Showing posts with label fever. Show all posts
Showing posts with label fever. Show all posts

Wednesday, May 28, 2025

ಟೊಮೇಟೊ ಜ್ವರ..

 ಭೀತಿ ಬೇಡ ಆದರೆ ಕಾಳಜಿ --__ಮುನ್ನೆಚ್ಚರಿಕೆ --ಅರಿವು ಅಗತ್ಯ.


ಇಲ್ಲಿವೆ ಟೊಮೇಟೊ ಜ್ವರದ ಕುರಿತಾದ ಕೆಲವು ಮಾಹಿತಿಗಳು.

ಈ ಜ್ವರದಲ್ಲಿ ಟೊಮೇಟೊದಂತಹ ಕೆಂಪು ಬಣ್ಣದ ಗುಳ್ಳೆಗಳು ಉಂಟಾಗುವುದರಿಂದ ಇದಕ್ಕೆ ಟೊಮೇಟೊ ಜ್ವರ ಎನ್ನಲಾಗುತ್ತಿದೆ.

ಜ್ವರ ಮೊದಲು ಕಂಡಿದ್ದು ಕೇರಳದಲ್ಲಿ.

ಶಿಜೆಲ್ಲ ಬ್ಯಾಕ್ಟೀರಿಯಾ ಸೋಂಕಿನ ಜೊತೆಗೆ ಈ ಜ್ವರದ ಲಕ್ಷಣ ಕಂಡು ಬಂತು.


ಗುಳ್ಳೆಗಳು,ತೀವ್ರ ಜ್ವರ,ಮೈ ಕೈ ನೋವು,ಜಲೀಯ ಅಂಶದ ಕೊರತಯಿರುವುದರಿಂದ ಮುಖ್ಯವಾಗಿ ಜ್ವರದ ಮದ್ದು ನೀಡಿ,dehydration ಆಗದಂತೆ ನೋಡಬೇಕು.

ಮಗುವಿಗೆ ವಿಶ್ರಾಂತಿ ಸೂಕ್ತ ಆಹಾರ ಮುಖ್ಯ.

ಇನ್ನೊಂದು ಕಾರಣ ಈ ರೋಗ ಹರಡಲು ಎಂದರೆ…

Fomites..ಎಂದರೆ ರೋಗಿಯು ಮುಟ್ಟಿದ ಉಪಯೋಗಿಸಿದ ವಸ್ತು ಗಳು ರೋಗಕಾರಕ ಹೇತುವಾಗಿ ಬೇರೆಯವರಿಗೆ ರೋಗ ಹರಡುವಂತೆ ಮಾಡುತ್ತವೆ.

ಉದಾ..ರೋಗಿಯ ತಟ್ಟೆ, ಬಟ್ಟಲು ಲೋಟ ,ದಿಂಬು ,ಕುರ್ಚಿ ಮುಂತಾದವು.

ಆದರಿಂದ ರೋಗಿಯನ್ನು isolate ಮಾಡಿ ಬೇರ್ಪಡಿಸಿದರೆ ಉತ್ತಮ.

ಹೀಗೆ ಕಾಳಜಿ ತೆಗೆದುಕೊಂಡರೆ ಅದು

ಪ್ರತಿಬಂಧಕವಾಗಿ ಉಪಯುಕ್ತ.

ಚಿತ್ರ ಕೃಪೆ ಅಂತರ್ಜಾಲ

Monday, February 10, 2025

ಡೆಂಗೀ ಜ್ವರ ಹೇಗೆ ಹರಡುತ್ತದೆ ಮತ್ತು ಇದಕ್ಕೆ ಲಭ್ಯವಿರುವ ಚಿಕಿತ್ಸೆಗಳು ಯಾವುವು?

 ಮೊದಲನೇದಾಗಿ ಡೆಂಗೀ ಜ್ವರ ಹೇಗೆ ಬರುತ್ತೆ ಅನ್ನೋದನ್ನ ನೋಡೋಣ!

ಡೆಂಗೀ ಜ್ವರ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್‌ಗೂ ‘ಡೆಂಗೀ ವೈರಸ್’‌ ಅಂತನೇ ಹೆಸರು. ಡೆಂಗೀ ವೈರಸ್ ಒಂದು ಆರ್. ಎನ್.ಎ (RNA) ವೈರಸ್; ಅದರಲ್ಲಿ 5 ವಿಧಗಳಿವೆ.

ಈಗ, ಪ್ರಶ್ನೆಗಳಿಗೆ ಉತ್ತರ!

I. ಪ್ರಶ್ನೆಯ ಮೊದಲ ಭಾಗ:

  • ‘ಡೆಂಗೀ ಜ್ವರ ಹೇಗೆ ಹರಡುತ್ತದೆ?’

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೊಳ್ಳೆ ಕಡಿತದಿಂದ ಡೆಂಗೀ ಜ್ವರ ಹರಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ‘ಈಡಿಸ್‌’ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ.

ಈಗ ಈಡಿಸ್ ಸೊಳ್ಳೆಯ ಬಗ್ಗೆ…

1.ಹೇಗೆ ಕಾಣುತ್ತೆ?

ಅದರ ದೇಹದ ಮೇಲೆ ಬಿಳಿ ಮತ್ತು ಕಪ್ಪು ಬಣ್ಣಗಳು ಇರುವುದರಿಂದ ವಿಶಿಷ್ಟವಾಗಿದೆ

2. ಎಲ್ಲಿ ಇರುತ್ತೆ/ ಬೆಳೆಯುತ್ತೆ?

ತೆರೆದಿರುವ ಪಾತ್ರೆಗಳು, ಟೈರುಗಳು, ತೆಂಗಿನ ಚಿಪ್ಪುಗಳು, ಒಳಾಂಗಣ ಸಸ್ಯಗಳಂತಹ ಕೃತಕ ನೀರು ಸಂಗ್ರಹ ತಾಣಗಳಲ್ಲಿ

3. ಯಾವಾಗ ಕಚ್ಚುತ್ತೆ?

ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿಯೇ ಇವು ಕಚ್ಚುತ್ತವೆ. ಇದನ್ನು ಇಂಗ್ಲಿಷ್‌ನಲ್ಲಿ ‘Day Time biter’ ಎಂದು ಕರೆಯುತ್ತೇವೆ.

II. ಪ್ರಶ್ನೆಯ ಎರಡನೆ ಭಾಗ

  • ಇದಕ್ಕೆ (ಡೆಂಗೀ ಜ್ವರಕ್ಕೆ) ಲಭ್ಯವಿರುವ ಚಿಕಿತ್ಸೆಗಳು ಯಾವುವು?
    • ಇತರ ಅನೇಕ ವೈರಸ್ ರೋಗಗಳಂತೆ, ಡೆಂಗೀ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ
    • ಡೆಂಗೀ ರೋಗಿಗಳು ಸಾಕಷ್ಟು ದ್ರವವನ್ನು ಕಳೆದುಕೊಳ್ಳುವುದರಿಂದ (fluid loss), ಉತ್ತಮ ಪುನರ್ಜಲೀಕರಣವು (rehydration) ಚಿಕಿತ್ಸೆಯ ಪ್ರಮುಖ ಗುರಿ. ಮೌಖಿಕ ಮತ್ತು ಅಭಿದಮನಿಕ (Oral and intravenous) ದ್ರವ ಕೊಡುವುದ ಮೂಲಕ ಇದನ್ನು ಸಾಧಿಸಬಹುದು. ಇದನ್ನೇ ‘ಡ್ರಿಪ್ಸ್ ಹತ್ತಿಸಲು’ ಎಂದು ಕರೆಯುತ್ತಾರೆ!
    • ಲಭ್ಯವಿರುವ ಇತರ ರೋಗಲಕ್ಷಣಗಳಿಗೆ ತಕ್ಕ ಚಿಕಿತ್ಸೆಗಳು:
      • ಜ್ವರವನ್ನು ಕಡಿಮೆ ಮಾಡಲು ಪ್ಯಾರಸಿಟಮಾಲ್
    • ನೋವು ಕಡಿಮೆ ಮಾಡಲು - ಆಸ್ಪಿರಿನ್ ಹೊರತುಪಡಿಸಿ, ಇತರ ನೋವು ನಿವಾರಕಗಳು (NSAIDs)
    • ಪ್ಲೇಟ್‌ಲೆಟ್‌ಗಳನ್ನು ತುಂಬಲು ರಕ್ತ ವರ್ಗಾವಣೆ (ತೀವ್ರತರವಾದ ಪ್ರಕರಣಗಳಲ್ಲಿ ಮಾತ್ರ)
    • ಇತ್ತೀಚೆಗೆ ಡೆಂಗೀಗೆ ‘ಸಿವೈಡಿ-ಟಿಡಿವಿ’ (CYD-TDV) ಎಂಬ ಲಸಿಕೆ (vaccine) ಪರಿಚಯಿಸಲಾಯಿತು. ಇದು ಮೆಕ್ಸಿಕೊ, ಇಂದೋನೇಷಯ, ಪೆರು ಮುಂತಾದ 11 ದೇಶಗಳಲ್ಲಿ ಲಭ್ಯವಿದೆ; ಆದರೆ ಭಾರತಕ್ಕೆ ಇನ್ನೂ ಬಂದಿಲ್ಲಾ!

Monday, November 11, 2024

ಶೀತ , ಜ್ವರ ಮತ್ತು ಕೆಮ್ಮು



*1. ಪುದೀನ ಮತ್ತು ಶುಂಠಿಯ ಸಾರವು ಯಾವುದೇ ರೀತಿಯ ಜ್ವರದಲ್ಲಿ ಉಪಯುಕ್ತವಾಗಿದೆ. ನಾವು ಅದರಲ್ಲಿ ಮೆಂತ್ಯ ಮತ್ತು ಜೇನುತುಪ್ಪವನ್ನು ಸಹ ತೆಗೆದುಕೊಳ್ಳಬಹುದು.*


*2. ತುಳಸಿ ಎಲೆಗಳ ಕಷಾಯವನ್ನು ಏಲಕ್ಕಿ ಪುಡಿ ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.*

*3. ನೆಗಡಿಯೊಂದಿಗೆ ಜ್ವರವಿದ್ದರೆ ಅರ್ಧ ಚಮಚ ಓಂ ಕಾಳನ್ನು ಸೇವಿಸಿದರೆ ಚಳಿಯ ತೀವ್ರತೆ ಕಡಿಮೆಯಾಗುತ್ತದೆ ಮತ್ತು ಬೆವರಿನಿಂದ ಜ್ವರ ಕಡಿಮೆಯಾಗುತ್ತದೆ.*

*4. ಶೀತ, ಜ್ವರ, ನೆಗಡಿ ಮತ್ತು ದೇಹದ ನೋವು ಇದ್ದರೆ, ದಾಲ್ಚಿನ್ನಿ ಕಡ್ಡಿ,ಶುಂಠಿ, ಲವಂಗ, ನಿಂಬೆಹುಲ್ಲು ಚಹಾವನ್ನು ದಿನಕ್ಕೆರಡು ಬಾರಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.*

*5. ಬೇಲ್ಫಲದ ಪುಡಿಯನ್ನು ನೀರಿನಲ್ಲಿ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.*

*6. ಒಣದ್ರಾಕ್ಷಿ ತಿನ್ನುವುದು ಜ್ವರದಲ್ಲಿ ಉಪಯುಕ್ತವಾಗಿದೆ. ನೀರಿನಲ್ಲಿ ನೆನೆಸಿದ 20 ರಿಂದ 25 ಒಣದ್ರಾಕ್ಷಿ ಸೇರಿಸಿ. ಅದನ್ನು ಪುಡಿಮಾಡಿ ಮತ್ತು ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಿ.*

*7. ಸೇಬು, ಖಿಚಡಿ, ಟೊಮೆಟೊ ಸೂಪ್, ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ನುಗ್ಗೆ, ಕರಿಬೇವು ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.*

*8. ಒಂದು ಕಪ್ ಕುದಿಯುವ ನೀರಿಗೆ ಸ್ವಲ್ಪ ತಾಜಾ ತುಳಸಿ ಎಲೆಗಳನ್ನು ಸೇರಿಸಿ. ಈ ಮಿಶ್ರಣವನ್ನು 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ಇದನ್ನು ಸೋಸಿಕೊಂಡು ದಿನಕ್ಕೆರಡು ಬಾರಿ ಕುಡಿಯಿರಿ. ಈ ಸಾರವು ಮಲೇರಿಯಾ, ಡೆಂಗ್ಯೂ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಜ್ವರವನ್ನು ಕಡಿಮೆ ಮಾಡುತ್ತದೆ.*

*9. ಜ್ವರದಲ್ಲಿ ಸಾಕಷ್ಟು ನೀರು ಕುಡಿಯುವುದು ಪ್ರಯೋಜನಕಾರಿ. ಇದರೊಂದಿಗೆ ಕಿತ್ತಳೆ ಮತ್ತು ಮೋಸಂಬಿ ರಸವನ್ನು ಸೇವಿಸುವುದರಿಂದ ಜ್ವರದಲ್ಲಿಯೂ ಪರಿಹಾರ ದೊರೆಯುತ್ತದೆ.*