2. ಭಾರತವನ್ನು ಆಳಿದ ಒಬ್ಬ ಬ್ರಾಹ್ಮಣ ರಾಜನೂ ಇರಲಿಲ್ಲ.
3. ಬ್ರಾಹ್ಮಣರು ಶಿಕ್ಷಕರು, ವಿದ್ವಾಂಸರು, ಪುರೋಹಿತರು, ಸಲಹೆಗಾರರು. ಆದರೆ ಆಡಳಿತಗಾರರಲ್ಲ. ತನ್ನ ತಂದೆಯನ್ನು ಅನ್ಯಾಯ ವಾಗಿ ಕೊಂದುದರಿಂದ ರೋಷಗೊಂಡ ಬ್ರಾಹ್ಮಣ ನಾದ ಪರಶುರಾಮನು ಎಲ್ಲಾ ರಾಜರುಗಳನ್ನು ಸೋಲಿಸಿ ಇಡೀ ಭೂಮಂಡಲವನ್ನೇ ಗೆದ್ರೂ ತಾನು ರಾಜನಾಗಲಿಲ್ಲ ಹಾಗೂ ಅದನ್ನು ಕ್ಷತ್ರಿಯರಿಗೆ ದಾನ ನೀಡಿದ ಹಾಗೂ ತಾನು ತಪಸ್ವಿಯಾಗಿಯೇ ಉಳಿದ.
4. ಬ್ರಾಹ್ಮಣರ ಸಾಂಪ್ರದಾಯಿಕ ಉದ್ಯೋಗ ಅಂದ್ರೆ ದೇವಾಲಯದ ಅರ್ಚಕ, ಪುರೋಹಿತ, ಜೋಯಿಸರು.ಬ್ರಾಹ್ಮಣರು ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವುದು. ಅವರ ಏಕೈಕ ಆದಾಯವು ಅವರ ಉದ್ಯೋಗಕ್ಕೆ ಭಕ್ತರು ನೀಡಿದ ಕಾಣಿಕೆಯೇ ಆಗಿತ್ತು.
5. ವೈದಿಕ ಸಾಹಿತ್ಯವನ್ನು ಹೆಚ್ಚಾಗಿ ಬ್ರಾಹ್ಮಣೇತ ರರು ಬರೆಯುತ್ತಿದ್ದರು.ಬರೆದಿದ್ದಾರೆ. ಬ್ರಾಹ್ಮಣ ನಲ್ಲದ "ಮನು" ಎಂಬುವನು ಬರೆದ ಮನುಸ್ಮೃತಿ. ಬ್ರಾಹ್ಮಣ ಎಂದರೆ ವೃತ್ತಿ [ವರ್ಣ]. ಜಾತಿ ಅಲ್ಲ.
6. ಸಂಸ್ಕೃತ ಓದುವುದು ಮತ್ತು ಬರೆಯುವುದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದ್ರೆ, ಬುಡಕಟ್ಟು ಜನಾಂಗಕ್ಕೆ ಸೇರಿದ ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ಹೇಗೆ ರಚಿಸುತ್ತಿದ್ದರು? 4 ವೇದಗಳನ್ನು ವರ್ಗೀಕರಿಸಿದ ಮತ್ತು ಮೀನುಗಾರ ಮಹಿಳೆಗೆ ಜನಿಸಿದ ವೇದವ್ಯಾಸ ಮಹರ್ಷಿಗಳು ಮಹಾಭಾರತವನ್ನು ಬರೆದಿದ್ದಾರೆ ಅಲ್ವಾ?
7. ಆಗ ಸಂಸ್ಕೃತ ಭಾಷೆಯೇ ಮಾತಾಡುತಿದ್ದರಿಂದ ಬ್ರಾಹ್ಮಣೇತರ ಲೇಖಕರು ಕೂಡ ಸಂಸ್ಕೃತ ಭಾಷೆಯನ್ನೇ ಬಳಸಿ ಗ್ರಂಥಗಳನ್ನು ರಚಿಸಿದ್ದಾರೆ.
8. ಒಂದು ಉಪನಿಷತ್ತನ್ನೇ ಬರೆದ ಮಹರ್ಷಿ ಸತ್ಯಕಾಮ ಜಾಬಾಲ, ವೇದವ್ಯಾಸ ಮಹರ್ಷಿ, ವಶಿಷ್ಠ ಮಹರ್ಷಿ, ವಾಲ್ಮೀಕಿ ಮಹರ್ಷಿ, ಶ್ರೀಕೃಷ್ಣ, ಶ್ರೀರಾಮ, ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ ಮಹರ್ಷಿ, ಶೃಂಗ ಮಹರ್ಷಿ, ವಿದುರ ನೀತಿಯನ್ನು ನಮಗೆ ಅನುಗ್ರಹಿಸಿದ ಮಹಾಭಾರತದ ವಿದುರ, ಗೌತಮ, ಬುದ್ಧ, ಮಹಾವೀರ, ತುಳಸೀದಾಸ, ತಿರುವಳ್ಳುವರ್, ಕಬೀರ, ವಿವೇಕಾನಂದ, ಗಾಂಧಿ, ನಾರಾಯಣ ಗುರು ಮುಂತಾದವರ ಬೋಧನೆಗಳನ್ನು ನಾವು ಅತ್ಯಮೂಲ್ಯವೆಂದು ಪರಿಗಣಿಸುತ್ತೇವೆ. ಇವರು ಯಾರು ಬ್ರಾಹ್ಮಣರಲ್ಲ
9. ಬ್ರಾಹ್ಮಣೇತರ ಭಕ್ತಿಸಂತರಿಂದ ಭಕ್ತಿಯ ಕುರಿತು ಹಲವಾರು ಕೃತಿಗಳಿವೆ. ಅವರಲ್ಲಿ ಯಾರೂ ಬ್ರಾಹ್ಮಣರಲ್ಲ. ಆದ್ರೆ "ಬ್ರಾಹ್ಮಣರು ನಮಗೆ ಕಲಿಯಲು ಬಿಡಲಿಲ್ಲ? ಎಂದು ನೀವು ಜೋರಾಗಿ ಅಳುವುದು ಏಕೆ? ಇಲ್ಲೇ ಗೊತ್ತಾಗುತ್ತೆ "ಬ್ರಾಹ್ಮಣರು ಎಂದಿಗೂ ಇತರರನ್ನು ಕಲಿಯು ವುದನ್ನು ತಡೆಯಲಿಲ್ಲ. ಹೇಳ್ಬೇಕು ಅಂತ ಅಂದ್ರೆ ವಿದ್ಯೆಯನ್ನು ಕಲಿಯುವ ಹಂಬಲ ಇರೋರಿಗೆ ಕಲಿಸಿದ್ದಾರೆ.
10. ಇತಿಹಾಸದ ಯಾವ್ದೇ ಸಮಯದಲ್ಲಿ ಬ್ರಾಹ್ಮಣರು ಶ್ರೀಮಂತರಾಗಿರಲಿಲ್ಲ ಅಥವಾ ಶಕ್ತಿಶಾಲಿಯಾಗಿರಲಿಲ್ಲ. ಯಾವ್ದೇ ಹಳೆಯ ಭಾರತೀಯ ಕಥೆಯ ಪುಸ್ತಕವನ್ನು ಎತ್ತಿಕೊಳ್ಳಿ, ನೀವು ಓದುವುದು "ಘರೀಬ್_ ಬ್ರಾಹ್ಮಣ್ ಎಂದೇ ಉಲ್ಲೇಖ ಆಗಿರುವುದನ್ನು ನೀವು ನೋಡುತ್ತೀರಿ.
11. ಅವರ ವೃತ್ತಿಯನ್ನು ಸಮಾಜದ ಅತ್ಯುನ್ನತ ಸ್ಥಾನವೆಂದು ಪರಿಗಣಿಸಲಾಗಿದ್ರೂ, ಬ್ರಾಹ್ಮಣರು ಬದುಕುಳಿಯುವ ಏಕೈಕ ಮಾರ್ಗವೆಂದರೆ ಭಕ್ತಗಣ ಜನರು ನೀಡುವ ಕಾಣಿಕೆ.
12. ಬ್ರಾಹ್ಮಣರ ದೊಡ್ಡ ಕೊಡುಗೆ ಎಂದರೆ ಭೂಮಿಯಲ್ಲಿ ಇದುವರೆಗೆ ಮಾತನಾಡುತಿದ್ದ ಅತ್ಯುತ್ತಮ ಭಾಷೆಯಾದ ಸಂಸ್ಕೃತವನ್ನು ಉಳಿಸಿಕೊಂಡಿರುವುದು. ಸಂಸ್ಕೃತವನ್ನು ಯಾರೂ ಪ್ರಚಾರ ಮಾಡಿಲ್ಲ. ಬ್ರಾಹ್ಮಣರು ಸ್ವತಃ ಸಂಸ್ಕೃತವನ್ನು ಕಲಿಯುವ ಸ್ವಯಂಪ್ರೇರಿತ ಕಾರ್ಯವನ್ನು ಕೈಗೊಂಡರು.ಆದ್ರೆ ಈಗ ನೀವು "ಸಂಸ್ಕೃತದಲ್ಲಿ ಏಕಸ್ವಾಮ್ಯವನ್ನು ಬ್ರಾಹ್ಮಣರ ಮೇಲೆ ಆರೋಪಿಸುತ್ತಿದ್ದೀರಿ" ಯಾಕೆ??
13. ಬ್ರಾಹ್ಮಣರು ರಾಜರಾಗಿರಲಿಲ್ಲ. ಅವರು ಅಧಿಕಾರವನ್ನು ಅನುಭವಿಸಲಿಲ್ಲ ಅಥವಾ ಸಂಪತ್ತನ್ನು ಹೊಂದಿರಲಿಲ್ಲ. ಅವರು ಜ್ಞಾನವನ್ನು ಪಡೆಯಲು ಶ್ರಮಿಸಿದರು ಮತ್ತು ಕಠಿಣ ಜೀವನವನ್ನು ನಡೆಸಿದರು.
"ಹಾಗಾಗಿ ಬ್ರಾಹ್ಮಣರಿಂದ ಶೋಷಣೆಯಾಗುವ ಪ್ರಶ್ನೆಯೇ ಇಲ್ಲ".
ಲೇಖನ ಕೃಪೆ :: Subramanyam Davangere
[ಹಾಗಂತ ನಾನು ಬ್ರಾಹ್ಮಣಳಲ್ಲ. ಅಪ್ಪಟ ಒಕ್ಕಲಿಗ ಗೌಡ್ರು ಮನೆ ಮಗಳು- ಆಶಾ ಎನ್ ಹೆಗಡೆ ]