Showing posts with label brahman. Show all posts
Showing posts with label brahman. Show all posts

Friday, April 18, 2025

ನೀವು ಉಪಾಕರ್ಮದಂದು ಏನೆಲ್ಲಾ ಆಚರಣೆಗಳನ್ನು ಮಾಡುತ್ತೀರಿ?


ಹಿಂದೂ ಧರ್ಮದಲ್ಲಿ ತುಂಬಾ ಸಮುದಾಯಗಳಲ್ಲಿ, ಮುಖ್ಯವಾಗಿ ಬ್ರಾಹ್ಮಣರಲ್ಲಿ ಜನಿವಾರವನ್ನು ಧರಿಸುವ ಪದ್ಧತಿಯಿದೆ. ಸಂಸ್ಕೃತದಲ್ಲಿ ಇದನ್ನು ಉಪವೀತ ಎಂದು ಹೇಳುತ್ತಾರೆ.

ಸಂಸ್ಕೃತದ ಉಪವೀತವನ್ನು ಕನ್ನಡದಲ್ಲಿ ಜನಿವಾರ, ತೆಲುಗಿನಲ್ಲಿ ಜಂಧ್ಯಾಲ, ತಮಿಳಿನಲ್ಲಿ ಪೂನಲ್, ಹಿಂದಿ/ಮರಾಠಿಯಲ್ಲಿ ಜನೇಊ ಎಂದು ಹೇಳುತ್ತಾರೆ.

ಪ್ರತಿ ವರ್ಷ ಈ ಜನಿವಾರವನ್ನು ಬದಲಾಯಿಸಲಾಗುತ್ತದೆ, ಇದೇ ಉಪಾಕರ್ಮ ಹಬ್ಬ.

ಕನ್ನಡದಲ್ಲಿ ಇದನ್ನು ಉಪಾಕರ್ಮ, ಜನಿವಾರದ ಹಬ್ಬ ಅಥವಾ ನೂಲು ಹುಣ್ಣಿಮೆ ಎಂದು ಕರೆಯುತ್ತಾರೆ, ತೆಲುಗಿನಲ್ಲಿ ಜಂಧ್ಯಾಲ ಪೌರ್ಣಮಿ, ತಮಿಳ್ನಾಲ್ಲಿ ಆವನಿ ಆವಿಟ್ಟಮ್ ಎಂದು ಹೇಳುತ್ತಾರೆ.

ಈ ಹಬ್ಬವನ್ನು ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ.

ಗಂಡಸರು ಮಾತ್ರ ಮಾಡುವ ಹಬ್ಬವಿದು.

ಈ ಹಬ್ಬವನ್ನು ಎರಡು ದಿನಗಳಂದು ಮಾಡುತ್ತಾರೆ, ಒಂದು ದಿನ ಋಗ್ ಉಪಾಕರ್ಮ ಮತ್ತೊಂದು ದಿನ ಯಜುರ್ ಉಪಾಕರ್ಮ. ಋಗ್ ವೇದವನ್ನು ಪಾಲಿಸುವವರು ಋಗ್ ಉಪಕರ್ಮವನ್ನು, ಯಜುರ್ ವೇದವನ್ನು ಪಾಲಿಸುವವರು ಯಜುರ್ ಉಪಾಕರ್ಮವನ್ನು ಆಚರಿಸುತ್ತಾರೆ.

ಋಗ್ ಉಪಾಕರ್ಮವನ್ನು ಶ್ರಾವಣ ಮಾಸದ ಶ್ರವಣ ನಕ್ಷತ್ರ ಇದ್ದ ದಿನದಂದು ಮಾಡುತ್ತಾರೆ, ಯಜುರ್ ಉಪಾಕರ್ಮವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಮಾಡುತ್ತಾರೆ.

ಇದನ್ನು ಎರಡು ರೀತಿಯಲ್ಲಿ ಮಾಡಬಹುದು.

ಒಂದು, ಮನೆಯಲ್ಲೇ ಪುಸ್ತಕವನ್ನು ನೋಡಿ ಮಾಡುವುದು, ಇದೊಂದು ರೀತಿ ಶಾರ್ಟ್ ಕಟ್.

ಎರಡನೆಯದು, ದೇವಸ್ಥಾನಕ್ಕೆ ಹೋಗಿ ಶಾಸ್ತ್ರ ಬದ್ಧವಾಗಿ ಮಾಡುವುದು.

ಮನೆಯಲ್ಲಿ ಮಾಡುವ ರೀತಿ:

  • ಮೊದಲು ಸಂಧ್ಯಾವಂದನೆಯನ್ನು ಮಾಡಬೇಕು.
  • ನಂತರ ಗಣಪತಿ ಪೂಜೆಯನ್ನು ಮಾಡಬೇಕು.
  • ಹೊಸ ಜನಿವಾರಕ್ಕೆ ಅಭಿಷೇಕ ಮಾಡಿ, ಅರಿಶಿನ ಕುಂಕುಮದಿಂದ ಪೂಜೆ ಮಾಡಬೇಕು.
  • ನೂತನ ಯಜನೋಪವೀತ ಧಾರಣ ಮಂತ್ರವನ್ನು ಹೇಳಿಕೊಂಡು ಹೊಸ ಜನಿವಾರವನ್ನು ಹಾಕಿಕೊಳ್ಳಬೇಕು. ಮದುವೆಯಾದವರು ಎರಡು ಜನಿವಾರಗಳನ್ನು ಹಾಕಿಕೊಳ್ಳಬೇಕು.
  • ಹಳೆ ಜನಿವಾರವನ್ನು ಭುಜದಿಂದ ಕೆಳಗೆ ಜಾರಿಸಿ, ಸೊಂಟದಿಂದ ಕೆಳಗಿಳಿಸಿ ಕಾಲುಗಳಿಗೆ ತಾಗದ ಹಾಗೆ ತೆಗೆಯಬೇಕು. ಮೇಲಿಂದ ತೆಗೆಯಬಾರದು.

ಅಮೇರಿಕಾದಲ್ಲಿ ೨೦೨೧ ರಲ್ಲಿ ನಡೆದ ಉಪಾಕರ್ಮ

ಚಿತ್ರಗಳ ಮೂಲ - ಟ್ವಿಟ್ಟರ್

Monday, February 24, 2025

Why are there so many Brahmin freedom fighters?

As Brahmins were an educated and exposed class in those days it is obvious that they got a wind early of the slavery that was going on at the hands of the British and the Islamists too and could motivate others to join in the freedom struggle.

Hindu Brahmins played a great role in the Indian Freedom struggle and made a stellar contribution in fighting against British oppression (and even against fighting the Islamic powers as Peshwa Bajirao instilled a Hindu Paatshahi on the Delhi throne making the Mughal a puppet). Though people from all castes in India were vital in the fight for freedom I am mentioning about Hindu Brahmins in this article because that is what this question is about. More will be shared below at the end of the article. I would equally love to write about great Kshatriya, Vaishya and Shudra freedom fighter legends too in questions asked highlighting their role in the fight for freedom.

So let us note the names of prominent Hindu Brahmins in freedom struggle of India:

A) Nana Phadnavis: Defeated British in 1st Anglo Maratha War assisted by Mahadji Shinde

B) Mangal Pande: Martyr and vital spark in 1857 War of Independence

C) Vasudeo Balwant Phadke: 1st common man armed revolutionary of India and martyr

D) Lokmanya Tilak: Father of Indian unrest. Former revolutionary turned philosopher

E) Gopal Krishna Gokhale: Moderate faction and ideologue

F) Veer Savarkar: Daring revolutionary, longest imprisoned freedom fighter, ideologue, opposition politician, historian, poet, Anti-Partition and Akhand Bharat crusader.

G) Anant Kanhere: Martyr, assassinated Nasik Commissioner Jackson for his atrocities

H) Shivram Rajguru: Martyr, hanged with Bhagat Singh

I) Wamanrao Joshi: sentenced to Cellular Jail for Alipore Bomb Case

J) Ganesh Savarkar: Brother of Veer Savarkar. Ran Abhinav Bharat secret revolutionary society with him and also with younger brother Dr Narayanrao Savarkar

K) Ganesh Vaishampayan: Facilitated meetings of Veer Savarkar with other revolutionaries when Savarkar was in house arrest at Ratnagiri. Helped Savarkar publish Bhagat Singh's poems secretly after Singh's martyrdom

L) Senapati Pandurang Bapat: Abhinav Bharat revolutionary and excellent sharp shooter and bomb maker. Turned ideologue in later years. Led Mulshi Satyagraha and also led campaign against Nizam's atrocities.

M) Nathuram Godse: Led Hindu mahasabha delegation against Nizam's atrocities in Hyderabad covertly supported by the British due to their good business terms with Nizam. Whipped, starved and tortured in Nizam's custody for months but that did not break his spirit. Young martyr, fought for Akhand Bharat.

N) Vasudev Gogate: Fired at Mumbai Commissioner Hotson. Served 8 years in jail.

O) Dada Chaudhari: Led Road Satyagraha in Nagar District and this author's great grand uncle

P) Justice Mahadev Ranade: Wrote on financial drain from British rule. Made an impact on Vasudev Balwant Phadke.

Q) Rani Laxmibai: nee Manikarnika Tambe, 1857 War martyr, Queen of Jhansi

R) Nanasaheb Peshwa (younger) and Rao Saheb Peshwa: heroes of 1857 War of Independence. Allied with Bahadur Shah Zafar, Tatya Tope, Ahmed Shah Moulvi, Azimullah Khan and Begum Hazrat Mahal.

S) Dr N.B Khare: Hindu Mahasabha affiliated freedom fighter.

T) Chandrashekhar Azad Tiwari: Iconic Martyr and active revolutionary in the Socialist circles. Kakori train campaign case.

U) Subramanyam Bharati: Revolutionary, known writer and Journalist, Poet, spent years in custody.

V) Vanchinathan Iyer: Martyr, assassinated oppressive Robert Ashe Collector of Thiruvelli

W) VVS Aiyer: Abhinav Bharat revolutionary and author.

X) Chaphekar Brothers: Martyrs by hanging for assassinating Nasik Commissioner for his oppressive policies during the Plague pandemic

Y) Virendranath Chatopadhyay: Forgotten hero and Abhinav Bharat revolutionary

Z) Bankim Chandra Chatopadhyay: VANDE MATARAM

Wednesday, November 27, 2024

ಬ್ರಾಹ್ಮಣರ ಇತಿಹಾಸ

 

1 .ಬ್ರಾಹ್ಮಣರು ಭಾರತದ ಮೂಲನಿವಾಸಿಗಳು .

ಈ ಪ್ರಶ್ನೆಗೆ ಉತ್ತರ ಹೇಳಿ!!!!!!

ಸಂಪ್ರದಾಯಸ್ಥ ಬ್ರಾಹ್ಮಣರು ಈರುಳ್ಳಿ , ಬೆಳ್ಳುಳ್ಳಿ , ಟೊಮ್ಯಾಟೋ ಮುಂತಾದ ತರಕಾರಿಗಳನ್ನು ಏಕೆ ತಿನ್ನುವುದಿಲ್ಲ ಗೊತ್ತೇ ???

ಏಕೆಂದರೆ ಆ ಗುಂಪಿನ ತರಕಾರಿಗಳು ಭಾರತದ ನೆಲದಲ್ಲಿ ಹುಟ್ಟಿದ ತರಕಾರಿಗಳಲ್ಲ.
ಅವು ಬೇರೆ ಬೇರೆ ದೇಶಗಳಿಂದ ಬಂದಂತಹ ತರಕಾರಿಗಳು. ಸಾವಿರಾರು ವರ್ಷಗಳ ಹಿಂದೆ ಆ ತರಕಾರಿಗಳು ಭಾರತದಲ್ಲಿ ಇರಲಿಲ್ಲ. ಆದ್ದರಿಂದ ಆ ತರಕಾರಿಗಳನ್ನು ತಿಂದು ಅಭ್ಯಾಸವಿಲ್ಲದ ಬ್ರಾಹ್ಮಣರು ಅವು ಭಾರತಕ್ಕೆ ಬಂದಾಗ ಅನುಮಾನದಿಂದ ನೋಡಿ ಅವನ್ನು ತಿನ್ನಲಿಲ್ಲ. ಆಮೇಲೆ ಅವು ಸಾತ್ವಿಕ-ಆಹಾರವಲ್ಲ ಎಂದು ಅವನ್ನು ತಿನ್ನಲಿಲ್ಲ.

ಈಗ ನಿಮಗೆ ಭಾರತದ ಮೂಲನಿವಾಸಿಗಳಾದ ಬ್ರಾಹ್ಮಣರು ಭಾರತದ ಮೂಲ ತರಕಾರಿಗಳನ್ನು ಮಾತ್ರ ತಿನ್ನುವ ಅಭ್ಯಾಸವನ್ನು ಆದಷ್ಟೂ ಪಾಲಿಸಿಕೊಂಡು ಬಂದಿದ್ದಾರೆ ಎಂದು ನಿಮಗೆ ಅನಿಸುತ್ತಿದೆಯಲ್ಲವೇ ???

ಹೌದು !!!!!!

ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳು.

ಬ್ರಾಹ್ಮಣರು ಭಾರತದಲ್ಲಿ ಲಕ್ಷಾಂತರ ವರ್ಷಗಳಿಂದ ವಾಸವಾಗಿದ್ದಾರೆ. ಅಂದರೆ ಬ್ರಾಹ್ಮಣರ ಮೂಲ ತಳಿ ಹುಟ್ಟಿದ್ದು ಭಾರತದಲ್ಲೇ. ಬ್ರಾಹ್ಮಣರು ಭಾರತದಲ್ಲಿ ಈಗಿರುವ ಎಲ್ಲಾ ಜನಾಂಗಗಳಿಗಿಂತ ಮೊದಲಿನಿಂದಲೇ ಭಾರತದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಹಲವಾರು ಸಾಕ್ಷಿಗಳು ದೊರೆಯುತ್ತವೆ.

ಕೆಲ ತಿಂಗಳುಗಳ ಹಿಂದೆ ಬ್ರಾಹ್ಮಣರ ವಂಶವಾಹಿಗಳು ಜಗತ್ತಿನ ಬೇರೆ ಯಾವ ಭಾಗದ ಜನರ ವಂಶವಾಹಿಗಳೊಂದಿಗೆ ಹೋಲುವುದಿಲ್ಲ ಎಂದು ವಿಜ್ಞಾನಿಗಳಿಂದ ದೃಡವಾಗಿದೆ ಎಂದು ಓದಿದ ನೆನಪು. ಆ ವಂಶವಾಹಿಗಳು ಮಧ್ಯ ಏಷ್ಯಾದ ಜನರ ವಂಶವಾಹಿಗಳೊಂದಿಗೆ ಹೋಲುವುದಿಲ್ಲ ಎಂದೂ ಸಹ ದೃಡಪಟ್ಟಿದೆ ಎಂದೂ ಸಹ ಓದಿದ ನೆನಪು.

ಈಗ ಬ್ರಾಹ್ಮಣರು ಭಾರತದ ಮೂಲನಿವಾಸಿಗಳೆಂದು ಸಾಬೀತುಪಡಿಸಲು ನನ್ನ ವಾದಗಳನ್ನು ನಿಮ್ಮ ಮುಂದಿಡುತ್ತೇನೆ.

ಮೊದಲಿಗೆ ನೀವು ತಿಳಿಯಬೇಕಾದ ವಿಷಯವೆಂದರೆ ಆರ್ಯರ ಆಗಮನವೆಂಬ ವಿಷಯವು ಐತಿಹಾಸಿಕ ಅಥವಾ ಸಾಮಾಜಿಕವಾದ ವಿಷಯವಲ್ಲ.

ಅದೊಂದು ಪಕ್ಕಾ ರಾಜಕೀಯ ವಿಷಯ.

ಆ ಕಲ್ಪನೆಯನ್ನು ಬ್ರಿಟಿಷರು ಹೇಗೆ ದುರುಪಯೋಗ ಪಡಿಸಿಕೊಂಡರೋ ಹಾಗೆಯೇ ಈಗಿನ ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಬ್ರಿಟಿಷರು ಭಯಪಟ್ಟಿದ್ದು ಬ್ರಾಹ್ಮಣರು ರಾಷ್ಟ್ರೀಯತೆಯ ಕಲ್ಪನೆಯಿಂದ ಎಲ್ಲರಲ್ಲಿಯೂ ಅವರ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದುದರಿಂದ.

ಬ್ರಿಟಿಷರ ಉದ್ದೇಶವೇನೆಂದರೆ ಬ್ರಾಹ್ಮಣರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿ ಅವರು ತಮ್ಮ ವಿರುದ್ದ ಉಗ್ರವಾಗಿ ಹೋರಾಡದಂತೆ ಮಾಡುವುದು. ಜನಜಾಗೃತಿ ಮೂಡಿಸದಂತೆ ಮಾಡುವುದು. ಆದರೆ ಆ ತಂತ್ರ ಅವರಿಗೆ ಫಲ ಕೊಡಲಿಲ್ಲ.

ಈಗಿನ ಕೆಲವು ರಾಜಕಾರಣಿಗಳು ಬ್ರಾಹ್ಮಣರ ಮನಸ್ಸಿನ ಶಕ್ತಿಯಿಂದ ಭಯಪಟ್ಟು ಅವರೊಂದಿಗೆ ಸ್ಪರ್ಧೆ ಮಾಡಲಾರದವರು ಈ ವಿಷಯವನ್ನು ಸುದ್ದಿವಾಹಿನಿಗಳ ಚರ್ಚೆಗಳಲ್ಲಿ ಆಗಾಗ್ಗೆ ಪ್ರಸ್ತಾಪಿಸಿ ಬ್ರಾಹ್ಮಣರ ನೈತಿಕ ಸ್ಥೈರ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸುವುದನ್ನು ನಾವು ನೋಡಿದ್ದೇವೆ.

ಮತ್ತೊಂದು ತಂತ್ರವೆಂದರೆ ಬೇರೆ ಕೆಲವು ಜಾತಿಯ ಜನರ ಮತಗಳನ್ನು ಪಡೆಯಲು ಅವರನ್ನು ಹೊಗಳಲು ಮತ್ತು ಅವರನ್ನು ಬ್ರಾಹ್ಮಣರ ವಿರುದ್ದ ಪ್ರಚೋದಿಸಲು ಆರ್ಯರ ಆಗಮನವೆಂಬ ಕಲ್ಪನೆಯನ್ನು ಬಳಸಿಕೊಳ್ಳುವುದನ್ನೂ ಸಹ ನಾವು ಗಮನಿಸಿದ್ದೇವೆ.

ಯಾರಾದರೂ ಬ್ರಾಹ್ಮಣ ರಾಜಕಾರಣಿಗಳು “ಅನ್ಯಾಯದ ಮೀಸಲಾತಿಯನ್ನು ರದ್ದು ಮಾಡಿ ಸಮಾನತೆಯನ್ನು ಸ್ಥಾಪಿಸಬೇಕು” ಎಂದು ವಾದಿಸಿದಾಗಲೂ ಬೇರೆ ಕೆಲವರು ಅವರ ಬಾಯಿಮುಚ್ಚಿಸಲು ಈ ವಿಷಯವನ್ನು ಬಳಸಿಕೊಳ್ಳುವುದನ್ನು ನೀವು ಗಮನಿಸಿರಬಹುದು.

ಈಗಲೂ ಸಹ ಈ ವಿಷಯ ಮೇಲ್ಜಾತಿ ಮತ್ತು ಕೆಳಜಾತಿಯ ಜನರ ನಡುವೆ ದ್ವೇಷ ಮೂಡಿಸಲು ಈ ವಿಷಯವನ್ನು ವ್ಯಾಪಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಅದು ಅಷ್ಟು ಸುಲಭವಾಗಿ ಫಲ ಕೊಡುವುದಿಲ್ಲ.

ಅದರಿಂದ ನಮಗೆ ತಿಳಿಯುವುದೇನೆಂದರೆ ಆರ್ಯರ ಆಗಮನವೆಂಬುದು ನೂರಕ್ಕೆ ನೂರು ಕುತಂತ್ರದ ಕಲ್ಪನೆ.

ಬ್ರಿಟಿಷರಿಂದ ಪ್ರೇರಿತರಾದ ಇತಿಹಾಸಕಾರರು ಮತ್ತು ನಕಲಿ ಬುದ್ದಿಜೀವಿಗಳು ಹೇಳುವ ಪ್ರಕಾರ ಉತ್ತರ ಭಾರತಕ್ಕೆ ಆರ್ಯರು ಬಂದರು ಮತ್ತು ದಕ್ಷಿಣ ಭಾರತದಲ್ಲಿ ದ್ರಾವಿಡರು ವಾಸಿಸುತಿದ್ದರು. ಹಾಗಾದರೆ ಬ್ರಾಹ್ಮಣನಾದ ರಾವಣ ದಕ್ಷಿಣದಲ್ಲಿರುವ ಶ್ರೀಲಂಕಾವನ್ನು ಹೇಗೆ ಆಳುತ್ತಿದ್ದ???!!!!

ಅದೂ ಅಲ್ಲದೇ , ಈಗ ದೊರಕಿರುವ ಅತೀ ಪ್ರಾಚೀನವಾದ ಸಿಂಧೂ ನಧಿಯ ನಾಗರಿಕತೆಯು ಸಾಕ್ಷ್ಯಗಳು ದೊರಕಿರುವುದು ಉತ್ತರ ಭಾರತದಲ್ಲೇ.

ಆದರೆ ದಕ್ಷಿಣ ಭಾರತದಲ್ಲಿ ಯಾವುದೇ ಪ್ರಾಚೀನವಾದ ನಾಗರಿಕತೆ ಇದ್ದ ಪಳೆಯುಳಿಕೆಗಳು ದೊರಕಿಲ್ಲ. ಅಂದರೆ ದಕ್ಷಿಣ ಭಾರತದವರಿಗಿಂತ ಉತ್ತರ ಭಾರತದವರೇ ಲಕ್ಷಾಂತರ ವರ್ಷಗಳ ಮೊದಲಿನಿಂದಲೇ ಭಾರತದಲ್ಲಿ ವಾಸಿಸುತ್ತಿದ್ದರು. ರಾಮಾಯಣ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ವಾಸಿಸುತ್ತಿದ್ದವರು ವಾನರರು ಮತ್ತು ಶ್ರೀಲಂಕಾದಲ್ಲಿ ಇದ್ದವರು ರಾಕ್ಷಸರು. ಮಹಾಕವಿ ವಾಲ್ಮಿಕಿಯು ತನ್ನ ಶ್ರೀರಾಮಾಯಣದಲ್ಲಿ ದಕ್ಷಿಣ ಭಾರತದಲ್ಲಿ ಶ್ರೀರಾಮನು ದ್ರಾವಿಡರನ್ನು ಭೇಟಿ ಮಾಡಿದನು ಎಂದು ಬರೆದೇ ಇಲ್ಲವಲ್ಲ. ಅಂದರೆ ದ್ರಾವಿಡರು ಆಮೇಲೆ ಅಲ್ಲಿಗೆ ಬಂದಿರುವ ಸಾಧ್ಯತೆ ಇದೆ. ಇನ್ನೊಂದು ಪ್ರಶ್ನೆಯೆಂದರೆ ಅಲ್ಲಿದ್ದ ವಾನರರು ಮತ್ತು ರಾಕ್ಷಸರು ಏನಾದರು??!!!!

“ಭಾರತದ ಅತೀ ಪ್ರಾಚೀನವಾದ ಕವಿ ಎಂದು ಹೇಳಲಾಗುತ್ತಿರುವ ಮಹರ್ಷಿ ವಾಲ್ಮಿಕಿಯು ತನ್ನ ಶ್ರೀ ರಾಮಾಯಣದಲ್ಲಿ ಆರ್ಯರು (ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು.) ಎಲ್ಲಿಂದಲೋ ಬಂದವರೆಂದು ಎಲ್ಲಿಯೂ ಉಲ್ಲೇಖಿಸಿಯೇ ಇಲ್ಲ.

ಆರ್ಯರು 5000 ವರ್ಷಗಳ ಸುಮಾರಿಗೆ ಭಾರತಕ್ಕೆ ಬಂದಿದ್ದರೆ ಅದಕ್ಕಿಂತಲೂ ಹಿಂದೆ ವಾಲ್ಮಿಕಿಯು ಬ್ರಾಹ್ಮಣರು ಮತ್ತು ಕ್ಷತ್ರಿಯರ ಬಗ್ಗೆ ಹೇಗೆ ಬರೆಯಲು ಸಾಧ್ಯ????!!!! ರಾಮಾಯಣದ ಅತ್ಯಂತ ಬಲಿಷ್ಠ ಖಳನಾಯಕನಾದ ರಾವಣನು ಬ್ರಾಹ್ಮಣನೇ ಅಲ್ಲವೇ???? ಅಂದರೆ ರಾಮಾಯಣವನ್ನು ಬರೆಯುವುದಕ್ಕಿಂತ ಮೊದಲೇ ಬ್ರಾಹ್ಮಣರು ಭಾರತ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದರು.

ಆರ್ಯರು ಭಾರತಕ್ಕೆ ಬಂದರೆಂದು ಹೇಳುವುದು ಮತ್ತು ವಾಲ್ಮಿಕಿಯು ರಾಮಾಯಣವನ್ನು ಬರೆದನೆಂದು ಹೇಳುವ ಕಾಲವನ್ನು ಇತಿಹಾಸಕಾರರು ಸುಮಾರು ಕ್ರಿ.ಪೂ.5000 ಇಸವಿಯೆಂದು ಹೇಳುತ್ತಾರೆ. ಆದರೆ ಇದು ಅನೇಕ ಸಂಶಯಗಳಿಗೆ ಆಸ್ಪದ ಕೊಡುತ್ತದೆ. ವಾಲ್ಮೀಕಿ ರಾಮಾಯಣವನ್ನು ಕ್ರಿ.ಪೂ.5000ದಲ್ಲಿ ಬರೆದಿದ್ದರೆ ಆ ಮಹಾಕಾವ್ಯದಲ್ಲಿ ಅವನೂ ಒಂದು ಪಾತ್ರ ವಹಿಸುವುದು ಸುಳ್ಳೇ ????!!!

ತ್ರೇತಾಯುಗದಲ್ಲಿ ನಡೆದ ರಾಮಾಯಣದಲ್ಲಿ ದ್ವಾಪರ ಯುಗವೂ ಕಳೆದ ನಂತರ ಅವರು ಹೇಳಿದಂತೆ ಕಲಿಯುಗದಲ್ಲಿ ಹುಟ್ಟಿದ ವಾಲ್ಮೀಕಿ ಸೀತಾದೇವಿಗೆ ಹೇಗೆ ಆಶ್ರಯ ಕೊಟ್ಟನು ??

ಒಟ್ಟಿನಲ್ಲಿ ಇತಿಹಾಸಕಾರರು ಹೇಳುವ ಮಾತುಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ.
1.ವಾಲ್ಮೀಕಿಯ ಪ್ರಕಾರ ಬ್ರಾಹ್ಮಣರು ತ್ರೇತಾಯುಗದಲ್ಲೇ ಭಾರತದಲ್ಲಿ ವಾಸವಾಗಿದ್ದರು.
2. ಇತಿಹಾಸಕಾರರು ಬ್ರಾಹ್ಮಣರು ಕಲಿಯುಗದಲ್ಲಿ ಮಧ್ಯ ಏಷ್ಯಾದಿಂದ ಬಂದರು ಎಂದು ಹೇಳುತ್ತಾರೆ.
ಇವುಗಳಲ್ಲಿ ಯಾವುದನ್ನು ನಂಬುವುದು???

ಈ ಇತಿಹಾಸಕಾರರು ಸುಳ್ಳುಗಾರರಗಿರಬೇಕು. ಇಲ್ಲವೇ ವಾಲ್ಮೀಕಿ ಸುಳ್ಳು ಬರೆದಿರಬೇಕು. ಎರಡರಲ್ಲಿ ಯಾವುದು ನಿಜ.

ಆರ್ಯರು ಬಂದರೆಂದು ಹೇಳಲಾಗುವ ಕಾಲದಲ್ಲಿಯೇ ವಾಲ್ಮಿಕಿಯು ಶ್ರೀ ರಾಮಾಯಣವನ್ನು ಬರೆದಿದ್ದರೆ ಆರ್ಯರು ಬಂದ ಬಗ್ಗೆ ಅದರಲ್ಲಿ ಯಾವುದಾದರೂ ಒಂದು ಉಲ್ಲೇಖ ಇರಲೇಬೇಕಾಗಿತ್ತು.

ಆರ್ಯರ ಆಗಮನದ ಬಗ್ಗೆ ಬರೆಯಲು ವಾಲ್ಮೀಕಿ ಭಯಪಟ್ಟನೇ ???

ಒಬ್ಬ ಬ್ರಾಹ್ಮಣನನ್ನು ಖಳನಾಯಕನನ್ನಾಗಿ ಚಿತ್ರಿಸಿದ ವಾಲ್ಮೀಕಿ ಆರ್ಯರ ಆಗಮನದ ಬಗ್ಗೆ ಬರೆಯಲು ಹೆದರಿದನೇ????

ಇಲ್ಲ!!!!!!

ಇದರ ಅರ್ಥ,ಆರ್ಯರ ಆಗಮನವೆಂಬುದು ಬ್ರಿಟಿಷರಿಂದ ಪ್ರೇರಿತರಾದ ಇತಿಹಾಸಕಾರರು ಮತ್ತು ಬುದ್ಧಿಜೀವಿಗಳಿಂದ ಸೃಷ್ಟಿಸಲ್ಪಟ್ಟ ಕಲ್ಪನೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಭಾರತೀಯರನ್ನು ಮೇಲ್ಜಾತಿಯ ವಿರುದ್ಧ ಕೆಳಜಾತಿಯೆಂದು ವಿಭಜಿಸಿ ಆಳಲು ಮತ್ತು ಭಾರತೀಯರ ಒಗ್ಗಟ್ಟನ್ನು ನಾಶಪಡಿಸಿ ಸ್ವಾತಂತ್ರ ಹೋರಾಟವನ್ನು ದುರ್ಬಲಗೊಳಿಸಲು ಮಾಡಿದ ಒಂದು ಕುತಂತ್ರ.

ಅದೂ ಅಲ್ಲದೇ ಭಾರತದ ಯಾವುದೇ ಸಾಹಿತ್ಯ ಅಥವಾ ಜನಪದ ಕತೆ ಆರ್ಯರ ಆಗಮನದ ಬಗ್ಗೆ ತಿಳಿಸುವುದೇ ಇಲ್ಲ.

ಆರ್ಯರು ಎಲ್ಲಿಂದಲೋ ಬಂದಿದ್ದರೆ ಅದನ್ನು ಇತಿಹಾಸಕಾರರು ಸೃಷ್ಟಿಸುವ ಅಗತ್ಯವಿರಲಿಲ್ಲ. ಜನರೇ ಯಾವುದೋ ಒಂದು ಕತೆಯಲ್ಲೋ , ಒಂದು ಗಾದೆ ಮಾತಿನಲ್ಲೋ ಅಥವಾ ಯಾವುದಾದರೂ ಒಂದು ಜನಪದ ಕತೆ ಇಲ್ಲವೇ ಹಾಡುಗಳಲ್ಲಿ ಅದನ್ನು ದಾಖಲಿಸುತಿದ್ದರು. ಆದ್ದರಿಂದ ಭಾರತೀಯ ಇತಿಹಾಸಕಾರರು ಬರೆದ ಅನೇಕ ಸುಳ್ಳುಗಳಲ್ಲಿ ಆರ್ಯರ ಆಗಮನವು ಮೊದಲ ಸುಳ್ಳಾಗಿದೆ ಎಂಬುದು ಸ್ಪಷ್ಟ.

ನಿಜವಾಗಿ ಬ್ರಾಹ್ಮಣರು ಅತಿ ಪುರಾತನ ಕಾಲದಿಂದಲೂ ಭಾರತದ ತುಂಬೆಲ್ಲಾ ವಾಸಿಸುತ್ತಿದ್ದರು. ಆದರೆ ಈಗ ಪಾಕಿಸ್ತಾನದ ಬಳಿಯಿರುವ ಸರಸ್ವತಿ ನಧಿಯ ದಂಡೆಯ ಮೇಲೆ ಅತಿ ದಟ್ಟವಾಗಿದ್ದರು. ಅವರಿದ್ದ ನಗರಗಳನ್ನೇ ಸಿಂಧೂ ನಧಿಯ ನಾಗರಿಕತೆ ಎಂದು ಹೇಳುವುದು. ಈಗಿನ ಆಧುನಿಕ ನಗರಗಳಂತೆಯೇ ಪ್ರಾಚೀನ ಭಾರತದ ಬ್ರಾಹ್ಮಣರ ಹರಪ್ಪ ಮತ್ತು ಮೆಹಂಜದಾರೋ ನಗರಗಳಿದ್ದವು.

ಬಲೂಚಿಸ್ತಾನದವರೆಗೂ ಅಥವಾ ಇನ್ನೂ ಆಚೆಗೆ ಇದ್ದ ಅಂದಿನ ಭಾರತವೇ ಬ್ರಾಹ್ಮಣರ ನಿಜವಾದ ಜನ್ಮ ಭೂಮಿ. ಸಿಂಧೂ ನಧಿ ನಾಗರಿಕತೆ ಎನ್ನುತ್ತಾರಲ್ಲ ಭಾರತದಲ್ಲಿ ಅಂದಿನ ಕಾಲದಲ್ಲೇ ನಾಗರಿಕರಾಗಿರಲು ಯಾರಿಂದ ಸಾಧ್ಯ . ತಮ್ಮ ಪ್ರಾದೇಶಿಕ ಭಾಷೆಗಳಿಗೆ ಲಿಪಿಗಳನ್ನು ತಯಾರಿಸಲಾರದವರು ಅಷ್ಟು ನಾಗರಿಕರಾಗಿದ್ದರೇ ????? ಅಂತಹ ಆಧುನಿಕವಾದ ನಗರಗಳನ್ನು ನಿರ್ಮಾಣ ಮಾಡಲು ಯಾರಿಗೆ ಸಾಧ್ಯವಿದೆ??? ಈಗಲೇ ಮೀಸಲಾತಿಯೆಂಬ ಕೃತಕವಾದ ವ್ಯವಸ್ಥೆಯಿಂದ ಉದ್ಯೋಗ ಪಡೆಯುತ್ತಿರುವವರು ಆಗಲೇ ಅಷ್ಟು ಮುಂದುವರೆದಿದ್ದರೇ ????? ಆಗ ಅತಿ ಆಧುನಿಕರಾಗಿದ್ದು ಆಮೇಲೆ ಹಿಂದುಳಿದರೇ ?????

ಹಾಸ್ಯಾಸ್ಪದವಾಗಿದೆ ಇತಿಹಾಸಕಾರರ ಕಲ್ಪನೆ!!!!!

ಬ್ರಾಹ್ಮಣರು ಭಾರತದ ಮೂಲನಿವಾಸಿಗಳೆಂದು ನಿರೂಪಿಸಲು ಇನ್ನೂ ಹಲವಾರು ಸಾಕ್ಷ್ಯಗಳಿವೆ.

ಬ್ರಾಹ್ಮಣರ ಅತಿ ಪ್ರಾಚಿನ ಮಂತ್ರಗಳಲ್ಲಿ “ ಭರತಖಂಡೇ ,ಭಾರತವರ್ಷೇ , ಜಂಭೂ ದ್ವೀಪೇ”, ಎಂಬ ಪದಗಳಿವೆ.

ಬ್ರಾಹ್ಮಣರು ಬೇರೆ ದೇಶದಿಂದ ಬಂದಿದ್ದರೆ ಆ ಮಂತ್ರಗಳಲ್ಲಿ ಭಾರತ ದೇಶದ ಪ್ರಾಚೀನ ಹೆಸರುಗಳು ಏಕೆ ಇರುತ್ತವೆ???ಅವರು ಹೇಳುವಂತೆ ಬ್ರಾಹ್ಮಣರು ಮಧ್ಯ ಏಷ್ಯಾದಿಂದ ಬಂದಿದ್ದರೆ ಅವುಗಳಲ್ಲಿ , “ಮಧ್ಯ ಎಷ್ಯೇ ,” ಎಂದು ಇರಬೇಕಾಗಿತ್ತು . ಅದೂ ಅಲ್ಲದೇ ಬ್ರಾಹ್ಮಣರ ಪೂರ್ವಜರು ಏಕೆ ಅದರ ಬಗ್ಗೆ ಏನನ್ನೂ ಹೇಳಿಲ್ಲ ಮತ್ತು ಬರೆದಿಲ್ಲ. ಬ್ರಾಹ್ಮಣರು ಭಾರತ ದೇಶಕ್ಕೆ ನಿಷ್ಟರಾಗಿದ್ದಾರೆಯೇ ಹೊರತು ಮಧ್ಯ ಏಷ್ಯಾದ ಸ್ಮರಣೆಯನ್ನೇ ಮಾಡುವುದಿಲ್ಲವಲ್ಲಾ?????.

ಮಧ್ಯ ಏಷ್ಯಾದವರೆಗೆ ಸಂಸ್ಕೃತದ ಪ್ರಭಾವ ಇದೆ ಅದರಿಂದ ಆರ್ಯರು ಮಧ್ಯ ಏಷ್ಯಾದಿಂದ ಬಂದಿದ್ದಾರೆ ಎಂದು ಹೇಳುತ್ತಾರೆ.ಹಾಗಾದರೆ ಸಂಸ್ಕೃತದ ಪ್ರಭಾವ ಜರ್ಮನಿಯಿಂದ ಇಂಡೋನೇಷಿಯಾದವರೆಗೆ ಇದೆ. ಆರ್ಯರು ಜರ್ಮನಿಯಿಂದಲೇ ಏಕೆ ಬಂದಿರಬಾರದು???

ಅದೂ ಅಲ್ಲದೇ ಈಗ ಭಾರತದಲ್ಲಿ ಇಂಗ್ಲಿಷಿನ ಪ್ರಭಾವ ಇದೆಯಲ್ಲ ಅದರಿಂದ ಬ್ರಿಟಿಷರೆಲ್ಲರೂ ಭಾರತದಿಂದಲೇ ಏಕೆ ಇಂಗ್ಲೆಂಡಿಗೆ ಹೊಗಿರಬಾರದು???ಭಾರತದಲ್ಲಿ ಇಂಗ್ಲಿಷಿನ ಪ್ರಭಾವ ಇದೆ ಅದರಿಂದ ಬ್ರಿಟಿಷರು ಇಂಗ್ಲೆಂಡಿನ ಮೂಲ ನಿವಾಸಿಗಳೇ ಅಲ್ಲ ಎಂದರೆ ಒಪ್ಪಿಕೊಳ್ಳುತ್ತಾರಾ?????

ಮಧ್ಯ ಏಷ್ಯಾದಲ್ಲಿ ಸಂಸ್ಕೃತದ ಪ್ರಭಾವ ಇದ್ದರೆ ಭಾರತದಲ್ಲಿ ಸಂಸ್ಕೃತವೇ ಇದೆಯಲ್ಲ???

ಅವರು ಕೊಡುವ ಮತ್ತೊಂದು ಸಾಕ್ಷ್ಯವೆಂದರೆ ಉತ್ತರ ಭಾರತದ ಜನರು ಬೆಳ್ಳಗಿದ್ದಾರೆ ಅದರಿಂದ ಅವರು ಭಾರತದ ಮೂಲನಿವಾಸಿಗಳಲ್ಲ ಎಂದು ಹೇಳುತ್ತಾರೆ. ದಕ್ಷಿಣ ಭಾರತದ ಜನರು ಕಪ್ಪಗಿದ್ದಾರೆ ಅದ್ದರಿಂದ ಅವರು ಭಾರತದ ಮೂಲ ನಿವಾಸಿಗಳು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ.

ಬೆಳ್ಳಗಿರುವವರೆಲ್ಲಾ ಒಂದು ದೇಶದವರು ಮತ್ತು ಕಪ್ಪಗಿರುವವರೆಲ್ಲಾ ಮತ್ತೊಂದು ದೇಶದವರು ಎಂದು ಹೇಳಿದರೆ ದ್ರಾವಿಡರು ಮತ್ತು ಆಫ್ರಿಕಾದ ಜನರು ಕಪ್ಪಾಗಿರುವುದರಿಂದ ದ್ರಾವಿಡರು ಆಫ್ರಿಕಾದಿಂದಲೇ ಏಕೆ ಬಂದಿರಬಾರದು????

ಆದರೆ ಭಾರತದ ಮಣ್ಣಿನಲ್ಲಿ ಕರಿಯರು ಮಾತ್ರ ಹುಟ್ಟಬೇಕು ಎಂದು ಇಲ್ಲಿ ಜೀವದ ಉಗಮವಾಗುವ ಮೊದಲೇ ಯಾವ ಸರ್ಕಾರಗಳಾದರೂ ಕಾನೂನು ಮಾಡಿದ್ದವೇ?????

ಭಾರತದ ಮಣ್ಣಿನಲ್ಲಿ ಕರಿಯರು ಮಾತ್ರ ಹುಟ್ಟಬೇಕು ಎಂದು ಕಾನೂನು ಮಾಡಿದವರು ಯಾರು?????ಎಷ್ಟೋ ಜನ ಕರಿಯ ಬ್ರಾಹ್ಮಣರಿಲ್ಲವೇ??????

ಕಪ್ಪಗಿರುವ ಬ್ರಾಹ್ಮಣರು ಮತ್ತು ಕಪ್ಪಗಿರುವ ಇತರರ ನಡುವೆ ಮುಖ ಲಕ್ಷಣಗಳಲ್ಲಿ ,ಸಂಸ್ಕಾರದಲ್ಲಿ ಸ್ಪಷ್ಟವಾದ ವ್ಯತ್ಯಾಸಳಿಲ್ಲವೇ??????

ಭಾರತದ ಮಣ್ಣಿನಲ್ಲಿ ಕರಿಯರು ಹುಟ್ಟಲು ಹೇಗೆ ಸಾಧ್ಯವೋ ಹಾಗೆಯೇ ಬಿಳಿಯರೂ ಸಹ ಹುಟ್ಟಲು ಸಾಧ್ಯ!!!!!!

ಉತ್ತರ ಭಾರತದ ಜನರ ಮುಖ ಬೇರೆ ರೀತಿಯಲ್ಲಿ ಇದೆ ಎಂದು ಹೇಳುತ್ತಾರೆ. ಆ ರೀತಿಯ ಮುಖಗಳಿಗೆ ಜನ್ಮ ಕೊಡಲು ಭಾರತದ ಮಣ್ಣಿಗೆ ಸಾಧ್ಯವಿಲ್ಲವೇ?????ಅದೂ ಅಲ್ಲದೇ ಉತ್ತರ ಭಾರತದ ಜನರ ಮುಖಗಳನ್ನು ನೋಡಿದಾಗ ದಕ್ಷಿಣ ಭಾರತದ ಜನರ ಮುಖಗಳೇ ಬೇರೆ ರೀತಿಯಲ್ಲಿ ಇವೆಯಲ್ಲಾ ????? ಹಾಗಾದರೆ ದಕ್ಷಿಣ ಭಾರತದ ಜನರು ಬೇರೆ ದೇಶದಿಂದ ಬಂದವರಾ?????

ನಿಜವಾಗಿ ಹೇಳಬೇಕೆಂದರೆ , ಭಾರತದಲ್ಲಿಯೇ ಅಲ್ಲ . ಇಡೀ ಪ್ರಪಂಚದ ದಕ್ಷಿಣ ಭಾಗದ ಜನರೆಲ್ಲರೂ ಕರಿಯರೇ.

ಅದಕ್ಕೆ ಕಾರಣ ಉಷ್ಣವಲಯದಲ್ಲಿ ಬಿಸಿಲು ಜಾಸ್ತಿಯಿರುವುದರಿಂದ ಚರ್ಮ ರೋಗಗಳಿಗೆ ರಕ್ಷಣೆಯಾಗಿ ದೇಹವೇ ಅಂತಹ ಬಣ್ಣವನ್ನು ಹೊಂದುತ್ತದೆ. ಅದಕ್ಕೆ ಕಾರಣ ಜೀವವಿಕಾಸ.

ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಆಸ್ತ್ರೆಲಿಯಾಗಳಲ್ಲಿ ಮೊದಲು ವಾಸಿಸುತ್ತಿದ್ದವರು ಕರಿಯರೇ. ಬ್ರಿಟಿಷರು ಆ ದೇಶಗಳಿಗೆ ಹೋದ ಮೇಲೆ ಅಲ್ಲಿ ಬಿಳಿಯರು ಹೆಚ್ಚಾದರು.

ಕರಿಯರನ್ನು ಮಾತ್ರ ಭಾರತದ ಮೂಲ ನಿವಾಸಿಗಳೆಂದು ಬ್ರಿಟಿಷರು ಬರೆಸಿರುವುದು ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸುವ ಉಗ್ರವಾದ ವರ್ಣಬೇಧ ನೀತಿಯಿಂದ ಪ್ರಭಾವಿತವಾಗಿದೆ. ಅವರು ಅಲ್ಲಿ ಮಾಡುವಂತೆ ಇಲ್ಲಿಯೂ ಭಾರತೀಯರನ್ನು ಕರಿಯರು ಎಂದು ಕೀಳು ಮಾಡುವ ಪ್ರಯತ್ನಕ್ಕೆ ಚಾಲನೆ ನೀಡಿದರು. ಅವರ ಕುತಂತ್ರ ಏಕೆ ಫಲ ಕೊಡಲಿಲ್ಲವೆಂದರೆ ಅಲ್ಲಿಯಂತೆ ಭಾರತದಲ್ಲಿ ಕರಿಯರನ್ನು ಕೀಳಾಗಿ ಕಾಣುತ್ತಿರಲಿಲ್ಲ.

ಮತ್ತೊಂದು ವಿಷಯವೆಂದರೆ ಬ್ರಾಹ್ಮಣರು ,ಕ್ಷತ್ರಿಯರು, ಮತ್ತು ವೈಶ್ಯರನ್ನು ಬಿಟ್ಟು ಉಳಿದ ಜಾತಿಗಳಲ್ಲಿ ಕೋಟ್ಯಂತರ ಜನ ಬಿಳಿಯರಿದ್ದಾರೆ. ಆದರೆ ಅವರು ಬಿಳಿಯರಾಗಿದ್ದರೂ ಅವರ ಮುಖ ಲಕ್ಷಣಗಳು ಭಿನ್ನವಾಗಿವೆ. ದಲಿತರಲ್ಲಿಯೂ ಬಿಳಿಯರಿದ್ದಾರೆ. ಹಾಗಾದರೆ ಅವರೂ ಮಧ್ಯ ಎಷ್ಯಾದಿಂದಲೇ ಬಂದವರಾ????
?

ಭೂಮಿಯ ಎಲ್ಲಾ ದೇಶಗಳ ಉತ್ತರ ಭಾಗಗಳಲ್ಲಿ ಇರುವಂತೆ ಉತ್ತರ ಭಾರತದಲ್ಲಿಯೂ ಬಿಳಿಯರೇ ಹುಟ್ಟಿದ್ದಾರೆ. ಭೂಮಿಯ ಉತ್ತರಕ್ಕೆ ಹೋದಂತೆಲ್ಲಾ ಬಿಳಿಯರೇ ಇರುತ್ತಾರೆ.

ಉದಾಹರಣೆಗೆ ಚೀನಾ, ರಷ್ಯಾ, ಜಪಾನ್, ಸೌದಿ ಅರೇಬಿಯಾ ಮುಂತಾದ ದೇಶಗಳಲ್ಲೆಲ್ಲಾ ಬಿಳಿಯರೇ ಇದ್ದಾರೆ. ಚೀನಾ ಮತ್ತು ರಷ್ಯಾಗಳ ಜನರು ಭಾರತದವರಿಗಿಂತಲೂ ಬೆಳ್ಳಗಿದ್ದಾರೆ . ಏಕೆಂದರೆ ಅವರು ಭಾರತದವರಿಗಿಂತಲೂ ಉತ್ತರದ ಜನರು. ಹಾಗೆಂದು ಅವರೆಲ್ಲರೂ ಮಧ್ಯ ಎಷ್ಯಾದಿಂದಲೇ ಬಂದಿದ್ದಾರೆ ಎನ್ನಲು ಸಾಧ್ಯವೇ????

ಮೇಲಿನ ಎಲ್ಲಾ ಕಾರಣಗಳಿಂದ ನಮಗೆ ತಿಳಿಯುವುದೇನೆಂದರೆ ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳೆಂಬುದು ಸೂರ್ಯನಷ್ಟೇ ಸತ್ಯ.

ಆರ್ಯರ ಆಗಮನವೆಂಬುದು ಕುತಂತ್ರಿಗಳು ರಚಿಸಿದ ಕಪೋಲ ಕಲ್ಪಿತ ಕಲ್ಪನೆ. ಹಿಂದೂ ಮುಸ್ಲಿಂ,ಮೇಲ್ಜಾತಿ ಕೆಳಜಾತಿ ಎಂದು ವಿಭಜಿಸಿ ಆಳುವ ಬ್ರಿಟಿಷರ ಕುತಂತ್ರವನ್ನು ಜಾರಿಗೊಳಿಸಲು ತಯಾರಿಸಿದ ಒಂದು ಕಲ್ಪನೆ. ಮದ್ದು ಗುಂಡುಗಳಿಗೆ ಕೊಬ್ಬು ಸವರುವ ವಿಷಯದಲ್ಲಿ ಮಾಡಿದ ತಂತ್ರದಂತೆಯೇ ಇದೂ ಕೂಡ.

ಭಾರತೀಯ ರಾಜಕಾರಣಿಗಳು ಬ್ರಿಟಿಷರಿಂದ ಶಿಸ್ತು ಮತ್ತು ಪ್ರಾಮಾಣಿಕತೆಗಳನ್ನು ಕಲಿಯಲಿಲ್ಲ. ಆದರೆ ವಿಭಜಿಸಿ ಆಳುವ ತಂತ್ರವನ್ನು ಕಲಿತು ಅದನ್ನು ಉಪಯೋಗಿಸುವುದರಲ್ಲಿ ತುಂಬಾ ಪಳಗಿದ್ದಾರೆ.

ಈ ಆರ್ಯರ ಆಗಮನಕ್ಕೆ ಅವರು ಕೊಡುವ ಮತ್ತೊಂದು ಸಾಕ್ಷ್ಯವೆಂದರೆ ಮಧ್ಯ ಏಷ್ಯಾದಲ್ಲಿ ಬ್ರಾಹ್ಮಣರಿಗೆ ಸಂಬಂಧಿಸಿದ ವಸ್ತುಗಳು ದೊರಕಿವೆ ಎಂಬುದು. ಆ ವಸ್ತುಗಳನ್ನು ಮಧ್ಯ ಎಷ್ಯಾದವರು ಕದ್ದು ಕೊಂಡು ಅಥವಾ ಕೊಂಡುಕೊಂಡು ಹೋಗಿರಬಹುದು. ಅಥವಾ ಆಗಿನ ಕಾಲದಲ್ಲಿದ್ದ ಲಕ್ಷಾಂತರ ರಾಕ್ಷಸರ ಕಾಟದಿಂದ ಬೇಸತ್ತು ಕೆಲ ಬ್ರಾಹ್ಮಣರು ಮಧ್ಯ ಎಷ್ಯಾಕ್ಕೆ ವಲಸೆ ಹೋಗಿರಬಹುದು. ಅಥವಾ ಯಾರಾದರೂ ಪ್ರಾಚೀನ ಪ್ರವಾಸಿಗರು ಬೇಟಿ ಕೊಟ್ಟಾಗ ನಮ್ಮ ದೇಶದ ರಾಜರು ಅವರಿಗೆ ಆ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಕಳುಹಿಸಿರಬಹುದು.

ಭಾಷೆಯ ಪ್ರಭಾವ ಮತ್ತು ವಸ್ತುಗಳು ದೊರಕಿರುವುದು ಆರ್ಯರ ಅಗಮನವೆಂಬ ಕಲ್ಪನೆಗೆ ಹೇಗೆ ಸಾಕ್ಷಿಯಾಗಬಲ್ಲದೋ ಹಾಗೆಯೇ ಆರ್ಯರು ಭಾರತದಿಂದ ಅಲ್ಲಿಗೆ ವಲಸೆ ಹೋಗಿದ್ದಾರೆ ಎಂಬ ವಿಷಯಕ್ಕೂ ಸಾಕ್ಷಿಯಾಗಬಲ್ಲದು.

ಮಧ್ಯ ಏಷ್ಯಾದಲ್ಲಿ ಬ್ರಾಹ್ಮಣರಿಗೆ ಸಂಬಂದಿಸಿದ ವಸ್ತುಗಳು ದೊರಕಿರಬಹುದು. ಆದರೆ ಅಲ್ಲಿ ಬ್ರಾಹ್ಮಣರೇ ದೊರೆತಿಲ್ಲವಲ್ಲ.

ಇಲ್ಲಿರುವ ಬ್ರಾಹ್ಮಣರನ್ನು ಪೂರ್ತಿಯಾಗಿ ಹೋಲುವ ಮತ್ತು ಇಲ್ಲಿರುವ ಬ್ರಾಹ್ಮಣರು ಆಚರಿಸುವ ಎಲ್ಲಾ ಸಂಪ್ರದಾಯಗಳನ್ನು ಆಚರಿಸುವ ಬ್ರಾಹ್ಮಣರು ಅಲ್ಲಿ ದೊರಕಿಲ್ಲವಲ್ಲ. ಯಾವುದೇ ವಸ್ತುಗಳನ್ನು ಯಾರು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಹಾಗಂತ ಜನರೇ ಅಲ್ಲಿಂದ ಬಂದರು ಎಂದರೆ ಯಾರು ನಂಬಲು ಸಾಧ್ಯ????!!!!!

ಮತ್ತೊಂದು ವಿಷಯವೆಂದರೆ , ಯಾವುದೇ ಜನರ ವಲಸೆಯಿಂದ ಆ ಜನರು ಹೋಗಿ ನೆಲೆಸಿದ ಸ್ಥಳದಲ್ಲಿ ಅವರ ಸಂಸ್ಕೃತಿ ಬೆಳೆದರೂ ಅವರು ಮೊದಲಿದ್ದ ಜಾಗದಲ್ಲಿ ಅದು ಸಂಪೂರ್ಣವಾಗಿ ನಶಿಸುವುದಿಲ್ಲ. ಉದಾಹರಣೆಗೆ ಮುಸಲ್ಮಾನರ ವಲಸೆಯಿಂದ ಭಾರತದಲ್ಲಿ ಮುಸ್ಲಿಂ ಸಂಸ್ಕೃತಿ ಬೆಳೆದಿದೆ. ಆದರೆ ಅವರ ಮೂಲ ಸ್ಥಳವಾದ ಮೆಕ್ಕಾ, ಮದೀನ, ಮತ್ತು ಸೌದಿ ಅರೇಬಿಯಾಗಳಲ್ಲಿ ಮುಸ್ಲಿಂ ಸಂಸ್ಕೃತಿ ನಶಿಸಿಯೇ ಇಲ್ಲವಲ್ಲ. ಅದೇ ರೀತಿಯಲ್ಲಿ ಭಾರತಕ್ಕೆ ಆರ್ಯರು ಬಂದರೆ ಇಲ್ಲಿ ಆರ್ಯರ ಸಂಸ್ಕೃತಿ ಬೆಳೆದಿದೆ. ಆದರೆ ಆ ಸಂಸ್ಕೃತಿ ಮಧ್ಯ ಏಷ್ಯಾದಲ್ಲಿ ಏಕೆ ನಶಿಸಿತು????!!!!! ಈ ಪ್ರಶ್ನೆಗೆ ಇತಿಹಾಸಕಾರರು ಸರಿಯಾದ ಕಾರಣವನ್ನು ಕೊಡುವುದರಲ್ಲಿ ವಿಫಲರಾಗಿದ್ದಾರೆ.

ಅದು ನಿಜವಾಗಿದ್ದರೆ ಏನಾದರೂ ಕಾರಣಗಳು ಮತ್ತು ಸಾಕ್ಷ್ಯಗಳು ದೊರೆಯಬಹುದು. ಆದರೆ ಸೃಷ್ಟಿ ಮಾಡಲ್ಪಟ್ಟ ಕಲ್ಪನೆಗೆ ಸಾಕ್ಷ್ಯಗಳನ್ನು ಎಲ್ಲಿಂದ ತಂದಾರು??????

ಮೇಲಾಗಿ ಬ್ರಾಹ್ಮಣರ ರಕ್ತ ಮತ್ತು ವಂಶವಾಹಿಗಳಲ್ಲಿರುವ ಭಾರತೀಯತೆಯು ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳೇ ಎಂಬುದನ್ನು ಸಾಬೀತು ಪಡಿಸುತ್ತವೆ. ಕಾಶ್ಮೀರದಲ್ಲಿ ಲಕ್ಷಾಂತರ ಜನ ಬ್ರಾಹ್ಮಣರ ಕಗ್ಗೊಲೆ ನಡೆದಾಗಲೂ, ಅಲ್ಲಿ ಸತ್ತ ಪ್ರತಿಯೊಬ್ಬ ಬ್ರಾಹ್ಮಣರೂ ತಮ್ಮ ಭಾರತಕ್ಕೆ ಇದ್ದ ನಿಷ್ಠೆಯನ್ನು ಬದಲಿಸಲಿಲ್ಲ. ಅಂತಹ ಉಗ್ರವಾದ ಭಾರತ ನಿಷ್ಠೆ ಏನನ್ನು ಸೂಚಿಸುತ್ತದೆ.
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಬ್ರಾಹ್ಮಣರ ಕೊಡುಗೆಯೆಷ್ಟಿದೆ. ಲಕ್ಷಾಂತರ ಬ್ರಾಹ್ಮಣರು ತಮ್ಮ ಪ್ರಾಣ ಕೊಟ್ಟಿದ್ದಾರೆ.

ಭಾರತದ ಮಣ್ಣಿನ ಮಕ್ಕಳಾದ್ದರಿಂದಲೇ ಲಕ್ಷಾಂತರ ವೀರ ಬ್ರಾಹ್ಮಣರು ಬ್ರಿಟಿಷರನ್ನು ಎದುರಿಸಿ ಬಲಿದಾನ ಮಾಡಿದ್ದಾರೆ. ವಲಸೆ ಬಂದವರಿಗೆ ಅಂತಹ ನಿಷ್ಠೆ ಬರುವುದು ಹೇಗೆ ಸಾಧ್ಯ!!!!!

ಆರ್ಯರ ಆಗಮನವೆಂಬ ನಂಬಲಿಕ್ಕೆ ಸಾಧ್ಯವಿಲ್ಲದ ಕಲ್ಪನೆಯೆಂಬುದು ಈಗಿನ ವಿಧ್ಯಾವಂತ ಯುವಜನರಿಗೆ ಅರಿವಾಗಿದೆ.

ಭಾರತದ ಬಹುಸಂಖ್ಯಾತ ಜನರು ಆರ್ಯರ ಆಗಮನವೆಂಬುದು ಒಂದು ಬಾಲಿಶವಾದ ಕಲ್ಪನೆಯೆಂದು ಅರಿತುಕೊಂಡಿದ್ದಾರೆ. ಅದನ್ನು ಈಗ ಯಾರೂ ನಂಬುವುದಿಲ್ಲ.

ಮತ್ತೊಂದು ವಿಷಯವೆಂದರೆ ಬ್ರಾಹ್ಮಣರ ಹೆಸರುಗಳಿಗೂ ಮತ್ತು ಉಳಿದ ಭಾರತೀಯರ ಹೆಸರುಗಳಿಗೂ ಇರುವ ಹೋಲಿಕೆ.
ಒಂದೊಂದು ದೇಶದ ಜನರ ಹೆಸರುಗಳು ಒಂದೊಂರು ರೀತಿಯಲ್ಲಿ ಇರುತ್ತವೆ. ರಾಷ್ಯಾದವರ ಹೆಸರುಗಳು ನಿಕೊಲೋವಿಚ್ , ಚೆಕೊವ್ ಈ ರೀತಿ ಇದ್ದರೆ ಚೀನಾದವರ ಹೆಸರುಗಳು ವಾಂಗ್ ಲೀ, ಬ್ರೂಸ್ ಲೀ ಎಂದು ಇರುತ್ತವೆ. ಇಂಗ್ಲೆಂಡ್ನವರ ಹೆಸರುಗಳು ಜಾನ್, ಅಲೆಗ್ಸಾಂಡರ್ ತರ ಇದ್ದರೆ ಆಫ್ರಿಕಾದವರ ಹೆಸರುಗಳು ಅಚಿಬೆ, ವಾಲ್ಕಾಟ್ ಎಂಬಂತೆ ಇರುತ್ತವೆ. ಅರಬ್ ಜನರ ಹೆಸರುಗಳು ಇಸ್ಮಾಯಿಲ್ , ಗಜನಿ , ಕುತುಬ್ಬುದೀನ್ ಎಂದು ಇರುತ್ತವೆ. ಆದರೆ ಬ್ರಾಹ್ಮಣರ ಹೆಸರುಗಳು ಉಳಿದ ಭಾರತೀಯರ ಹೆಸರುಗಳಂತೆ ಇವೆಯೇ ಹೊರತು ಜಗತ್ತಿನ ಬೇರೆ ಯಾವ ದೇಶದ ಜನರ ಹೆಸರುಗಳಂತೆಯೂ ಇಲ್ಲ.

ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಬ್ರಾಹ್ಮಣರ ಅತೀ ಪ್ರಾಚಿನ ಗ್ರಂಥಗಳಲ್ಲಿಯೂ ಕೂಡಾ ಅವುಗಳಲ್ಲಿನ ಕತೆಗಳಲ್ಲಿ ವಿವರಿಸುವ ಪರಿಸರ, ಪ್ರಾಣಿ-ಪಕ್ಷಿಗಳು, ಆಹಾರ ಧಾನ್ಯಗಳು ಮುಂತಾದುವುಗಳು ಭಾರತಕ್ಕೆ ಸರಿಹೊಂದುತ್ತವೆಯೇ ಹೊರತು ಮಧ್ಯ ಎಷ್ಯಾಕ್ಕೆ ಹೊಂದುವುದಿಲ್ಲ. ಉದಾಹರಣೆಗೆ ಬ್ರಾಹ್ಮಣರಿಗೆ ಸಂಬಂಧಿಸಿದ ಕತೆಗಳಲ್ಲಿ ಎಲ್ಲಿಯೂ , “ ಆ ಬಡ ಬ್ರಾಹ್ಮಣನು ತನ್ನ ಒಂಟೆಯನ್ನು ಪಾಪಾಸ್ ಕಳ್ಳಿ ಗಿಡಕ್ಕೆ ಕಟ್ಟಿ ಹಾಕಿ ಅಲ್ಲಿಯೇ ಕುಳಿತು ಖರ್ಜೂರದ ಹಣ್ಣುಗಳನ್ನು ತಿನ್ನತೊಡಗಿದನು,” ಈ ರೀತಿಯಲ್ಲಿ ವರ್ಣನೆ ಇರುವುದಿಲ್ಲ. ಸುತ್ತಲಿನ ಪರಿಸರ, ಪ್ರಾಣಿಗಳು ಮತ್ತು ಆಹಾರ ಭಾರತದ್ದೇ ಇರುತ್ತದೆ.

ಅದ್ದರಿಂದ ಆರ್ಯರು ಭಾರತೀಯರೇ. ಆದರೆ ಆರ್ಯರು ಭಾರತದ ಉಳಿದ ಜನಾಂಗಗಳ ಬುಡಕಟ್ಟಿಗೆ ಸೇರುವುದಿಲ್ಲ. ಆರ್ಯರು ಉತ್ತರ ಭಾರತದಲ್ಲಿಯೇ ಜನ್ಮತಾಳಿ ಅಲ್ಲಿಯೇ ವಿಕಾಸವಾದರು. ದ್ರಾವಿಡರು ವಿಂಧ್ಯ ಪರ್ವತಗಳನ್ನು ದಾಟಿ ಉತ್ತರಕ್ಕೆ ಹೋಗಿ ಅಲ್ಲಿದ್ದ ಆರ್ಯರನ್ನು ನೋಡಿರಲೇ ಇಲ್ಲ. ಶ್ರೀ ರಾಮ , ರಾವಣ ಮುಂತಾದವರು ಹೋದ ಮೇಲೆಯೇ ಅವರಿಗೆ ಉತ್ತರದಲ್ಲಿಯೂ ಜನರಿದ್ದಾರೆ ಎಂದು ಅರಿವಾಗಿದ್ದು.

ಈಗ ನಾನು ಇಲ್ಲಿ ತಿಳಿಸಿರುವ ವಿಷಯಗಳಲ್ಲದೇ ಇನ್ನೂ ಹಲವಾರು ಅಂಶಗಳು ಬ್ರಾಹ್ಮಣರು ನಿಜವಾದ ಭಾರತೀಯರೇ ಎಂಬುದನ್ನು ದೃಡಪಡಿಸಲು ದೊರೆಯುತ್ತವೆ. ತಮಗೆ ಹೊಳೆದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಅದಕ್ಕಿಂತಲೂ ಮುಖ್ಯವಾಗಿ ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳಾಗಿದ್ದು ಅವರಿಗೆ ಇಲ್ಲಿನ ಎಲ್ಲವನ್ನೂ ಪಡೆಯಲು ಹಕ್ಕಿದೆ ಎಂಬುದನ್ನು ಅರಿತುಕೊಳ್ಳಿ.