Showing posts with label cultural. Show all posts
Showing posts with label cultural. Show all posts

Monday, February 10, 2025

ಮೈಸೂರಿನ ಸಾಂಸ್ಕೃತಿಕ ವಿಶೇಷತೆಗಳೇನು?

 

ಮೈಸೂರಿನ ಸಾಂಸ್ಕೃತಿಕ ವಿಶೇಷತೆಗಳೇನು?

*ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನ್ನುವ ಹಿರಿಮೆ ಹೊಂದಿರುವ ನಗರ.ಮೈಸೂರುರಾಜ್ಯ ಅಥವಾ ಮೈಸೂರು ಅರಮನೆ ಇತಿಹಾಸದ ಪುಟಗಳನ್ನು ಮತ್ತೆ ನೆನಪಿಸುವ ಅಗತ್ಯವಿಲ್ಲ . ಇತಿಹಾಸ.ಮತ್ತು ಅರಮನೆ ಜೊತೆಯಾಗಿಯೇ ಸಾಗುವ ಪುಟಗಳು.

*ಮೈಸೂರು ಇತಿಹಾಸದೊಂದಿಗೆ ಮಿಳಿತವಾದ ಮತ್ತೊಂದು ಸಾಂಸ್ಕೃತಿಕ ಪರಂಪರೆ ಮೈಸೂರು ದಸರಾ.

*ಚಾಮುಂಡಿ ಬೆಟ್ಟ(ದೇವಾಲಯ )ಮತ್ತು ಅದರೊಂದಿಗಿನ ಮೈಸೂರು ಭಕ್ತಿಪೂರ್ವಕ ಮಾತ್ರವಲ್ಲ ಭಾವನಾತ್ಮಕ ಪರಂಪರೆಯಾಗಿಯೇ ಸಾಗಿ ಬಂದಿದೆ.

*ಮೈಸೂರು ಇತಿಹಾಸದ ಜೊತೆಗೆ ಮೈಸೂರು ಹೆಸರಿನೊಂದಿಗೆ ಪಾರಂಪರಿಕವಾಗಿ ಅಥವಾ ಭೌಗೋಳಿಕ ಮಹತ್ವದಿಂದ ಸಾಗಿ ಬಂದ ಹಲವು ಹೆಗ್ಗುರುತುಗಳು ಇಲ್ಲಿವೆ.

ಚಿತ್ರ, ಮಾಹಿತಿ :ಕರ್ನಾಟಕ ಸರ್ಕಾರ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಪರಂಪರೆ ಮಾಲಿಕೆ ಪುಸ್ತಿಕೆ.

****************

*ಕನ್ನಡ ಚಿತ್ರರಂಗಸದ್ಯ ಹತ್ತನೇ ದಶಕದಲ್ಲಿದ್ದು ಶತಮಾನದತ್ತ ಹೆಜ್ಜೆ ಇರಿಸಿದ

ಈ ಸಂದರ್ಭದಲ್ಲಿ ಚಿತ್ರ ರಂಗ ಮತ್ತು ಮೈಸೂರಿನ ನಂಟಿನ ಬಗ್ಗೆ ನೆನಪು ಮಾಡಿಕೊಳ್ಳದಿದ್ದರೆ ಈ ಉತ್ತರ ಅಪೂರ್ಣ ಎನಿಸಬಹುದು.1954ರಲ್ಲಿ ಆರಂಭಗೊಂಡ ಪ್ರೀಮಿಯರ್ ಸ್ಟುಡಿಯೋ ಕನ್ನಡ ಚಿತ್ರ ರಂಗಕ್ಕೆ ಐದು ದಶಕಗಳ ಕೊಡುಗೆ ನೀಡಿ ಅನೇಕ ಭಾಷೆಗಳ 800 ಸಿನೆಮಾಗಳ ನಿರ್ಮಾಣಕ್ಕೆ ವೇದಿಕೆಯಾಯಿತು.ಈ ಸ್ಟುಡಿಯೋ ಈಗ ನೆನಪು ಮಾತ್ರ. ಈ ಶತಮಾನದ ಆರಂಭಿಕ ವರ್ಷಗಳಲ್ಲಿ ಸ್ಟುಡಿಯೋ ಮಾಲೀಕರಾದ ಪ್ರಿ ಮಿಯರ್ ಬಸವರಾಜಯ್ಯನವರ ಸಂದರ್ಶನಕ್ಕೆ ನಾವು ಮಾಡಿದ ಪ್ರಯತ್ನ ಸಫಲತೆ ಕಂಡ ಕ್ಷಣವಿದು. ಇದೇ ಅವರ ಕೊನೆಯ ಮಾಧ್ಯಮ ಭೇಟಿ ಎಂದೂ ಹೇಳಬಹುದು.ಸ್ಟುಡಿಯೋಮೇಲಿನ ಗೌರವದಿಂದ ಅದರ ಬಾಗಿಲ ಮುಂದೆಯೇ ಅವರೊಂದಿಗೆ ನಿಂತು ತೆಗೆದ ಅವಿಸ್ಮರಣೀಯ ಫೋಟೋ.2018ರಲ್ಲಿ ಪ್ರೀಮಿಯರ್ ನೆಲಸಮಗೊಂಡಿದೆ.(ಇದೊಂದು ಅಪರೂಪದ ಅಥವಾ ಪ್ರಿಮಿಯರ್ ಇತಿಹಾಸದ ದಾಖಲೆ ಎನ್ನಬಹುದಾದ ಚಿತ್ರ ಎಂಬ ಹೆಮ್ಮೆ ನಮಗಿದೆ )ಈ ಚಿತ್ರದಲ್ಲಿ ಹಿರಿಯ ಪತ್ರಕರ್ತ, ಹಿತೈಷಿ ಗಣೇಶ್ ಕಾಸರಗೋಡು, ಪತ್ರಕರ್ತ ರವೀಂದ್ರ ಜೋಶಿ ಮತ್ತು ನಾನು.

**************

*ಇದಿಷ್ಟೇ ಅಲ್ಲ, ಮೈಸೂರು ಶೈಕ್ಷ ಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಮೆರೆಯಲು ಕೊಡುಗೆ ನೀಡಿದ ಮೈಸೂರು ವಿಶ್ವ ವಿದ್ಯಾಲಯ.

ರಾಜ್ಯದ ಪ್ರಥಮ ವಿಶ್ವ ವಿದ್ಯಾಲಯವಾಗಿ ಹೊರಹೊಮ್ಮಿದ ಮೈಸೂರು ವಿಶ್ವ ವಿದ್ಯಾಲಯ.ಶತಮಾನದ ಹಿರಿಮೆಯೂ ಜೊತೆಗಿದೆ.ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇದು ನೀಡಿರುವ ಕೊಡುಗೆ ಅಪಾರ.

*ಮೈಸೂರಿನ ಕಲಾಮಂದಿರ.ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ದಿ. ಆರ್. ಗುಂಡೂರಾಯರ ಕನಸಿನ ಕೂಸು ಮೈಸೂರಿನ ಕಲಾ ಮಂದಿರ. ಮೈಸೂರಿನಲ್ಲಿ ಕಲಿತ ಗುಂಡೂರಾಯರಿಗೆ ಈ ನಗರದ ಮೇಲೆ ಅಪಾರ ಒಲವು. ನಾಟಕ ಕಲೆ, ಸಾಹಿತ್ಯ ಹೀಗೆ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು ಒಂದೇ ಸೂರಿನಡಿ ನಡೆಯಲು ಚಿಂತನೆ ನಡೆಸಿ ಭೂಮಿ ಮಂಜೂರು ಮಾಡಿದ್ದರು. ಮುಂದೆ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ನಿರ್ಮಾಣಗೊಂಡ ಕಲಾ ಮಂದಿರ 1985ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನಕ್ಕೆ ತನ್ನ ಕೊಡುಗೆ ನೀಡಿತ್ತು.

*ರಂಗ ಭೂಮಿಗೆ ಅನುಪಮ ಕೊಡುಗೆ ನೀಡಿರುವ ಮೈಸೂರಿನ ರಂಗಾಯಣ ಬಿ. ವಿ. ಕಾರಂತರ ಕನಸಿನ ಕೂಸು. 1989ರಿಂದ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದೆ.

Wednesday, January 1, 2025

ಭಾರತದಲ್ಲಿ ಜಾನಪದ ನೃತ್ಯಗಳು

 


❇️ಹರಿಯಾಣ

-ಜುಮರ್, ಫಾಗ್, ದಾಫ್, ಧಮಾಲ್, ಲೂರ್, ಗುಗ್ಗಾ, ಖೋರ್.

❇️ಹಿಮಾಚಲ ಪ್ರದೇಶ
-ಜೋರಾ, ಝಾಲಿ, ಛರ್ಹಿ, ಧಮನ್, ಛಪೇಲಿ, ಮಹಾಸು

❇️ಜಮ್ಮು ಮತ್ತು ಕಾಶ್ಮೀರ
-ರೌಫ್, ಹಿಕತ್, ಮಂಡ್ಜಾಸ್, ಕುಡ್ ದಂಡಿ ನಾಚ್

❇️ಜಾರ್ಖಂಡ್
-ಅಲ್ಕಾಪ್, ಕರ್ಮ ಮುಂಡ, ಅಗ್ನಿ, ಜುಮರ್, ಜನನಿ ಜುಮಾರ್, ಮರ್ದನಾ ಜುಮಾರ್, ಪೈಕಾ, ಫಗುವಾ

❇️ಕರ್ನಾಟಕ
-ಯಕ್ಷಗಾನ, ಹುತ್ತರಿ, ಸುಗ್ಗಿ, ಕುಣಿತ, ಕರಗ

❇️ಕೇರಳ
-ಒಟ್ಟಂ ತುಳ್ಳಲ್, ಕೈಕೊಟ್ಟಿಕಲಿ

❇️ಮಹಾರಾಷ್ಟ್ರ
-ಲಾವಣಿ, ನಕಟಾ, ಕೋಲಿ, ಲೆಜಿಮ್, ಗಫಾ, ದಹಿಕಲಾ ದಸಾವತಾರ್

❇️ಮಧ್ಯಪ್ರದೇಶ
-ಜವರ, ಮಟ್ಕಿ, ಆದ, ಖಡಾ ನಾಚ್, ಫುಲ್ಪತಿ, ಗ್ರಿಡಾ ಡ್ಯಾನ್ಸ್, ಸೆಲಾರ್ಕಿ, ಸೆಲಭಡೋನಿ

❇️ಮಣಿಪುರ
-ದೋಲ್ ಚೋಲಂ, ತಂಗ್ ತಾ, ಲೈ ಹರೋಬಾ, ಪುಂಗ್ ಚೋಲೋಮ್

❇️ಮಿಜೋರಾಂ
-ಚೆರಾವ್ ಡ್ಯಾನ್ಸ್, ಖುಲ್ಲಮ್, ಚೈಲಂ, ಸಾವ್ಲಾಕಿನ್, ಚಾವ್ಂಗ್ಲೈಜಾನ್, ಜಂಗ್ತಾಲಂ

❇️ನಾಗಾಲ್ಯಾಂಡ್
-ರಂಗಮಾ, ಬಿದಿರು ನೃತ್ಯ, ಝೆಲಿಯಾಂಗ್

❇️ಒಡಿಶಾ
-ಸವಾರಿ, ಘುಮಾರ

❇️ಪಂಜಾಬ್
-ಭಾಂಗ್ರಾ, ಗಿದ್ಧ.

❇️ರಾಜಸ್ಥಾನ
-ಘುಮರ್, ಚಕ್ರಿ, ಗಾನಗೋರ್, ಜೂಲನ್

❇️ಸಿಕ್ಕಿಂ
-ಚು ಫಾತ್, ಸ್ನೋ ಲಯನ್, ಯಾಕ್ ಚಾಮ್

❇️ತಮಿಳುನಾಡು
-ಕುಮಿ, ಕೋಲಟ್ಟಂ, ಕರಗಟ್ಟಂ

❇️ತ್ರಿಪುರ
-ಹೋಜಗಿರಿ

❇️ಉತ್ತರ ಪ್ರದೇಶ
-ನೌತಂಕಿ, ರಸಲೀಲಾ,

❇️ಉತ್ತರಾಖಂಡ
-ಗರ್ವಾಲಿ, ರಾಸ್ಲೀಲಾ