Friday, April 18, 2025

ನೀವು ಉಪಾಕರ್ಮದಂದು ಏನೆಲ್ಲಾ ಆಚರಣೆಗಳನ್ನು ಮಾಡುತ್ತೀರಿ?


ಹಿಂದೂ ಧರ್ಮದಲ್ಲಿ ತುಂಬಾ ಸಮುದಾಯಗಳಲ್ಲಿ, ಮುಖ್ಯವಾಗಿ ಬ್ರಾಹ್ಮಣರಲ್ಲಿ ಜನಿವಾರವನ್ನು ಧರಿಸುವ ಪದ್ಧತಿಯಿದೆ. ಸಂಸ್ಕೃತದಲ್ಲಿ ಇದನ್ನು ಉಪವೀತ ಎಂದು ಹೇಳುತ್ತಾರೆ.

ಸಂಸ್ಕೃತದ ಉಪವೀತವನ್ನು ಕನ್ನಡದಲ್ಲಿ ಜನಿವಾರ, ತೆಲುಗಿನಲ್ಲಿ ಜಂಧ್ಯಾಲ, ತಮಿಳಿನಲ್ಲಿ ಪೂನಲ್, ಹಿಂದಿ/ಮರಾಠಿಯಲ್ಲಿ ಜನೇಊ ಎಂದು ಹೇಳುತ್ತಾರೆ.

ಪ್ರತಿ ವರ್ಷ ಈ ಜನಿವಾರವನ್ನು ಬದಲಾಯಿಸಲಾಗುತ್ತದೆ, ಇದೇ ಉಪಾಕರ್ಮ ಹಬ್ಬ.

ಕನ್ನಡದಲ್ಲಿ ಇದನ್ನು ಉಪಾಕರ್ಮ, ಜನಿವಾರದ ಹಬ್ಬ ಅಥವಾ ನೂಲು ಹುಣ್ಣಿಮೆ ಎಂದು ಕರೆಯುತ್ತಾರೆ, ತೆಲುಗಿನಲ್ಲಿ ಜಂಧ್ಯಾಲ ಪೌರ್ಣಮಿ, ತಮಿಳ್ನಾಲ್ಲಿ ಆವನಿ ಆವಿಟ್ಟಮ್ ಎಂದು ಹೇಳುತ್ತಾರೆ.

ಈ ಹಬ್ಬವನ್ನು ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ.

ಗಂಡಸರು ಮಾತ್ರ ಮಾಡುವ ಹಬ್ಬವಿದು.

ಈ ಹಬ್ಬವನ್ನು ಎರಡು ದಿನಗಳಂದು ಮಾಡುತ್ತಾರೆ, ಒಂದು ದಿನ ಋಗ್ ಉಪಾಕರ್ಮ ಮತ್ತೊಂದು ದಿನ ಯಜುರ್ ಉಪಾಕರ್ಮ. ಋಗ್ ವೇದವನ್ನು ಪಾಲಿಸುವವರು ಋಗ್ ಉಪಕರ್ಮವನ್ನು, ಯಜುರ್ ವೇದವನ್ನು ಪಾಲಿಸುವವರು ಯಜುರ್ ಉಪಾಕರ್ಮವನ್ನು ಆಚರಿಸುತ್ತಾರೆ.

ಋಗ್ ಉಪಾಕರ್ಮವನ್ನು ಶ್ರಾವಣ ಮಾಸದ ಶ್ರವಣ ನಕ್ಷತ್ರ ಇದ್ದ ದಿನದಂದು ಮಾಡುತ್ತಾರೆ, ಯಜುರ್ ಉಪಾಕರ್ಮವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಮಾಡುತ್ತಾರೆ.

ಇದನ್ನು ಎರಡು ರೀತಿಯಲ್ಲಿ ಮಾಡಬಹುದು.

ಒಂದು, ಮನೆಯಲ್ಲೇ ಪುಸ್ತಕವನ್ನು ನೋಡಿ ಮಾಡುವುದು, ಇದೊಂದು ರೀತಿ ಶಾರ್ಟ್ ಕಟ್.

ಎರಡನೆಯದು, ದೇವಸ್ಥಾನಕ್ಕೆ ಹೋಗಿ ಶಾಸ್ತ್ರ ಬದ್ಧವಾಗಿ ಮಾಡುವುದು.

ಮನೆಯಲ್ಲಿ ಮಾಡುವ ರೀತಿ:

  • ಮೊದಲು ಸಂಧ್ಯಾವಂದನೆಯನ್ನು ಮಾಡಬೇಕು.
  • ನಂತರ ಗಣಪತಿ ಪೂಜೆಯನ್ನು ಮಾಡಬೇಕು.
  • ಹೊಸ ಜನಿವಾರಕ್ಕೆ ಅಭಿಷೇಕ ಮಾಡಿ, ಅರಿಶಿನ ಕುಂಕುಮದಿಂದ ಪೂಜೆ ಮಾಡಬೇಕು.
  • ನೂತನ ಯಜನೋಪವೀತ ಧಾರಣ ಮಂತ್ರವನ್ನು ಹೇಳಿಕೊಂಡು ಹೊಸ ಜನಿವಾರವನ್ನು ಹಾಕಿಕೊಳ್ಳಬೇಕು. ಮದುವೆಯಾದವರು ಎರಡು ಜನಿವಾರಗಳನ್ನು ಹಾಕಿಕೊಳ್ಳಬೇಕು.
  • ಹಳೆ ಜನಿವಾರವನ್ನು ಭುಜದಿಂದ ಕೆಳಗೆ ಜಾರಿಸಿ, ಸೊಂಟದಿಂದ ಕೆಳಗಿಳಿಸಿ ಕಾಲುಗಳಿಗೆ ತಾಗದ ಹಾಗೆ ತೆಗೆಯಬೇಕು. ಮೇಲಿಂದ ತೆಗೆಯಬಾರದು.

ಅಮೇರಿಕಾದಲ್ಲಿ ೨೦೨೧ ರಲ್ಲಿ ನಡೆದ ಉಪಾಕರ್ಮ

ಚಿತ್ರಗಳ ಮೂಲ - ಟ್ವಿಟ್ಟರ್