Wednesday, October 30, 2024

CONFUSING_DAYS

 1. National Youth Day - January 12


2. International Youth Day - August 12

3. National Teachers' Day - September 5

4. International Teachers' Day - October 5

5. National Tourism Day - January 25

6. International Tourism Day - September 27

7. National Children's Day - November 14

8. International Children's Day - June 1

9. National Consumer Day - December 24

10. International Consumer Day - March 15

11. National Postal Day - October 10

12. International Postal Day - October 9

13. National Blood Donation Day - October 1

14. World Blood Donors Day - JUNE 14

Monday, October 28, 2024

ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು

 🖌ಲೋಹ ಯುಗದ ನೆಲೆಗಳು🖌

🛢ಮಹಾರಾಷ್ಟ್ರದ - ಜಾರ್ವೆ

🛢ಕರ್ನಾಟಕದ - ಬ್ರಹ್ಮಗಿರಿ

🛢ಹಾವೇರಿಯ - ಹೂಳ್ಳೂರು

🛢ಕೋಲಾರದ - ಬನಹಳ್ಳಿ

🛢ಬಿಜಾಪುರದ - ತೇರ್ದಾಳ

🛢ಸಮಾಜದಲ್ಲಿ ಆಳುವವರು ಹಾಗೂ ಕೆಳವರ್ಗದವರು ಎಂಬ ಸ್ಥರೀಕರಣ ಆರಂಭವಾದದ್ದು - ಲೋಹಯುಗದಲ್ಲಿ

🛢ನಾಗರೀಕತೆಗಳು ಬೆಳೆದಿದ್ದು ಈ ಯುಗದಲ್ಲಿ - ಲೋಹ ಯುಗದಲ್ಲಿ

🛢ಭಾರಿ ಸಮಾಧಿಗಳ ನಿರ್ಮಾಣವಾದದು - ಕಬ್ಬಿಣ ಯುಗದಲ್ಲಿ

🖌ಕಬ್ಬಿಣ ಯುಗದ ನೆಲೆಗಳು🖌

🛢ಬೆಳಗಾವಿ ಜಿಲ್ಲೆ - ಕಣ್ಣೂರು

🛢ಗುಲ್ಬರ್ಗಾ ಜಿಲ್ಲೆ - ರಾಜನ ಕೋಳೂರು

🛢ಕೊಡಗಿನ - ದೊಡ್ಡ ಮೊಳತೆ

🛢ಹಾವೇರಿ ಜಿಲ್ಲೆಯ ಹಳ್ಳೂರು

🛢ಕೋಲಾರ ಜಿಲ್ಲೆಯ - ಬನಹಳ್ಳಿ

🛢ಭಾರತದಲ್ಲಿಯೆ ಪ್ರಾಚೀನ ವಸ್ತುಗಳು ದೊರೆತ ಸ್ಥಳ - ಹಾವೇರಿ ಜಿಲ್ಲೆಯ ಹಳ್ಳೂರು ( ಕ್ರಿ.ಪೂ. 600 )

🛢ಕ್ರಿ.ಪೂ. 300 ರಷ್ಟು ಹಳೆಯದಾದ ಕಬ್ಬಿಣ ಕುಲುಮೆ ದೊರೆತಿರುವ ಪ್ರದೇಶ - ಕೋಲಾರ ಜಿಲ್ಲೆಯ ಬನಹಳ್ಳಿ

🛢ಬೃಹತ್ ಶಿಲಾ ಸಂಸ್ಕೃತಿಯನ್ನು ಕರೆಯುವರು - Megalithic Calture

🛢ಪ್ರಾಗೈತಿಹಾಸ ಕಾಲದ ಕೊನೆಯ ಘಟ್ಟ - ಕಬ್ಬಿಣ ಯುಗ

🖌ಕರ್ನಾಟಕದ ನೆಲೆಗಳು🖌

🛢ಹಾವೇರಿ ಜಿಲ್ಲೆಯ - ಹಳ್ಳೂರು

🛢ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು

🛢ಮೈಸೂರು ಜಿಲ್ಲೆಯ -ಟಿ.ನರಸಿಪುರ

🛢ಗುಲ್ಬರ್ಗಾ ಜಿಲ್ಲೆಯ - ಕಡೆಕಲ್

🛢ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ

🛢ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು

🛢ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ

🛢ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ

🛢ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ

🛢ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ

🛢ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ

ಸಾಮಾನ್ಯ ಜ್ಞಾನ

 🌸ಭೂಮಿಯ ಆಳದಲ್ಲಿ ಉಷ್ಣಾಂಶದ ಹೆಚ್ಚಳದ ಪ್ರಮಾಣ

ಉತ್ತರ:- 25 ಡಿಗ್ರಿ ಸೆಲ್ಸಿಯಸ್/ಕಿ.ಮೀ

🌸ಡೊಲೊಮೈಟ್ ಎನ್ನುವುದು

ಉತ್ತರ:- ಜಲಜ ಶಿಲೆ (ಪದರು ಶಿಲೆ)

🌸ಪ್ಲಾನಿಮೀಟರ್ ಉಪಕರಣವನ್ನು ಏನನ್ನು ಅಳೆಯಲು ಬಳಸುವರೆಂದರೆ

ಉತ್ತರ- ನಕ್ಷೆಯ ಮೇಲಿನ ಒಂದು ಪ್ರದೇಶದ ವಿಸ್ತೀರ್ಣ

🌸ಋತ್ವಂತರ ವಲಸೆ ಯಾವುದರೊಡನೆ ಸಂಬಂಧಿಸಿದೆಯೆಂದರೆ

ಉತ್ತರ:- ವ್ಯವಸಾಯ

🌸ಜನಸಂಖ್ಯೆಯ ವಯೋ ಮತ್ತು ಲಿಂಗ ರಚನೆಯನ್ನು ಯಾವುದರಿಂದ ಸೂಕ್ತವಾಗಿ ಪ್ರತಿನಿಧಿಸಬಹುದೆಂದರೆ

ಉತ್ತರ:- ಕ್ಲೋರೋಪ್ಲೆತ್

🌸ನುಂಗುಬಿಲಗಳು ಯಾವ ಪ್ರದೇಶದಲ್ಲಿ ಕಂಡು ಬರುತ್ತವೆ?

ಉತ್ತರ:- ಸುಣ್ಣಕಲ್ಲು

🌸ಅಗ್ನಿಶಿಲೆಗಳು ಯಾವುದರ ತಂಪಾಗುವಿಕೆ ಹಾಗೂ ಘನೀಭವಿಸುವಿಕೆಯಿಂದ ನಿರ್ಮಿತವಾಗುತ್ತವೆಯೆಂದರೆ

ಉತ್ತರ:- ಮ್ಯಾಗ್ಮ

🌸'ಎಲ್‌ನಿನೋ' ಅದ್ಭುತ (Phenomenon) ಈ ಕೆಳಗಿನ ಯಾವ ಸಾಗರ ಪ್ರವಾಹದೊಂದಿಗೆ ಸಂಬಂಧಿಸಿದೆಯೆಂದರೆ

ಉತ್ತರ:- ಉಷ್ಣ ಸಾಗರ ಪ್ರವಾಹ

🌸ಹಾರ್ಟ್ ಲ್ಯಾಂಡ್ ಸಿದ್ಧಾಂತವನ್ನು ಪ್ರಸಿದ್ದಿ ಪಡಿಸಿದವರು

ಉತ್ತರ:- ಮೆಕಿಂದರ್ (Halford Mackinder)

General Knowledge

👉 ಕರ್ನಾಟಕ ಪ್ರಥಮ ಭೂಗರ್ಭ ವಿದ್ಯುದಾಗ - ವಾರಾಹಿ

👉 ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶರು - ಮಂಜುಳಾ ಚಿಲ್ಲೂರು

👉 ಹರಿಹರ ರಚಿಸಿದ ಚಂಪೂಕಾವ್ಯ - ಗಿರಿಜಾ ಕಲ್ಯಾಣ

👉 ಲಾಕ್ಷಣಿಕರಿಂದ "ಕರ್ನಾಟಕ ವಿಷಯ ಜಾತಿ" ಎಂದು ಕರೆಯಲಾಗುವ ದೇಸಿ ಛಂದೋಪ್ರಕಾರ
- ಷಟ್ಪದಿ

👉 ಏಷ್ಯಾದಲ್ಲೇ ಮೊದಲು ಜಲವಿದ್ಯುತ್ ತಯಾರಿಸಿದ ಕರ್ನಾಟಕದ ಸ್ಥಳ - ಶಿವನ ಸಮುದ್ರ

👉 ಕರ್ನಾಟಕದಲ್ಲಿ ಪ್ರಥಮ ಬ್ಯಾಂಕ್ ಆರಂಭವಾದ ಸ್ಥಳ - ಚಿತ್ರದುರ್ಗ ( 1868)

👉 ಕರ್ನಾಟಕದಲ್ಲಿ ಮೊದಲ ಮುದ್ರಣ ಯಂತ್ರ ಸ್ಥಾಪನೆಯಾದ ಸ್ಥಳ - ಬೆಂಗಳೂರು

👉 ಕರ್ನಾಟಕ ಸಂಗೀತ ಪಿತಾಮಹನೆಂದು ಹೆಸರು ಪಡೆದ ವ್ಯಕ್ತಿ - ಪುರಂದರದಾಸರು

👉 ಶ್ರೀಧರಚಾರ್ಯನು ರಚಿಸಿದ ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ

👉 "ಕರ್ಣರಸಾಯನ" ಎಂಬ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದ ಕವಿ - ಷಡಕ್ಷರಿ

👉 ಭಾರತದಲ್ಲಿ ಸ್ವಾತಂತ್ರ ನಂತರ ಆಯೋಜನೆ ಮಾಡಿದ ಮೊದಲ ದೊಡ್ಡ ಟೂರ್ನಿ
- ಏಷ್ಯನ್ ಗೇಮ್ಸ್ ( 1951)- ನವದೆಹಲಿ

👉 'ಶಿವತತ್ವ ಚಿಂತಾಮಣಿ' ಕೃತಿಯನ್ನು ರಚಿಸಿದ ಪ್ರೌಢದೇವರಾಯನ ಆಶ್ರಯದಲ್ಲಿದ್ದ ಕವಿ ಹಾಗೂ ದಂಡನಾಯಕ - ಲಕ್ಕಣ ದಂಡೇಶ

👉 ಕನ್ನಡದ ಮೊದಲ ಕಾದಂಬರಿ 'ಗುಲ್ವಾಡಿ ವೆಂಕಟರಾಯ' ಬರೆದ - "ಇಂದಿರಾ"

👉 "ಮೀನಮಾಟ" ರೋಗ ಬರುವುದು - ಜಲಮಾಲಿನ್ಯದಿಂದ

👉 ಪರಿಸರ ಎಂಬುದರ ಗ್ರೀಕ್ ಪದದ ಅರ್ಥ - ಮನೆಯ ಅಧ್ಯಯನ

👉 ಶಿಂಪ್ಲಿಪಾಲ ವ್ಯಾಘ್ರ ಯೋಜನೆ ಇರುವ ರಾಜ್ಯ - ಒರಿಸ್ಸಾ

👉 ಕರ್ನಾಟಕದ ಮೊದಲ ಪ್ರಮುಖ ಜಲಾಶಯ - ಕೃಷ್ಣರಾಜಸಾಗರ

👉 'ರೋಹಿ' ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ - ಹಿಮಾಚಲ ಪ್ರದೇಶ

👉 ಮಾಳವ ಪ್ರಸ್ಥಭೂಮಿ ಹೆಚ್ಚು ಆವರಿಸಿರುವ ರಾಜ್ಯ - ಮಧ್ಯಪ್ರದೇಶ

👉 1962 ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯಾ ಗೇಮ್ಸ್ ನ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಕೀರ್ತಿಗೆ ಪಿ.ಬಹದ್ದೂರು ಪಾತ್ರರಾಗಿದ್ದಾರೆ.

👉 ಯಾವ ಸರೋವರವನ್ನು "ಶ್ರೀ ಹರಿಕೋಟಾ ದ್ವೀಪ" ಎಂದು ಕರೆಯಲಾಗಿದೆ - ಪುಲಿಕಾಟ್

👉 ಬೇಡಲು ಬಂದಿಹೆನು ಕನ್ನಡದ ದಾಸಯ್ಯ ಎಂಬ ಹಾಡಿನಿಂದ ಪ್ರಸಿದ್ಧರಾದ ಕವಿ - ಶಾಂತಕವಿ

👉 ಕರ್ನಾಟಕದಲ್ಲಿರುವ ಭಾರತದ ಅತ್ಯಂತ ಉದ್ದದ ಸುರಂಗನಾಲೆ - ಬಾಗೂರು ಸುರಂಗನಾಲೆ

👉 'ನರಸಿಂಹನ್' ಅವರನ್ನು ಭಾರತದ "ಗ್ರಾಮೀಣ ಬ್ಯಾಂಕುಗಳ ಪಿತಾಮಹ" ಎನ್ನುವರು

👉 ಬಂಕಿಮ ಚಂದ್ರ ಚಟರ್ಜಿಯವರು ತಮ್ಮ ಕಾದಂಬರಿ 'ಆನಂದಮಠ'ದಲ್ಲಿ "ಸನ್ಯಾಸಿ ದಂಗೆ"ಯನ್ನು ಪ್ರಚಾರ ಪಡಿಸಿದರು

👉 ಸುಂಟರಗಾಳಿಯನ್ನು ಉತ್ತರ ಪ್ರದೇಶದಲ್ಲಿ "ಆಂಧೀಸ್" ಎಂದು ಕರೆಯುತ್ತಾರೆ

👉 'ತಿರುಳ್ಗನ್ನಡ ತಿರುಕ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಉತ್ತಂಗಿ ಚನ್ನಪ್ಪರ ಜನ್ಮಸ್ಥಳ
- ಧಾರವಾಡ

👉 ರಾಜಸ್ಥಾನದ "ಖೇತ್ರಿ" ಯಾವುದಕ್ಕೆ ಪ್ರಾಮುಖ್ಯತೆ ಪಡೆದಿದೆ - ತಾಮ್ರ

👉 ಭಾರತದ ಅತಿ ಮುಖ್ಯ ಕಲ್ಲಿದ್ದಲಿನ ಕೇಂದ್ರ - ರಾಣಿಗಂಜ್

👉 ಭಾರತದಲ್ಲಿ ಅತಿ ಹೆಚ್ಚು ಸ್ವಾಭಾವಿಕ ಅನಿಲವನ್ನು ಉತ್ಪಾದಿಸುವ ಸ್ಥಳ - ಅಂಕಲೇಶ್ವರ

👉 ‌ ಸವನ್ನಾಗಳೆಂದರೆ..? - ಉಷ್ಣವಲಯದ ಹುಲ್ಲುಗಾವಲುಗಳು

👉 ಕನ್ನಡ ಸಾಹಿತ್ಯದಲ್ಲಿ "ನವ್ಯತೆ"ಗೆ ತಳಹದಿ ಹಾಕಿದವರು - ವಿ.ಕೃ.ಗೋಕಾಕ್

👉 ಆರ್ಯಜನಾಂಗ ಸಿದ್ಧಾಂತದ ಆರಂಭವನ್ನು ಫ್ರೆಡರಿಕ್ ಮ್ಯಾಕ್ಸ್ ಮುಲ್ಲರ್ ಕೃತಿಯಲ್ಲಿ ಕಾಣುತ್ತೇವೆ

👉 ಕರ್ನಾಟಕದಲ್ಲಿ "ನೀರ್ ಸಾಬ್" ಎಂದು ಖ್ಯಾತರಾಗಿದ್ದ ವ್ಯಕ್ತಿ - ನಜೀರ್ ಸಾಬ್

👉 ಒಂದು ಧನ ಪೂರ್ಣಾಂಕ ಮತ್ತು ಒಂದು ಋಣ ಪೂರ್ಣಾಂಕಗಳ ಗುಣಲಬ್ದವು - ಋಣ ಪೂರ್ಣಾಂಕವಾಗುತ್ತದೆ

👉 ಸಂಕಲನದ ಅನನ್ಯತಾಂಶ - 0

👉 ಗುಣಾಕಾರದ ಅನನ್ಯತಾಂಶ - 1

Saturday, October 26, 2024

ಭಾಗವತದ_ಮಹಿಮೆ

 ಪೂರ್ವ ದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ.ಅಲ್ಲಿ ವೇದ ಶಾಸ್ತ್ರ ಪಂಡಿತನಾದ ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು.ಬಹಳಷ್ಟು ಸಂಪತ್ತು ಇದ್ದರು ಸಂತಾನ ಇದ್ದಿಲ್ಲ ಅವನಿಗೆ.

ಒಂದು ದಿನ ಅವರಿಗೆ ಅಡವಿಗೆ ಹೋದಾಗ ಅಲ್ಲಿ ಒಬ್ಬ ಯತಿಗಳ ಭೇಟಿ ಆಗುತ್ತದೆ. ಅವರ ಕಾಲಿಗೆ ಬಿದ್ದು ತನ್ನ ಚಿಂತೆಯನ್ನು ಹೇಳಿ ಗೋಳಾಡುತ್ತಾನೆ.ಅವರಿಗೆ ಅವನ ಹಣೆ ಬರಹ ನೋಡಿ ಹೇಳುತ್ತಾರೆ.
ನಿನಗೆ ಸಂತಾನ ಭಾಗ್ಯ ಏಳು ಜನ್ಮಕಳೆದರು ಸಹ ಇಲ್ಲ ಅಂತ..

    ಅವನ ದುಃಖ ನೋಡಲಾಗದೇ ಅವರು ಒಂದು ಹಣ್ಣು ಮಂತ್ರಿಸಿಕೊಟ್ಟು ನಿನ್ನ ಪತ್ನಿಗೆ ಇದನ್ನು ಕೊಡು,ಇದನ್ನು ಸೇವಿಸಲು ನಿಮಗೆ ಒಳ್ಳೆಯ ಪುತ್ರ ಜನನವಾಗುವದು ಅಂತ ಹೇಳುತ್ತಾರೆ.
ಆ ಬ್ರಾಹ್ಮಣ ಅದನ್ನು ತಂದು ತನ್ನ ಪತ್ನಿ ಗೆ ಕೊಟ್ಟು ತಾನು ಬೇರೆ ಕಾರ್ಯ ನಿಮಿತ್ತ ಬೇರೆ ಊರಿಗೆ ಹೋಗುವ. ಅವಾಗ ಅವಳು ಅದರ ಮೇಲೆ ನಂಬಿಕೆ ಇಲ್ಲದೇ ಆ ಹಣ್ಣನ್ನು ತನ್ನ ಮನೆಯಲ್ಲಿ ಇದ್ದ ಹಸುವಿಗೆ ಹಾಕುತ್ತಾಳೆ ಮತ್ತು ತನ್ನ ತಂಗಿ ಗರ್ಭಿಣಿ ಆಗಿದ್ದು ಕಂಡು ಅವಳ ಮಗುವನ್ನು ತನಗೆ ಕೊಡಲು ಒಪ್ಪಂದ ಮಾಡಿಕೊಂಡು ದೂರದ ಊರಿಗೆ ಹೋಗಿದ್ದ ಗಂಡನಿಗೆ ಗರ್ಭಿಣಿ ಎಂದು ಸುಳ್ಳು ಹೇಳುತ್ತಾಳೆ.

    ಕಾಲಕ್ರಮೇಣ ತನ್ನ ತಂಗಿಗೆ ಜನನವಾದ ಗಂಡು ಮಗುವನ್ನು ತನ್ನ ಮಗುವೆಂದು ಹೇಳಿ ಎಲ್ಲಾ ರಿಗು ನಂಬಿಕೆ ಬರುವ ಹಾಗೆ ಮಾಡುತ್ತಾಳೆ.ಮತ್ತು ಆ ಮಗುವಿಗೆ ದುಂದುಕಾರಿ ಅಂತ ಹೆಸರನ್ನು ಇಡುತ್ತಾರೆ.
ಇತ್ತ ಕೊಟ್ಟಿಗೆಯಲ್ಲಿ ಇದ್ದ ಹಸು ಆ ಹಣ್ಣು ತಿಂದು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತದೆ. ಅದರ ಕಿವಿ ಆಕಳ ಹಾಗೇ ಇದ್ದ ಕಾರಣ ಅವನಿಗೆ ಗೋಕರ್ಣ ಅಂತ ನಾಮಕರಣ ಮಾಡುತ್ತಾರೆ.

ಕಾಲ ಕ್ರಮೇಣ ಇಬ್ಬರು ಬೆಳೆದು,ದೊಡ್ಡವರಾಗಿ ದುಂದುಕಾರಿ ದುಷ್ಟ ಪ್ರವೃತ್ತಿ ಉಳ್ಳವನಾಗಿ ಲೋಕ ಕಂಟಕನಾಗುತ್ತಾನೆ. ಗೋಕರ್ಣ ಒಳ್ಳೆಯ ಪಂಡಿತ ನಾಗುತ್ತಾನೆ.ತನ್ನ ಮಗನ ದುಷ್ಟ ಕಾರ್ಯಗಳನ್ನು ನೋಡಿ ಮನಸ್ಸು ಬೇಸರವಾಗಿ ಆ ಬ್ರಾಹ್ಮಣ ವಾನಪ್ರಸ್ಥಶ್ರಾಮ ಹೋಗಿ ಭಾಗವತ ದಶಮ ಸ್ಕಂದ ಪಾರಾಯಣ ಮಾಡುತ್ತಾ ದೇಹತ್ಯಾಗ ಮಾಡಿ ಸದ್ಗತಿ ಪಡೆಯುತ್ತಾನೆ.ಇವನ ದುಷ್ಟ ಕೃತ್ಯಗಳನ್ನು ಕಂಡು ಅವನ ತಾಯಿಯು ಸಹ ಪ್ರಾಣತ್ಯಾಗ ಮಾಡುವಳು. ನಂತರ ಅವನು ೫ ಜನ ವೇಶ್ಯೆ ಯರ ಸಹವಾಸ ಮಾಡಿ ಅವರಿಗೆ ನಿತ್ಯ ಪೋಷಣೆ ಮಾಡಲು ಕಳ್ಳತನ ಮಾಡುತ್ತಾ ಇದ್ದನು.ಇದನ್ನು ಕಂಡ ಅವರು ನಮ್ಮ ಮೇಲೆ ಅಪವಾದ ಬರುತ್ತದೆ ಅಂತ ವಿಚಾರಿಸಿ ಅವನನ್ನು ಕೊಂದು ಅವನ ಬಳಿ ಇದ್ದ ಸಂಪತ್ತು ತೆಗೆದುಕೊಂಡು ಅವನನ್ನು ಒಂದು ಕಡೆ ಹೂತು ಹಾಕುತ್ತಾರೆ.

    ಆ ನಂತರ ಅವನಿಗೆ ಪ್ರೇತ ಜನ್ಮ ಬರುತ್ತದೆ. ಅದರಿಂದ ಬಹಳ ಭಾದಿತನಾಗಿ ತನ್ನ ಮನೆಗೆ ಬಂದು ತನ್ನ ಸಹೋದರ ನಾದ ಗೋಕರ್ಣನ ಮುಂದೆ ಕಾಣಿಸಿಕೊಂಡು ಹಿಂದೆ ಮಾಡಿದ ಪಾಪ ಕೃತ್ಯಗಳಿಂದ ಈ ಜನ್ಮ ಬಂದಿದೆ.ಬಹಳ ಕಷ್ಟ ವಾಗಿದೆ. ನನಗೆ ಇದರಿಂದ ಮುಕ್ತಿ ಕೊಡಿಸು ಎಂದು ಕೇಳಿಕೊಂಡ. ಅದಕ್ಕೆ ಗೋಕರ್ಣ ನಿನ್ನ ಶ್ರಾದ್ಧ ಕರ್ಮಗಳು ಎಲ್ಲಾ ಮಾಡಿದ್ದೇನೆ.ಗಯಾ ಶ್ರಾದ್ಧ ಸಹ ಆಗಿದೆ ಆದರು ನಿಮಗೆ ಈ ಜನುಮ ಹೋಗಿಲ್ಲ ಅಂದರೆ ವಿಚಾರ ಮಾಡಿ ಹೇಳುವೆ ಅಂತ ಹೇಳಿ ಬಲ್ಲವರನ್ನು ಕೇಳಲು ಎಲ್ಲರು ಸೂರ್ಯದೇವನನ್ನು ಕೇಳು ಅಂತ ಹೇಳುತ್ತಾರೆ ,ಆಗ ಸೂರ್ಯದೇವನ ಕುರಿತು ಗೋಕರ್ಣ ಪ್ರಾರ್ಥನೆ ಮಾಡಿ ನನ್ನ ಅಣ್ಣ ನ ಪ್ರೇತ ಜನ್ಮ ನಿವಾರಣೆ ಬಗ್ಗೆ ಹೇಳಬೇಕು ಅಂತ ಕೇಳಿದಾಗ *ಭಾಗವತ ಸಪ್ತಾಹ ಮಾಡಲು ಸೂರ್ಯದೇವನ ಆಜ್ಞೆ ಆಗುತ್ತದೆ

    ಅದರಂತೆ ತನ್ನ ಮನೆಯ ಹತ್ತಿರ ತುಂಗಭದ್ರಾ ತೀರದಲ್ಲಿ ಸಪ್ತಾಹ ಮಾಡುತ್ತಾನೆ. ಎಲ್ಲಾ ಜನರು, ಭಾಗವತ ಕೇಳುವುದಕ್ಕೆ ಬರುತ್ತಾರೆ. ದುಂದುಕಾರಿ ಪ್ರೇತ ಜನ್ಮ ಇದ್ದ ಕಾರಣ ಕೂಡಲು ಆಗದೇ ಗಾಳಿಯ ರೂಪದಲ್ಲಿ ಬಂದು ಅಲ್ಲಿ ಇದ್ದ ಬಿದಿರುನ ಕೋಲಿನಲ್ಲಿ ಕುಳಿತು ನಿತ್ಯ ಭಾಗವತ ಕೇಳುತ್ತಾ ಇತ್ತು.
ಆ ಬಿದಿರಿಗೆ ಏಳು ಗಂಟುಗಳು ಇದ್ದವು. ಒಂದೊಂದು ದಿನ ಭಾಗವತ ಕೇಳಿದಾಗ ಅದರಲ್ಲಿ ಇದ್ದ ಪ್ರತಿ ಗಂಟು ಆ ದಿನ ದೊಡ್ಡ ಶಬ್ದ ಮಾಡಿ ಒಡೆಯುತ್ತಾ ಇತ್ತು. ಏಳನೆಯ ದಿನ ಸಪ್ತಾಹ ಮುಗಿದಾಗ ಏಳನೆಯ ಗಂಟು ಒಡೆದು ತನ್ನ ಪ್ರೇತ ಜನ್ಮವನ್ನು ಕಳೆದುಕೊಂಡು ಸುಂದರವಾದ ದಿವ್ಯ ರೂಪದಿಂದ, ತುಳಸಿ ಮಾಲೆಯನ್ನು ಧರಿಸಿ, ಪೀತಾಂಬರದಾರಿಯಾಗಿ ಆಭರಣಗಳನ್ನು ಧರಿಸಿದ ದುಂದುಕಾರಿ ಹೊರಬಂದುಎಲ್ಲಾ ರಿಗು ನಮಸ್ಕರಿಸಿ 🙏

    ಭಾಗವತ ಶ್ರವಣದಿಂದ ನನ್ನ ಎಲ್ಲಾ ಪಾಪಗಳು, ಪ್ರೇತ ಜನ್ಮ ಹೋಯಿತು ಅಂತ ಹೇಳಿ ಇದರ ಮಹಿಮೆಯನ್ನು ವರ್ಣಿಸುತ್ತಾನೆ ಮತ್ತು ವಿಷ್ಣು ಲೋಕವನ್ನು ಸೇರುತ್ತಾನೆ. ಈ ರೀತಿ ಭಾಗವತ ಶ್ರವಣದಿಂದ ಅಜ್ಞಾನ ದ ಗಂಟು ಒಡೆದು ಹೃದಯದ ಸಂಶಯ ಪರಿಹಾರವಾಗಿ ಸಕಲ ಪಾಪಕರ್ಮಗಳು ಛೇದನ ವಾಗಿ ಹೋಗುತ್ತದೆ ಇದೇ ಭಾಗವತದ ಮಹಿಮೆ.

🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|
ದೋಷಗಳು ಇದ್ದರೆ ತಿದ್ದುಪಡಿ ಮಾಡಿ.
🙏ಅ.ವಿಜಯ ವಿಠ್ಠಲ🙏

Friday, October 25, 2024

HEALTH TIP

 A *toothache*😁 is a pain in and around the teeth and jaws. Tooth decay, an infection, loose or broken fillings, or receding gums can cause it.


1. If your toothache is associated with swelling, holding a cold compress against the outside of your cheek (20 minutes on, then 20 minutes off) may provide some relief. 

2. Dip a cotton ball in clove oil and soak up a few drops. Gently rub the cotton ball over the sore area of your tooth and gums. Clove oil contains eugenol, a natural anaesthetic which is why clove oil helps with in reducing the intensity of toothache;

3. Simply add a couple of teaspoons of salt to a cup of warm water. Once you've swished the mixture around your mouth, spit it out.

4. Chewing a piece of garlic, or placing chopped bits on your tooth also gives relief.

If you have any symptoms of a tooth abscess – like a fever, facial swelling or incessant pain in your tooth, visit the nearest dental clinic and seek for advice

ಗಂಗೆಯು ಜನಿಸಿದ್ದಾದರೂ ಹೇಗೆ?

 ಗಂಗಾ ದೇವಿಯ ಜನನದ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಇದರ ಜೊತೆಗೆ, ಗಂಗೆ ಸ್ವರ್ಗದಿಂದ ಭೂಮಿಗೆ ಬರುವ ರಹಸ್ಯವನ್ನೂ ಹೇಳಲಾಗುತ್ತದೆ.ವಾಮನ ಪುರಾಣದ ಪ್ರಕಾರ, ವಿಷ್ಣು ತನ್ನ ಒಂದು ಪಾದವನ್ನು ಆಕಾಶದ ಕಡೆಗೆ ವಾಮನ ರೂಪದಲ್ಲಿ ಎತ್ತಿದಾಗ, ನಂತರ ಬ್ರಹ್ಮ ದೇವನು ತನ್ನ ಕಮಂಡಲದಲ್ಲಿ ನೀರನ್ನು ತುಂಬಿಸಿಕೊಂಡು ಭಗವಾನ್ ವಿಷ್ಣುವಿನ ಪಾದಗಳನ್ನು ತೊಳೆದನು. ಈ ನೀರಿನ ವೇಗದಿಂದ ಗಂಗೆಯು ಬ್ರಹ್ಮನ ಕಮಂಡಲದಲ್ಲಿ ಜನಿಸಿದಳು. ಭಗವಾನ್ ಬ್ರಹ್ಮನು ಗಂಗೆಯನ್ನು ಹಿಮಾಲಯಕ್ಕೆ ಒಪ್ಪಿಸಿದನು, ಹೀಗಾಗಿ ಪಾರ್ವತಿ ದೇವತೆ ಮತ್ತು ಗಂಗಾ ಇಬ್ಬರೂ ಸಹೋದರಿಯರಾದರು. ವಾಮನನ ಪಾದಕ್ಕೆ ಆದ ಗಾಯವು ಆಕಾಶವನ್ನು ಛಿದ್ರಗೊಳಿಸಿತು ಮತ್ತು ಗಂಗೆಯು ಮೂರು ಭಾಗವಾಗಿ ಉಕ್ಕಿ ಹರಿಯಲು ಕಾರಣವಾಯಿತು ಎಂಬ ಕಥೆಯೂ ಇದೆ. ಒಂದು ನೀರಿನ ಹರಿವು ಭೂಮಿಗೆ ಹೋಯಿತು, ಒಂದು ಸ್ವರ್ಗಕ್ಕೆ ಮತ್ತು ಒಂದು ಪಾತಾಳ ಲೋಕಕ್ಕೆ ಹರಿಯಲು ಆರಂಭವಾಯಿತು.


ಗಂಗಾ ದೇವಿ ಮತ್ತು ಪರಶಿವನ ಪ್ರೀತಿ;
ಪಾರ್ವತಿ ದೇವಿಯಂತೆ ಗಂಗೆಯು ಕೂಡ ಶಿವನನ್ನು ತನ್ನ ಗಂಡನನ್ನಾಗಿ ಪಡೆಯಲು ಬಯಸಿದ್ದಳೆಂದು ಶಿವ ಪುರಾಣದಲ್ಲಿ ಒಂದು ದಂತಕಥೆಯಿದೆ. ಪಾರ್ವತಿ ದೇವಿಯು ಗಂಗೆಯು ತನಗೆ ಸೌತಿಯಾಗುತ್ತಿಳೆಂದು ಎಂದಿಗೂ ಅಂದುಕೊಂಡವಳಲ್ಲ. ಅದೇನೇ ಇದ್ದರೂ, ಗಂಗೆಯು ಶಿವನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸನ್ನು ಮಾಡಿದಳು. ಅವಳ ತಪಸ್ಸಿನಿಂದ ಸಂತಸಗೊಂಡ ಶಿವನು ತನ್ನೊಂದಿಗೆ ಇರಲು ವರವನ್ನು ಕೊಟ್ಟನು. ಈ ವರದಿಂದಾಗಿ, ಗಂಗಾ ತನ್ನ ಪೂರ್ಣ ವೇಗದಿಂದ ಭೂಮಿಯ ಮೇಲೆ ಇಳಿಯುವಾಗ, ಭಗವಾನ್ ಶಿವನು ಭೂಮಿಯನ್ನು ಪ್ರವಾಹದಿಂದ ರಕ್ಷಿಸಲು ಅವುಗಳನ್ನು ತನ್ನ ಜಟೆಗಳಲ್ಲಿ ಸುತ್ತಿಕೊಂಡನು, ಹೀಗೆ ಗಂಗೆಯು ಶಿವನೊಂದಿಗೆ ಸೇರುತ್ತಾಳೆ.

ಬ್ರಹ್ಮ ದೇವನ ಶಾಪದಿಂದಾಗಿ, ಗಂಗಾ ನದಿಯ ರೂಪದಲ್ಲಿ ಭೂಮಿಗೆ ಬಂದಳು ಮತ್ತು ಮತ್ತೊಂದೆಡೆ ಮಹಾಭಿಷನು ಹಸ್ತಿನಾಪುರದ ರಾಜ ಶಾಂತನು ಆಗಿ ಹುಟ್ಟಬೇಕಾಯಿತು. ಒಮ್ಮೆ, ಬೇಟೆಯನ್ನು ಆಡುವಾಗ ಶಾಂತನು ಗಂಗಾ ತೀರವನ್ನು ತಲುಪಿದಾಗ, ಗಂಗಾ ಮಾನವ ರೂಪದಲ್ಲಿ ಶಾಂತನುಗೆ ಕಾಣಿಸಿಕೊಂಡಳು ಮತ್ತು ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು.

ಶಾಂತನು ಮತ್ತು ಗಂಗೆಯ ಪ್ರೀತಿ ಸಂಕೇತವಾಗಿ ಅವರಿಬ್ಬರಿಗೆ 8 ಜನ ಮಕ್ಕಳಿದ್ದರು, ಅದರಲ್ಲಿ ಗಂಗೆ ತನ್ನ ಏಳು ಜನ ಮಕ್ಕಳಿಗೆ ಜಲ ಸಮಾಧಿಯನ್ನು ನೀಡಿದಳು ಮತ್ತು ದೇವವ್ರತ ಭೀಷ್ಮ ಎಂಟನೇ ಮಗುವಾಗಿ ಜನಿಸಿದನು. ಆದರೆ ಗಂಗೆಗೆ ದೇವವ್ರತ ಭೀಷ್ಮನಿಗೆ ಜಲ ಸಮಾಧಿಯನ್ನು ನೀಡಲು ಸಾಧ್ಯವಾಗಲಿಲ್ಲ. ಗಂಗೆಯ ಎಂಟು ಮಕ್ಕಳನ್ನು ವಸು ಎಂದು ಹೇಳಲಾಗುತ್ತದೆ, ಶಾಪವನ್ನು ಮುಕ್ತಗೊಳಿಸಲು ಗಂಗೆ ಅವರಿಗೆ ನೀರಿನ ಸಮಾಧಿಯನ್ನು ನೀಡುತ್ತಿದ್ದಳು. ಆದರೆ ಎಂಟನೇ ಮಗುವನ್ನು ಶಾಪದಿಂದ ಮುಕ್ತಗೊಳಿಸಲು ಗಂಗೆ ವಿಫಲಳಾದಳು.
ಹರಿನಾಮವೇ ಚಂದ
ಗಂಗಾ ದೇವಿ ಪ್ರೀತಿಯ ಈ ವಿಶಿಷ್ಟ ಕಥೆ;
ಮಹಾಭಾರತದ ದಂತಕಥೆಯ ಪ್ರಕಾರ, ಗಂಗಾ ದೇವಿಯು ತನ್ನ ತಂದೆ ಬ್ರಹ್ಮನೊಂದಿಗೆ ಒಮ್ಮೆ ದೇವರಾಜ ಇಂದ್ರನ ಸಭೆಗೆ ಬಂದಳು. ಭೂಮಿಯ ಮಹಾ ರಾಜ ಮಹಾಭಿಷಾ ಕೂಡ ಇಲ್ಲಿ ಉಪಸ್ಥಿತರಿದ್ದನು. ಮಹಾಭಿಷನನ್ನು ನೋಡಿದ ಗಂಗೆ ಆಕರ್ಷಿತಳಾದಳು ಮತ್ತು ಮಹಾಭಿಷಾ ಕೂಡ ಗಂಗಾಳನ್ನು ನೋಡಿದ ಮೇಲೆ ತನ್ನ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡನು.ಗಂಗೆಯು ಸಭೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಅವಳ ಸೆರಗು ಜಾರಿ ಭುಜದ ಮೇಲೆ ಕುಳಿತುಕೊಳ್ಳುತ್ತದೆ. ಸಭೆಯಲ್ಲಿ ಹಾಜರಿದ್ದ ಎಲ್ಲಾ ದೇವರು-ದೇವತೆಗಳು ಸೌಜನ್ಯದಿಂದ ಕಣ್ಣುಮುಚ್ಚಿದರು, ಆದರೆ ಗಂಗೆಯಲ್ಲಿ ಕಳೆದುಹೋದ ಮಹಾಭಿಷರು ಅವಳನ್ನು ದಿಟ್ಟಿಸುತ್ತಾ ಇದ್ದರು ಮತ್ತು ಗಂಗೆ ಕೂಡ ಅವನನ್ನು ನೋಡುತ್ತಲೇ ಇದ್ದಳು. ಇದನ್ನು ಕಂಡು ಕೋಡಗೊಂಡ ಬ್ರಹ್ಮ ದೇವನು ನೀವು ಘನತೆಗೆ ಅರ್ಹರಾದವರಲ್ಲ ಹಾಗಾಗಿ ನೀವು ಸ್ವರ್ಗ ಲೋಕವನ್ನು ತೊರೆದು ಭೂಮಿಯಲ್ಲಿ ಇರುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ. ಆದ್ದರಿಂದ ಗಂಗೆ ಭೂಮಿಗೆ ಬರಬೇಕಾಯಿತು.

Thursday, October 24, 2024

ಪ್ರಪಂಚದ ಕುರಿತು

 1) ಅತಿದೊಡ್ಡ ಸಮುದ್ರ -- ದ.ಚೀನಾ ಸಮುದ್ರ

2) ಅತಿದೊಡ್ಡ ಸರೋವರ -- ಕ್ಯಾಸ್ಪೀಯನ್

3) ಅತಿದೊಡ್ಡ ನದಿ -- ಅಮೇಜಾನ್

4) ಅತಿದೊಡ್ಡ ಖಂಡ -- ಏಷ್ಯಾ

5) ಅತಿದೊಡ್ಡ ದ್ವೀಪ -- ಗ್ರೀನ್ ಲ್ಯಾಂಡ್

6) ಅತಿದೊಡ್ಡ ಮರಭೂಮಿ -- ಸಹರಾ

7) ಅತಿದೊಡ್ಡ ದೇಶ -- ರಷಿಯಾ

8) ಅತಿದೊಡ್ಡ ಸಸ್ತನಿ -- ಬ್ಲೂ ವೇಲ್

9) ಅತಿದೊಡ್ಡ ವೈರಸ್ -- TMV (ಟೊಬ್ಯಾಕೊ ಮೋಜಾಯೀಕ್ ವೈರಸ್)

10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ

11) ಅತಿದೊಡ್ಡ ಜೀವಿ ಸಾಮ್ರಾಜ್ಯ -- ಪ್ರಾಣಿ ಸಾಮ್ರಾಜ್ಯ

12) ಅತಿದೊಡ್ಡ ಹೂ -- ರೇಫ್ಲೇಶೀಯ ಗಿಯಾಂಟ್

13) ಅತಿದೊಡ್ಡ ಬೀಜ -- ಕೋಕೋ ಡಿ ಮೇರ್

14) ಅತಿದೊಡ್ಡ ಅಕ್ಷOಶ -- 0 - ಅಕ್ಶಾಂಶ

15) ಅತಿದೊಡ್ಡ ಪಕ್ಷಿ -- ಆಷ್ಟ್ರಚ್

16) ಅತಿದೊಡ್ಡ ಮುಖಜ ಭೂಮಿ -- ಸುOದರಬನ್ಸ್

17) ಅತಿದೊಡ್ಡ ಗೃಹ -- ಗುರು

18)ಅತಿದೊಡ್ಡ ಉಪಗೃಹ -- ಗ್ಯಾನಿಮಿಡ್

19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್

20) ಅತಿದೊಡ್ಡ ಜ್ವಾಲಾಮುಖಿ -- ಮೌOಟ್ ವೇಸುವೀಯಸ್

21) ಅತಿದೊಡ್ಡ ಸಂವಿಧಾನ -- ಭಾರತ ಸಂವಿಧಾನ

22) ಅತಿದೊಡ್ಡ ಕರಾವಳಿ ರಾಷ್ಟ್ರ -- ಕೆನಡಾ

23) ಅತಿದೊಡ್ಡ ವಿಮಾನ ನಿಲ್ದಾಣ -- ಕಿಂಗ್ ಖಾಲಿದ್

24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್-- ಗೋರಖ್ಪುರ್

25) ಅತಿದೊಡ್ಡ ಕಾಲುವೆ -- ಇಂದಿರಾ ಗಾಂಧಿ ಕಾಲುವೆ

26) ಅತಿ ದೊಡ್ಡ ಡ್ಯಾಮ್ -- ಹೂವರ್

27) ಅತಿ ದೊಡ್ಡ ಸರಿಸೃಪ -- ಕ್ರೊಕೊಡೈಲ್

28) ಅತಿ ದೊಡ್ಡ ಕೊಲ್ಲಿ -- ಹಡ್ಸನ್ ಕೊಲ್ಲಿ

29) ಅತಿ ದೊಡ್ಡ ಖಾರಿ -- ಮೆಕ್ಸಿಕೋ

30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ - ಹವಾಯಿ ದ್ವೀಪದ ಹೋನಲುಲೂ

31) ಅತಿ ದೊಡ್ಡ ಕಂದರ -- ಮರಿಯಾನೋ ಕಂದರ

32) ಅತಿ ದೊಡ್ಡ ಸುರಂಗ ಮಾರ್ಗ

33) ಅತಿ ದೊಡ್ಡ ನದಿ ದ್ವೀಪ -- ಮಜೂಲಿ

34) ಅತಿ ದೊಡ್ಡ ಪರ್ವತ ಶ್ರೇಣಿ -- ಹಿಮಾಲಯ ಪರ್ವತ ಶ್ರೇಣಿ

35) ಅತಿ ದೊಡ್ಡ ನಾಗರೀಕತೆ -- ಸಿಂಧು

36) ಅತಿ ದೊಡ್ಡ ಧರ್ಮ -- ಕ್ರಿಷ್ಚಿಯನ್

37) ಅತಿದೊಡ್ಡ ಭಾಷೆ -- ಮ್ಯಾಡ್ರಿನ್

ಪುರಾಣಗಳಿಂದ ಆಯ್ದ ಕೆಲವು ಸುಂದರವಾದ ಸುಭಾಷಿತಗಳು

 ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ. - ರಾಮಾಯಣ...


ಕಾಮವು ವಿಷಯಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ ಅದು ಇನ್ನು ಪ್ರಭಲವಾಗುತ್ತದೆ . - ಮಹಾಭಾರತ ಆದಿಪರ್ವ...

ಸಾವಿರಾರು ತಂದೆ ತಾಯಿಗಳು , ನೂರಾರು ಹೆಂಡರು ಮಕ್ಕಳು ಈ ಸಂಸಾರದಲ್ಲಿ ಆಗಿಹೋದರು.ಹೀಗಿರುವಾಗ ಅವರು ಯಾರ ಸಂಬಂಧಿಗಳು. ? ನಾವು ಯಾರ ಸಂಬಂಧಿಗಳು ? - ಮಹಾಭಾರತ ಶಾಂತಿ ಪರ್ವ ...

ಬೆಳಿಗ್ಗೆ ಮಾಡಿದ ಅಡಿಗೆ ಮತ್ತು ಆಹಾರವು ಹಳಸಿಹೋಗುತ್ತದೆ. ಹೀಗಿರುವಾಗ , ಅದೇ ಅನ್ನರಸದಿಂದ ಬೆಳೆದು ಬಂದ ಈ ಶರೀರ ಹೇಗೆ ನಿತ್ಯವಾದೀತು. - ಗರುಡ ಪುರಾಣ ...

ತಾಳವಿಲ್ಲದ ರಾಗ ಹೇಗೋ, ಮಾನವಿಲ್ಲದ ರಾಜ ಹೇಗೋ, ಮದೋದಕವಿಲ್ಲದ ಆನೆ ಹೇಗೋ, ಹಾಗೆ ಜ್ಞಾನವಿಲ್ಲದ ಯತಿ. - ರಾಮಾಯಣ ...

ಸರ್ಪವು ಜೀರ್ಣವಾದ ಪೊರೆಯನ್ನು ಬಿಡುವಂತೆ , ಯಾವನು ತಾಳ್ಮೆಯಿಂದ ಕೋಪವನ್ನು ದೂರಮಾಡುವನೋ ಅವನೇ ಮನುಷ್ಯ. - ರಾಮಾಯಣ ಸುಂದರ ಕಾಂಡ ...

ಸುಖ ಸಾಧನಗಳಾದ ಪ್ರಿಯ ವಿಷಯಗಳು ಈ ಮೂರುಲೋಕದಲ್ಲಿ ಎಷ್ಟಿವಿಯೋ ಅವೆಲ್ಲವೂ ಸೇರಿದರು, ಇಂದ್ರಿಯಯಗಳ ಸೆಳೆತಕ್ಕೆ ಒಳಗಾದವನನ್ನು ತೃಪ್ತಿಪಡಿಸಲಾರವು. - ಭಾಗವತ ...

ಗಾಳಿಯನ್ನು ಸುತ್ತಿ ಬಂಧಿಸಬಹುದು. ಆಕಾಶವನ್ನಾದರೂ ಕತ್ತರಿಸಬಹುದು. ಅಲೆಗಳನ್ನು ಪೋಣಿಸಬಹುದು. ಆದರೆ ಆಯುಸ್ಸಿನಲ್ಲಿ ನಂಬಿಕೆ ಇಡುವುದಕ್ಕಾಗುವುದಿಲ್ಲ. - ಗರುಡ ಪುರಾಣ ...

ಕಲಿಯುಗದಲ್ಲಿ ಯಾರು ಹರಿಸ್ಮರಣೆ ಮಾಡುತ್ತಾರೋ, ಅಥವಾ ಮಾಡಿಸುತ್ತಾರೆಯೋ, ಅವರೇ ಭಾಗ್ಯಶಾಲಿಗಳು ಹಾಗು ಕೃತಾರ್ಥರು. - ಭಾಗವತ ...

Wednesday, October 23, 2024

ಹದಿನೆಂಟು ಪುರಾಣಗಳು

1) ಮತ್ಸ್ಯ ಪುರಾಣ

2) ಮಾರ್ಕಂಡೇಯ ಪುರಾಣ

3) ಭಾಗವತ ಪುರಾಣ

4) ಭವಿಷ್ಯತ್ ಪುರಾಣ

5) ಬ್ರಹ್ಮ ಪುರಾಣ

6) ಬ್ರಹ್ಮಾಂಡ ಪುರಾಣ

7) ಬ್ರಹ್ಮ ವೈವರ್ತ ಪುರಾಣ

8) ವರಾಹ ಪುರಾಣ

9) ವಾಮನ ಪುರಾಣ

10) ವಾಯು ಪುರಾಣ

11) ವಿಷ್ಣು ಪುರಾಣ

12) ಅಗ್ನಿ ಪುರಾಣ

13) ನಾರದ ಪುರಾಣ

14) ಪದ್ಮ ಪುರಾಣ

15) ಲಿಂಗ ಪುರಾಣ

16) ಗರುಡ ಪುರಾಣ

17) ಕೂರ್ಮ ಪುರಾಣ

18) ಸ್ಕಂದ ಪುರಾಣ
1) *ಮತ್ಸ್ಯ ಪುರಾಣ*
ಈ ಮತ್ಸ್ಯ ಪುರಾಣದಲ್ಲಿ 14000 ಶ್ಲೋಕಗಳಿವೆ. ಪುರಾಣಗಳಲ್ಲಿ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ. ಇದರಲ್ಲಿ ಮಹಾವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರ ಧರಿಸಿದ ಶ್ರೀಮನ್ನಾರಾಯಣನು ಈ ಪುರಾಣವನ್ನು ಮನುವಿಗೆ ಬೋಧಿಸಿದ್ದಾನೆ. ಸಾವಿತ್ರಿ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಯಯಾತಿ ಚರಿತ್ರೆ ಮತ್ತು ಮಾನವ ಧರ್ಮಾಚರಣೆಯ ವಿಷಯಗಳು ವಾರಣಾಸಿ ಪ್ರಯಾಗ, ತ್ರಿಪುರದಹನ ಮುಂತಾದ ಕ್ಷೇತ್ರ ವಿವರಗಳು ಈ ಪುರಾಣದಲ್ಲಿವೆ.

‌2) *ಮಾರ್ಕಂಡೇಯ ಪುರಾಣ*
‌ ಈ ಪುರಾಣದಲ್ಲಿ 9000 ಶ್ಲೋಕಗಳಿವೆ. ಇದು ‌ಜೈಮಿನಿ ಹಾಗೂ ಮಾರ್ಕಂಡೇಯ‌ ಮುನಿಗಳ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಮಾರ್ಕಂಡೇಯ ಮಹಾಮುನಿಗಳಿಂದ ವಿವರಿಸಲ್ಪಟ್ಟ ಪುರಾಣವಿದು. ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ, ಸೂರ್ಯ, ಬ್ರಹ್ಮಾದಿ ದೇವತೆಗಳ ಸ್ತುತಿ ಇವೆ. ಶಿವ ವಿಷ್ಣುಗಳ ಮಹಾತ್ಮೆಗಳು ಮತ್ತು ಇಂದ್ರ, ಅಗ್ನಿ ಸೂರ್ಯರ ಮಹಿಮೆಗಳು ಮತ್ತು ಇದರ ಮುಖ್ಯ ಭಾಗವಾಗಿ ಸುಪ್ರಸಿದ್ಧ ಸಪ್ತಶತಿ ಎಂಬ *ದೇವಿ ಮಹಾತ್ಮೆ* ಮುಂತಾದ ವಿಷಯಗಳಿವೆ. ಈಗ ನಾವು ಮಾಡುತ್ತಿರುವ ಚಂಡಿಯಾಗ, ಶತ ಚಂಡಿಕಾ ಹೋಮ, ಸಹಸ್ರ ಚಂಡಿಯಾಗ ಮುಂತಾದ ಯಾಗಗಳಿಗೆ ಮಾರ್ಕಂಡೇಯ ಪುರಾಣವೇ ಆಧಾರವಾಗಿದೆ.
3) *ಭಾಗವತ ಪುರಾಣ*
ಈ ಮಹಾ ಪುರಾಣದಲ್ಲಿ 18000 ಶ್ಲೋಕಗಳಿವೆ. ಈ ಪುರಾಣವನ್ನು ವ್ಯಾಸ ಮಹರ್ಷಿಗಳು ಶುಕಮಹರ್ಷಿಗೆ ಬೋಧಿಸಿದ್ದಾರೆ. ಹದಿನೆಂಟು ಪುರಾಣಗಳಲ್ಲೇ ಬಹಳ ಪ್ರಸಿದ್ಧವಾಗಿದೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಜ್ಞಾನ ಹಾಗೂ ಭಕ್ತಿ ಎರಡೂ ‌ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಶುಕ ಮಹರ್ಷಿಗಳು ಪರೀಕ್ಷಿತ್ ಮಹಾರಾಜ (ಅಭಿಮನ್ಯುಮಗ ) ನಿಗೆ ಬೋಧಿಸಿದ್ದಾರೆ. ಈ ಭಾಗವತ ಪುರಾಣದಲ್ಲಿ ಹನ್ನೆರಡು ಸ್ಕಂದಗಳಿವೆ. ಶ್ರೀಮನ್ನಾರಾಯಣನ ದಶಾವತಾರ ಕಥೆಗಳು ಈ ಪುರಾಣದಲ್ಲಿವೆ. ರಾಮಾಯಣ ಮಹಾಭಾರತಗಳಿಗಿರುವ ಪ್ರಾಶಸ್ತ್ಯವೇ ಈ ಭಾಗವತ ಪುರಾಣಕ್ಕಿದೆ. ವಿಷ್ಣು ಭಕ್ತರಿಗೆ ಈ ಪುರಾಣ ಅಮೃತ ಸಮಾನವಾಗಿದೆ.

4) *ಭವಿಷ್ಯತ್ ಪುರಾಣ*
ಈ ಪುರಾಣದಲ್ಲಿ 14500 ಶ್ಲೋಕಗಳಿವೆ. ಮನು ಬ್ರಹ್ಮ ನಿಗೆ ಸೂರ್ಯ ದೇವನು ಈ ಪುರಾಣವನ್ನು ಬೋಧಿಸಿದ್ದಾನೆ. ಈ ಪುರಾಣದಲ್ಲಿ ಸೂರ್ಯದೇವೋಪಾಸನೆ ಅಗ್ನಿದೇವೋಪಾಸನೆ ಮತ್ತು ಚತುರ್ವಿಧ ವರ್ಣಾಶ್ರಮ ಧರ್ಮಗಳು ತಿಳಿಸಲಾಗಿದೆ. ಮುಖ್ಯವಾಗಿ ಭವಿಷ್ಯತ್ ಕಾಲದಲ್ಲಿ ನಡೆಯಲಿರುವ ಅನೇಕ ಆಶ್ಚರ್ಯಕರ ವಿಷಯಗಳು ಈ ಪುರಾಣದಲ್ಲಿ ನಿಕ್ಷಿಪ್ತವಾಗಿವೆ.

5) *ಬ್ರಹ್ಮ ಪುರಾಣ*
‌ ಈ ಪುರಾಣದಲ್ಲಿ 10000 ಶ್ಲೋಕಗಳಿವೆ. ಈ ಪುರಾಣವನ್ನು ಆದಿ ಪುರಾಣವೆಂದು ಸೂರ್ಯ ಪುರಾಣವೆಂದು ಕರೆಯುವ ರೂಢಿ ಇದೆ. ಇದರಲ್ಲಿ ಎರಡು ಭಾಗಗಳಿವೆ. ಪೂರ್ವ ಭಾಗದಲ್ಲಿ ಬ್ರಹ್ಮಾಂಡದ ರಚನೆಯ ಬಗ್ಗೆ ಮಾಹಿತಿ ಇದೆ. ಎರಡನೇ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ ಕಥೆಗಳು ‌ಬರುತ್ತವೆ. ಬ್ರಹ್ಮ ದೇವರು ಈ ಪುರಾಣವನ್ನು ದಕ್ಷ ಬ್ರಹ್ಮ ( ಪಾರ್ವತಿಯ ತಂದೆ) ನಿಗೆ ಬೋಧಿಸಿದ್ದಾನೆ ಈ ಪುರಾಣದಲ್ಲಿ ಕೃಷ್ಣ ಮಾರ್ಕಂಡೇಯ ಕಶ್ಯಪರ ಚರಿತ್ರೆಗಳು ವರ್ಣಾಶ್ರಮ ಧರ್ಮದ ವಿಷಯಗಳು ಧರ್ಮ ಮಾರ್ಗದ ವಿಷಯಗಳು ಸ್ವರ್ಗ ನರಕಲೋಕದ ವಿಷಯಗಳು ಈ ಪುರಾಣದಲ್ಲಿವೆ.

6) *ಬ್ರಹ್ಮಾಂಡ ಪುರಾಣ*
‌ ಈ ಪುರಾಣದಲ್ಲಿ 12000 ಶ್ಲೋಕಗಳಿವೆ. ಮರೀಚಿ ಮಹರ್ಷಿ ಸೃಷ್ಟಿಕರ್ತ ಬ್ರಹ್ಮನಿಗೆ ಬೋಧಿಸಿದ ಪುರಾಣವಿದು. ಈ ಪುರಾಣದಲ್ಲಿ ರಾಧಾಕೃಷ್ಣ ವೃತ್ತಾಂತಗಳು, ರಾಮ ಪರಶುರಾಮ ಚರಿತ್ರೆಗಳು, ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ, ಶಿವ ಸ್ತೋತ್ರ, ಕೃಷ್ಣ ಸ್ತೋತ್ರ, ಗಂಧರ್ವ ಶಾಸ್ತ್ರ ಖಗೋಳ ಶಾಸ್ತ್ರ, ಪಾಪ ಪುಣ್ಯಗಳ ವಿವರಣೆಗಳು ಈ ಪುರಾಣದಲ್ಲಿವೆ.

‌7) *ಬ್ರಹ್ಮ ವೈವರ್ತ ಪುರಾಣ*
ಈ ಪುರಾಣದಲ್ಲಿ 18000 ಶ್ಲೋಕಗಳಿವೆ. ಇದು ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ಬಗ್ಗೆ, ಎರಡನೇ ಭಾಗದಲ್ಲಿ ‌ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ, ಮೂರನೆಯ ಭಾಗದಲ್ಲಿ ಗಣೇಶ, ಪಾರ್ವತಿ, ಶಿವ ಮುಂತಾದವರ ಬಗ್ಗೆ, ನಾಲ್ಕನೇ ಭಾಗದಲ್ಲಿ ಕೃಷ್ಣನ ಜನ್ಮ ವೃತ್ತಾಂತದ ಬಗ್ಗೆ ವಿವರಗಳಿವೆ. ಸಾವರ್ಣೀ ಬ್ರಹ್ಮನಿಂದ ನಾರದ ಮಹರ್ಷಿಗಳಿಗೆ ಉಪದೇಶ ಮಾಡಿರುವ ಪುರಾಣವಿದು. ಸ್ಕಂದ ಗಣೇಶ ರುದ್ರ ಕೃಷ್ಣ ವೈಭವಗಳು ದುರ್ಗಾ ಲಕ್ಷ್ಮಿ ಸರಸ್ವತಿ ಸಾವಿತ್ರಿ ರಾಧ ಮುಂತಾದವರ ಚರಿತ್ರೆಗಳು ಈ ಪುರಾಣದಲ್ಲಿವೆ. ಪಂಚ ಶಕ್ತಿಗಳ ( ಪೃಥ್ವಿ ಅಪ್ ತೇಜೋ ವಾಯು ಆಕಾಶಗಳು ) ಪ್ರಭಾವ ಮತ್ತು ಸೃಷ್ಟಿಗೆ ಕಾರಣವಾದ ಭೌತಿಕ ಜಗತ್ತು ಮುಂತಾದ ವಿಷಯಗಳು ಈ ಪುರಾಣದಲ್ಲಿವೆ.

8) *ವರಾಹ ಪುರಾಣ*
‌ ಈ ಪುರಾಣದಲ್ಲಿ24000 ಶ್ಲೋಕಗಳಿವೆ. ವರಹಾವತಾರ ಧರಿಸಿ ಶ್ರೀ ವಿಷ್ಣು ಭೂದೇವಿಗೆ ಬೋಧಿಸಿದ ಪುರಾಣವಿದು. ನಾರಾಯಣ ಉಪಾಸನಾ ವಿಧಾನ ಮತ್ತು ಪಾರ್ವತಿ ಪರಮೇಶ್ವರರ ಚರಿತ್ರೆಗಳು, ಧರ್ಮಶಾಸ್ತ್ರ ಮತ್ತು ವ್ರತಕಲ್ಪಗಳು ಪುಣ್ಯ ಕ್ಷೇತ್ರಗಳ ವಿವರಣೆಗಳು ಈ ಪುರಾಣದಲ್ಲಿವೆ.

9) *ವಾಮನ ಪುರಾಣ*
‌ ಈ ಪುರಾಣದಲ್ಲಿ 10000 ಶ್ಲೋಕಗಳಿವೆ. ಪುಲಸ್ತ್ಯ ಋಷಿ ನಾರದರಿಗೆ ಉಪದೇಶ ಮಾಡಿದ ಪುರಾಣವಿದು. ಶಿವಲಿಂಗೋಪಾಸನೆ, ಶಿವಪಾರ್ವತಿಯರ ಕಲ್ಯಾಣ, ಶಿವ ಚರಿತ್ರೆ, ಗಣೇಶ್ವರ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಭೂಗೋಳ ಚರಿತ್ರೆ ಋತು ವಿಶೇಷಗಳು ಈ ಪುರಾಣದಲ್ಲಿವೆ. ವಿಷ್ಣುವಿನ ವಾಮನ‌ ಅವತಾರದ ಕಥೆಗಳು, ಸಾತ್ವಿಕನ ಗುಣ ಲಕ್ಷಣಗಳು, ದಾನದ ಮಹತ್ವ ಮುಂತಾದ ವಿಚಾರಗಳನ್ನು ಇದರಲ್ಲಿ ವಿವರಿಸಲಾಗಿದೆ.

10). *ವಾಯು ಪುರಾಣ*
‌ ಈ ಪುರಾಣದಲ್ಲಿ 24000 ಶ್ಲೋಕಗಳಿವೆ. ಮಹಾ ಶಕ್ತಿಶಾಲಿಯಾದ ವಾಯುದೇವನಿಂದ ಹೇಳಲಾಗಿರುವುದರಿಂದ ಈ ಪುರಾಣಕ್ಕೆ ವಾಯು ಪುರಾಣವೆಂದು ಹೆಸರು ಬಂದಿದೆ. ಮಹೇಶ್ವರನ ಮಹಾತ್ಮೆ, ಕಾಲಮಾನ ವಿವರಣೆ ಮತ್ತು ಭೂಮಂಡಲ ಸೌರಮಂಡಲ ವಿಶೇಷಗಳು ರಹಸ್ಯಗಳು ಈ ಪುರಾಣದಲ್ಲಿವೆ. ಜಗತ್ತನ್ನು ಏಳು ದ್ವೀಪಗಳ ವಿಭಾಗ ಮಾಡಿ ಅದರ ವಿವರ, ಬೇರೆಬೇರೆ ಖಂಡಗಳಲ್ಲಿರುವ ಜನರ ಜೀವನ ವಿಚಾರ, ಏಳು ಲೋಕಗಳ ವಿವರ, ನಾಲ್ಕು ಯುಗಗಳ ವಿಚಾರ, ಸಂಗೀತ ವಿದ್ಯೆ, ವೇದ ವಿದ್ಯೆ, ವಿವಿಧ ವರ್ಣಾಶ್ರಮ ಧರ್ಮಗಳ ಕರ್ತವ್ಯ ಜವಾಬ್ದಾರಿಗಳ ವಿವರ ಇತ್ಯಾದಿ ಇದರಲ್ಲಿ ಅಡಕವಾಗಿವೆ.

11) *ವಿಷ್ಣು ಪುರಾಣ*
ಈ ಪುರಾಣದಲ್ಲಿ 23000 ಶ್ಲೋಕಗಳಿವೆ. ಪರಾಶರ ಮಹರ್ಷಿ (ವ್ಯಾಸರ ತಂದೆ) ತನ್ನ ಶಿಷ್ಯನಾದ ಮೈತ್ರೇಯ ಮುನಿಗೆ ಬೋಧಿಸಿದ ಪುರಾಣವಿದು. ಶ್ರೀ ಮಹಾವಿಷ್ಣುವಿನ ಮಹಾತ್ಮೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಶ್ರೀ ಕೃಷ್ಣ ಧೃವ ಪ್ರಹ್ಲಾದ ಭರತರಾಜನ ಚರಿತ್ರೆಗಳು ಈ ಪುರಾಣದಲ್ಲಿವೆ.

12) *ಅಗ್ನಿ ಪುರಾಣ*
ಈ ಪುರಾಣದಲ್ಲಿ 15400 ಶ್ಲೋಕಗಳಿವೆ. ಅಗ್ನಿದೇವರಿಂದ ವಶಿಷ್ಠ ಮಹರ್ಷಿಗಳಿಗೆ ಈ ಪುರಾಣವನ್ನು ಬೋಧಿಸಲಾಗಿದೆ. ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ‌ಕಾವ್ಯ, ನಾಟಕಗಳ ಲಕ್ಷಣಗಳು, ರಸ ವರ್ಣನೆಗಳು, ಮಂತ್ರ ಮತ್ತು ಮಂತ್ರ ‌ವಿಧಾನಗಳು, ರಾಜಧರ್ಮ ಮುಂತಾದ ‌ವಿಚಾರಗಳು ಹೇಳಲ್ಪಟ್ಟಿದೆ. ಇದರಲ್ಲಿ ಶಿವ ಗಣೇಶ ದುರ್ಗಾ ಉಪಾಸನಾ ವಿಷಯಗಳಿವೆ ಮತ್ತು ವ್ಯಾಕರಣ ಛಂದಸ್ಸು ಜ್ಯೋತಿಷ್ಯ ಆಯುರ್ವೇದ ರಾಜಕೀಯ ಲೌಕಿಕ ಭೂಗೋಳ ಖಗೋಳ ವಿಷಯಗಳನ್ನು ವಿಶದೀಕರಿಸಲಾಗಿದೆ. ಧರ್ಮಶಾಸ್ತ್ರ, ‌ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ.

13) *ನಾರದ ಪುರಾಣ*
ಈ ಪುರಾಣದಲ್ಲಿ 25000 ಶ್ಲೋಕಗಳಿವೆ. ಬ್ರಹ್ಮ ಮಾನಸ ಪುತ್ರರಾಗಿರುವ ಸನಕ, ಸನಂದನ , ಸನತ್ಕುಮಾರ, ಸನಾತನ ಎಂಬ ನಾಲ್ಕು ಜನರಿಗೆ ನಾರದ ಮಹರ್ಷಿಗಳು ಬೋಧಿಸಿದ ಪುರಾಣವಿದು. ಅತೀ ಪವಿತ್ರ ಪ್ರಸಿದ್ದವಾದ ವೇದ ಪಾದಸ್ತವಂ ( ಶಿವ ಸ್ತೋತ್ರ) ಈ ಪುರಾಣದಲ್ಲಿದೆ. ವೇದಾಂಗ ವಿಷಯಗಳು ವ್ರತ, ನಿಯಮ ವಿಷಯಗಳು ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.

14) *ಸ್ಕಂದ ಪುರಾಣ*
ಹದಿನೆಂಟು ಪುರಾಣಗಳಲ್ಲಿ ಈ ಪುರಾಣವೇ ವಿಸ್ತೃತವಾಗಿದೆ. ಸ್ಕಂದ ಪುರಾಣದಲ್ಲಿ 81000 ಶ್ಲೋಕಗಳಿವೆ. ಪರಮೇಶ್ವರನ‌ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ‌ ಜೀವನ ‌ಲೀಲೆಗಳ ಕುರಿತಾದ ‌ವಿವರಣೆಯೇ‌ ಈ ಪುರಾಣದಲ್ಲಿವೆ. ಈ ಪುರಾಣದೊಳಗೆ ಕಾಶೀಖಂಡ, ಕೇದಾರಖಂಡ, ರೇವಖಂಡ, ವೈಷ್ಣವಖಂಡ, ಉತ್ಕಳಖಂಡ, ಕುಮಾರಿಕಾಖಂಡ, ಬ್ರಹ್ಮ ಖಂಡ, ಬ್ರಹ್ಮೋತ್ತರಖಂಡ, ಅವಂತಿಕಾಖಂಡ ಮುಂತಾದ ಖಂಡಗಳಿವೆ. ಅನೇಕಾನೇಕ ವಿಷಯಗಳು ಸ್ಕಂದ ಪುರಾಣದಲ್ಲಿವೆ. ಅಷ್ಟಾದಶ ಪುರಾಣಗಳಲ್ಲಿ ಈ ಪುರಾಣಕ್ಕೆ ಪ್ರತ್ಯೇಕ ಪ್ರಾಮುಖ್ಯತೆಯಿದೆ. ವೆಂಕಟಾಚಲ ಮಹಾತ್ಮ (ತಿರುಮಲ ) ವೈಷ್ಣವ ಖಂಡದಲ್ಲಿದೆ. ಜಗನ್ನಾಥ ಕ್ಷೇತ್ರದ ಬಗ್ಗೆ ಉತ್ಕಳ ಖಂಡದಲ್ಲಿದೆ ಅರುಣಾಚಲದ ಬಗ್ಗೆ ಕುಮಾರಿಕಾ ಖಂಜದಲ್ಲಿದೆ ಸತ್ಯ ನಾರಾಯಣ ಸ್ವಾಮಿಯ ಬಗ್ಗೆ ರೇವಾ ಖಾಂಡದಲ್ಲಿದೆ.

15) *ಲಿಂಗ ಪುರಾಣ*
ಲಿಂಗ ಪುರಾಣದಲ್ಲಿ ಶಿವದೇವನ ಉಪದೇಶಗಳು, ಮಹಾತ್ಮೆ, ಲೀಲೆಗಳು, ಲಿಂಗದ ಮಹಿಮೆ‌ ಮುಂತಾದವುಗಳು ಈ ಪುರಾಣದ ಮುಖ್ಯ ವಸ್ತು. ಲಿಂಗ ರೂಪದ ಶಿವನ ಮಹಿಮೆ ಆರಾಧನೆ ವ್ರತಗಳು ಈ ಪುರಾಣದಲ್ಲಿವೆ. ಲಿಂಗದಿಂದ ಉಂಟಾಗಿರುವ ಸೃಷ್ಟಿ ಸ್ಥಿತಿ ಲಯ ರೂಪಗಳಾದ ಭಗವಂತನ ಲೀಲೆಗಳು, ನೀತಿ ಬೋಧೆಗಳು, ಖಗೋಳ ಜ್ಯೋತಿಷ್ಯ ಶಾಸ್ತ್ರಗಳು ಸಹ ಈ ಪುರಾಣದಲ್ಲಿವೆ.

16) *ಗರುಡ ಪುರಾಣ*
‌ ಈ ಪುರಾಣದಲ್ಲಿ 19000 ಶ್ಲೋಕಗಳಿವೆ. ಈ ಪುರಾಣವನ್ನು ಶ್ರೀ ಮಹಾವಿಷ್ಣು ಗರುಡನಿಗೆ ಉಪದೇಶ ಮಾಡಿದ್ದಾನೆ. ಜನನ ಮರಣದ ವಿಷಯಗಳು ಮತ್ತು ಮರಣದ ನಂತರ ಮನುಷ್ಯನಿಗೆ ಸಿಗುವ ಸ್ವರ್ಗ ನರಕಗಳು ನರಕ ಲೋಕದಲ್ಲಿ ಯಾವ ಯಾವ ತಪ್ಪು ಮಾಡಿದವರಿಗೆ ಯಾವ ಯಾವ ಶಿಕ್ಷೆಗಳನ್ನು ವಿಧಿಸುತ್ತಾರೆಂಬುದು ಈ ಪುರಾಣದಲ್ಲಿ ತಿಳಿಯಬಹುದು.

17) *ಕೂರ್ಮ ಪುರಾಣ*
‌ ಈ ಪುರಾಣದಲ್ಲಿ 17000 ಶ್ಲೋಕಗಳಿವೆ. ಕೂರ್ಮಾವತಾರ ವರಾಹ ನರಸಿಂಹ ಅವತಾರ ವಿಷಯಗಳು ಲಿಂಗರೂಪದಲ್ಲಿ ಶಿವನನ್ನು ಪೂಜಿಸುವ ವಿಷಯ ಖಗೋಳ ಭೂಗೋಳ ವಿಷಯಗಳು ಕಾಶಿ ಪ್ರಯಾಗಾದಿ ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.

18) *ಪದ್ಮ ಪುರಾಣ*
ಈ ಮಹಾ ಪುರಾಣದಲ್ಲಿ 85000 ಶ್ಲೋಕಗಳಿವೆ. ಪದ್ಮ ಪುರಾಣವನ್ನು ಓದಿದರೂ ಕೇಳಿದರೂ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಹದಿನೆಂಟು ಪುರಾಣಗಳಲ್ಲಿ ಪದ್ಮಪುರಾಣವೇ ದೊಡ್ಡದು. ಪದ್ಮ ಪುರಾಣದಲ್ಲಿ ಐದು ಕಾಂಡಗಳಿವೆ. ಪ್ರಥಮ ‌ಸೃಷ್ಟಿ ಕಾಂಡದಲ್ಲಿ ‌ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇವೆ. ಇದರಲ್ಲಿ ಗ್ರಹಗಳ ಬಗ್ಗೆ, ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೌಗೋಳಿಕ ಮಾಹಿತಿಯನ್ನು ನೀಡುತ್ತವೆ. ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ. ನಾಲ್ಕನೆಯ ಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ. ಕೊನೆಯ ಉತ್ತರ ಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ‌ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.


CONFUSING_DAYS

  1. National Youth Day - January 12 2. International Youth Day - August 12 3. National Teachers' Day - September 5 4. International Tea...