Sunday, May 23, 2021

ಕಿಂಬರ್ಲಿ ಪ್ರಕ್ರಿಯೆ' (Kimberley Process)

ಅಂಗೋಲಾದ ಯುನೀಟಾದಂತಹ ಪಕ್ಷಗಳ ದಂಗೆಕೋರರು ಮತ್ತು ಆಫ್ರಿಕಾದ ಇತರ ಭಾಗಗಳಲ್ಲಿ ವಿನಾಶಗೈಯುತ್ತಿದ್ದ ಬಂಡುಕೋರರ ಸಂಪತ್ತಿನ ಮೂಲವನ್ನು ಕಿತ್ತೆಸೆಯಲು ವಿಶ್ವಸಂಸ್ಥೆಯು ಕೈಗೊಂಡ ಒಂದು ವ್ಯವಸ್ಥಿತ ಜಾಲವೇ 'ಕಿಂಬರ್ಲಿ ಪ್ರಕ್ರಿಯೆ' + ಈ ವ್ಯವಸ್ಥಿತ ಜಾಲದ ಮೂಲಕವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬ್ಲಡ್ ಡೈಮಂಡ್ ಗಳು ಬಿಕರಿಯಾಗದಂತೆ ನೋಡಿಕೊಳ್ಳುವ ಸದುದ್ದೇಶದಿಂದ ಆರಂಭವಾದ ಪ್ರಕ್ರಿಯೆಯಿದು. + ಇದರ ಪ್ರಕಾರ ತಮ್ಮ ದೇಶದಿಂದ ರಫ್ತಾಗುತ್ತಿರುವ ವಜ್ರಗಳು 'ಬ್ಲಡ್ ಡೈಮಂಡ್' ವರ್ಗಕ್ಕೆ ಸೇರಿದವುಗಳಲ್ಲ ಎಂಬ ಪ್ರಮಾಣಪತ್ರವನ್ನು ನೀಡುವ ಒಂದು ವ್ಯವಸ್ಥೆಯನ್ನು ಕಿಂಬರ್ಲಿ ಪ್ರಕ್ರಿಯೆಯ ನಿಯಮಾವಳಿಗಳ ಪ್ರಕಾರ ರೂಪಿಸಿ ಅನುಷ್ಠಾನಕ್ಕೆ ತರುವುದು ಆಯಾ ದೇಶಗಳ ಸರಕಾರಗಳ ಜವಾಬ್ದಾರಿಯಾಗಿತ್ತು. + ಹೀಗೆ ರಕ್ತಸಿಕ್ತ ವಜ್ರಗಳೆಂಬ ಹಣೆಪಟ್ಟಿ ಹೊತ್ತುಕೊಂಡು ವಿಶ್ವದೆಲ್ಲೆಡೆ ಬಿಕರಿಯಾಗುತ್ತಾ ಸಾವಿನ ವ್ಯಾಪಾರವನ್ನು ನಿರ್ಗಳವಾಗಿ ಮಾಡುತ್ತಿದ್ದ ಬಂಡುಕೋರರ ಸದ್ದಡಗಿಸುವ ನಿಟ್ಟಿನಲ್ಲಿ ಕಿಂಬರ್ಲಿ ಪ್ರಕ್ರಿಯೆಯು ಒಂದು ಹೊಸ ಭರವಸೆ + ಅಂಗೋಲಾ ಕಿಂಬರ್ಲಿ ಪ್ರಕ್ರಿಯೆಯ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲೂ ಒಂದು. 

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...