ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಮರೆಯಲಾರದ ಹೆಸರು. (1943–1995).ಡಾ. ರಾಜ್ ಅಭಿನಯದ ತೂಗುದೀಪ ಚಿತ್ರದ ಮೂಲಕ (1966)ಚಿತ್ರರಂಗದ ಪ್ರವೇಶ ಪಡೆದ ಈ ಕಲಾವಿದ ಅಭಿನಯಿಸಿದ್ದು ಸುಮಾರು 190 ಚಿತ್ರಗಳಲ್ಲಿ. ಅದರಲ್ಲಿಯೂ ರಾಜ್ ಅಭಿನಯದ ಚಿತ್ರಗಳು ಕಡಿಮೆ ಏನಲ್ಲ.ಸಿಪಾಯಿ ರಾಮು, ಮೇಯರ್ ಮುತ್ತಣ್ಣ, ಗಂಧದ ಗುಡಿ, ಪ್ರೇಮದ ಕಾಣಿಕೆ,ಗಿರಿಕನ್ಯೆ, ದಾರಿ ತಪ್ಪಿದ ಮಗ, ಬಬ್ರುವಾಹನ, ಶಂಕರ್ ಗುರು, ಕವಿರತ್ನ ಕಾಳಿದಾಸ, ಬಿಡುಗಡೆ, ಭಕ್ತ ಕುಂಬಾರ, ತ್ರಿಮೂರ್ತಿ, ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ರಾಜ್ ಕುಮಾರ್ ಕುಟುಂಬದ ಮೇಲಿನ ಸ್ನೇಹ, ಗೌರವದಿಂದ ತೂಗುದೀಪ ಮೈಸೂರಿನಲ್ಲಿ ಸ್ವಂತ ಮನೆಯ ಕನಸು ನನಸು ಮಾಡಿ ಕೊಂಡಾಗ ಅಂದು ಆ ಮನೆಯ ಮುಂದೆ ಕಾಣುತಿದ್ದ ಫಲಕ "ಮು ಪಾ ಕೃಪ".ಈ ಮನೆ ನಿರ್ಮಾಣ ಸಮಯದಲ್ಲಿ ಪಾರ್ವತಮ್ಮನವರು ಸಹಾಯ ಮಾಡಿದ್ದ ಕಾರಣಕ್ಕೆ ಮುತ್ತುರಾಜ್ ಪಾರ್ವತಮ್ಮ ಕೃಪ ಎಂದೇ ಕರೆದರು.
ತೀವ್ರವಾಗಿ ಕಾಡಿದ ಅನಾರೋಗ್ಯದ ಕಾರಣದಿಂದ ದೀರ್ಘ ಕಾಲದ ಬದುಕು ಅವರು ಕಾಣಲಾಗಲಿಲ್ಲ.
ಚಿತ್ರ ರಂಗದಲ್ಲಿ ಖಳ ನಾಯಕರಾಗಿ ಗುರುತಿಸಿಕೊಂಡರು ಅವರು ಕಾಣಿಸಿಕೊಂಡ ಪೋಷಕ ಪಾತ್ರಗಳೇನು ಕಡಿಮೆಯಲ್ಲ. ತಾವು ತೆರೆಯ ಮೇಲೆ ಖಳ ನಾಯಕನ ಇಮೇಜ್ ಹೊತ್ತ ಸಂದರ್ಭದಲ್ಲಿ ಸಿನಿಮಾ ಪ್ರೇಕ್ಷಕರ ಜೊತೆಗಿನ ಅನುಭವಗಳನ್ನು ಹಂಚಿಕೊಂಡ ಪ್ರಸಂಗವಿದು.ಇದರಲ್ಲಿ ಅವರ ಮಡದಿ ಶ್ರೀಮತಿ ಮೀನಾ ತೂಗುದೀಪ ಅವರ ಮಾತೂ ಇರುವುದು ಈ ಪ್ರಸಂಗದ ವಿಶೇಷ.