್ದರೆ ಆರೋಗ್ಯ ಖಂಡಿತ ಸರಿಯಾಗಿರುತ್ತದೆ, ಹಾಗಾಗಿ ಹೊಟ್ಟೆ ಕೆಡದಂತೆ ಆಹಾರ ಸೇವಿಸಬೇಕು. ಅದು ಹೇಗೆ ಗೊತ್ತಾಗುತ್ತದೆ?
ಅದೇನೂ ಗೊತ್ತಾಗುವುದು ಬೇಕಾಗಿಲ್ಲ. ಮೊದಲನೆಯ ಕಾರ್ಯ ನೀವು ಮಾದಬೇಕಾಗದಾದ್ದು ನಿಮ್ಮ ಮಲ ಮೂತ್ರ ವಿಸರ್ಜನೆ ಕಂಟ್ರೋಲ್ ಮಾಡಿಟ್ಟುಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಬೇಕು. ಮುಂಜಾನೆದ್ದ ತಕ್ಷಣ ಚಹಾ ಕಾಫಿ ಲೋಟಕ್ಕೆ ಬಾಯಿ ಹಾಕದೆ, ಒಂದು ಲೋಟ ನೀರು (ಬೆಚ್ಚಗಿದ್ದರೆ ಉತ್ತಮ) ಕುಡಿಯಿರಿ, ನಂತರ ಶೌಚ ಬಂದರೆ ಹೋಗಿ. ಇಲ್ಲಾಂದರೆ ಮೊದಲು ದೇಹದ ಒಳಗಿನ ಅನಪೇಕ್ಷಿತ ವಾಯು ಹೊರಗೆ ಹೋಗುವಂತ ವ್ಯಾಯಾಮ ಮಾಡಿ, ನಂತರ, ದೇಹದ ಭಾಗಗಳು ತೆರೆದುಕೊಳ್ಳುವಂತೆ ಕಾಯಿ ಕಾಲು ಕುತ್ತಿಗೆ ಬೆರಳು ಕಣ್ಣು ಇವುಗಳ ವ್ಯಾಯಾಮ ಮಾಡಿ, ನಂತರ ಸ್ವಲ್ಪ ಭಾರದ ವ್ಯಾಯಾಮ ಮಾಡಿ, ವಾಕಿಂಗ ಉತ್ತಮ ಹವ್ಯಾಸ.
ನಂತರ ಚಹಾನೋ ಕಾಫಿನೋ ಅಥವಾ ಹಾಲೋ ಕುಡಿದು, ಸ್ನಾನ ಮಾಡಿ, ಆಮೇಲೆ ಪೂಜೇನೋ ಧ್ಯಾನವನ್ನೋ ಮಾಡಿದರುತ್ತಮ. ನಿಮಗಿಷ್ಟವಾಗುವಂತೆ ನಿಮ್ಮನ್ನು ಅಲಂಕರಿಸಿಕೊಂಡು ಸುಮಾರು ಎಂಟು ಗಂಟೆ ಹೊತ್ತಿಗೆ ತಿಂಡಿ ಮಾಡಿ ಹೊಟ್ಟೆತುಂಬ. ಮುಂದೆ ಕೆಲಸದ ಸಮಯ, ಕೆಲಸದ ಸ್ಥಳದ ಬಗ್ಗೆ ಅತಿಯಾಗಿ ಚಿಂತಿಸಬೇಡಿ, ಚಿಂತ ಅಸಿಡಿಟಿಗೆ ಕಾರಣವಾಗಬಹುದು. ಮಧ್ಯಾನ್ಹ ಎಂಥ ಒತ್ತಡವಿದ್ದರೂ ಅದನ್ನ ಸ್ವಲ್ಪ ದೂರವಿತ್ತು ನೆಮ್ಮದಿಯಿಂದ ಊಟ ಮಾಡಿ (ಊಟ ಮಾಡುವಾಗ ಸರಿಯಾಗಿ ಹಸಿವೆಯಾಗಿರಬೇಕು). ಇದಾದಮೇಲೆ ಸ್ವಲ್ಪ ಕಣ್ಣು ಮುಚ್ಚಿ ವಿಶ್ರಾಂತಿ (೨೦ ನಿಮಿಷ) ತೆಗೆದುಕೊಳ್ಳಿ. ಮನಸ್ಸು ಹಾಗೂ ದೇಹ ಆರಮದಿಂದಿದ್ದು, ಸರಿಯಾದ ಕ್ರಮದಲ್ಲಿ ಯೋಚಿಸಲು ಸಾಧ್ಯವಾಗುತ್ತದೆ.
ಸಂಜೆ ಮನೆಗೆ ಬಂದಾಗ ಅಥವಾ ಹೆಣ್ಣು ಮಕ್ಕಳು ಮನೆಯ ಕೆಲಸ ಮುಗಿಸಿ ಸಂಜೆಯಾದಾಗ (ಮನೆಯಲ್ಲಿ ಹೆಣ್ಣು ಹಾಗೂ ಗಂಡು ಸೇರಿದಾಗ) ಒಮ್ಮೆಲೇ ಹೊರಗೆ ಆಗಿಹೋದ ಕೆಟ್ಟ ಅನುಭವಡ ಬಗ್ಗೆ ಚರ್ಚಿಸದೆ, ಕೈಕಾಲು ತೊಳೆದು ಒಂದು ಸಣ್ಣ ಪ್ರಾರ್ಥನೆ ಮಾಡಿ, ಒಂದು ಸಣ್ಣ ಕಪ್ ಚಹಾ/ಕಾಫಿ ಕುಡಿದು, ಹಗುರವಾಗಿ ಮನೆಯ ಹೊರಗಿನ ವಿಚಾರ ಚರ್ಚಿಸಿ, ಎಲ್ಲ ಒತ್ತಡಗಳಿಗೂ ಸಮಾಧಾನ ಸಿಗಬಹುದು (ಒಬ್ಬರೇ ಇದ್ದರೆ ಕಣ್ಣು ಮುಚ್ಚಿ ಕುಳಿತು ಶಾಂತವಾಗಿ ಯೋಚಿಸಿ). ರಾತ್ರಿ ಮಿತ ಆಹಾರ ಸೇವಿಸಿ ಮಲಗುವುದಕ್ಕಿಂತ ಎರಡು ತಾಸು ಮೊದಲು.
ಬೇಕಾದಾಗೆಲ್ಲ ಚಹಾ ಕಾಫಿ ಕುಡಿಯುವುದು ಒಳ್ಳೆ ಹವ್ಯಾಸವಲ್ಲ. ಆಲ್ಕೋಹಾಲ್, ತಂಬಾಕು, ಗುಟ್ಕಾ, ಸಿಗರೇಟು ದೇಹಕ್ಕೆ ಒಳ್ಳೆಯದಲ್ಲ, ಆದರೆ ಸೇವನೆ ಇದ್ದರೂ ಅದರ ಮೇಲೆ ಪೂರ್ಣ ನಿಮ್ಮ ಕಂಟ್ರೋಲ್ ಇರಬೇಕು. ಇವನ್ನು ಎಷ್ಟು ಮತ್ತೊಬ್ಬರ ಜೊತೆ ಹಂಚಿಕೊಳ್ಳುತ್ತೀರೋ ಅಷ್ಟು ಚಟ ಹೆಚ್ಚಾಗುತ್ತದೆ.
ಎರಡು ಆಹಾರ ಸೇವನೆ ಮಧ್ಯ ಏನೋ ತಿಂಡಿ ಅಥವಾ ಹಣ್ಣು ಸೇವಿಸಬೇಕಾದಾಗ ನಿಮ್ಮ ತಿನ್ನುವ ತಿನಿಸು ಎಂಥದು ಹಾಗೂ ಎಷ್ಟು ಎನ್ನುವುದರ ಬಗ್ಗೆ ಗಮನವಿರಲಿ ಮಿತಸೆವನೆ ಒಳ್ಳೆಯದು ಹಾಗೂ ಮುಂದಿನ ಆಹಾರ ಸೇವನೆಯ ಸಮಯದಲ್ಲಿ ಅಷ್ಟು ಕಡಿಮ ಆಹಾರ ಸೇವಿಸಬೇಕು. ಚಿಪ್ಸ್, ಬರ್ಗರ್ ಪಿಜ್ಜಾ ಬಜ್ಜಿ ಅಂತಹ ಪದಾರ್ಥ ಒಳ್ಳೆಯದಲ್ಲ, ಸೇವಿಸಿದರೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ.
ನಿಮಗೆ ಅಸಿಡಿಟಿ ಆದಾಗ ಎದೆ ನೋವು ಹಾಗೂ ಹೃದಯಸ್ಥಮ್ಬನ ಆಗುತ್ತದೆಯೇನೋ ಎಂಬಂಥ ಅನುಭವವಾದರೆ, ನಾಲ್ಕು ದಿನ ಖಾರ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಿ, ಮುಂದೆ ಹಸಿ ಮೆಣಸಿನಕಾಯಿ ಪದಾರ್ಥಗಳನ್ನು ಇನ್ನೂ ಎಂಟು ದಿವಸ ಬಿಡಿ ಅಸಿಡಿಟಿ ಕಡಿಮೆ ಆಗಬಹುದು. ತಣ್ಣೀರು ಸ್ನಾನ (ಚಳಿಗಾಲದಲ್ಲೂ) ಮಳೆಯಲ್ಲಿ ನೆನೆಯುವುದನ್ನು ರೂಢಿಸಿಕೊಳ್ಳಿ, ಬರಿ ಯುವಿ -ಅರ ಓ ಫಿಲ್ಟರ್ ನೀರು ಕುಡಿಯುದಕ್ಕಿಂತ, ಯಾವುದೇ ಡಬ್ಬಿ ಅಂಗಡಿಯಲ್ಲಿಟ್ಟ ಡ್ರಂ ನೀರನ್ನೂ ಕುಡಿಯುವ ಅನುಭವವಿರಲಿ, ಅಂದರೆ ನಿಮ್ಮ ದೇಹ ಎಂಥದನ್ನೂ ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ದೇಹದ ನೋವು ಹಾಗೂ ತಲೆನೋವು ಬಂದಾಗೆಲ್ಲ ಮಾತ್ರೆ ನುಂಗಬೇಡಿ. ನಿಮ್ಮ ದೇಹಕ್ಕೆ ತನ್ನನ್ನು ತಾನು ಸರಿ ಮಾಡಿಕೊಳ್ಳುವ ಸಾಮರ್ಥ್ಯವಿದೆ, ಮಾತ್ರೆ ಆ ಸಾಮಾರ್ಥ್ಯವನ್ನು ಮರೆಸಿಬಿಡುತ್ತದೆ.
ಲಂಘನಂ ಪರಮೌಷಧಂ ಎನ್ನುವಂತೆ, ಹದಿನೈದು ದಿನಗಳಿಗೊಮ್ಮೆಯಾದರೂ ಒಂದುದಿನ ಪೂರ್ಣ ಉಪವಾಸವಿರಿ ಸಾಧ್ಯವಾದರೆ ನೀರನ್ನೂ ಕುಡಿಯಬೇಡಿ (ನಿರ್ಜಲ ಉಪವಾಸ), ಮೊದಮೊದಲು ನಿಶ್ಚಕ್ತಿ ಅನ್ನಿಸುತ್ತದೆ, ಒಂದು ನಾಲ್ಕು ಉಪವಾಸದ ನಂತರ ಎಲ್ಲ ಸರಿಯಾಗುತ್ತದೆ. ಅ ದಿನ ಉಪವಾಸವಿದ್ದು ನಿಮ್ಮ ದೈನಂದಿನ ಕೆಲಸ ಮಾಡುತ್ತಿರಿ. ಶಕ್ತಿಯನ್ನು ನಮ್ಮ ರಕ್ತ, ನಮ್ಮದೆಹದಲ್ಲಿ ಶೇಖರವಾದ, ರೋಗತರುವ ಕೊಬ್ಬನ್ನು ಕರೆಗಿಸಿ ಪಡೆದುಕೊಳ್ಳುತ್ತದೆ. ಇದರಿಂದ ದೇಹ ಹಗುರವಾಗುತ್ತದೆ ರಕ್ತನಾಳ ಶುದ್ಧಿಯಾರುತ್ತದೆ. ಬಿ ಪಿ ಶುಗರ, ಹೃದಯ ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ದಂಥ ರೋಗಗಳನ್ನೂ ಬರದಂತೆ ತಡೆಯಬಹುದು.