Showing posts with label Manufactured. Show all posts
Showing posts with label Manufactured. Show all posts

Tuesday, July 1, 2025

ಭಾರತದಲ್ಲಿಯೇ ಉತ್ಪಾದನೆಯಾಗುವ ಮೊಬೈಲ್ ಫೋನುಗಳು ಯಾವುವು?

 

ಇಂದು ನಾವು ಉಪಯೋಗಿಸುತ್ತಿರುವ ಸುಮಾರು 93% ಮೊಬೈಲ್ ಗಳು ಭಾರತದಲ್ಲಿಯೇ ಉತ್ಪಾದನೆ ಆಗುವುದಾದರೂ ಅವುಗಳೆಲ್ಲವೂ ಭಾರತದವಲ್ಲ.

ಭಾರತದಲ್ಲಿ ಉತ್ಪಾದನೆ ಆಗುವ ಕೆಲವು ಮೊಬೈಲ್ ಫೋನುಗಳು.

  • ಜಿಯೋನಿ,
  • ಗ್ಸಿಯೋಮಿ,
  • ವಿಡಿಯೋಕಾನ್,
  • ಲಾವಾ,
  • ಸ್ಯಾಮ್‌ಸಂಗ್‌,
  • ಇಂಟೆಕ್ಸ್,
  • ನೋಕಿಯಾ,
  • ಆಪಲ್,
  • ಹಾನರ್,
  • ವಿವೊ,
  • ರೆಡ್ ಮಿ
  • ಒಪ್ಪೊ,
  • ಹೆಚ್ ಸಿ ಎಲ್,
  • ಹೆಚ್ ಟಿ ಸಿ, ಇತ್ಯಾದಿ.

************************************ ಇವತ್ತಿನ "ಬೈಕಾಟ್ ಚೈನಾ" ಅನ್ನುವ ಟ್ರೆಂಡ್ ಗಮನದಲ್ಲಿಟ್ಟುಕೊಂಡು ಕೆಲವು ವಿಚಾರ ಗಳನ್ನ ನೋಡಿ.

ಮೊಬೈಲ್ ಉತ್ಪಾದನೆ ಅಷ್ಟು ಸುಲಭವಾದ ಕೆಲಸವಲ್ಲ.

  • ಒಂದು ಮೊಬೈಲ್‌ ನಲ್ಲಿ ನೂರಾರು ರೀತಿಯ ಬಿಡಿ ಭಾಗಗಳಿರುತ್ತವೆ. ಅವನ್ನ ಹತ್ತಾರು ದೇಶಗಳ ಸಾವಿರಾರು ಕೈ ಗಳು ಉತ್ಪಾದಿಸಿರುತ್ತವೆ.
  • ಅವುಗಳಲ್ಲಿನ ತಂತ್ರಜ್ಞಾನವನ್ನು ಇನ್ನಾವುದೋ ದೇಶ ಕೊಟ್ಟಿರುತ್ತದೆ
  • ಒಂದೇ ಕಂಪನಿಯ ಬಿಡಿಭಾಗಗಳು ಹತ್ತಾರು ಕಂಪನಿಯ ಮೊಬೈಲ್ ನಲ್ಲಿ ಫಿಕ್ಸ್ ಆಗುತ್ತವೆ.

ಆದ್ದರಿಂದ ಯಾವುದೇ ಮೊಬೈಲ್ ಕೂಡಾ ಯಾವುದೋ ಒಂದು ದೇಶದ್ದಲ್ಲ.

ಅದೆಲ್ಲಿ ಉತ್ಪಾದನೆ ಆಗುತ್ತದೋ ಆ ದೇಶದ ಹೆಸರನ್ನ ಹಾಕಬಹುದು ಅಷ್ಟೆ.

ಅದಕ್ಕೂ ಸಾಕಷ್ಟು ಕಾನೂನು ರೀತ್ಯಾ ನಿಬಂಧನೆಗಳು ಇರುತ್ತವೆ.

  • ಮೊಬೈಲ್ ಕ್ಷೇತ್ರದ ದಿಗ್ಗಜ "apple" ಕೂಡಾ ಚೈನಾದಲ್ಲಿ ಉತ್ಪಾದನೆಯಾಗಿ ಎಲ್ಲ ಕಡೆಯೂ apple ಬ್ರಾಂಡ್ ಅಡಿಯಲ್ಲಿ ಮಾರಾಟವಾಗುತ್ತದೆ.
  • ಅದರ ಜೋಡಣಾ ವಿಭಾಗ ಬೆಂಗಳೂರಿನಲ್ಲಿ ಕೂಡಾ ಇದೆ. ಆದರೆ ಯಾವುದೇ ಬಿಡಿಭಾಗ ಕೂಡಾ ಇಲ್ಲಿ ಉತ್ಪಾದನೆ ಆಗದು. ಕೇವಲ ಇಲ್ಲಿ ಹತ್ತಾರು ದೇಶಗಳಿಂದ ಬಂದ ನೂರಾರು ಚೂರುಗಳನ್ನು ಸೇರಿಸಿ ಒಂದು ಆಕಾರ ಕೊಡುತ್ತಾರೆ ಅಷ್ಟೆ.

ಇನ್ನು,

ಭಾರತದಲ್ಲಿಯೇ ಉತ್ಪಾದನೆ ಆಗುವ ಮೊಬೈಲ್ ಗಳೆಲ್ಲವೂ ಭಾರತದವಲ್ಲ.

  • ಉದಾ: ಸ್ಯಾಮ್ ಸಂಗ್, ನೋಕಿಯಾ , ಆಪಲ್, ಹಾನರ್ ಇತ್ಯಾದಿ.
  • ಹಾನರ್, ವಿವೊ, ಒಪ್ಪೋ ಗಳು ಅಪ್ಪಟ ಚೈನಾ ಬ್ರಾಂಡ್, ಆದರೂ ಅವುಗಳ ಹಲವು ಮಾಡೆಲ್ ಗಳು ನಮ್ಮ ದೇಶದಲ್ಲಿಯೇ ಉತ್ಪಾದನೆ ಆಗುತ್ತಿವೆ.

ಹಾಗೇನೇ ಭಾರತದ ಬ್ರಾಂಡ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಚಾರ ಗಿಟ್ಟಿಸಿಕೊಂಡ ಭಾರತದ ಬಹಳಷ್ಟು ಕಂಪನಿಗಳ ಮೊಬೈಲ್ ಗಳು ಭಾರತದಲ್ಲಿ ಉತ್ಪಾದನೆ ಆಗುವುದೇ ಇಲ್ಲ!!

  • ಉದಾ: ಜಿಯೋ LYF, (ಮೈಕ್ರೋ ಮ್ಯಾಕ್ಸ್, ಕಾರ್ಬನ್ ಕಂಪನಿವರು ಇತ್ತೀಚೆಗಷ್ಟೇ ಭಾರತದಲ್ಲಿ ಉತ್ಪಾದನೆ ಫ್ರಾರಂಭಿಸಿವೆ)

2014 ರಲ್ಲಿ ನಮ್ಮ ದೇಶದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳಿದ್ದವು.

ಇಂದು 268 ಮೊಬೈಲ್ ಮತ್ತು ಅದಕ್ಕೆ ಸಂಬಂಧಿಸಿದ ಬಿಡಿ ಭಾಗಗಳನ್ನ ಉತ್ಪಾದಿಸುವ ವಿದೇಶಿ ಘಟಕಗಳು ಇವೆ.
ಅವುಗಳಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದಾರೆ.

  • ಭಾರತೀಯ ಮೊಬೈಲ್‌ ಮಾರುಕಟ್ಟೆಯ ಪಾಲಿನ ಸುಮಾರು 70% ರಷ್ಟನ್ನು ಚೈನಾ ಕಂಪನಿಯ ಮೊಬೈಲ್ ಗಳೇ ಆಕ್ರಮಿಸಿವೆ. (ಹಾನರ್, ಓಪ್ಪೊ, ವಿವೊ). ಅವೆಲ್ಲವೂ ನಮ್ಮವರಿಂದ ನಮ್ಮಲ್ಲಿಯೇ ಉತ್ಪಾದನೆ ಆಗುತ್ತಿವೆ.

ಆದರೆ, "boycott China" ಎಂದು ಹೇಳುವವರಿಗೆ ಅದರಿಂದಾಗುವ ನಷ್ಟ ಯಾರಿಗೆ ಅನ್ನುವುದರ ಕನಿಷ್ಟ ಜ್ಞಾನ ಇದೆಯೆ?

ಈಗ ಹೇಳಿ,

ಭಾರತೀಯರಿಗೆ ಕೆಲಸ ಕೊಟ್ಟು, ಭಾರತದಲ್ಲಿಯೇ ಉತ್ಪಾದನೆಯಾಗುವ ವಿದೇಶಿ ಬ್ರಾಂಡ್ ಫೋನ್ ಖರೀದಿಸಬೇಕೋ ಅಥವಾ ಭಾರತೀಯ ಮೂಲದ ಅಪ್ಪಟ ದೇಶಿಯ ಕಂಪನಿಗಳು ಚೀನಾದಲ್ಲಿ ತಯಾರಿಸಿ ಭಾರತದಲ್ಲಿ ಮಾರಾಟ ಮಾಡುವ ಫೋನ್ ಗಳನ್ನ ಖರೀದಿಸಬೇಕೆ?

ನನ್ನ ಪ್ರಕಾರ ನಮ್ಮವರಿಗೆ ಕೆಲಸ ಕೊಟ್ಟು, ನಮ್ಮ ದೇಶಕ್ಕೆ ಟ್ಯಾಕ್ಸ್ ಕಟ್ಟಿ ಇಲ್ಲಿ ತಯಾರಿಸುವ ಉತ್ಪನ್ನಗಳನ್ನು ಖರೀದಿಸಿದರೆ ನಮ್ಮ ದೇಶಕ್ಕೆ ನಷ್ಟವಿಲ್ಲ ಅನಿಸುತ್ತದೆ.

ಧನ್ಯವಾದಗಳು.