Showing posts with label English Newspaper. Show all posts
Showing posts with label English Newspaper. Show all posts

Wednesday, September 30, 2026

ಆಂಗ್ಲ ಪತ್ರಿಕೆಯಲ್ಲಿ ಕನ್ನಡಿಗರು

 ರೆಬೆಲ್ ⭐ ಅಂಬರೀಶ್ , ಲಕ್ಷ್ಮೀ :->

🌟🌟🌟🌟🌟🌟🌟🌟🌟🌟🌟🌟🌟🌟🌟

The Illustrated Weekly of India ( ೧೯೮೨ ಅಂದರೆ ೪೪ ವರ್ಷ ಹಿಂದಿನ ಪತ್ರಿಕೆಯಲ್ಲಿ) ರೆಬೆಲ್ ⭐ ಅಂಬರೀಶ್ ಹಾಗೂ ಜೂಲಿ ಲಕ್ಷ್ಮೀ (ಇವರನ್ನು ಕನ್ನಡಿಗರೆಂದು ಪರಿರಣಿಸುವುದಾದರೆ) :-

ಪತ್ರಿಕೆ ಇಂಗ್ಲಿಷ್, ಚಲನಚಿತ್ರ ಮಲೆಯಾಳಿ, ಆದರೆ ನಾಯಕ ನಟ ಕನ್ನಡಿಗ ಅಂಬರೀಶ್, ಮತ್ತು ಕನ್ನಡ ಮಾತೃಭಾಷೆ ಅಲ್ಲದಿದ್ದರೂ ಕನ್ನಡ ನಟಿ ಎಂದು ಪರಿಗಣಿಸಬಹುದಾದ ಲಕ್ಷ್ಮೀ.

ಸಾರಂಶ (ಲೇಖಕ ರಾಜು ಭರತನ್ ಬರಹದಲ್ಲಿ) :->👇

"ಗಾನಂ" - ಈ ಮಲೆಯಾಳಿ ಚಲನಚಿತ್ರದ ಹೆಸರು.ಅಂಬರೀಶ್, ಲಕ್ಷ್ಮೀ ಹಾಗೂ ಪೂರ್ಣಿಮಾ ಜಯರಾಂ.👇

ಇದರ ಕತೆಗಾರ, ನಿರ್ದೇಶಕ ಶ್ರೀಕುಮಾರ ತಂಪಿ (ಇಂಗ್ಲಿಷ್ ನಲ್ಲಿ ಈ ರೀತಿ ಇದೆ -Thampi). ೧೯೭೬ ರಲ್ಲೇ ಈ ಚ.ಚಿತ್ರದ ತಯಾರಿ ನಡೆಸಿದ್ದಾರೆ ಅಂತೆ. ಲಕ್ಷ್ಮೀ ಇಲ್ಲಿ "ಪಾಲ್ಘಾಟ್ ರುಕ್ಮಿಣಿ". ಜ್ಯೂಲಿ ಚ.ಚಿತ್ರದ "ಬೋಲ್ಡ್"(Bold) ಜ್ಯೂಲಿ ಪಾತ್ರದ ವಿರುದ್ಧ ಪಾತ್ರ. ಅಂಬರೀಶ್ ಪಾತ್ರದ ಹೆಸರು "ಅರವಿಂದಾಕ್ಷನ್". ಇನ್ನೊಬ್ಬ ನಾಯಕಿ ಪೂರ್ಣಿಮ ಜಯರಾಂ (ಪಾತ್ರ "ಶ್ರೀದೇವಿ".)

ದಲಿತ ಅರಂವಿಂದಾಕ್ಷನ್ (ಅಂಬರೀಶ್) ಇಲ್ಲಿ ಸಂಗೀತದಲ್ಲಿ ಉನ್ನತ ಸಾಧನೆ ಮಾಡಿದವರು. ಹಾಗಾಗಿಯೋ ಏನೋ ಅಂಬರೀಶರನ್ನು ನಿಜ ಜೀವನದ ಖ್ಯಾತ "ವಾಯ್ಲಿನ್" ವಾಧಕ ಶ್ರೀ ಚೌಡಯ್ಯನವರ ಮೊಮ್ಮಗನೆಂದು ಉಲ್ಲೇಖಿಸಿದ್ದಾರೆ.

👆 ಗುರುವಾಯೂರು ದೇವಸ್ಥಾನದಲ್ಲಿ ಶ್ರೀಕುಮಾರನ್ ತಂಪಿ, ಲಕ್ಷ್ಮೀ, ಅಂಬರೀಶ್. ಯಾರೇ ಇರಲಿ, ಯಾವುದೇ ಊರು ಇರಲಿ, ಯಾವುದೇ ಭಾಷೆ ಇರಲಿ, ರೆಬೆಲ್ ⭐ರದ್ದು ಅದೇ ಠೀವಿ.

ಇನ್ನೊಂದು ಕನ್ನಡದ ಕೊಂಡಿ -> ಕರ್ನಾಟಕದ, ಅವಿಭಜಿತ ದ.ಕ.ದ ಕುಂದಾಪುರದ (ಈಗ ಬೈಂದೂರು) ಕೊಲ್ಲೂರುವಿನ ಸೌಪರ್ಣಿಕ ನದಿ ದಡದಲ್ಲಿ ರುಕ್ಮಿಣಿ(ಲಕ್ಷ್ಮೀ) ಮತ್ತು ಅರಂವಿಂದಾಕ್ಷನ್ (ಅಂಬರೀಶ್). ಇದು ಚ.ಚಿತ್ರದ ಅತೀ ಮುಖ್ಯ ನಿರ್ಣಾಯಕ ಘಟ್ಟದ ದೃಶ್ಯ. ಎಷ್ಚೋ ವರ್ಷಗಳ ಬೇರ್ಪಟ್ಟ ನಂತರದ ಮುಖಾಮುಖಿ.

👆ಮಲಯಾಳಿಯ ರಾಜಕುಮಾರ್ ಪ್ರೇಂ ನಝಿರ್ ಪುತ್ರ ಶಾ ನವಾಜ಼್. ಚ.ಚಿತ್ರದಲ್ಲಿ ಅರವಿಂದಾಕ್ಷನ್ (ಅಂಬರೀಶ್) ಮಗ. ಅಂಬರೀಶ್ ಪತ್ನಿಯಾಗಿ ಪೂರ್ಣಿಮ ಜಯರಾಂ. ವಯಸ್ಸಾದ ರುಕ್ಮಿಣಿ (ಲಕ್ಷ್ಮೀ) ಅರವಿಂದ(ಅಂಬರೀಶ್)

👆ಅರವಿಂದಾಕ್ಷನ್ ( ಅಂಬರೀಶ್) ಸಂಗೀತ ಗುರು ನಾರಾಯಣನ್ ನಂಬೂದ್ರಿ (ಬಾಬು ನಂಬೂದ್ರಿ).

👆ಅರವಿಂದಾಕ್ಷನ್ ನಿಂದ ತಿರಸ್ಕಾರಗೊಂಡ ಬಳಿಕ, ಸಾಂತ್ವಾನಕ್ಕೆ, ಮೃದಂಗ ವಿದ್ವಾನ್ ಗಣಪತಿಯ (ನೆಡುಮುಡಿ ವೇಣು) ಮೊರೆ ಹೋದ ರುಕ್ಮಿಣಿ (ಲಕ್ಷ್ಮೀ).

👆ನಂಬೂದ್ರಿ ಮಗಳು ಶ್ರೀದೇವಿ ( ಪೂರ್ಣಿಮ ಜಯರಾಂ)ಯ ಅಳಲು - ಕಾರಣ ಅರಂವಿಂದಾಕ್ಷನ್ (ಅಂಬರೀಶ್) ರುಕ್ಮಿಣಿ (ಲಕ್ಷ್ಮೀ)ಯನ್ನು ಪ್ರೀತಿಸುವ ವಿಷಯ ತಿಳಿದು.

ಲಕ್ಷ್ಮೀಯವರಿಗೆ ೨ ಹಿನ್ನೆಲೆ ಗಾಯಕಿಯರು - ಎಸ್ ಜಾನಕಿ ಮತ್ತು ವಾಣಿ ಜಯರಾಂ.

ಹಿನ್ನೆಲೆ ಗಾಯಕರು - ಬಾಲಮುರುಳಿ ಕೃಷ್ಣ ಮತ್ತು ಯೇಸುದಾಸ್.

ಅಂಬರೀಶ್ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ ಎಂದು ಲೇಖಕರು ಹಾಡಿ ಹೊಗಳಿದ್ದಾರೆ. ಹಾಗಾಗಿ ನಿಜ ಜೀವನದ ಚೌಡಯ್ಯನವರ ಮೊಮ್ಮಗನೆಂದು ಉಲ್ಲೇಖಿಸಿದ್ದಾರೆ. ಲಕ್ಷ್ಮೀಯವರ ಅತ್ಯುತ್ತಮ ನಟನೆಯ ಚಿತ್ರ. ಲಕ್ಷ್ಮೀಯವರ ಅಭಿನಯಕ್ಕೆ ಅಂಬರೀಶರು ಸರಿಸಾಟಿಯಾಗುವುದು ಸುಲಭದ ಮಾತಲ್ಲ ಎಂದು ಲೇಖಕರು ಹೊಗಳಿದ್ದಾರೆ.

ಹಿಂದಿ "ಬೈಜು ಬಾವ್ರ", ತೆಲುಗು "ಶಂಕರಾಭರಣಂ" ನ ಉಲ್ಲೇಖವಿದೆ.

ಚ.ಚಿತ್ರದ ಸಂದೇಶ :- ಸಂಗೀತಕ್ಕೆ ಜಾತಿ ಅಹಂ ಅನ್ನು ಮೀರಿಸಿ ಒಗ್ಗೂಡಿಸುವ ಶಕ್ತಿ ಇದೆ.

ಇಲ್ಲಿಗೆ ಲೇಖಕರ ಬರಹದ ಸಂಕ್ಷಿಪ್ತ ವಿವರ ಮುಗಿಯಿತು. —————————————————————————

ಸಂಗೀತವೇ ಪ್ರಧಾನವಾಗಿರುವ ಚ.ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಕೆಲವು ತೆರೆಕಂಡಿದೆ. ಅದರಲ್ಲಿ ಕನ್ನಡದ ಹಂಸಗೀತೆ ಮತ್ತು ಉಪಾಸನೆ ಉನ್ನತ ಸ್ಥಾನದಲ್ಲಿ ಇವೆ.

ಅಂಬರೀಶ್ ರವರು ಈ ರೀತಿಯ ಚಿತ್ರದಲ್ಲಿ ನಟಿಸಿ ಮಲಯಾಳಿ ನಾಡಲ್ಲಿ ಮಿಂಚಿದ್ದು ಶ್ಲಾಘನೀಯ. ಇವರ ಪ್ರತಿಭೆಯನ್ನು ಮಲಯಾಳಿ ನಿರ್ದೇಶಕರು ಗುರುತಿಸಿದ್ದು ವಿಶೇಷ.

ಮುಖ ಚಿತ್ರ 👇

ಕಾಕತಾಳಿಯ ಎಂಬಂತೆ ಮುಖ ಚಿತ್ರ " Rot in Bihar".

ಇನ್ನಿತರ ಚಿತ್ರಗಳು👇