-ಬೇವಿನ ಎಲೆಯನ್ನು ಮತ್ತು ಅಗಸೆ ಬೀಜವನ್ನು ಪೇಸ್ಟ್ ಮಾಡಿ ಬಿಸಿ ಮಾಡಿ ಉಗುರು ಸುತ್ತು ಆದ ಬೆರೆಳಿಗೆ ಲೇಪ ಮಾಡಿ ಕಟ್ಟಿದರೆ ತಕ್ಷ ಣ ನೋವು ಕಡಿಮೆಯಾಗುತ್ತದೆ.
-ಅಕ್ಕಿ ಹಿಟ್ಟನ್ನು ಅಗಸೆ ಎಣ್ಣೆ ಜತೆ ಕಲಸಿ ಸ್ವಲ್ಪ ಬಿಸಿ ಮಾಡಿ ಲೇಪ ಮಾಡಿದರೆ ಉಗುರು ಸುತ್ತು ಗುಣವಾಗುತ್ತದೆ.
-ಬೆರಳು ಊದಿದ್ದರೆ ನುಗ್ಗೆ ಸೊಪ್ಪನ್ನು ಸೈಂಧವ ಉಪ್ಪಿನ ಜತೆ ರುಬ್ಬಿ ಬೆರಳಿಗೆ ಕಟ್ಟಿದರೆ ಊತ ಬೇಗ ಕಡಿಮೆಯಾಗುತ್ತದೆ.
-ಅಳಲೆ ಕಾಯಿ ಪುಡಿಗೆ ಹುಣಸೆ ಹಣ್ಣಿನ ರಸ ಬೆರೆಸಿ ಚೆನ್ನಾಗಿ ಕಲಸಿ ಬೆರಳಿಗೆ ಲೇಪ ಮಾಡಿ ಬಟ್ಟೆ ಕಟ್ಟಿದರೆ ಕೀವು ಹೊರಗೆ ಬಂದು ನೋವು ಬೇಗ ಕಡಿಮೆಯಾಗುತ್ತದೆ.
-ವೀಳ್ಯೆದೆಲೆಯನ್ನು ಬಿಸಿ ಮಾಡಿ ಬೆರಳಿಗೆ ಕಟ್ಟಿದರೆ ಉಗುರು ಸುತ್ತು ಬೇಗ ಗುಣವಾಗುತ್ತದೆ.
-ದಿನಕ್ಕೆ 4ರಿಂದ 5 ಬಾರಿ ತ್ರಿಫಲಾ ಕಷಾಯದಿಂದ ಬೆರಳನ್ನು ತೊಳೆದು ಬಟ್ಟೆಯಲ್ಲಿ ಒರೆಸಿದರೆ ಉಗುರು ಸುತ್ತು ಶಮನವಾಗುತ್ತದೆ.
-ಜೇಷ್ಠಮಧು ಪುಡಿಗೆ ಹಸುವಿನ ತುಪ್ಪ ಹಾಕಿ ಕಲಸಿ ಉಗುರು ಸುತ್ತು ಇರುವ ಬೆರಳಿಗೆ ಲೇಪ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ.
-ಅರಿಶಿನ ಪುಡಿಯನ್ನು ಬೇವಿನ ಎಣ್ಣೆ ಜತೆ ಕಲಸಿ ಬೆರಳಿಗೆ ಲೇಪ ಮಾಡಿದರೂ ಪ್ರಯೋಜನವಿದೆ.
-ಉಗುರು ಸುತ್ತು ಇರುವ ಬೆರಳಿಗೆ ಉನ್ಮತ್ತಿ ಎಲೆಗೆ ಜೇನುತುಪ್ಪ ಹಚ್ಚಿ ಬೆರಳಿಗೆ ಕಟ್ಟಿದರೆ ಬೆರಳಿನಲ್ಲಿ ಇರುವ ಕೀವು ಹೊರ ಬಂದು ನೋವು, ಊತ ಕಡಿಮೆಯಾಗುತ್ತದೆ.
-ನಿಂಬೆ ಹಣ್ಣಿನಲ್ಲಿ ಸಣ್ಣ ತೂತು ಮಾಡಿ ಅದರೊಳಗೆ ಅರಿಶಿನ ಮತ್ತು ಸೈಂಧವ ಉಪ್ಪನ್ನು ತುಂಬಿ. ಬೆರಳನ್ನು ನಿಂಬೆ ಹಣ್ಣಿನ ಒಳಗೆ 3 ರಿಂದ 6 ಗಂಟೆಗಳು ಇಟ್ಟರೆ ಉಗುರು ಸುತ್ತು ಬೇಗ ಶಮನವಾಗುತ್ತದೆ .
ಡಾ. ಸುಚೇತಾ ಜಯರಾಮ್
1 comment:
Post a Comment