ಹಾಸನ ಜಿಲ್ಲೆಯ ಬೇಲೂರಿನಲ್ಲಿ 1117 CE ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನರಿಂದ ವಿಜಯನಾರಾಯಣ ಅಥವಾ ಚೆನ್ನಕೇಶವ ದೇವಾಲಯದ ನಿರ್ಮಾಣ ಪ್ರಾರಂಭವಾಯಿತು ಮತ್ತು ಹೊಯ್ಸಳ ದೊರೆಗಳ ಮೂರು ತಲೆಮಾರುಗಳ ಅವಧಿಯಲ್ಲಿ 103 ವರ್ಷಗಳ ಅನಂತರ ಪೂರ್ಣಗೊಳಿಸಲ್ಪಟ್ಟಿತು. ಬಳಪದ ಕಲ್ಲುಗಳಲ್ಲಿ ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಂದ ಶಿಲ್ಪಕಲೆ ಅರಳಿ ವಿಶ್ವ ಪ್ರಸಿದ್ಧಿ ಪಡೆದಿದೆ. ಚೆನ್ನಕೇಶವ ವಿಷ್ಣುವಿನ ಒಂದು ರೂಪ. ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ.
೧೪ ನೇ ಶತಮಾನದ ಆರಂಭದಲ್ಲಿ ದೆಹಲಿ ಸುಲ್ತಾನರ ದೊರೆ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲಿಕ್ ಕಾಫೂರ್ ಆಕ್ರಮಣ ಮಾಡಿ ಲೂಟಿ ಮಾಡಿದರು.] ಮತ್ತೊಂದು ದೆಹಲಿ ಸುಲ್ತಾನರ ಸೈನ್ಯದಿಂದ ೧೩೨೬ ರಲ್ಲಿ ಲೂಟಿ ಮತ್ತು ವಿನಾಶಕ್ಕೆ ಗುರಿಯಾಯಿತು.