Monday, May 25, 2020

ಜ್ಞಾನಪೀಠ ಪ್ರಶಸ್ತಿ



ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.


ಜ್ಞಾನಪೀಠ ಪ್ರಶಸ್ತಿ
ಪ್ರಶಸ್ತಿಯ ವಿವರ
ವರ್ಗಸಾಹಿತ್ಯ (ವೈಯುಕ್ತಿಕ)
ಪ್ರಾರಂಭವಾದದ್ದು1961
ಮೊದಲ ಪ್ರಶಸ್ತಿ1965
ಕಡೆಯ ಪ್ರಶಸ್ತಿ2019
ಒಟ್ಟು ಪ್ರಶಸ್ತಿಗಳು54
ಪ್ರಶಸ್ತಿ ನೀಡುವವರುಭಾರತೀಯ ಜ್ಞಾನಪೀಠ
ವಿವರಭಾರತದ ಅತ್ಯುನ್ನತ ಸಾಹಿತ್ಯ ಪುರಸ್ಕಾರ
ಮೊದಲ ಪ್ರಶಸ್ತಿ ಪುರಸ್ಕೃತರುಜಿ. ಶಂಕರ ಕುರುಪ್
ಕೊನೆಯ ಪ್ರಶಸ್ತಿ ಪುರಸ್ಕೃತರುಅಕ್ಕಿತಂ ಅಚ್ಯುತನ್ ನಂಬೂದಿರಿ

ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.
೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ


ವರ್ಷಪುರಸ್ಕೃತರುಭಾಷೆಕೃತಿ
1965
(1st)
ಜಿ. ಶಂಕರ ಕುರುಪ್ಮಲಯಾಳಂಓಡಕ್ತುಳಲ್
1966
(2nd)
ತಾರಾಶಂಕರ ಬಂದೋಪಾಧ್ಯಾಯಬೆಂಗಾಲಿಗಣದೇವತಾ
1967
(3rd) †
ಉಮಾಶಂಕರ್ ಜೋಶಿಗುಜರಾತಿನಿಶಿತಾ
1967
(3rd) †
ಕುವೆಂಪುಕನ್ನಡಶ್ರೀ ರಾಮಾಯಣ ದರ್ಶನಂ
1968
(4th)
ಸುಮಿತ್ರಾನಂದನ ಪಂತ್ಹಿಂದಿಚಿದಂಬರಾ
1969
(5th)
ಫಿರಾಕ್ ಗೋರಕ್ ಪುರಿಉರ್ದುಗುಲ್-ಎ-ನಗ್ಮಾ
1970
(6th)
ವಿಶ್ವನಾಥ ಸತ್ಯನಾರಾಯಣತೆಲುಗುರಾಮಾಯಣ ಕಲ್ಪವೃಕ್ಷಮು
1971
(7th)
ಬಿಷ್ಣು ಡೆಬೆಂಗಾಲಿಸ್ಮೃತಿ ಸತ್ತಾ ಭವಿಷ್ಯತ್
1972
(8th)
ರಾಮ್‌ಧಾರಿ ಸಿಂಗ್ ದಿನಕರ್ಹಿಂದಿಊರ್ವಶ
1973
(9th) †
ದ. ರಾ. ಬೇಂದ್ರೆಕನ್ನಡನಾಕುತಂತಿ
1973
(9th) †
ಗೋಪಿನಾಥ ಮೊಹಾಂತಿಒಡಿಯಾಮತಿಮತಾಲ್
1974
(10th)
ವಿ. ಎಸ್. ಖಾಂಡೇಕರ್ಮರಾಠಿಯಯಾತಿ
1975
(11th)
ಪಿ. ವಿ. ಅಖಿಲನ್ತಮಿಳುಚಿತ್ರಪ್ಪಾವೈ
1976
(12th)
ಆಶಾಪೂರ್ಣ ದೇವಿಬೆಂಗಾಲಿಪ್ರಥಮ್ ಪ್ರತಿಶೃತಿ
1977
(13th)
ಕೆ. ಶಿವರಾಮ ಕಾರಂತಕನ್ನಡಮೂಕಜ್ಜಿಯ ಕನಸುಗಳು
1978
(14th)
ಸಚ್ಚಿದಾನಂದ ವಾತ್ಸಾಯನಹಿಂದಿಕಿತ್ನೀ ನಾವೋಂ ಮೇಂ ಕಿತ್ನೀ ಬಾರ್
1979
(15th)
ಬೀರೇಂದ್ರ ಕುಮಾರ್ ಭಟ್ಟಾಚಾರ್ಯಅಸ್ಸಾಮಿಮೃತ್ಯುಂಜಯ್
1980
(16th)
ಎಸ್. ಕೆ. ಪೊಟ್ಟೆಕ್ಕಾಟ್ಮಲಯಾಳಂಒರು ದೇಸದಿಂಟೆ ಕಥಾ
1981
(17th)
ಅಮೃತಾ ಪ್ರೀತಮ್ಪಂಜಾಬಿಕಾಗಜ್ ತೆ ಕ್ಯಾನ್ವಾಸ
1982
(18th)
ಮಹಾದೇವಿ ವರ್ಮಾಹಿಂದಿಸಮಗ್ರ ಸಾಹಿತ್ಯ
1983
(19th)
ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡಚಿಕ್ಕವೀರ ರಾಜೇಂದ್ರ
1984
(20th)
ತಕಳಿ ಶಿವಶಂಕರ ಪಿಳ್ಳೈಮಲಯಾಳಂಸಮಗ್ರ ಸಾಹಿತ್ಯ
1985
(21st)
ಪನ್ನಾಲಾಲ್ ಪಟೇಲ್ಗುಜರಾತಿಸಮಗ್ರ ಸಾಹಿತ್ಯ
1986
(22nd)
ಸಚ್ಚಿದಾನಂದ ರಾವುತರಾಯ್ಒಡಿಯಾಸಮಗ್ರ ಸಾಹಿತ್ಯ
1987
(23rd)
ವಿ. ವಿ. ಶಿರ್ವಾಡ್ಕರ್ಮರಾಠಿಸಮಗ್ರ ಸಾಹಿತ್ಯ
1988
(24th)
ಸಿ. ನಾರಾಯಣ ರೆಡ್ಡಿತೆಲುಗುಸಮಗ್ರ ಸಾಹಿತ್ಯ
1989
(25th)
ಕುರ್ರಾತುಲೈನ್ ಹೈದರ್ಉರ್ದುಸಮಗ್ರ ಸಾಹಿತ್ಯ
1990
(26th)
ವಿ. ಕೃ. ಗೋಕಾಕಕನ್ನಡಸಮಗ್ರ ಸಾಹಿತ್ಯ
1991
(27th)
ಸುಭಾಷ್ ಮುಖ್ಯೋಪಾಧ್ಯಾಯಬೆಂಗಾಲಿಸಮಗ್ರ ಸಾಹಿತ್ಯ
1992
(28th)
ನರೇಶ್ ಮೆಹ್ತಾಹಿಂದಿಸಮಗ್ರ ಸಾಹಿತ್ಯ
1993
(29th)
ಸೀತಾಕಾಂತ್ ಮಹಾಪಾತ್ರಒಡಿಯಾಸಮಗ್ರ ಸಾಹಿತ್ಯ
1994
(30th)
ಯು. ಆರ್. ಅನಂತಮೂರ್ತಿಕನ್ನಡಸಮಗ್ರ ಸಾಹಿತ್ಯ
1995
(31st)
ಎಂ. ಟಿ. ವಾಸುದೇವನ್ ನಾಯರ್ಮಲಯಾಳಂಸಮಗ್ರ ಸಾಹಿತ್ಯ
1996
(32nd)
ಮಹಾಶ್ವೇತಾ ದೇವಿಬೆಂಗಾಲಿಸಮಗ್ರ ಸಾಹಿತ್ಯ
1997
(33rd)
ಅಲಿ ಸರ್ದಾರ್ ಜಾಫ್ರಿಉರ್ದುಸಮಗ್ರ ಸಾಹಿತ್ಯ
1998
(34th)
ಗಿರೀಶ್ ಕಾರ್ನಾಡ್ಕನ್ನಡಸಮಗ್ರ ಸಾಹಿತ್ಯ
1999
(35th) †
ನಿರ್ಮಲ್ ವರ್ಮಹಿಂದಿಸಮಗ್ರ ಸಾಹಿತ್ಯ
1999
(35th) †
ಗುರುದಯಾಳ್ ಸಿಂಗ್ಪಂಜಾಬಿಸಮಗ್ರ ಸಾಹಿತ್ಯ
2000
(36th)
ಇಂದಿರಾ ಗೋಸ್ವಾಮಿಅಸ್ಸಾಮಿಸಮಗ್ರ ಸಾಹಿತ್ಯ
2001
(37th)
ರಾಜೇಂದ್ರ ಕೆ. ಶಾಗುಜರಾತಿಸಮಗ್ರ ಸಾಹಿತ್ಯ
2002
(38th)
ಡಿ. ಜಯಕಾಂತನ್ತಮಿಳುಸಮಗ್ರ ಸಾಹಿತ್ಯ
2003
(39th)
ವಿಂದಾ ಕರಂದೀಕರ್ಮರಾಠಿಸಮಗ್ರ ಸಾಹಿತ್ಯ
2004
(40th)
ರೆಹಮಾನ್ ರಾಹಿಕಾಶ್ಮೀರಿಸಮಗ್ರ ಸಾಹಿತ್ಯ
2005
(41st)
ಕುನ್ವರ್ ನಾರಾಯಣ್ಹಿಂದಿಸಮಗ್ರ ಸಾಹಿತ್ಯ
2006
(42nd) †
ರವೀಂದ್ರ ಕೇಳೇಕರ್ಕೊಂಕಣಿಸಮಗ್ರ ಸಾಹಿತ್ಯ
2006
(42nd) †
ಸತ್ಯವ್ರತ ಶಾಸ್ತ್ರಿಸಂಸ್ಕೃತಸಮಗ್ರ ಸಾಹಿತ್ಯ
2007
(43rd)
ಒ. ಎನ್. ವಿ. ಕುರುಪ್ಮಲಯಾಳಂಸಮಗ್ರ ಸಾಹಿತ್ಯ
2008
(44th)
ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್ಉರ್ದುಸಮಗ್ರ ಸಾಹಿತ್ಯ
2009
(45th) †
ಅಮರ್ ಕಾಂತ್ಹಿಂದಿಸಮಗ್ರ ಸಾಹಿತ್ಯ
2009
(45th) †
ಶ್ರೀ ಲಾಲ್ ಶುಕ್ಲಹಿಂದಿಸಮಗ್ರ ಸಾಹಿತ್ಯ
2010
(46th)
ಚಂದ್ರಶೇಖರ ಕಂಬಾರಕನ್ನಡಸಮಗ್ರ ಸಾಹಿತ್ಯ
2011
(47th)
ಪ್ರತಿಭಾ ರೇಒಡಿಯಾಸಮಗ್ರ ಸಾಹಿತ್ಯ
2012
(48th)
ರಾವೂರಿ ಭರದ್ವಾಜತೆಲುಗುಸಮಗ್ರ ಸಾಹಿತ್ಯ
2013
(49th)
ಕೇದಾರನಾಥ್ ಸಿಂಗ್ಹಿಂದಿಸಮಗ್ರ ಸಾಹಿತ್ಯ
2014
(50th)
ಭಾಲಚಂದ್ರ ನೇಮಾಡೆಮರಾಠಿಸಮಗ್ರ ಸಾಹಿತ್ಯ
2015
(51st)
ರಘುವೀರ್ ಚೌಧರಿಗುಜರಾತಿಸಮಗ್ರ ಸಾಹಿತ್ಯ
2016
(52nd)
ಶಂಖ ಘೋಷ್ಬೆಂಗಾಲಿಸಮಗ್ರ ಸಾಹಿತ್ಯ
2017
(53rd)
ಕೃಷ್ಣಾ ಸೋಬ್ತಿಹಿಂದಿಸಮಗ್ರ ಸಾಹಿತ್ಯ
2018
(54th)
ಅಮಿತಾವ್ ಘೋಷ್ಇಂಗ್ಲಿಷ್ಸಮಗ್ರ ಸಾಹಿತ್ಯ
2019
(55th)
ಅಕ್ಕಿತಂ ಅಚ್ಯುತನ್ ನಂಬೂದಿರಿಮಲಯಾಳಂಸಮಗ್ರ ಸಾಹಿತ್ಯ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...