Showing posts with label Shillong. Show all posts
Showing posts with label Shillong. Show all posts

Thursday, February 13, 2025

ಶಿಲಾಂಗ್ ಎಲ್ಲಿ ಬರುತ್ತದೆ? ಅಲ್ಲಿನ ಉದ್ಯಮ ಏನು?

 ಶಿಲಾಂಗ್ ಮೇಘಾಲಯ ರಾಜ್ಯದ ರಾಜಧಾನಿ. ಮೇಘಾಲಯ ಉತ್ತರ ಪೂರ್ವ ಭಾರತದ ಏಳು ರಾಜ್ಯಗಳಲ್ಲಿ ಒಂದು. ಅಸಾಮ್ ರಾಜ್ಯದಿಂದ ಬೇರೆಯಾಗುವ ಮುನ್ನ ಶಿಲಾಂಗ್ ಅಸಾಂ ರಾಜ್ಯದ ರಾಜಧಾನಿಯಾಗಿತ್ತು.

ಉತ್ತರಕ್ಕೆ ಬ್ರಹ್ಮಪುತ್ರ ನದಿ ದಕ್ಷಿಣಕ್ಕೆ ಸುರ್ಮಾ ನದಿ. ಮಧ್ಯದಲ್ಲಿ ಶಿಲಾಂಗ್ ಪರ್ವತದ ತಪ್ಪಲಿನಲ್ಲಿ ವರ್ಷದುದ್ದಕ್ಕೂ ತಂಪಾಗಿರುವ ಊರು ಶಿಲಾಂಗ್.

ಬ್ರಿಟಿಷರಿಗೆ ಸ್ಕಾಟ್ಲೆಂಡ್ ನೆನಪು ತರಿಸುತ್ತಿದ್ದ ಈ ಊರನ್ನು ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯುತ್ತಿದ್ದರು.

ಮೇಘಾಲಯದ ಅಧಿಕೃತ ಭಾಷೆ ಇಂಗ್ಲಿಷ್. ಮುಖ್ಯ ಜನಜಾತಿಗಳು ಖಾಸೀ, ಗಾರೋ ಮತ್ತು ಜೈಂತಿಯಾ. ಅವೇ ಹೆಸರಿನ ಸ್ಥಳೀಯ ಭಾಷೆಗಳು.

ಶಿಲಾಂಗಿನ ಪುರಾತನ ಹೆಸರು ಯೇಡ್ಡೋ.

ಶಿಲಾಂಗ್ ಭಾರತದ ಫ್ಯಾಶನ್ ರಾಜಧಾನಿ. ಎಲ್ಲಾ ಪ್ರಸಿದ್ಧ ಬ್ರ್ಯಾಂಡ್ ಗಳ ಫ್ಯಾಶನ್ ವಸ್ತ್ರಗಳು ಇಲ್ಲಿ ದೊರೆಯುತ್ತವೆ.

ಶಿಲಾಂಗ್ ಸುತ್ತಲೂ ಮನಮೋಹಕ ಜಲಪಾತಗಳು, ಸರೋವರಗಳು ಮತ್ತು ಪರ್ವತಗಳು ಇರುವುದರಿಂದ ಇದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ.

ಶಿಲಾಂಗ್ ಜನರು ಸದಾ ಹಸನ್ಮುಖಿಗಳು ಮತ್ತು ಸಂಗೀತಪ್ರೇಮಿಗಳು. ಇಲ್ಲಿಗೆ ಎಲ್ಲ ಪ್ರಸಿದ್ಧ ರಾಕ್ ಬ್ಯಾಂಡುಗಳು ಬರುತ್ತಿರುತ್ತಾರೆ. ಹಾಗಾಗಿ ಶಿಲಾಂಗ್ ಭಾರತದ ರಾಕ್ ರಾಜಧಾನಿ ಎನಿಸಿಕೊಂಡಿದೆ.

ಮೇಘಾಲಯದ ಲಕಡಾಂಗ್ ಅರಿಶಿಣ ತುಂಬಾ ವಿಶೇಷವಾದದ್ದು. ಅದರಲ್ಲಿರುವ ಕರ್ಕುಮಿನ್ ಔಷಧವಸ್ತು 7 ರಿಂದ 12% ಇರುತ್ತದೆ. ಬೇರೆ ಕಡೆಯ ಅರಿಶಿಣದಲ್ಲಿ ಕರ್ಕುಮಿನ್ ಕೇವಲ 2–3% ಇರುತ್ತದೆ.

ಶಿಲಾಂಗ್ ಹತ್ತಿರದಲ್ಲೇ ಸೋಹಿಲ್ಯಾ ಸ್ಟ್ರಾಬೆರಿ ವಿಲೆಜ್ ಇದೆ. ಭಾರತದ ಪ್ರಮುಖ ಸ್ಟ್ರಾಬೆರಿ ಉತ್ಪಾದನೆ ಇಲ್ಲಿಂಂದಲೇ ಬರುತ್ತದೆ.

ಮೇಘಾಲಯದಲ್ಲಿ ಈ ಖನಿಜಗಳು ಹೇರಳವಾಗಿ ದೊರೆಯುತ್ತವೆ

- ಕಲ್ಲಿದ್ದಲು, ಸುಣ್ಣದ ಕಲ್ಲು, ಗ್ರಾನೈಟ್, ಗ್ಲಾಸ್-ಮರಳು, ಜೇಡಿಮಣ್ಣು ಮತ್ತು ಯುರೇನಿಯಂ.

ಚಿತ್ರ: ಸುಣ್ಣದ ಕಲ್ಲಿನ ಗುಹೆಗಳು

ಮೇಘಾಲಯದ ಕಿತ್ತಳೆ ಅತಿ ಹೆಚ್ಚು ರಸ ಮತ್ತು ರುಚಿಗೆ ಪ್ರಸಿದ್ಧ. ಇದಕ್ಕೆ ಜಿಐ ಟ್ಯಾಗ್ ದೊರೆತಿದೆ. ಕೇವಲ ಕಿತ್ತಳೆ ಹೂವಿನ ಮಕರಂದದಿಂದಾದ ಜೇನುತುಪ್ಪ ತುಂಬಾ ಪ್ರಸಿದ್ಧ.

ಮೇಘಾಲಯದಲ್ಲಿ ಅನೇಕ ಜಲಪಾತಗಳಿರುವುದರಿಂದ ಅಧಿಕ ಪ್ರಮಾಣದಲ್ಲಿ (3000 ಮೆಗಾವಾಟ್) ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ. ಸದ್ಯಕ್ಕೆ ಕೇವಲ 185 ಮೆಗಾವಾಟ್ ಉತ್ಪಾದನೆ ಆಗುತ್ತಿದೆ.

ಮೇಘಾಲಯ ಸರ್ಕಾರ ಕೃಷಿ ಉತ್ಪನ್ನಗಳ ಸಂಸ್ಕರಣೆ, ಪ್ರವಾಸೋದ್ಯಮ, ಖನಿಜ ಸಂಪತ್ತು, ಎಲೆಕ್ಟ್ರಾನಿಕ್ಸ್, ಮತ್ತು ಐಟಿ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ.