Showing posts with label Bank. Show all posts
Showing posts with label Bank. Show all posts

Tuesday, May 6, 2025

Bank Check Rules

Check Using Tips: Checkbook nowadays is with every account holder, but very few people know about using checks. If there is half the incomplete information, then you may be overwhelming to use the check in the transaction.

When you are giving a check to someone for payment, then keep these 5 things in mind. Even a small mistake can cause you to be heavy and you may suffer a lot.

Cases of Cyber ​​fraud are becoming very much nowadays. Balsal is also looking for new ways every day. Customers are also given a strong slap through checks on behalf of the fraudsters. Therefore, it is necessary that you use the check cheek rules carefully and also keep all the important things in mind. It is very important to use the check carefully, otherwise your entire amount can be cleaned from the account.

1. Do not sign on empty check-

If you have ever forgotten and signed empty checks on Tips, then understand that your account is empty. Never make such a mistake, it can eliminate all your deposit capital. Any misuse of such checks can be used. By signing on an empty check, anyone can blow all your money by filling the amount with any choice. Do not keep you with you with empty check sign. Someone can use it by stealing it.

2. Take care of it in cancellation check-

Do not leave more empty space in the check whenever you cancel the check. If you cross cancell on every column, write cancel accordingly. It is right to tear the MICR code band of the check before giving a cancel check (cancel checks) to a person. Only then write cancell on it. If you take care of these things, then the check will not be misused.

3. Don't forget to cross on the check -

To safely use the check, do cross the checks on top of it, no other person of the check will be able to misuse it.

4. Check money in the account before issuing checks-

It is better to check before issuing checks to someone whether there are as much money in your account balance or not as much as you are issuing the check. If this is not done, your given check may be bounced and your difficulties may increase.

5. If your check bounces in case of lack of money, then it is counted in the category of crime and you can lose a bank penalty. Apart from this, the person taking the check can sue you

Monday, March 17, 2025

ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿದ್ದು ಏಕೆ ಮತ್ತು ಹೇಗೆ?

 

ದೇಶದ ಅಭಿವೃದ್ಧಿ ಗಾಗಿ ಮತ್ತು ಸಾರ್ವಜನಿಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಂಬಿಕೆ ಬರಲು ಬ್ಯಾಂಕ್ ಗಳನ್ನ ರಾಷ್ಟ್ರೀಕರಣ ಮಾಡಲಾಯಿತು.

  • ಖಾಸಗಿ ಒಡೆತನದಲ್ಲಿದ್ದ ಬ್ಯಾಂಕ್ ಗಳ ಆಸ್ತಿಯನ್ನ, "ವಶಪಡಿಸಿಕೊಂಡು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳುವ" ಸುಗ್ರೀವಾಜ್ಞೆಯನ್ನ ಹೊರಡಿಸುವ ಮೂಲಕ ಬ್ಯಾಂಕ್ ಗಳನ್ನ ರಾಷ್ಟ್ರೀಕರಣ ಮಾಡಾಯಿತು.

ಇದರ ಬಗ್ಗೆ ಸ್ವಲ್ಪ ವಿವರವಾಗಿ ನೋಡೋಣ. 

  • ತಮ್ಮ‌ಅನುಕೂಲಕ್ಕಾಗಿ , ನಮ್ಮ ದೇಶಕ್ಕೆ ಬಹಳಷ್ಟು ಹೊಸತನ್ನ ಪರಿಚಯಿಸಿದ ಬ್ರಿಟಿಷರೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಾ ಪರಿಚಯಿಸಿದ್ದು.
  • ಅವರು ೧೮೦೯ ರಲ್ಲಿ ಬ್ಯಾಂಕ್ ಆಫ್ ಬೆಂಗಾಲ್, ೧೮೪೦ ರಲ್ಲಿ ಬ್ಯಾಂಕ್ ಆಫ್ ಬಾಂಬೆ ಮತ್ತು ೧೮೪೩ ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಅನ್ನು ಸ್ಥಾಪಿಸಿದರು. ಈ ಮೂರು ಬ್ಯಾಂಕ್ ಗಳು ಸೇರಿ ಇಂಪೀರಿಯಲ್ ಬ್ಯಾಂಕ್ ಆಯಿತು.
  • ಅನಂತರ ೧೯೫೫ ರಲ್ಲಿ ಅದನ್ನ ರಾಷ್ಟ್ರೀಕರಣ ಮಾಡಿ "ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ" ಎಂದು ನಾಮಕರಣ ಮಾಡಕಾಯಿತು.
  • ಹಾಗೂ ಇದು ಭಾರತದ ಎರಡನೆಯ ರಾಷ್ಟ್ರೀಕೃತ ಬ್ಯಾಂಕ್ ಆಯಿತು.
  • "ಭಾರತೀಯ ರಿಸರ್ವ್ ಬ್ಯಾಂಕ್" ಅಥವಾ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ" ಮೊದಲ ರಾಷ್ಟ್ರೀಕೃತ ಬ್ಯಾಂಕ್.

ಮೊದಲ ವಿಶ್ವ ಯುದ್ಧದ ನಂತರ, ಆರ್ಥಿಕತೆಗೆ ಒತ್ತು ಕೊಡುವುದಕ್ಕೋಸ್ಕರ, ೧೯೩೫ ರ ಎಪ್ರಿಲ್ ಒಂದರಂದು ಐದು ಕೋಟಿ ರುಪಾಯಿಯಿಗಳ ಬಂಡವಾಳದೊಂದಿಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವನ್ನ ಖಾಸಗಿ ಒಡೆತನದಲ್ಲಿ ಸ್ಥಾಪಿಸಲಾಯಿತು.

  • ಅನಂತರ ೧೯೪೯ ರಲ್ಲಿ ಅದನ್ನ ರಾಷ್ಟ್ರೀಕರಣ ಗೊಳಿಸಲಾಯಿತು. ಬ್ಯಾಂಕ್ ಗಳ ರಾಷ್ಟ್ರೀಕರಣಕ್ಕೆ ಅದೇ ನಾಂದಿಯಾಯಿತು.

ರಾಷ್ಟ್ರೀಕರಣದ ಹಿನ್ಬೆಲೆ.

ಸ್ವಾತಂತ್ರ್ಯದ ನಂತರ ಭಾರತ ಸರಕಾರವು ಆರ್ಥಿಕ ವೃದ್ಧಿಗಾಗಿ ಮತ್ತು ದೇಶದ ಅಭಿವೃದ್ಧಿಗಾಗಿ ಬಹಳಷ್ಟು ಕಾರ್ಯಕ್ರಮ ಗಳನ್ನು ರೂಪಿಸಿತು.

ಆದರೆ‌,

  • ಆ ಸಮಯದಲ್ಲಿ ಭಾರತದ ಎಲ್ಲ ಬ್ಯಾಂಕ್ ಗಳು (SBI ಹೊರತು ಪಡಿಸಿ) ಖಾಸಗಿ ಒಡೆತನದಲ್ಲಿದ್ದವು.
  • ಅದು ಸಾರ್ವಜನಿಕರ ಬಂಡವಾಳ ಸಂಗ್ರಹಕ್ಕೆ ಅಡ್ಡಿಯಾಗುತ್ತಿತ್ತು.
  • ಕೃಷಿ ಕ್ಷೇತ್ರವನ್ನ ಬ್ಯಾಂಕಿಂಗ್ ವಲಯಕ್ಕೆ ತರಲು ಖಾಸಗಿಯವರು ಹಿಂದೇಟು ಹಾಕುತ್ತಿದ್ದರು. ದೇಶದ ಅಭಿವೃದ್ಧಿಗೆ ಕೃಷಿ ಚಟುವಟಿಕೆಯನ್ನ ಉತ್ತೇಜಿಸಲೇ ಬೇಕಿತ್ತು.
  • ಅದಕ್ಕಾಗಿ ದೇಶದ ಮೂಲೆ ಮೂಲೆಗೂ ಬ್ಯಾಂಕಿಂಗ್ ಸೇವೆ ತಲುಪಬೇಕಿತ್ತು.
  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿಯವರದೇ ಚಕ್ರಾಧಿಪತ್ಯ ವಾಗಿತ್ತು. ಅದನ್ನ ಅವರಿಂದ ಮುಕ್ತ ಗೊಳಿಸಬೇಕಿತ್ತು.
  • ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಂದು ಏಕರೂಪದ ಚೌಕಟ್ಟಿನ ಅವಶ್ಯಕತೆ ಇತ್ತು.

ಇವೆಲ್ಲ ಹಿನ್ನೆಲೆಯಲ್ಲಿ , ದೇಶದ ಅಭಿವೃದ್ಧಿಯ ಮಂತ್ರದೊಂದಿಗೆ ಅತ್ಯಂತ ಕಠಿಣವಾದ ದಿಟ್ಟ ನಿರ್ಧಾರಕ್ಕೆ ಧೈರ್ಯ ಮಾಡಿದ್ದು ಅಂದಿನ ಪ್ರಧಾನಿ ಇಂದಿರಾಗಾಂಧಿ. 

  • ಒಟ್ಟು ಬ್ಯಾಂಕ್ ಡಿಪಾಸಿಟ್ ಮೊತ್ತದ ೮೫% ನಷ್ಷು ಮೊತ್ತವನ್ನ ಹೊಂದಿದ ೧೪ ಖಾಸಗಿ ಒಡೆತನದ ಬ್ಯಾಂಕ್ ಗಳನ್ನ ೧೯೬೯ ರ ಜುಲೈ ೧೯ ರಂದು ರಾಷ್ಟ್ರೀಕರಣ ಗೊಳಿಸಿದರು.
  • ಅನಂತರ ೧೯೮೦ ರಲ್ಲಿ ಮತ್ತೆ ಆರು ಬ್ಯಾಂಕ್ ಗಳನ್ನ ರಾಷ್ಟ್ರೀಕರಣ ಮಾಡಲಾಯಿತು.

೧೯೬೯ ರಲ್ಲಿ ರಾಷ್ಟ್ರೀಕರಣ ಗೊಂಡ ಬ್ಯಾಂಕ್ ಗಳು.

  • ಅಲಹಾಬಾದ್ ಬ್ಯಾಂಕ್
  • ಬ್ಯಾಂಕ ಆಫ್ ಬರೋಡಾ
  • ಬ್ಯಾಂಕ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಕೆನರಾ ಬ್ಯಾಂಕ್
  • ದೇನಾ ಬ್ಯಾಂಕ್
  • ಇಂಡಿಯನ್ ಬ್ಯಾಂಕ್
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಸಿಂಡಿಕೇಟ್ ಬ್ಯಾಂಕ್
  • ಯೂಕೊ ಬ್ಯಾಂಕ್
  • ಯೂನಿಯನ್ ಬ್ಯಾಂಕ್
  • ಯನೈಟೆಡ್ ಬ್ಯಾಂಕ್ ಆಫ್ ಇಂಡಿಯಾ.

೧೯೮೦ ರಲ್ಲಿ ರಾಷ್ಟ್ರೀಕರಣ ಗೊಂಡ ಬ್ಯಾಂಕ್ ಗಳು.

  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
  • ವಿಜಯಾ ಬ್ಯಾಂಕ್‌
  • ಓರಿಯಙಟಲ್ ಬ್ಯಾಂಕ್ ಆಫ್ ಇಂಡಿಯಾ
  • ಕಾರ್ಪೊರೇಷನ್ ಬ್ಯಾಂಕ್
  • ಆಂಧ್ರಾ ಬ್ಯಾಂಕ್
  • ನ್ಯೂ ಬ್ಯಾಂಕ್ ಆಫ್ ಇಂಡಿಯಾ

ಇಂದು ಇರುವ ರಾಷ್ಟ್ರೀಕೃತ ಬ್ಯಾಂಕ್ ಗಳು. (ಇವು ಎಪ್ರಿಲ್ ಒಂದು ೨೦೨೦ ರ ನಂತರದ ಚಿತ್ರಣ)

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಬ್ಯಾಂಕ ಆಫ್ ಬರೋಡಾ
  • ಬ್ಯಾಂಕ ಆಫ್ ಇಂಡಿಯಾ
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಕೆನರಾ ಬ್ಯಾಂಕ್
  • ಯೂನಿಯನ್ ಬ್ಯಾಂಕ್
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
  • ಇಂಡಿಯನ್ ಬ್ಯಾಂಕ್
  • ಯೂಕೊ ಬ್ಯಾಂಕ್
  • ಬ್ಯಾಂಕ್ ಆಫ್ ಮಹಾರಾಷ್ಟ್ರ.

ಖಾಸಗಿಯವರ ಹಿಡಿತದಲ್ಲಿದ್ದ ಉದ್ಯಮಗಳನ್ನ ದೇಶದ ಅಭಿವೃದ್ಧಿಗಾಗಿ ಸರಕಾರಿ ಉದ್ಯಮವಾಗಿಸಿದ್ದರು. ಆದರೆ ಅವುಗಳನ್ನ ಮತ್ತೆ ಖಾಸಗಿಯವರ ಕಪಿಮುಷ್ಟಿಗೆ ಹಾಕುತ್ತಿರುವುದು ವಿಪರ್ಯಾಸವೇ ಸರಿ. ಮತ್ತೆ ನಾವು ಹಿಂದಕ್ಕೆ ಪ್ರಯಾಣಿಸುತ್ತಿದ್ದೇವೇನೋ ಅನಿಸುತ್ತದೆ, ಅಥವಾ ಕೊಬ್ಬಿದ ಸರಕಾರಿ ಒಡೆತನಕ್ಕೆ ಚಿಕಿತ್ಸೆಯ ಅಗತ್ಯವಿದೆ ಅಂತ ಕೂಡಾ ಅನಿಸುತ್ತದೆ.

Saturday, February 15, 2025

ನನ್ನ ಬ್ಯಾಂಕ್ ಖಾತೆಯಿಂದ ಅಂಚೆ ಇಲಾಖೆ ಖಾತೆಗೆ ಹಣ ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದೇ?

 

ಖಂಡಿತವಾಗಿ ವರ್ಗಾಯಿಸಬಹುದು. ಬ್ಯಾಂಕ್ ಖಾತೆಯಿಂದ ಅಂಚೆ ಇಲಾಖೆಯ ಖಾತೆಗೆ ಮತ್ತು ಅಂಚೆ ಇಲಾಖೆಯ ಖಾತೆಯಿಂದ ಬ್ಯಾಂಕ್ ಖಾತೆಗೆ ಅಥವಾ ಯಾರಿಗೆ ಯಾವಾಗ ಬೇಕಾದರೂ ಹಣ ವರ್ಗಾಯಿಸಬಹುದು.

  • ಇಂದು ಭಾರತೀಯ ಅಂಚೆ ಕೇವಲ ಅಂಚೆಯಾಗಿ ಉಳಿದಿಲ್ಲ, ಬದಲಿಗೆ IPPB ಎನ್ನುವ ಹೆಸರಿನಿಂದ (India post payment bank) ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದೆ.
  • ಇಲ್ಲಿನ ಉಳಿತಾಯ ಖಾತೆಗಳನ್ನ ಬ್ಯಾಂಕ್ ಗಳ ಉಳಿತಾಯ ಖಾತೆಯಂತೆಯೇ ಉಪಯೋಗಿಸಬಹುದು.
  • ATM ಕಾರ್ಡ್ ಸೌಲಭ್ಯ ಕೂಡಾ ಇದೆ. ಯಾವುದೇ ಬ್ಯಾಂಕುಗಳ ATM ನಲ್ಲಿ ಹಣ ಪಡೆಯಬಹುದು.
  • ಮೊಬೈಲ್ ರೀಚಾರ್ಜ್ ಮತ್ತು ಎಲ್ಲ ಸೇವೆಗಳ (Utility payment) ಬಿಲ್ ಪಾವತಿಸಬಹುದು.
  • NEFT ಮತ್ತು RTGS ಮೂಲಕ ಹಣ ವರ್ಗಾವಣೆ ಮಾಡಬಹುದು.

ಆದರಿಲ್ಲಿ ಅಂಚೆ ಇಲಾಖೆಯ ಉಳಿತಾಯ ಖಾತೆಯನ್ನು IPPB ಖಾತೆಯನ್ನಾಗಿ ಬದಲಾಯಿಸಿಕೊಳ್ಳಬೇಕು.

  • ಅದು ತುಂಬಾ ಸುಲಭವಾದ ಕೆಲಸ.
  • ನೇರವಾಗಿ ಅಂಚೆ ಕಛೇರಿಗೆ ಹೋಗಿ ಈ ಸೌಲಭ್ಯ ಪಡೆದುಕೊಳ್ಳಬಹುದು ಅಥವಾ ಅಂಚೆ ಇಲಾಖೆಯ IPPB ಮೊಬೈಲ್ ಅಪ್ಲಿಕೇಶನ್  ಬಳಸಿ ಕೂಡಾ ಮಾಡಿಕೊಳ್ಳಬಹುದು.
  • ಅಂಚೆ ಇಲಾಖೆಯ ಪಾಸ್ ಬುಕ್ ನಲ್ಲಿರುವ ಕೆಲವು ಮಾಹಿತಿಯನ್ನ ಅಪ್ಲಿಕೇಶನ್ ಗೆ ಫೀಡ್ ಮಾಡಬೇಕು
  • ರಿಜಿಸ್ಟರ್ ಮೊಬೈಲ್ ನಂಬರಿಗೆ OTP ಬರುತ್ತದೆ ಮತ್ತು ನಮ್ಮಿಷ್ಟದ ಪಾಸ್ ವರ್ಡ್ ಅಥವಾ Mpin ಸೆಲೆಕ್ಟ್ ಮಾಡಿಕೊಳ್ಳಬೇಕು.
  • ಎಲ್ಲವೂ ಆದ ನಂತರ ಹನ್ನೆರಡು ಅಂಕೆಯ ಹೊಸ ಎಕೌಂಟ್ ನಂಬರ್ ಬರುತ್ತದೆ. ಅದನ್ನ ಮುಂದಿನ ವಹಿವಾಟಿಗೆ ಉಪಯೋಗಿಸಬೇಕು.
  • ಅಂಚೆ ಇಲಾಖೆಯ ಮೂಲ ಖಾತೆಯಿಂದ ಈ IPPB ಖಾತೆಗೆ ಹಣ ವರ್ಗಾಯಿಸಿಕೊಳ್ಳಬೇಕು ಮತ್ತು ಬೇರೆ ಕಡೆಯಿಂದ ವರ್ಗಾವಣೆಯಾದ ಹಣ ಕೂಡಾ IPPB ಖಾತೆಗೆ ಬರುತ್ತದೆ. ಇಲ್ಲಿಂದ ಮೂಲ ಖಾತೆಗೆ ಹಣವನ್ನ ವರ್ಗಾಯಿಸಿಕೊಳ್ಳಬಹುದು.
  • ಈ Option ಗಳು ಅಪ್ಲಿಕೇಶನ್ ನಲ್ಲಿ ಇದೆ. POSB Sweep in ಮತ್ತು POSB Sweep out ಎಂದು ನಮೂದಿಸಲ್ಪಟ್ಟಿದೆ.
  • ಸದ್ಯಕ್ಕೆ ದೇಶದಾದ್ಯಂತದ ಅಂಚೆ ಇಲಾಖೆಯ ಬ್ಯಾಂಕ್ ಗೆ ಒಂದೇ IFSC ಇದೆ. ಅದು IPOS0000001.

Wednesday, February 12, 2025

ಭಾರತೀಯ ರಿಸರ್ವ್ ಬ್ಯಾಂಕ್ ನ ರೆಪೋ ರೇಟ್ ಮತ್ತು ರಿವರ್ಸ್ ರೆಪೋ ರೇಟ್ ಎಂದರೇನು? ಮತ್ತು ಅದು ಹಣದುಬ್ಬರದ‌ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

 ನಮಗೆ ಸಾಲ ಬೇಕೆಂದಾಗ ನಾವು ಏನು ಮಾಡುತ್ತೇವೆ ? ಬ್ಯಾಂಕ್ ನ‌ ಬಳಿ ಹೋಗಿ ಸಾಲ‌ ಕೇಳುತ್ತೇವೆ, ಅವರು ಏನು ಮಾಡುತ್ತಾರೆ ? ಸಾಲಕ್ಕೆ ಇಂತಿಷ್ಟು ಪ್ರತಿಶತ ಬಡ್ಡಿ ಹಾಕಿ ನಮಗೆ ಸಾಲ‌ ಕೊಡುತ್ತಾರೆ.

ಇದು ಜನಸಾಮಾನ್ಯರ ವಿಷಯವಾಯಿತು. ಇದೇ ರೀತಿ ಬ್ಯಾಂಕುಗಳಿಗೆ ಕೂಡಾ ಇತರರಿಗೆ ಅಥವಾ ಕಂಪನಿಗಳಿಗೆ ಸಾಲ‌ ಕೊಡಲು ಹಣ ಬೇಕಾಗುತ್ತದೆ ಅವರು ಆ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ‌ ಬಳಿ ಸಾಲ‌ ಕೇಳುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಒಂದು ‌ನಿರ್ದಿಷ್ಟ ಪ್ರತಿಶತ ಬಡ್ಡಿ ವಿಧಿಸಿ ಬ್ಯಾಂಕಿಗೆ ಸಾಲ‌ ಕೊಡುತ್ತದೆ‌. ಭಾರತೀಯ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕುಗಳಿಗೆ ಸಾಲ ಕೊಡುವಾಗ ಹಾಕುವ ಬಡ್ಡಿದರವನ್ನೇ ರೆಪೋ ರೇಟ್ ಎನ್ನುತ್ತಾರೆ.

ಅದೇ ರೀತಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇದ್ದಾಗ ಅಥವಾ ಶನಿವಾರ ಭಾನುವಾರ ಇತ್ಯಾದಿ ದಿನಗಳಲ್ಲಿ ತಮ್ಮ ಬಳಿ ಇರುವ ಜನರ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ‌ ಬಳಿ ಅತ್ಯಂತ ಅಲ್ಪಾವಧಿಗೆ ಠೇವಣಿ ಇಡುತ್ತದೆ. ಆ ಠೇವಣಿ‌ ಇಟ್ಟ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ನೀಡುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಉಳಿದ ಬ್ಯಾಂಕುಗಳು ಇಟ್ಟ ಠೇವಣಿಗೆ ಕೊಡುವ ಬಡ್ಡಿಯ ದರವನ್ನು ರಿವರ್ಸ್ ರೆಪೊ ರೇಟ್ ಎನ್ನುತ್ತಾರೆ.

ರೆಪೋ ರೇಟ್ ಮತ್ತು ಹಣದುಬ್ಬರ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿದೆ ?

ರೆಪೋ ರೇಟ್ ಹೆಚ್ಚಾದಾಗ ಉಳಿದ ಬ್ಯಾಂಕ್ ಗಳು ಸಹ ಜನರಿಗೆ ಲೋನ್ ನೀಡುವಾಗ ಬಡ್ಡಿದರವನ್ನು ಹೆಚ್ಚಿಸುತ್ತವೆ. ಬಡ್ಡಿದರ ಹೆಚ್ಚಾದಾಗ ಜನಸಾಮಾನ್ಯರು ಲೋನ್ ನ್ನು ಕಡಿಮೆ‌ ತೆಗೆದುಕೊಳ್ಳುತ್ತಾರೆ ಮತ್ತು ತೆಗೆದುಕೊಂಡ ಲೋನ್ ನ್ನು ಬೇಕಾಬಿಟ್ಟಿ ಖರ್ಚು ಮಾಡುವುದಿಲ್ಲ. ಹಾಗಾಗಿ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಕಡಿಮೆ ಆಗುತ್ತದೆ ಮತ್ತು ಹಣದುಬ್ಬರ ಇಳಿಯುತ್ತದೆ.

ಒಂದು ಉದಾಹರಣೆ ನೀಡುತ್ತೇನೆ.

ನಿಮಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಲೋನ್ ಸಿಕ್ಕಿತು ಎಂದಿಟ್ಟುಕೊಳ್ಳಿ, ನೀವು ಮನೆಗೆ ಏನೋ ಸಿಹಿತಿಂಡಿ ತೆಗೆದುಕೊಂಡು ಹೋಗಬೇಕು ಎಂದುಕೊಂಡು ಮಿಠಾಯಿ ಅಂಗಡಿಗೆ ಹೋದಿರಿ. ಹೋದವರೆ ಮಿಠಾಯಿಯ ರೇಟ್ ಎಷ್ಟು ಎಂದೂ ಕೇಳಲಿಲ್ಲ. ಡೈರೆಕ್ಟ್ ಈ ಮಿಠಾಯಿ 1 ಕೆಜಿ ಪ್ಯಾಕ್ ಮಾಡಿ ಎಂದಿರಿ ಏಕೆಂದರೆ ನಿಮ್ಮ ಬಳಿ‌ ಹಣವಿದೆ‌.‌ ಇದನ್ನು ಅರಿತ ಅಂಗಡಿಯವ ಮಿಠಾಯಿಯ ಬೆಲೆ 100₹ ಇದ್ದರೆ ₹110 ಎನ್ನುತ್ತಾನೆ. ನೀವು ಏನನ್ನೂ ಕೇಳದೆ ಮಿಠಾಯಿ ತೆಗೆದುಕೊಂಡು ಮನೆಗೆ ಬರುತ್ತೀರಿ.

ಅದೇ ನಿಮಗೆ ಹೆಚ್ಚು ಬಡ್ಡಿದರದಲ್ಲಿ ಲೋನ್ ಸಿಕ್ಕಿದ್ದರೆ ನೀವು ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತೀರಿ.

ಮಿಠಾಯಿ ಅಂಗಡಿಗೆ ಹೋದರೆ 1 ಕೆಜಿ ತೆಗದುಕೊಳ್ಳುವಲ್ಲಿ ಅರ್ಧ ಕೆಜಿ‌ ತೆಗೆದುಕೊಳ್ಳುವಿರಿ,‌ ಬೇಡಿಕೆ ಕಮ್ಮಿಯಾಗಿದ್ದನ್ನು ಅರಿತ ಅಂಗಡಿಗಾರ 100₹ ಇರುವುದನ್ನು 95 ಗೆ ಕೊಡುತ್ತಾನೆ. ಹೀಗೆ ಹಣದುಬ್ಬರ ಕಡಿಮೆ ಆಗುತ್ತದೆ.

ರೆಪೋ ರೇಟ್ ಹೆಚ್ಚಿದ್ದರೆ ಹಣದುಬ್ಬರ ಕಡಿಮೆಯಾಗುತ್ತದೆ.

ರೆಪೋ ರೇಟ್ ಕಡಿಮೆ‌ ಇದ್ದರೆ ಹಣದುಬ್ಬರ ಹೆಚ್ಚಾಗುತ್ತದೆ.

[ ನನ್ನ ಪ್ರಕಾರ ರೆಪೋ ರೇಟ್ ನ‌ ಮೇಲೆಯೆ ಪೂರ್ಣವಾಗಿ ಹಣದುಬ್ಬರ ನಿಂತಿಲ್ಲ. ಉದಾಹರಣೆಗೆ ಎಲ್ಲರೂ ಲೋನ್ ತೆಗೆದುಕೊಂಡೇ ಜೀವನ ಮಾಡುತ್ತಾರೆಯೆ ? ಖಂಡಿತ ಇಲ್ಲ‌. ಕಚ್ಚಾ ವಸ್ತುಗಳ ಬೆಲೆ ಏರಿದರೆ ಖಂಡಿತವಾಗಿ ಸಿಧ್ದವಸ್ತುಗಳ ಬೆಲೆ ಏರಿಕೆಯಾಗುತ್ತದೆ.ಆದರೂ ತಕ್ಕಮಟ್ಟಿಗೆ ರೆಪೋ ರೇಟ್ ಮೇಲೆ ಹಣದುಬ್ಬರ ನಿರ್ಧರಿತವಾಗಿರಬಹುದು.]